ಪ್ರಾರಬ್ಧಗಳನ್ನು ನಿರಾಳವಾಗಿ ನಿವಾರಿಸಿಕೊಳ್ಳುವ ಬಗೆ ಹೇಗೆಂದರೆ…!


Team Udayavani, Feb 25, 2017, 2:14 PM IST

7.jpg

ಈ ವಾರ ಜಾತಕ ಕುಂಡಲಿಯ ಒಂಭತ್ತನೇ ಮನೆಯನ್ನು ವಿಶ್ಲೇಷಿಸಿ ಇದರ ಇತಿಮಿತಿಗಳೊಂದಿಗೆ ಪ್ರಾರಬ್ಧಗಳನ್ನು ಮೆಟ್ಟಿನಿಲ್ಲುವ ಅಂಶಗಳನ್ನು ರೂಢಿಸಿಕೊಳ್ಳುವುದು ಹೇಗೆಂಬುದನ್ನು ನೋಡೋಣ. ಒಂಭತ್ತನೇ ಮನೆ ತಂದೆಯನ್ನೂ, ಭಾಗ್ಯವನ್ನೂ ಅಡಕಗೊಂಡಿರುವ ಪ್ರತಿಭೆಗಳ ಮೂಲಕ ನಮ್ಮನ್ನು ನಾವು ಒಂದು ಶಿಸ್ತಿಗೆ ಜನರ ಲಕ್ಷ್ಯಕ್ಕೆ ಹೇಗೆ ಕೇಂದ್ರಬಿಂದು ಮಾಡಿಕೊಳ್ಳಬಹುದು ಎಂಬುದನ್ನು ತಿಳಿಯಬೇಕು. ಶಿವ ಸಹಸ್ರ ನಾಮಾವಳಿ, ವಿಷ್ಣು ಸಹಸ್ರ ನಾಮಾವಳಿ, ಲಲಿತಾ ಸಹಸ್ರ ನಾಮಾವಳಿ ಇದರಲ್ಲಿ ಯಾವುದಾದರೊಂದನ್ನು ಪ್ರತಿದಿನ ಕೊನೆಯ ಪಕ್ಷ ಒಂದು ಬಾರಿಯಾದರೂ ಓದಿದರೆ ಬದುಕಿನ ಕೊಳೆ ಕಳೆದು ಒಳಿತುಗಳನ್ನು ಹಿಡಿದಿಡಲು ಸಾಧ್ಯ.

ಜಾತಕ ಕುಂಡಲಿಯಲ್ಲಿನ ಮೊದಲ ಎಂಟು ಮನೆಗಳ ಬಗೆಗೆ ವಿವರವಾಗಿ ಹಿಂದಿನ ಸಂಚಿಕೆಗಳಲ್ಲಿ ಬರೆಯಲಾಗಿದೆ. ಜಾತಕಲ ಕುಂಡಲಿಯಲ್ಲಿನ ಒಂದು ಸಣ್ಣ ದೋಷವು ಹೇಗೆಲ್ಲ ಅವಾಂತರಗಳನ್ನು ಸೃಷ್ಟಿಸಬಲ್ಲದು ಎಂಬುದನ್ನು ಟಿಪ್ಪಣಿ ಮಾಡಿ ತಿಳಿಸಲಾಗಿದೆ. ಪ್ರಾರಬ್ಧಗಳನ್ನು ನಿರಾಳವಾಗಿ ನಿವಾರಿಸಿಕೊಳ್ಳುವ ವಿಚಾರವಾಗಿಯೂ ಬರೆಯಲಾಗಿತ್ತು. ವ್ಯಕ್ತಿತ್ವ ಶುದ್ಧಿ, ಮಾತು ಧೈರ್ಯ, ಹಾಸಿಗೆ ಇದ್ದಷ್ಟೇ ಕಾಲು ಚಾಚುವ ಸಂಸ್ಕಾರಪೂರ್ಣತೆಯೊಂದಿಗೆ ತುಂಬಿದ ಕೊಡವಾಗುವ ಶತೃಗಳನ್ನು, ವ್ಯಾಧಿಗಳನ್ನು, ಅನಿಷ್ಟಗಳನ್ನು ಗಾಂಭೀರ್ಯ ಹಾಗೂ ಬುದ್ಧಿ ಶಕ್ತಿಯಿಂದ ನಿವಾರಿಸಿಕೊಳ್ಳುವ ವೈವಾಹಿಕ ಜೀವನದ ಮಹತ್ವವನ್ನು ಅರಗಿಸಿಕೊಳ್ಳುವ, ಮರಣವನ್ನು ಧರ್ಮಾರ್ಥಕಾಮಮೋಕ್ಷಗಳ ಅರ್ಥಪೂರ್ಣ ಆವರಣಗಳನ್ನು ಬಳಸಿಕೊಂಡು, ದೀರ್ಘಾಯುವಾಗುವ ಹಾಗೆ ಪರಿವರ್ತಿಸಿಕೊಳ್ಳುವತ್ತ ಗೆಲ್ಲುವ ವಿಚಾರ ಚರ್ಚಿಸಲಾಗಿತ್ತು.

