ಗೆಳತಿಯ ಅಶ್ಲೀಲ ಫೋಟೋ ಅಪ್ಲೋಡ್: ಬಾಂಗ್ಲಾ ತಂಡದ ವೇಗಿ ಸನ್ನಿ ಬಂಧನ
Team Udayavani, Jan 22, 2017, 4:51 PM IST
ಢಾಕಾ : ಪ್ರೇಯಸಿಯ ಅಶ್ಲೀಲ ಫೋಟೋವನ್ನು ನಕಲಿ ಫೇಸ್ಬುಕ್ ಖಾತೆ ತೆರೆದು ಅಪ್ಲೋಡ್ ಮಾಡಿದ ಆರೋಪದಲ್ಲಿ ಬಾಂಗ್ಲಾದೇಶದ ಅಂತರಾಷ್ಟ್ರೀಯ ಕ್ರಿಕೆಟಿಗ, ಎಡಗೈ ವೇಗಿ ಅರಾಫತ್ ಸನ್ನಿಯನ್ನು ಭಾನುವಾರ ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ.
ಢಾಕಾದ ಅಮೀನ್ ಬಜಾರ್ನಲ್ಲಿರುವ ಮನೆಯಿಂದ 30 ರ ಹರೆಯದ ಸನ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸನ್ನಿ ವಿರುದ್ದ ಬಹುಕಾಲದ ಗೆಳತಿ ಮಾನನಷ್ಟ ಮಾಡಿದುದಕ್ಕಾಗಿ ದೂರು ನೀಡಿದ್ದಳು.
ಪೊಲೀಸರು ಸನ್ನಿಯನ್ನು ನ್ಯಾಯಾಲಯದ ಎದುರು ಹಾಜರು ಪಡಿಸಿದ್ದು, ಅಪರಾಧಿ ಎಂದು ಸಾಬೀತಾದಲ್ಲಿ 14 ವರ್ಷ ಜೈಲು ಮತ್ತು ಭಾರೀ ದಂಡ ತೇರಬೇಕಾಗಿದೆ.
ಸನ್ನಿ 16 ಅಂತರಾಷ್ಟ್ರೀಯ ಏಕದಿನ ಪಂದ್ಯವಾಡಿದ್ದು 24 ವಿಕೆಟ್ ಪಡೆದಿದ್ದು, 10 ಟಿ-ಟ್ವೆಂಟಿ ಪಂದ್ಯಗಳನ್ನಾಡಿ 12 ವಿಕೆಟ್ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