CET ಅರ್ಜಿಗಳಲ್ಲಿನ ತಪ್ಪುಗಳ ನಿವಾರಣೆಗೆ “ವಿದ್ಯಾರ್ಥಿ ಮಿತ್ರ”

Team Udayavani, Dec 27, 2023, 12:01 AM IST

EXAM PU

ಬೆಂಗಳೂರು: ಸಿಇಟಿಗೆ ಆನ್‌ಲೈನ್‌ ಅರ್ಜಿ ತುಂಬುವಾಗ ಅಭ್ಯರ್ಥಿಗಳು ಮಾಡುವ ದೋಷಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಸಿಇಟಿ ವಿದ್ಯಾರ್ಥಿಮಿತ್ರ ಎಂಬ ಮಾಸ್ಟರ್‌ ಟ್ರೈನರ್‌ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಡಿ. 28ರಂದು ಇಲ್ಲಿನ ಕೆಇಎ ಕಚೇರಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರತಿ ಜಿಲ್ಲೆಯಿಂದ ಆಯ್ದ 8 ಪದವಿಪೂರ್ವ ವಿಜ್ಞಾನ ಕಾಲೇಜಿನ ಉಪನ್ಯಾಸಕರಿಗೆ ಮಾಸ್ಟರ್‌ ತರಬೇತಿ ಕೊಡಲಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸಿಇಟಿ ಅರ್ಜಿ ತುಂಬುವಾಗ ಹೆಸರಿನಲ್ಲಿ ವ್ಯತ್ಯಾಸ, ತಪ್ಪು ಆರ್‌.ಡಿ. ಸಂಖ್ಯೆ ನಮೂದಿಸುವುದು, ಪ್ರವರ್ಗ/ಜಾತಿ ಬರೆಯುವುದು ಸೇರಿ ಹಲವಾರು ತಪ್ಪುಗಳು ಅಭ್ಯರ್ಥಿಗಳಿಂದ ಆಗುತ್ತಿವೆ. ಪರಿಣಾಮಕಾರಿ ಪರಿಹಾರ ನೀಡುವ ಸಲುವಾಗಿ ಮಾಸ್ಟರ್‌ ಟ್ರೈನರ್‌ ತರಬೇತಿ ನೀಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಮಾಸ್ಟರ್‌ ಟ್ರೈನರ್‌ ತರಬೇತಿ ಪಡೆದವರು ಅನಂತರ ತಂತಮ್ಮ ಜಿಲ್ಲೆಯಲ್ಲಿನ ಪ್ರತಿಯೊಂದು ವಿಜ್ಞಾನ ಕಾಲೇಜಿನ ಇಬ್ಬರು ಅಧ್ಯಾಪಕರಿಗೆ ತರಬೇತಿ ನೀಡಲಿದ್ದಾರೆ. ಒಟ್ಟಾರೆ, ಬರುವ ಜ. 10ರಿಂದ ಸಿಇಟಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಆ ವೇಳೆಗೆ ಎಲ್ಲ ಕಾಲೇಜುಗಳಲ್ಲೂ ಈ ತರಬೇತಿ ಮುಗಿಸಲಾಗುವುದು. ಮಾಸ್ಟರ್‌ ಟ್ರೈನರ್‌ ಗಳಿಂದ ತರಬೇತಿ ಪಡೆದ ಉಪನ್ಯಾಸಕರು ತಮ್ಮ ಕಾಲೇಜಿನಲ್ಲಿನ ವಿದ್ಯಾರ್ಥಿಗಳಿಗೆ ಅರ್ಜಿ ತುಂಬುವ ಬಗ್ಗೆ ತರಬೇತಿ ನೀಡಲಿದ್ದಾರೆ. ಮೂಲಸೌಕರ್ಯ ಇರುವ ಕಡೆ ಇದೇ ಉಪನ್ಯಾಸಕರು ಕಾಲೇಜುಗಳಲ್ಲೇ ಅರ್ಜಿ ತುಂಬಲು ವ್ಯವಸ್ಥೆ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.

