ಬಡ್ಡಿ ದರದ ಏರಿಳಿತಕ್ಕೆ ನಮ್ಮದೇನು ಉತ್ತರ ?


Team Udayavani, Feb 20, 2017, 3:45 AM IST

intrest-rate.jpg

ಕಳೆದ ವಾರ ರಿಸರ್ವ್‌ ಬ್ಯಾಂಕಿನ ಬಡ್ಡಿ ದರ ಪರಿಷ್ಕರಣೆಯ ದಿನದಂದು ಕೇಂದ್ರೀಯ ಬ್ಯಾಂಕು ರಿಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡದೆ ಹಾಗೆಯೇ ಬಿಟ್ಟಿರುವ ನಿಮಿತ್ತ ಬಾಂಡು ಮಾರುಕಟ್ಟೆ ಹಠಾತ್ತಾಗಿ ಕುಸಿಯಿತು. ಬಾಂಡುಗಳ ಬೆಲೆ ಕುಸಿದರೆ ಅದರ ಮೇಲೆ ಸಿಗುವ ಪ್ರತಿಫ‌ಲ ಅಥವಾ ಬಾಂಡು ಯೀಲ್ಡ… ಆ ಕೂಡಲೇ ಮೇಲೇರುತ್ತದೆ. ಅವೆರಡು ವಿರುದ್ಧ ದಿಕ್ಕಿನಲ್ಲಿ ಚಲಿಸುವ ವಿಷಯಗಳು. 

ನಮ್ಮ ದೇಶದಲ್ಲಿ ಆರ್‌ಬಿಐ ನಿಯಂತ್ರಿತ ಬಡ್ಡಿ ದರಗಳು ಏರಿಳಿಯುತ್ತಾ ಇರುತ್ತವೆ. ಒಮ್ಮೆ ಕೆಳಗಿನಿಂದ ಮೇಲಕ್ಕೆ ಏರಿದರೆ ನಿಧಾನವಾಗಿ ಅದು ಪುನಃ ಮೇಲಿನಿಂದ ಕೆಳಕ್ಕೆ ಇಳಿಯುತ್ತದೆ. ಸಧ್ಯಕ್ಕೆ ಕಳೆದ ಎರಡು ವರುಶಗಳಿಂದ ಬಡ್ಡಿ ದರ ಇಳಿಕೆಯ ಹಾದಿಯಲ್ಲಿದೆ. 

