ದಿಲ್ಲಿ: ಪತ್ನಿಯ ಕೊಂದು ಶಿರಚ್ಛೇದ ಮಾಡಿ ಹಾಸಿಗೆಯಡಿ ಅಡಗಿಸಿಟ್ಟ ಪತಿ 

Team Udayavani, Feb 15, 2017, 11:05 AM IST

Murder-700.jpg

ಹೊಸದಿಲ್ಲಿ : 40ರ ಹರೆಯದ ವ್ಯಕ್ತಿಯೋರ್ವ ತನ್ನ ಮೊದಲ ಪತ್ನಿಯನ್ನು ಹೊಡೆದು ಕೊಂದು, ಆಕೆಯ ದೇಹವನ್ನು ಎರಡು ಭಾಗ ಮಾಡಿ ಶವದ ವಿಲೇವಾರಿ ಮಾಡಲು ಯತ್ನಿಸಿ ಪೊಲೀಸರಿಂದ ಬಂಧಿತನಾದ ಅತ್ಯಂತ ಅಮಾನುಷ ಹಾಗೂ ಆಘಾತಕಾರಿ ಘಟನೆ ವ್ಯಾಲೆಂಟೈನ್‌ ದಿನದಂದು ಬೆಳಕಿಗೆ ಬಂದಿದೆ.

ಮೊದಲ ಪತ್ನಿ 35ರ ಹರೆಯದ ಮನೀಷಾಳನ್ನು ಹೊಡೆದು ಕೊಂದು  ಶಿರಚ್ಛೇದ ಗೈದ ವ್ಯಕ್ತಿಯನ್ನು ಸುಬೋಧ್‌ ಎಂದ ಗುರುತಿಸಲಾಗಿದೆ. ಮನೀಷಾಗೆ ಅನೈತಿಕ ಸಂಬಂಧ ಇದೆ ಎಂಬ ಗುಮಾನಿಯಲ್ಲಿ ಆಕೆಯನ್ನು ಆತ ಫೆ.10 ಮತ್ತು 11ರ ನಡುವಿನ ರಾತ್ರಿಯಲ್ಲಿ ಹೊಡೆದು ಕೊಂದಿದ್ದಾನೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಸುಬೋಧ್‌ ನಿಂದ ಮೊದಲ ಪತ್ನಿ ಮನೀಷಾಗೆ ಇಬ್ಬರು ಮಕ್ಕಳಿದ್ದಾರೆ. ಈಕೆ ತನ್ನಿಬ್ಬರು ಮಕ್ಕಳೊಂದಿಗೆ ಶಾಕೂರ್‌ಪುರದಲ್ಲಿ ವಾಸವಾಗಿದ್ದಾಳೆ. ಸುಬೋಧ್‌ ತನ್ನ ಎರಡನೇ ಪತ್ನಿ ಮುನಿಯಾ ಹಾಗೂ ಎರಡು ತಿಂಗಳ ಮಗುವಿನ ಜತೆಗೆ ಮಧು ವಿಹಾರದಲ್ಲಿ ವಾಸವಾಗಿದ್ದಾನೆ.

ಫೆ.10-11ರ ರಾತ್ರಿ ಸುಬೋಧ್‌ ತನ್ನ ಮೊದಲ ಪತ್ನಿ ಮನೀಷಾಳನ್ನು ಮಧು ವಿಹಾರದಲ್ಲಿನ ತನ್ನ ಮನೆಗೆ, ಮಾತನಾಡಲು ಬರುವಂತೆ, ಕರೆಸಿಕೊಂಡಿದ್ದಾನೆ. ಆಕೆಯೊಂದಿಗೆ ಆಕೆಯ ಇಬ್ಬರು ಮಕ್ಕಳು ಕೂಡ ಬಂದಿದ್ದಾರೆ. 