ಈಗ ಈ ವಾರ ಜಾತಕ ಕುಂಡಲಿಯ ಒಂಭತ್ತನೇ ಮನೆಯನ್ನು ವಿಶ್ಲೇಷಿಸಿ ಇದರ ಇತಿಮಿತಿಗಳೊಂದಿಗೆ ಪ್ರಾರಬ್ಧಗಳನ್ನು ಮೆಟ್ಟಿನಿಲ್ಲುವ ಅಂಶಗಳನ್ನು ರೂಢಿಸಿಕೊಳ್ಳುವುದನ್ನು ಹೇಗೆಂಬುದನ್ನು ನೋಡೋಣ. ಒಂಭತ್ತನೇ ಮನೆ ತಂದೆಯನ್ನೂ, ಭಾಗ್ಯವನ್ನೂ ಅಡಕಗೊಂಡಿರುವ ಪ್ರತಿಭೆಗಳ ಮೂಲಕ ನಮ್ಮನ್ನು ನಾವು ಒಂದು ಶಿಸ್ತಿಗೆ ಜನರ ಲಕ್ಷ್ಯಕ್ಕೆ ಹೇಗೆ ಕೇಂದ್ರಬಿಂದು ಮಾಡಿಕೊಳ್ಳಬಹುದು ಎಂಬುದನ್ನು ತಿಳಿಯಬೇಕು. ಶಿವ ಸಹಸ್ರ ನಾಮಾವಳಿ, ವಿಷ್ಣು ಸಹಸ್ರ ನಾಮಾವಳಿ, ಲಲಿತಾ ಸಹಸ್ರ ನಾಮಾವಳಿ ಇದರಲ್ಲಿ ಯಾವುದಾದರೊಂದನ್ನು ಪ್ರತಿದಿನ ಕೊನೆಯ ಪಕ್ಷ ಒಂದುಬಾರಿಯಾದರೂ ಓದಿದರೆ ಬದುಕಿನ ಕೊಳೆ ಕಳೆದು ಒಳಿತುಗಳನ್ನು ಹಿಡಿದಿಡಲು ಸಾಧ್ಯ.