ದೇಶದ ಆರ್ಥಿಕತೆಯ ನಿಯಂತ್ರಣಕ್ಕೆ ವಿತ್ತ ಮಂತ್ರಿಗಳು ತಮ್ಮ ಆರ್ಥಿಕ ನೀತಿಯನುಸಾರ ಪ್ರಕಟಿಸುವ ಬಜೆಟ್‌ ಒಂದು ವಿಧವಾದರೆ ರಿಸರ್ವ್‌ ಬ್ಯಾಂಕ್‌ ತನ್ನ ಹಣಕಾಸು ನೀತಿಯಾನುಸಾರ ಪ್ರಕಟಿಸುವ ಬಡ್ಡಿದರ ಇನ್ನೊಂದು ವಿಧ. ಇವೆರಡೂ ಜಂಟಿಯಾಗಿ ದೇಶದ ಆರ್ಥಿಕ ಸ್ಥಿತಿಗತಿಗಳನ್ನು ನಿರ್ಧರಿಸುತ್ತವೆ. ಬಜೆಟ್‌ ಮೂಲಕ ಯಾವಯಾವ ಕ್ಷೇತ್ರದ ಅಭಿವೃದ್ಧಿಗಾಗಿ ಎಷ್ಟು ಸಂಪನ್ಮೂಲ ಮೀಸಲಾಗಿಡಬೇಕು ಮತ್ತು ಯಾವಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಕರಭಾರ ಹೊರಿಸಬೇಕು ಅಥವಾ ಇಳಿಸಬೇಕು ಎಂಬ ಲೆಕ್ಕಗಳ ಮೂಲಕ ಆರ್ಥಿಕ ಪ್ರಗತಿಯನ್ನು ಸಾಧಿಸ ಹೊರಟರೆ ಅದಕ್ಕೆ ಪೂರಕವಾಗಿ ರಿಸರ್ವ್‌ ಬ್ಯಾಂಕು ದೇಶದೊಳಗಿನ ಹಣದ ಹರಿವು ಎಷ್ಟು ಇರಬೇಕು ಮತ್ತು ಅದರ ಬಡ್ಡಿದರ ಎಷ್ಟು ಇರಬೇಕು ಎಂದು ನಿಯಂತ್ರಿಸಿ ದೇಶದಆರ್ಥಿಕ ಪ್ರಗತಿಗೆ ಪಕ್ಕ ವಾದ್ಯದಲ್ಲಿ ಸಹಕರಿಸುತ್ತದೆ. ಆ ಪ್ರಕಾರ ಈ ಬಡಿªದರವನ್ನುಏರಿಳಿಸುವ ಪ್ರಕ್ರಿಯೆ ಬಹುತೇಕ? ಎರಡು ತಿಂಗಳಿಗೊಮ್ಮೆ ಆರ್‌.ಬಿ.ಐ ಯ ಹಣಕಾಸು ಪಾಲಿಸಿಯ ಮೂಲಕ ನಡೆಯುತ್ತದೆ. ಫೆಬ್ರವರಿ, ಏಪ್ರಿಲ್‌, ಜೂನ್‌, ಆಗಸ್ಟ್‌, ಅಕ್ಟೋಬರ್‌, ಡಿಸೆಂಬರ್‌  ತಿಂಗಳುಗಳ ಮೊದಲಿಗೆ ಈ ಘೋಷಣೆಗಳು ನಡೆಯುತ್ತವೆ. 

ಬಡ್ಡಿ ದರಗಳನ್ನು ರಿಸರ್ವ್‌ ಬ್ಯಾಂಕು (ಆರ್‌.ಬಿ.ಐ) ನಿಯಂತ್ರಿಸುತ್ತದೆ. 
ಮತ್ತು ದೇಶದ ಆರ್ಥಿಕ ವ್ಯವಸ್ಥೆಯನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುವ ಕ್ರಮವಾಗಿ ಅದನ್ನು ಕಾಲಾನುಕ್ರಮ ಏರಿಳಿಸುತ್ತದೆ. ಅದರ ತತ್ವವನ್ನು ಅರ್ಥಮಾಡಿಕೊಂಡರೆ ನಾವು ಸುಲಭವಾಗಿ ಬಡ್ಡಿದರವನ್ನು ಯಾವುದೇ ಫ‌ಲ ಜೋತಿಷ್ಯರ ಸಹಾಯವಿಲ್ಲದೆ ಪ್ರಡಿಕ್ಟ್ ಮಾಡಬಹುದು. ಅದನ್ನು ಬಳಸಿಕೊಂಡು ಗರಿಷ್ಟ ಬಡ್ಡಿದರದ ಲಾಭ ಪಡೆಯಬಹುದು.

