ಸಮರ್ಥ ರಾಷ್ಟ್ರ – ಸಮಗ್ರ ಅಭಿವೃದ್ಧಿಗಾಗಿ ಮತ್ತೂಮ್ಮೆ ಸಂಸತ್‌ಗೆ ಕಳುಹಿಸಿ: B.Y. ರಾಘವೇಂದ್ರ

Team Udayavani, May 4, 2024, 10:34 AM IST

ಸಮರ್ಥ ರಾಷ್ಟ್ರ – ಸಮಗ್ರ ಅಭಿವೃದ್ಧಿಗಾಗಿ ಮತ್ತೂಮ್ಮೆ ಸಂಸತ್‌ಗೆ ಕಳುಹಿಸಿ: B.Y. ರಾಘವೇಂದ್ರ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ, ಅಭಿವೃದ್ಧಿಯ ಹರಿಕಾರ ಎಂದೇ ಗುರುತಿಸಿಕೊಂಡಿರುವ ಸಂಸದ ಬಿ.ವೈ. ರಾಘವೇಂದ್ರ ನಾಲ್ಕನೇ ಬಾರಿ ಸಂಸತ್‌ ಪ್ರವೇಶಿಸಲು ಕಣಕ್ಕಿಳಿದಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರು ಹಾಗೂ ಶಿವಮೊಗ್ಗ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿಯವರು ಮಾಡಿದ ಕಾರ್ಯ, ಹಾಗೂ ಕ್ಷೇತ್ರದಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ತಿಳಿಸುತ್ತಾ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ-ಜೆಡಿಎಸ್‌ ಮೈತ್ರಿ ರಾಘವೇಂದ್ರ ಅವರ ಬಲ ಹೆಚ್ಚಿಸಿದೆ. ಕ್ಷೇತ್ರದೆಲ್ಲೆಡೆ ಅಪಾರ ಕಾರ್ಯಕರ್ತರೊಂದಿಗೆ ಮತದಾರರ ಮನ ಮುಟ್ಟುವ ಕಾರ್ಯ ಮಾಡುತ್ತಿರುವ ಅವರು ಚುನಾವಣಾ ಕಣದ ಬಗ್ಗೆ ಉದಯವಾಣಿ ಜತೆ ಮಾತನಾಡಿದ್ದಾರೆ.

– ಚುನಾವಣಾ ಪ್ರಚಾರ ಹೇಗಿದೆ ?
ನಮ್ಮ ಜಿಲ್ಲೆಯ ಎಲ್ಲ ಕಾರ್ಯಕರ್ತರು ಬೂತ್‌ ಮಟ್ಟದವರೆಗೆ ಇಳಿದು ಕೆಲಸ ಮಾಡುತ್ತಿದ್ದಾರೆ. ವಿಶೇಷವಾಗಿ ಬೈಂದೂರು ಸೇರಿದಂತೆ ನಮ್ಮ ಶಾಸಕರು ಹಳ್ಳಿ-ಹಳ್ಳಿಗೆ ಭೇಟಿ ನೀಡುವ ಕೆಲಸವಾಗುತ್ತಿದೆ. ಮಾಜಿ ಶಾಸಕರು ಸಹ ಅವರ ಕ್ಷೇತ್ರದಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್‌ ಜತೆಗೆ ಹೊಂದಾಣಿಕೆ
ಆಗಿರುವುದರಿಂದ ಭದ್ರಾವತಿ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಕೈ ಜೋಡಿಸಿದ್ದಾರೆ. ಹಾಗಾಗಿ ಒಳ್ಳೆಯ ರೀತಿಯಲ್ಲಿ ಪ್ರಚಾರ ನಡೆಯುತ್ತಿದೆ. ವಿಶೇಷವಾಗಿ ಮತದಾರರು ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸ ಇಟ್ಟಿದ್ದಾರೆ. 10 ವರ್ಷ ಎಷ್ಟು ಒಳ್ಳೆಯ ಆಡಳಿತ ನೀಡಿದ್ದಾರೆ ಅವರಿಗೆ
ಕೃತಜ್ಞತೆ ಸಲ್ಲಿಸಲು ಇದೊಂದು ಅವಕಾಶ ಎಂಬ ಮನಸ್ಥಿತಿ ಮತದಾರರಲ್ಲಿದೆ.