ಟಾಪ್ ನ್ಯೂಸ್

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ರಘುನಂದನ ಕಾಮತ್‌ ಪಂಚಭೂತಗಳಲ್ಲಿ ಲೀನ

Udupi District ನಾನ್‌ ಸಿಆರ್‌ಝಡ್‌ ಮರಳು ಆಸರೆ; 2.45 ಲಕ್ಷ ಮೆ. ಟನ್‌ ಮರಳು ತೆರವು

Bantwal ಖೋಟಾ ನೋಟು ವಿನಿಮಯ ದಂಧೆ ಪ್ರಕರಣ ; ಆರೋಪಿಗಳಿಂದ 506 ಖೋಟಾ ನೋಟುಗಳ ವಶ

Amit Shah 2

UP ಯಲ್ಲಿ ದೇಸಿ ಪಿಸ್ತೂಲ್‌ ಬದಲು ಸೇನೆ ಶಸ್ತ್ರಾಸ್ತ್ರ ತಯಾರಿಕೆ: ಅಮಿತ್‌ ಶಾ

Mangaluru ಫಾತಿಮಾ ರಲಿಯಾ ಸಹಿತ ಆರು ಮಂದಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ

MOdi (3)

BJP successor; ದೇಶದ ಜನರೇ ನನ್ನ ಉತ್ತರಾಧಿಕಾರಿ: ಪ್ರಧಾನಿ ನರೇಂದ್ರ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Eshwara Khandre 5 ಕೋಟಿ ಸಸಿಗಳ ಪೈಕಿ ಎಷ್ಟು ಬದುಕಿವೆ? ವರದಿ ಕೊಡಿ

ರಾಜ್ಯದ 2,207 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ

Election Commission ರಾಜ್ಯದಲ್ಲಿ ನೀತಿ ಸಂಹಿತೆ ಷರತ್ತು ಬದ್ಧ ಸಡಿಲಿಕೆ

Chaluvaraya Swamy ಇಷ್ಟು ವರ್ಷ ಪೆನ್‌ಡ್ರೈವ್‌ ಇಟ್ಟುಕೊಂಡಿದ್ದೇಕೆ?

Prajwal Revanna ವಿರುದ್ಧ ಕ್ರಮಕ್ಕೆ ತಕರಾರಿಲ್ಲ: ಎಚ್‌.ಡಿ. ದೇವೇಗೌಡ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ರಘುನಂದನ ಕಾಮತ್‌ ಪಂಚಭೂತಗಳಲ್ಲಿ ಲೀನ

Naturals Ice Cream; ರಘುನಂದನ ಕಾಮತ್‌ ಪಂಚಭೂತಗಳಲ್ಲಿ ಲೀನ

Udupi District ನಾನ್‌ ಸಿಆರ್‌ಝಡ್‌ ಮರಳು ಆಸರೆ; 2.45 ಲಕ್ಷ ಮೆ. ಟನ್‌ ಮರಳು ತೆರವು

Udupi District ನಾನ್‌ ಸಿಆರ್‌ಝಡ್‌ ಮರಳು ಆಸರೆ; 2.45 ಲಕ್ಷ ಮೆ. ಟನ್‌ ಮರಳು ತೆರವು

Bantwal ಖೋಟಾ ನೋಟು ವಿನಿಮಯ ದಂಧೆ ಪ್ರಕರಣ ; ಆರೋಪಿಗಳಿಂದ 506 ಖೋಟಾ ನೋಟುಗಳ ವಶ

Bantwal ಖೋಟಾ ನೋಟು ವಿನಿಮಯ ದಂಧೆ ಪ್ರಕರಣ ; ಆರೋಪಿಗಳಿಂದ 506 ಖೋಟಾ ನೋಟುಗಳ ವಶ

Amit Shah 2

UP ಯಲ್ಲಿ ದೇಸಿ ಪಿಸ್ತೂಲ್‌ ಬದಲು ಸೇನೆ ಶಸ್ತ್ರಾಸ್ತ್ರ ತಯಾರಿಕೆ: ಅಮಿತ್‌ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.