ಮೂಲಭೂತವಾಗಿ ಇಷ್ಟು ತಿಳಿದುಕೊಂಡರೆ ಸಾಕು: ಬ್ಯಾಂಕು ಬಡ್ಡಿ ದರ ಕಡಿಮೆ ಇದ್ದಲ್ಲಿ ಜನರಿಗೆ ಉಳಿತಾಯ ಮಾಡುವ ಆಸಕ್ತಿ ಕಡಿಮೆಯಾಗುತ್ತದೆ. ಸಾಲ ತೆಗೆದು  ಬೇಕಾದ್ದಕ್ಕೆ ಖರ್ಚು ಮಾಡಲು ಪ್ರೋತ್ಸಾಹ ಜಾಸ್ತಿಯಾಗುತ್ತದೆ. ಹಣದ ಹರಿವು ಜಾಸ್ತಿಯಾಗುತ್ತದೆ. ಇದರ ಒಟ್ಟು ಫ‌ಲ ಮಾರುಕಟ್ಟೆಯಲ್ಲಿ ಸರಕುಗಳ ಬೇಡಿಕೆ ಜಾಸ್ತಿಯಾಗಿ ಆರ್ಥಿಕ ಪ್ರಗತಿಯ ಒಟ್ಟೊಟ್ಟಿಗೆ ಬೆಲೆಯೇರಿಕೆ ಕೂಡಾ. ರಿಸೆಶನ್‌ಚಿಕಿತ್ಸೆಗಾಗಿ ಬಡ್ಡಿದರಕಡಿಮೆ ಮಾಡಿ ಹಣದ ಹರಿವು ಜಾಸ್ತಿ ಮಾಡಿದ ಭಾರತವನ್ನುಬಾಧಿಸಿದ ಸಮಸ್ಯೆಇದೇನೇ. 

ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಲ್ವ? ಹೌದು. ಆಗ ರಿಸರ್ವ್‌ ಬ್ಯಾಂಕು ರಿವರ್ಸ್‌ ಬ್ಯಾಂಕು ಆಗುತ್ತದೆ! ಎಲ್ಲವೂ ಮೊದಲಿನ ತದ್ವಿರುದ್ದ! ಬಡ್ಡಿದರವನ್ನು ಏರಿಸಿ ಜನರಲ್ಲಿ ಉಳಿತಾಯದ ಆಸಕ್ತಿ ಕುದುರಿಸಿ, ಸಾಲವನ್ನು ದುಬಾರಿಯಾಗಿಸಿ ಹಣದ ಹರಿವನ್ನು ಕುಂಠಿತ ಗೊಳಿಸುವುದು. ಸರಕುಗಳ ಬೇಡಿಕೆ ಕಡಿಮೆಯಾಗಿ ಬೆಲೆಯೇರಿಕೆ ಕಡಿಮೆಯಾಗುವುದಾದರೂ ಜೊತೆಜೊತೆಗೆ ಆರ್ಥಿಕ ಪ್ರಗತಿಯೂ ಕಡಿಮೆಯಾಗುವುದು. 

ಹೀಗೆ ರಿಸರ್ವ್‌ ಬ್ಯಾಂಕು, ಹಣದ ಹರಿವನ್ನು ಹೆಚ್ಚು ಕಡಿಮೆ ಮಾಡಲು ಬಡ್ಡಿದರವನ್ನು ಏರಿಳಿಸುತ್ತಾ ಇರುತ್ತದೆ.  ಆರ್ಥಿಕ ಪ್ರಗತಿಗಾಗಿ ಶ್ರಮಿಸುತ್ತಾ, ಬೆಲೆಯೇರಿಕೆಯನ್ನು ನಿಯಂತ್ರಿಸುತ್ತಾ, ಎರಡನ್ನೂ ಬ್ಯಾಲನ್ಸ್‌ ಮಾಡುತ್ತಾ, ಹೋಗುತ್ತದೆ. ಇದನ್ನು ಆರ್‌.ಬಿ.ಐ ಹಣಕಾಸಿನ ನೀತಿಯಾಗಿ ಪ್ರಕಟಿಸುತ್ತದೆ.  