– ಚುನಾವಣೆ ಗೆಲ್ಲಲು ನಿಮ್ಮ ತಂತ್ರಗಾರಿಕೆ ಏನು ?
ಮೋದೀಜಿ ಹಾಗೂ ಯಡಿಯೂರಪ್ಪನವರು ಕೊಟ್ಟಂತಹ ಅಭಿವೃದ್ಧಿ ಕಾರ್ಯ. ನಮ್ಮ ಜಿಲ್ಲೆ ಶಾಸಕರು, ನಾನು ಸೇರಿ ಮಾಡಿದಂತಹ ಸಾಧನೆ. ಈ ಚುನಾವಣೆ
ದೇಶದ ಭವಿಷ್ಯದ ಚುನಾವಣೆ. ಆ ದೃಷ್ಟಿಕೋನ ಇಟ್ಟುಕೊಂಡು ಮತದಾರರು ಇದರಲ್ಲಿ ಭಾಗವಹಿಸಬೇಕು ಎಂದು ವಿನಂತಿ ಮಾಡುವೆ.

– ಪ್ರಚಾರದ ವೇಳೆ ಎದುರಿಸಿದ ಸವಾಲುಗಳೇನು ?
ಸಹಜವಾಗಿ ಸವಾಲುಗಳು ಎದುರಾಗಿವೆ. ಆಗಿರೋ ಕೆಲಸಗಳು ಬೇಕಾದಷ್ಟಿದ್ದರೂ ಆಗಬೇಕಿರುವುದು ಮತ್ತಷ್ಟು ಇದೆ. ಹಾಗಾಗಿ ಆ ವಿಚಾರದಲ್ಲಿ ಕೆಲಸ ಮಾಡುವ ಆಶ್ವಾಸನೆಯನ್ನು ಜನರಿಗೆ ಕೊಟ್ಟಿದ್ದೇನೆ.

– ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಪರಿಕಲ್ಪನೆ ಹಾಗೂ ಭರವಸೆಗಳೇನು ?
ಮಲೆನಾಡು ಭಾಗದಲ್ಲಿ ನೆಟ್‌ವರ್ಕ ಸಮಸ್ಯೆ ಇದೆ. ಟವರ್‌ಗಳು ಮಂಜೂರಾಗಿವೆ. ಇನ್ನಷ್ಟು ಸುಧಾರಣೆ ಆಗಬೇಕು. ವಿಮಾನ ನಿಲ್ದಾಣ ಆಗಿದೆ. ಬಂಡವಾಳಶಾಹಿಗಳು ಬರಬೇಕು. ಕೈಗಾರಿಕೆಗಳು ಶುರುವಾಗಬೇಕು. ಸೈನಿಕ್‌ ಸ್ಕೂಲ್‌ನ್ನು ತೀರ್ಥಹಳ್ಳಿಗೆ ತರಬೇಕೆಂಬ ಆಸೆ ಇತ್ತು. ಅದಕ್ಕೆ ನಾನು ಜ್ಞಾನೇಂದ್ರಣ್ಣ ಅವರು ನೂರು ಎಕರೆ ಜಾಗ ತೆಗೆದಿಟ್ಟಿದ್ದೇವೆ. ಪಶ್ಚಿಮಘಟ್ಟದ ಪರಿಸರ ಉಳಿಸಿಕೊಂಡು ಶೈಕ್ಷಣಿಕ ಸಂಸ್ಥೆಗಳು, ಪ್ರವಾಸೋದ್ಯಮ ಹಬ್‌ ಮಾಡಲು ಸಾಕಷ್ಟು ಅವಕಾಶಗಳಿವೆ. ಆ ರೀತಿ ಟೂರಿಸಂ, ಇಂಡಸ್ಟ್ರಿಯಲ್‌, ಎಜ್ಯುಕೇಶನ್‌ ಹಬ್‌ ಮಾಡಲು ಎಲ್ಲ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

– ಕ್ಷೇತ್ರದಲ್ಲಿ ನೀವು ಗುರುತಿಸಿದ ಐದು ಪ್ರಥಮ ಆದ್ಯತೆಯ ಕೆಲಸಗಳೇನು ?
ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ, ಡೀಮ್ಡ್ ಫಾರೆಸ್ಟ್‌, ಕಸ್ತೂರಿ ರಂಗನ್‌ ವರದಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕು. ಪ್ರತಿ ವರ್ಷ ವರದಿ ಬರುವುದು ಗಾಬರಿ ಆಗುವಂತಹದ್ದು ಆಗಬಾರದು. ಭದ್ರಾವತಿ ವಿಐಎಸ್‌ಎಲ್‌, ಎಂಪಿಎಂ ಕಾರ್ಖಾನೆ ಶುರು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುವೆ.