ಭಾಗ್ಯಸ್ಥಾನ
ಬಹಳಷ್ಟು ಮುಖ್ಯವಾದದ್ದನ್ನು ಬದುಕಿಗೆ ಒದಗಿಸಿಕೊಡುವ ಮನೆಯೇ ಭಾಗ್ಯಸ್ಥಾನವಾಗಿದೆ. ನೆಹರು ಅವರ ಬದುಕಿನಲ್ಲಿ ಅತ್ಯಂತ ಸೂಕ್ಷ್ಮ ಶಕ್ತಿಯನ್ನು ಸಂಪಾದಿಸಿಕೊಂಡ ಭಾಗ್ಯದ ಮನೆ, ಭಾಗ್ಯದ ಅಧಿಪತಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಜೈಲುವಾಸ ಒದಗಿಸಿತು. ಇಷ್ಟಾದರೂ ಗುರು ಗ್ರಹ ಭಾಗ್ಯವನ್ನು ಇವರ ಕರ್ಮಸ್ಥಾನಕ್ಕೆ ಅದ್ಭುತ ಚೈತನ್ಯ ಒದಗಿಸಿ, ವಿರೋಧಿಗಳನ್ನು ದಮನಮಾಡಿ ಗಾಡ್‌ ಫಾದರ್‌ ಶಕ್ತಿ ತಂದೆಯ ಪ್ರಭಾವ ಸಾಮರ್ಥ್ಯಗಳನ್ನು ಒಗ್ಗೂಡಿಸಿ ಅತ್ಯಂತ ಶಕ್ತಿಶಾಲಿಯಾಗಿ ರೂಪಿಸಿತು. ಎಲ್ಲರ ಜಾತಕದಲ್ಲಿ ಇರುವುದು ಕೇವಲ ಒಂಭತ್ತೇ ಗ್ರಹಗಳಾದರೂ, 12 ಮನೆಗಳಾದರೂ ಒಬ್ಬ ವ್ಯಕ್ತಿಗಿಂತ ಇನ್ನೊಬ್ಬ ವ್ಯಕ್ತಿಯ ಗ್ರಹಚಾರಗಳನ್ನೆಲ್ಲ ವಿಧವಿಧವಾಗಿ ಬದಲಾವಣೆಗೊಳಿಸುತ್ತದೆ.  ಶನೈಶ್ಚರ ಸುಖವನ್ನು ಹಾಳು ಮಾಡಿದರೂ ಕುಜ ಭಾಗ್ಯವನ್ನು ದೃಢಗೊಳಿಸುವ ವಿಧಾನ ಅದ್ಭುತ. ಪ್ರಧಾನಿಯಾಗಿಯೂ ನೆಹರು ತನ್ನನ್ನು ವಿಮರ್ಶಿಸಿಕೊಂಡು ನಿಟ್ಟುಸಿರು ಬಿಟ್ಟಿದ್ದುನೂರಾರು ಬಾರಿ. ಏಕೆಂದರೆ ಸುಖವಿರದಿದ್ದರೂ ತನ್ನ ಭಾಗ್ಯದ ಮೂಲಕವಾಗಿ ದಕ್ಕಿದ ಎತ್ತರದಿಂದ ವಿಜೃಂಭಿಸಿಕೊಂಡವರು ಇವರು. ವಾಗ್ಮಿ ಹೌದು. ಆದರೂ ಶಬ್ದಗಳಿಗಾಗಿ ಪರದಾಡುತ್ತಿದ್ದರು. ಸಂಧಾನದ ರಚನೆಯ ಸಂದರ್ಭದಲ್ಲಿ ಚೈನಾದ ವಿರುದ್ಧ ಹೀನಾಯವಾಗಿ ಸೋತಾಗ, ದೇಶದ ವಿಭಜನೆಯ ಸಂದರ್ಭದಲ್ಲಿ, ಮಹಾತ್ಮ ಗಾಂಧಿ ಕೊಲೆಯ ಸಂದಭದಲ್ಲಿ ಕೇರಳದಲ್ಲಿ ನಂಬೂದರಿ ಪಾಲ್‌ ಸರಕಾರ ಉರುಳಿದಾಗ ಬದುಕಿನಲ್ಲಿ ಸಿಗಬೇಕಾದದ್ದು ಎಲ್ಲೋ ಹೊರ ಆವರಣದಲ್ಲಿ ಒದಗಿಸಿಕೊಳ್ಳಬೇಕಾಗಿ ಬಂದಾಗ ನೆಹರು ಅವರಿಗೆ ಸುಖ ಇರಲು ಸಾಧ್ಯವೇ? ಆದರೂ ವ್ಯಕ್ತಿತ್ವದ ಬಹುದೊಡ್ಡ ತೂಕವನ್ನು ನಿಭಾಯಿಸಿಕೊಂಡಿದ್ದು ಚಂದ್ರನಿಂದ ಮತ್ತು ಭಾಗ್ಯವನ್ನು ಎತ್ತಿ ಹಿಡಿದ ಕುಜನಿಂದ, ಎದುರಾಳಿಗಳನ್ನು ಕುಬjಗೊಳಿಸಲು ನೆರಗೆ ಬಂದ ಗುರುನಿಂದ, ಮುಖ್ಯವಾಗಿ ಮಾನಸಿಕವಾಗಿ ನರಳಿದ್ದು ಸತ್ಯ. ಆದರೆ ವ್ಯಕ್ತಿತ್ವವನ್ನು ಸಂರಕ್ಷಿಸಿಕೊಳ್ಳಲು ಮಾನಸಿಕವಾಗಿ ದಾಡ್ಯìತೆ ಇತ್ತು. ಮಾತಿನ ಚಾಕಚಕ್ಯತೆ ಬುದ್ಧಿಯನ್ನು ಸಂವೇದಿಸುವ ಆತ್ಮಕಾರಕ ಸೂರ್ಯನಿಂದಾಗಿ ಧೀಶಕ್ತಿಯಲ್ಲಿ ಸಂಪನ್ನತೆ ಪಡೆದಿದ್ದರು. ಭಾರತದ ಚರಿತ್ರೆಯಲ್ಲಿ ನೆಹರೂರವರನ್ನು ಪ್ರಧಾನಿಯಾಗಿ ಪರಿಗಣಿಸಲೇ ಬೇಕು. ನೆಹರು ಅವರನ್ನು ಬಿಟ್ಟು ಚರಿತ್ರೆ ಬರೆಯಲಾಗದು. ಅವರ ಶಕ್ತಿ ಹಾಗೂ ಮಿತಿ ಅವರನ್ನು ಒಬ್ಬ ಅದ್ಭುತ ವ್ಯಕ್ತಿಯನ್ನಾಗಿ ಪರಿವರ್ತಿಸಿದೆ. ಅಂತ್ಯದ ದಿನಗಳಲ್ಲಿ ರಾಹುದಶಾಕಾಲ ಅವರನ್ನು ತುಂಬಾ ಪೀಡಿಸಿತು. ಕುಟುಂಬದಲ್ಲಿ ಅಶಾಂತಿ ಇತ್ತು. ಶನೈಶ್ಚರನ ಪೀಡೆ ಮರಣಕ್ಕಾಗಿ ವೇದಿಕೆ ನಿರ್ಮಿಸಿತ್ತು.