ಇದರಲ್ಲಿ ಗಮನಾರ್ಹ ಅಂಶವೇನೆಂದರೆ ಬಡ್ಡಿ ದರಗಳು ಏರಿಳಿಯಲೇ ಬೇಕೆಂದು ಖಡ್ಡಾಯ ಏನೂ ಇಲ್ಲದಿದ್ದರೂ ವಾಸ್ತವದಲ್ಲಿ ಅದು ನಿಧಾನವಾಗಿ ಉಯ್ನಾಲೆಯಂತೆ ಏರಿಳಿಯುತ್ತಿರುವುದಂತೂ ಸತ್ಯ. ಶೇರು ಬೆಲೆಗಳಂತೆ ಕರ್ಕಶವಾಗಿ ದಿನಕ್ಕೆ ಐವತ್ತು ಬಾರಿ ಏರಿಳಿಯುವುದಿಲ್ಲ. ಎರಡನೆಯದಾಗಿ ಈ ಬಡ್ಡಿ ದರಗಳ ಏರಿಳಿತ ಬಹುತೇಕ ಊಹ್ಯವಾಗಿರುತ್ತದೆ. ಶೇರು ಬಜಾರಿನಂತೆ ದುಡ್ಡು ಹಾಕಿ ಅದೃಷ್ಟ ಪರೀಕ್ಷೆ ಮಾಡುವಂತಹ ಪ್ರಮೇಯವೇ ಇಲ್ಲ.

ಈ ಎರಡು ತತ್ವಗಳನ್ನೇ ತೆಗೆದುಕೊಂಡು ಹೊರಟರೆ ಬಡ್ಡಿದರದ ಚಲನೆಯನ್ನು ನಮ್ಮ ಲಾಭಕ್ಕೆ ತಕ್ಕಂತೆ ನಿಭಾಯಿಸಿಕೊಂಡು ಹೋಗಬಹುದು. 

1. ಗರಿಷ್ಟ ಬಡ್ಡಿದರದಲ್ಲಿ ದೀರ್ಘ‌ಕಾಲಕ್ಕೆ ಹೂಡಿ
ಬಡ್ಡಿದರ ಗರಿಷ್ಟ ಮಟ್ಟಕ್ಕೆ ಬಂದಾಗ ಮತ್ತು ಇನ್ನೇನು ಕೆಲಕ್ಕೆ ಇಳಿಯಲಿರುವುದು ಎಂದಿರುವಾಗ ವೃತ್ತ ಪತ್ರಿಕೆಗಳಲ್ಲಿ, ವಿತ್ತ ಪತ್ರಿಕೆಗಳಲ್ಲಿ ನಾನು ಈಗ ಕುಟ್ಟುತ್ತಿರುವಂತೆ ಹಲವರುಆ ಬಗ್ಗೆ ಲೇಖನ ಕುಟ್ಟುತ್ತಾರೆ. ಆ ಪ್ರಕಾರ ಬಡ್ಡಿದರ ಇಳಿಯುವ ಮೊದಲೇ ದೀರ್ಘ‌ ಕಾಲಕ್ಕೆ ಠೇವಣಿ ಹೂಡಬಹುದು. ಏಕಗಂಟಿನಲ್ಲಿ ಮೊತ್ತ ಇಲ್ಲವೆಂದಾದರೆ ತಿಂಗಾÛಕಟ್ಟುವ ಆರ್‌.ಡಿ. ಮಾಡಬಹುದು.  ಆರ್‌.ಡಿಯಲ್ಲಿ ಆರಂಭಿಸುವಾಗ ಇದ್ದ ಬಡ್ಡಿ ದರವೇ ಅವಧಿ ಪೂರ್ತಿ ಲಾಗೂ ಆಗುತ್ತದೆ. ಬಡ್ಡಿದರದ ಏರಿಳಿತಗಳು ಅದನ್ನು ಭಾದಿಸುವುದಿಲ್ಲ. ಇದೂ ಕೂಡಾ ಒಂದು ಉತ್ತಮ ಆಯ್ಕೆ. ಇದೇ ರೀತಿಫಿಕ್ಸ್‌$x ಮೆಚೂÂರಿಟಿ ಪ್ಲಾನ್‌ ಮಾಡಬಹುದು. ಇದರಲ್ಲಿ ಒಂದು ನಿಗಧಿತ ಅವಧಿಯವರೆಗೆ ದುಡ್ಡು ಠೇವಣಿಯಾಗಿರುತ್ತದೆ. ಎಫ್ಎಮ್‌ ಪಿ ಗಳಲ್ಲಿ ಬಡ್ಡಿದರ ನಿಗಧಿತವಾಗಿಲ್ಲದಿದ್ದರೂ ಅವು ಪ್ರಚಲಿತ ಸರಕಾರಿ ಮನಿ ಮಾರ್ಕೆಟ್‌ ಯೀಲ್ಡ್‌ ಅನ್ನು ಸ್ಥೂಲವಾಗಿ ಅನುಸರಿಸುತ್ತದೆ. ಬಡ್ಡಿದರ ಗರಿಷ್ಟರುವಾಗ ಮತ್ತು ಇನ್ನು ಮುಂದಕ್ಕೆ ಕೆಳಕ್ಕೆ ಇಳಿಯುತ್ತದಾದರೆ ಮ್ಯೂಚುವಲ್‌ ಫ‌ಂಡುಗಳ ಓಪ್‌ನ್‌ ಎಂಡೆಡ್‌ಡೆಟ್‌ ಫ‌ಂಡುಗಳಲ್ಲಿ ಹಣ ಹೂಡಬಹುದು. ಬಡ್ಡಿದರ ಇಳಿದಂತೆ ಅಂತಹ ಫ‌ಂಡುಗಳ ಮಾರುಕಟ್ಟೆ ಬೆಲೆ ಏರುತ್ತದೆ. 