ಮೈಮೇಲೆ ಆವೇಶ ಬಂದವನಂತೆ ಪತಿ ಸುಬೋಧ್‌ ಪತ್ನಿ ಮನೀಷಾಳ ಮೇಲೆ ನಿರ್ದಯವಾಗಿ ದೊಣ್ಣೆಯಿಂದ ಹೊಡೆಯಲು ಮುಂದಾಗಿದ್ದಾನೆ. ಎರಡನೇ ಪತ್ನಿ ಮುನಿಯಾ, ಮತ್ತು ತನ್ನ ಇಬ್ಬರು ಮಕ್ಕಳು ಎಷ್ಟೇ ಅಂಗಲಾಚಿ ಬೇಡಿಕೊಂಡರೂ ಸುಬೋಧ್‌, ಮೊದಲ ಪತ್ನಿ ಮನೀಷಾಳ ಮೇಲೆ ಹಲ್ಲೆ ಮಾಡುವುದನ್ನು ನಿಲ್ಲಿಸಲಿಲ್ಲ.

ಮಾರಣಾಂತಿಕ ಗಾಯಗಳಿಗೆ ಗುರಿಯಾದ ಮನೀಷಾ ಕೊನೆಗೂ ಸಾವಪ್ಪಿದ್ದಾಳೆ. ಆಗ ಆಕೆಯ ಶವದ ಶಿರಚ್ಛೇದ ಮಾಡಿ, ದೇಹವನ್ನು ತುಂಡರಿಸಿ, ಬ್ಯಾಗ್‌ನೊಳಗೆ ತುರುಕಿ ಅದನ್ನು ಬಾಕ್ಸ್‌-ಬೆಡ್‌ನ‌ ಒಳಗಡೆ ಇರಿಸಿದ್ದಾನೆ. 

ಮರುದಿನ ಸುಬೋಧ್‌ನ ಮನೆಯಿಂದ ಶವದ ದುರ್ನಾತ ಹೊರ ಬರಲು ಆರಂಭಿಸಿದಾಗ ಶಂಕೆಪಟ್ಟ ನೆರೆಕರೆಯವರು ಒಡನೆಯೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಧಾವಿಸಿ ಬಂದ ಪೊಲೀಸರು ಶವವನ್ನು ತುಂಡರಿಸಿ ಅಡಗಿಸಿಡಲಾಗಿದ್ದ  ಪೆಟ್ಟಿಗೆಯನ್ನು ಪತ್ತೆ ಹಚ್ಚಿ ಸುಬೋಧ್‌ನನ್ನು ಬಂಧಿಸಿದ್ದಾರೆ. 

ಪೊಲೀಸರು ಈ ಅತ್ಯಮಾನುಷ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

ಟಾಪ್ ನ್ಯೂಸ್

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Vitla ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Slander about Malabar group: Mumbai High Court harsh verdict

Malabar group ಬಗ್ಗೆ ಅಪಪ್ರಚಾರ:  ಮುಂಬಯಿ ಹೈಕೋರ್ಟ್‌ ಕಠಿನ ತೀರ್ಪು

Modi insults Tamils ​​for votes: CM Stalin sparks

Election; ವೋಟಿಗಾಗಿ ತಮಿಳರಿಗೆ ಮೋದಿ ಅವಹೇಳನ: ಸಿಎಂ ಸ್ಟಾಲಿನ್‌ ಕಿಡಿ

3 days fast as penance for Jagannath being a Modi devotee: Patra

Sambit Patra; ಜಗನ್ನಾಥನೇ ಮೋದಿ ಭಕ್ತ ಎಂದಿದ್ದಕ್ಕೆ 3 ದಿನ ಉಪವಾಸ ಪ್ರಾಯಶ್ಚಿತ್ತ: ಪಾತ್ರಾ

This time 2004 result will repeat: Jairam Ramesh

Loksabha: ಈ ಬಾರಿ 2004ರ ರಿಸಲ್ಟ್ ಮರುಕಳಿಸಲಿದೆ: ಜೈರಾಂ ರಮೇಶ್‌

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.