– ಮೋದಿ ಅಲೆ ಅಥವಾ ಬೇರೆ ಯಾವ ಅಂಶಗಳು ನಿಮ್ಮ ಗೆಲುವಿಗೆ ಸಹಕಾರಿಯಾಗಲಿವೆ ?
ಮೋದಿ ಅಲೆ, ಪೂಜ್ಯ ತಂದೆಯವರಾದ ಯಡಿಯೂರಪ್ಪ ಅವರ ಆಶೀರ್ವಾದ, ಅಭಿವೃದ್ಧಿ ಕಾರ್ಯಗಳು ಈ ಬಾರಿ ಚುನಾವಣೆಯಲ್ಲಿ ಕೈ ಹಿಡಿಯುತ್ತವೆ.

– ಜನ ನಿಮ್ಮನ್ನು ಏಕೆ ಬೆಂಬಲಿಸಬೇಕು ?
ರಾಷ್ಟ್ರಕೋಸ್ಕರ, ದೇಶದ ಹಿತದೃಷ್ಟಿಗಾಗಿ, ತಾಯಂದಿರ, ರೈತರ, ಯುವಕರ ಭವಿಷ್ಯಕ್ಕಾಗಿ ಮೋದೀಜಿ ಅವರಿಗೆ ಬೆಂಬಲ ಕೊಡಬೇಕು. ಮೋದೀಜಿ ಅವರಿಗೆ ಕೊಡಬೇಕೆಂದರೆ ಕಮಲದ ಚಿಹ್ನೆಗೆ ಮತ ಕೊಡಬೇಕು. ನಿಮ್ಮ ರಾಘಣ್ಣನನ್ನು ಸಂಸತ್‌ಗೆ ಕಳುಹಿಸಬೇಕು.

– ನಿಮ್ಮ ಎದುರಾಳಿ ಯಾರು ? ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು ?
ಯಾವುದೇ ಪಕ್ಷದ ಅಭ್ಯರ್ಥಿಗಳಾಗಿದ್ದರೂ ಅವರು ಗೆಲ್ಲಲೇಬೇಕೆಂದು ಸ್ಪರ್ಧೆಗಿಳಿದಿರುತ್ತಾರೆ. ನಮ್ಮ ನಮ್ಮ ಪಕ್ಷದ ಸಿದ್ಧಾಂತದ ಮೇಲೆ ಮತ ಕೇಳುವ ಕೆಲಸ
ಮಾಡುತ್ತೇವೆ. ಆದರೆ ದೌರ್ಭಾಗ್ಯ ಈ ಬಾರಿ ವೈಯಕ್ತಿಕ ಟೀಕೆ- ಟಿಪ್ಪಣಿಗಳಿಗೆ ಚುನಾವಣೆ ಸೀಮಿತವಾಗಿದೆ. ಆ ರೀತಿ ಆಗಬಾರದು. ಮುಂದೆ ಏನು ಮಾಡುತ್ತೇವೆ ಎಂಬುದರ ಆಧಾರದಲ್ಲಿ ಜನರ ಬಳಿ ಹೋಗಬೇಕು. ವೈಯಕ್ತಿಕ ಚರ್ಚೆ ಇಟ್ಟುಕೊಂಡು ಹೋಗುತ್ತಿರುವುದಕ್ಕೆ ನೋವಿದೆ.

ಟಾಪ್ ನ್ಯೂಸ್

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

1-sadadasdsd

PM ಮೋದಿಯವರೊಂದಿಗೆ ಕೃಷಿ ಸಂವಾದಕ್ಕೆ ಯಲ್ಲಾಪುರದ ಲತಾ ಹೆಗಡೆ ಆಯ್ಕೆ

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

1-ssdad

ಅನುಚಿತ ವರ್ತನೆ‌ ; ಜೆಸ್ಕಾಂ ಗುತ್ತಿಗೆದಾರನಿಗೆ‌ ಚಪ್ಪಲಿಯಿಂದ ಹೊಡೆದ ಮಹಿಳೆ

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.