ಆ ರೀತಿ ಇದರಲ್ಲಿ ಡಬ್ಬಲ್‌ ಬೆನೆಫಿಟ್‌ ಸಿಗಬಹುದು. ಅಲ್ಪ ಸ್ವಲ್ಪರಿಸ್ಕ್ ಇದ್ದರೂ ಕೂಡಾ ಉತ್ತಮ ಕಂಪೆನಿಗಳ ಡಿಬೆಂಚರ್‌ಗಳಲ್ಲಿ ಅಥವಾ ಎಫ್.ಡಿಗಳಲ್ಲಿ ದುಡ್ಡು ಹೂಡಬಹುದು. 

ಲಭ್ಯವಿದ್ದಲ್ಲಿ ಕರವಿನಾಯತಿಯುಳ್ಳ ಇನಾ#$› ಬಾಂಡುಗಳು ಅರೆಸರಕಾರಿಜಿ‚àರೋಕೂಪನ್‌ ಬಾಂಡುಗಳಲ್ಲೂ ದುಡ್ಡು  ಹೂಡಬಹುದು. ಪೋಸ್ಟಲ್‌ ಸೇಂಗ್ಸ್‌ಗಳ ಬಡ್ಡಿ ದರಗಳು ಉಳಿದ ಸ್ಕೀಮುಗಳಂತೆ ಆಗಾಗ್ಗೆ ಬದಲಾಗುವುದಿಲ್ಲ. ಸಧ್ಯದ ಪರಿಸ್ಥಿತಿಯಲ್ಲಿ ಸುಮಾರು ಶೇ.8 ಮಟ್ಟದ ಅವುಗಳ ಮೇಲಿನ ಬಡ್ಡಿದರಗಳು ಆಕರ್ಷಕವಾಗಿದೆ.

