Karnataka Bank: 800 ಕೋಟಿ ರೂ. ಈಕ್ವಿಟಿ ಷೇರು ಬಂಡವಾಳದ ಹಂಚಿಕೆ ಪೂರ್ಣ

Team Udayavani, Oct 27, 2023, 12:48 AM IST

karnataka bank

ಮಂಗಳೂರು: ಕರ್ಣಾಟಕ ಬ್ಯಾಂಕ್‌ನ ನಿರ್ದೇಶಕರ ಮಂಡಳಿಯ ಸಭೆ ಗುರುವಾರ ನಡೆದಿದ್ದು, ತಲಾ 10ರೂ. ಮುಖಬೆಲೆಯ 3,34,00,132 ಈಕ್ವಿಟಿ ಷೇರುಗಳನ್ನು ಎಚ್‌ಡಿಎಫ್‌ಸಿ ಲೈಫ್‌ ಇನ್ಶುರೆನ್ಸ್‌ ಕಂಪೆನಿ ಲಿಮಿಟೆಡ್‌, ಬಜಾಜ್‌ ಅಲಿಯಾನ್ಸ್‌ ಲೈಫ್‌ ಇನ್ಶುರೆನ್ಸ್‌ ಕಂಪೆನಿ ಲಿಮಿಟೆಡ್‌, ಕ್ವಾಂಟ್‌ ಮ್ಯೂಚುಯಲ್‌ ಫಂಡ್‌, ಭಾರ್ತಿ ಆಕ್ಸ ಲೈಫ್‌ ಇನ್ಶುರೆನ್ಸ್‌ ಕಂಪೆನಿ ಲಿಮಿಟೆಡ್‌ ಹಾಗೂ ಬಜಾಜ್‌ ಅಲಿಯಾನ್ಸ್‌ ಜನರಲ್‌ ಇನ್ಶೂರೆನ್ಸ್‌ ಕಂಪೆನಿ ಲಿಮಿಟೆಡ್‌ಗಳಿಗೆ (ಪ್ರಸ್ತಾಪಿತ ಹಂಚಿಕೆದಾರರು) ವಿತರಿಸಲು ತೀರ್ಮಾನಿಸಲಾಗಿದೆ.

ಪ್ರತಿ ಈಕ್ವಿಟಿ ಷೇರಿಗೆ 239.52 ರೂ.(ಪ್ರತಿ ಷೇರಿಗೆ 229.52 ರೂ. ಪ್ರೀಮಿಯಂ ಸೇರಿದಂತೆ), ಆದ್ಯತೆಯ ಆಧಾರದ ಮೇಲೆ ಷೇರು ವಿತರಿಸಲು ನಿರ್ಧರಿಸಲಾಗಿದೆ. ಇದರಿಂದ ಒಟ್ಟು
799,99,99,616.64 ರೂ. ಬಂಡವಾಳ ಸಂಗ್ರಹಣೆಯಾಗಲಿದೆ. ಈ ಪ್ರಾಶಸ್ತ್ಯದ ಷೇರು ಹಂಚಿಕೆಗಾಗಿ ಬ್ಯಾಂಕ್‌ ತನ್ನ ಷೇರುದಾರರಿಂದ ಶೇ 99.79 ಅನುಕೂಲಕರ ಮತಗಳನ್ನು ಪಡೆದುಕೊಂಡಿದೆ.
ಈ ಕುರಿತು ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಶ್ರೀಕೃಷ್ಣನ್‌ ಎಚ್‌. ಮಾತನಾಡಿ, 5 ಪ್ರಮುಖ ಸಾಂಸ್ಥಿಕ ಹೂಡಿಕೆದಾರರಿಗೆ ಆದ್ಯತೆಯ ಆಧಾರದ ಷೇರು ವಿತರಿಸಿ 800 ಕೋಟಿ ರೂ. ಯಶಸ್ವಿ ಬಂಡವಾಳ ಸಂಗ್ರಹಣೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ನಾವು ಸಂತೋಷ ಪಡುತ್ತೇವೆ. ಇದು ಬ್ಯಾಂಕಿನ ಪರಿವರ್ತನೆಯ ಪ್ರಯಾಣದಲ್ಲಿ ಪ್ರಮುಖ ಹೆಜ್ಜೆಯಾಗಿದೆ. ನಮ್ಮ ಎಲ್ಲ ಅಭಿವೃದ್ಧಿ ಚಟುವಟಿಕೆಗಳಿಗೆ ಈ ಬಂಡವಾಳ ಬೆಳವಣಿಗೆಯು ಅನುಕೂಲವಾಗಲಿದೆ. ಈ ಬಂಡವಾಳದ ಒಳಹರಿವು ಬ್ಯಾಂಕಿನ ಪ್ರಯಾಣದ ಪ್ರಮುಖ ಘಟ್ಟವಾಗಿದೆ ಎಂದರು.

ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್‌ ರಾವ್‌, ಈ ಕಾರ್ಯಕ್ಕೆ ಷೇರುದಾರರು ಅನುಮೋದಿಸಿರುವುದು ಬ್ಯಾಂಕಿನ ಪ್ರಯಾಣದಲ್ಲಿ ಪ್ರಮುಖವಾಗಿದೆ. ಬ್ಯಾಂಕಿನ ಅಭಿವೃದ್ಧಿಯ ಪಯಣವು ಬಂಡವಾಳ ಹೆಚ್ಚಳದಿಂದ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ, ಬ್ಯಾಂಕಿನ ವ್ಯಾಪ್ತಿಯನ್ನು ವಿಸ್ತರಿಸಲು, ಡಿಜಿಟಲ್‌ ರೂಪಾಂತರವನ್ನು ಅಳವಡಿಸಿಕೊಳ್ಳಲು ಮತ್ತು ಪಾಲುದಾರಿಕೆಗಳನ್ನು ಬೆಂಬಲಿಸಲು,ಹಾಗೂ ಉತ್ತೇಜಿಸಲು ಇದರಿಂದ ನೆರವಾಗಲಿದೆ ಎಂದಿದ್ದಾರೆ.

ಟಾಪ್ ನ್ಯೂಸ್

Russia-Ukraine War: ಉಕ್ರೇನ್‌ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ

Russia-Ukraine War: ಉಕ್ರೇನ್‌ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-kvasantha-bangera

K. Vasantha Bangera: ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಅಸ್ತಂಗತ

6-bantwala

Bantwala: ನೀರಿನ ಅಭಾವದಿಂದ ಕೃಷಿ ಹಾನಿ; ಮನನೊಂದು ಕೃಷಿಕ ಆತ್ಮಹತ್ಯೆ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

1-qweqwwqe

Mangaluru:ರೈಲ್ವೆ ಸ್ಟೇಷನ್ ನಲ್ಲಿ ರಿಕ್ಷಾ ಚಾಲಕರು ಮತ್ತು ಪ್ರಯಾಣಿಕರ ಹೊಡೆದಾಟ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Russia-Ukraine War: ಉಕ್ರೇನ್‌ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ

Russia-Ukraine War: ಉಕ್ರೇನ್‌ ಯುದ್ಧಕ್ಕೆ ಯುವಕರ ಬಳಕೆ… ನಾಲ್ವರ ಬಂಧನ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Mann Ki Baat: ತೆಲುಗಿನ ಜನರ ಮನ್‌ ಕಿ ಬಾತ್‌ ಆಲಿಸಿ… ಮೋದಿಗೆ ಶರ್ಮಿಳಾ

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

Panaji: ಮಕ್ಕಳಿಗಾಗಿ ಬ್ಯಾಂಕ್‌ ಲಾಕರ್‌ನಲ್ಲಿ ಇಟ್ಟಿದ್ದ 3 ಕೋಟಿ ಮೌಲ್ಯದ ನೋಟು ಅಮಾನ್ಯ!

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Hunasur: ಅನಾರೋಗ್ಯದಿಂದ ಒಂದೇ ದಿನ ಕುಟುಂಬದ ಇಬ್ಬರ ಮೃತ್ಯು…

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.