2. ಕನಿಷ್ಟ ಬಡ್ಡಿದರರುವಾಗ ಅಲ್ಪಕಾಲಕ್ಕೆ ಹೂಡಿ
ಒಂದು ವೇಳೆ ಬಡ್ಡಿದರ ಕನಿಷ್ಟರುವ ಸಮಯದಲ್ಲಿ ಹೂಡ ಬೇಕಾಗಿ ಬಂದಾಗ ಅಲ್ಪಕಾಲಾವಧಿಗೆ ಹೂಡಿ ಬಡ್ಡಿ ಏರುವುದಿದ್ದಲ್ಲಿ ಅಂತಹ ಏರಿಕೆಗಾಗಿಕಾಯಿರಿ. ಬಡ್ಡಿದರ ಏರುವ ಪ್ರಮೇಯವಿಲ್ಲದಿದ್ದಲ್ಲಿ ಈ ಮಾತು ಅನ್ವಯವಾಗುವುದಿಲ್ಲ. ಆದರೆ ಆ ಪ್ರಮೇಯ ಇದೆಯೋ ಇಲ್ಲವೋ ಎಂದು ಹೇಗೆ ಹೇಳುವುದು? ಅಲ್ಲವೇ? ಒಂದು ಸುಲಭದಾರಿ ಎಂದರೆ ಟಿ ಪೇಪರಿನಲ್ಲಿ ಸೂಟು-ಬೂಟುಧಾರಿಯಾಗಿ ಬರುವ ಸೆಲ್ಫ್ ಸರ್ಟಿಫಿಕೇಟ್‌ ಹೊಂದಿರುವ ತಜ್ಞರ ಅಭಿಪ್ರಾಯಕ್ಕೆ ಕೊರಳೊಡ್ಡುವುದು.  ಇದರಲ್ಲಿ ತಪ್ಪೇನಿಲ್ಲ. ಏನಿಲ್ಲ ಅಂದರೆ ಭವಿಷ್ಯ ವಾಣಿ ಸುಳ್ಳಾದರೆ ದೂರಲು ಒಂದು ರೆಡಿ ಮೇಡ್‌ಜನ ಆದರೂ ಇರ್ತಾರೆ ಅಲ್ವೇ? ಅದರ ಬದಲು ನಿಮ್ಮದೇ ಸ್ವಂತ ಬುದ್ಧಿಗೆ ಕೊರಳೊಡ್ಡುವ ಇರಾದೆ ಇದ್ದಲ್ಲಿ ನಿಮಗೆ ಆ ಮೇಲೆ ದೂರಲಿಕ್ಕೆ ಒಬ್ಬ’ಉಚಿತ ವ್ಯಕ್ತಿ’ ಇರಲಾರರು. ಮತ್ತೆ ನೀವಾಯಿತು ನಿಮ್ಮ ಹೆಂಡತಿಯಾಯಿತು. ಆದರೆ ಬಹುತೇಕ, ಹಣದುಬ್ಬರ ಬರುವ ಕಾಲತ್ತಿಲೆ ಅದನ್ನು ಕಂಟ್ರೋಲ್‌ ಮಾಡಲು ಆರ್‌.ಬಿ.ಐ ಬಡ್ಡಿ ದರವನ್ನು ಏರಿಸುತ್ತಾ ಹೋಗುತ್ತದೆ. ಇದು ಅನುಭವದ ಮಾತು.

3. ಕಡಿಮೆ ಬಡ್ಡಿದರದ ಹಳೆಯ ಠೇವಣಿಯನ್ನು ಮರುಹೂಡಿರಿ
ಏರಿದ ಬಡ್ಡಿದರದ ಸಂದರ್ಭದಲ್ಲಿ ಇದನ್ನು ಖಂಡಿತವಾಗಿ ಪರಿಶೀಲಿಸಿ ನೋಡಿರಿ. ಈ ಸಮಯದಲ್ಲಂತೂ ಬಹುತೇಕ ಜನರಿಗೆ ಈ ಸಮಸ್ಯೆಇದೆ. ನಾನು ಕಳೆದ ವರ್ಷವಷ್ಟೇ 7.5%-8% ಕ್ಕೆ ಠೇವಣಿ ಮಾಡಿದೆ. ಈಗ ಬಡ್ಡಿದರ 8.5%-9% ಗೆ ಏರಿದೆ. ಆ ಹಳೇ ಠೇವಣಿಯನ್ನು ಹಿಂಪಡೆದು ಮರುಠೇವಣಿ ಮಾಡಿದರೆ ಹೇಗೆ ಅಂತ. ಈ ಪ್ರಶ್ನೆಯನ್ನು ನನ್ನಲ್ಲಿ ಆಗಾಗ್ಗೆ ಬಹಳ ಜನರು ಕೇಳುತ್ತಾರೆ. ಇದಕ್ಕೆ ಉತ್ತರವಾಗಿ ಸ್ವಲ್ಪ ಲೆಕ್ಕಾಚಾರ ಮಾಡಬೇಕಾಗುತ್ತದೆ.  ಈ ನಮ್ಮ ಗುರುಗುಂಟಿರಾಯರು ಅಧಿಕ ಬಡ್ಡಿಯಾಸೆಗೆ ಮಂಗಳೂರಿನ ಗ್ಲೋಬಲ್‌ ಇಂಡೆಕ್ಸ್‌ ನಂತಹ ಪೋಂಜಿ‚ ಸ್ಕೀಮಿನಲ್ಲಿ ದುಡ್ಡು ಹೂಡಿ ಎಲ್ಲವನ್ನೂ ಕಳೆದುಕೊಳ್ಳುವ ಮೊದಲು ಒಂದು ಹತ್ತುಸಾವಿರ ರುಪಾಯಿಯನ್ನು ತಮ್ಮ ಮೊಮ್ಮಗನ ಹೆಸರಿನಲ್ಲಿ3 ವರ್ಷದ ಮಟ್ಟಿಗೆ 8% ಬಡ್ಡಿದರಕ್ಕೆ ಎಫ್.ಡಿ ಮಾಡಿದ್ದರಂತೆ. ಈಗ ಅದೇ ಡೆಪಾಸಿಟ್‌ಗೆ 1 ವರ್ಷಆಗಿದೆ. ಮತ್ತು ಈಗ ಅದೇ ಬ್ಯಾಂಕಿನಲ್ಲಿ ಬಡ್ಡಿದರ ಸಿಕ್ಕಾಪಟ್ಟೆ ಏರಿದೆ. ಆದ್ದರಿಂದ ಅದನ್ನು ಮುರಿದು ಮರುಹೂಡಿದರೆ ಹೇಗೆ ಅಂತ ಅವರ ಲೆಕ್ಕಾಚಾರ. 

ಸರಿ. ಬ್ಯಾಂಕುಗಳ ಕಾನೂನಿನ ಪ್ರಕಾರ ಪ್ರಿಮೆಚೂÂರ್‌ ಂಪಡೆತಗಳಿಗೆ ಶೇ.1 ತಪ್ಪುದಂಡ ವಿಧಿಸುತ್ತಾರೆ. ಆದರೆ ಆ ತಪ್ಪುದಂಡ ಪೂಣಾವಧಿಯ ಬಡ್ಡಿದರದ ಮೇಲಲ್ಲ. ಈಗ ಡೆಪಾಸಿಟ್‌ 1 ವರ್ಷ ಆದ ಕಾರಣರಾಯರು ಡೆಪಾಸಿಟ್‌ ಮಾಡುವಾಗ 1 ವರ್ಷಕ್ಕೆ ಎಷ್ಟು ಬಡ್ಡಿ ದರ ವಿತ್ತೋ ಅದರಿಂದ ಶೇ.1ರಷ್ಟು ತಪ್ಪುದಂಡ ಕಳೆದು ಉಳಿದ ಬಡ್ಡಿ ಸೇರಿಸಿ ಡೆಪಾಸಿಟ್‌ ವಾಪಾಸ್‌ ಮಾಡುತ್ತಾರೆ. ಆವಾಗ 1 ವರ್ಷಾವಧಿಯ ಡೆಪಾಸಿಟ್‌ಗೆ 6% ಇತ್ತು. ಹಾಗಾಗಿ ರಾಯರಿಗೆ ಈಗ 5% ಬಡ್ಡಿ ಮಾತ್ರ ಈ 1 ವರ್ಷಕಾಲಾವಧಿಗೆ ದೊರಕೀತು. ಅಂದರೆ 8% ಸಿಗುವಲ್ಲಿ ಈಗ 5%. ಅಂದರೆ 3% ನಷ್ಟ. ರೂ 10,000 ಕ್ಕೆ 1 ವರ್ಷಕ್ಕೆ 3% ಅಂದರೆರೂ 300.

ಈಗ ಅದೇ ಮೊತ್ತವನ್ನು ಮರುಹೂಡಿಕೆ ಮಾಡಿ ನೋಡೋಣ. ಸಧ್ಯಕ್ಕೆ ಹೊಸ ದೀರ್ಘ‌ಕಾಲಿಕ ಠೇವಣಿಗೆ ಅದೇ ಬ್ಯಾಂಕು ಶೇ.10ರಷ್ಟು ನೀಡುತ್ತದೆ. ಅಂದರೆ ಮೊದಲಿಗಿಂತ ಶೇ.2ರಷ್ಟು ಜಾಸ್ತಿ. ಠೇವಣಿಯ ಬಾಕಿ ಅವಧಿ 2 ವರ್ಷಗಳಿಗೆ ಈ ಮೊತ್ತರೂ. 10,000 ದ ಮೇಲೆ ರೂರೂ 400 ಆಗುತ್ತದೆ. (ವಾರ್ಷಿಕರೂ. 200 * 2 ವರ್ಷ) ಅಂದರೆ ಈ ವ್ಯವಹಾರದಲ್ಲಿ ರಾಯರಿಗೆ ಮರುಠೇವಣಿ ಮಾಡಿದರೆರೂ 400-300= ರೂ 100 ರಷ್ಟು ಲಾಭ.  ಈ ರೀತಿ ಮರುಹೂಡಿಕೆ ಲಾಭಕರವೋ ನಷ್ಟಕರವೋ ಎಂದು ಪ್ರತಿ ಬಾರಿಯೂ ಲೆಕ್ಕ ಹಾಕಿ ನೋಡಿ ನಿರ್ಧಾರ ತೆಗೆದುಕೊಳ್ಳಬೇಕು.  

– ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

India’s first-ever ‘hybrid pitch’ was unveiled at the HPCA stadium

HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

1-qweqwqwe

Kerala ಕರಾವಳಿಯಲ್ಲಿ 6 ಮೀನುಗಾರರ ಸಹಿತ ಇರಾನ್ ಹಡಗು ಕೋಸ್ಟ್ ಗಾರ್ಡ್ ವಶಕ್ಕೆ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ

foeticide

Mandya: ಮತ್ತೆ ಹೆಣ್ಣುಭ್ರೂಣ ಹತ್ಯೆ ಜಾಲ ಪತ್ತೆ; ನಾಲ್ವರ ಬಂಧನ

Kanniyakumari: ಮದುವೆಗೆಂದು ಆಗಮಿಸಿ ಸಮುದ್ರ ಪಾಲಾದ ಐವರು ವೈದ್ಯಕೀಯ ವಿದ್ಯಾರ್ಥಿಗಳು

Kanniyakumari: ಮದುವೆಗೆಂದು ಆಗಮಿಸಿ ಸಮುದ್ರ ಪಾಲಾದ ಐವರು ವೈದ್ಯಕೀಯ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

1—wewqeqw

Maharashtra ;120 ಅಡಿ ಜಲಪಾತದಿಂದ ಹಾರಿದ ಯುವಕ ಮೃತ್ಯು: ವಿಡಿಯೋ ವೈರಲ್

India’s first-ever ‘hybrid pitch’ was unveiled at the HPCA stadium

HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?

65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್‌ ಸಾಧನೆ: ಹರಿಪ್ರಕಾಶ ಕೋಣೆಮನೆ

65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್‌ ಸಾಧನೆ: ಹರಿಪ್ರಕಾಶ ಕೋಣೆಮನೆ

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

Delhi police Station: ಪೊಲೀಸ್‌ ಠಾಣೆ ಬಾತ್‌ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.