ಭಾಗ್ಯಸ್ಥಾನ ದುರ್ಬಲವಾಗಿದ್ದರೆ ಪರಿಹಾರಗಳೇನು?
ನೀವು ನಂಬುವುದಾದರೆ ನಂಬಿ, ಬಿಟ್ಟರೆ ಬಿಡಿ. ಇತ್ತೀಚೆಗೆ ಜಯಲಲಿತಾರ ಜನ್ಮಕುಂಡಲಿಯಲ್ಲಿ ಭಾಗ್ಯಸ್ಥಾನ ದುರ್ಬಲ. ಆದರೆ ಅವರು ಅದ್ಭುತವಾಗಿ ಮಾತನಾಡುವ ಶಕ್ತಿ ಪಡೆದಿದ್ದರು. ಕೋಪ ಬಂದರೆ ಪ್ರಕಟಿಸಿಯೂ ಹಿಂಜರೆಯಲಾರದ್ದು. ಅವರ ತೂಕ ತಪ್ಪಿದಂತೆ ಕಂಡರೂ, ಶಕ್ತಿಯನ್ನು ತಪ್ಪಿದ ತೂಕದಿಂದಲೇ ಸಂಪಾದಿಸಿಕೊಳ್ಳುವ ಶಕ್ತಿಯನ್ನು ಪಡೆದಿದ್ದರು. ಸಂಖ್ಯಾಶಾಸ್ತ್ರದಲ್ಲಿ ಅವರಿಗೆ ತುಂಬಾ ನಂಬಿಕೆ ಇತ್ತು. ಇಷ್ಟದೇವತೆಯನು ಆರಾಧಿಸುತ್ತಿದ್ದರು. ಭಯವಿದ್ದರೂ ತೋರ್ಪಡಿಸದೆಯೇ ನಿಯಂತ್ರಿಸುತ್ತಿದ್ದರು. ಚಂದ್ರನ ಕಾರಣದಿಂದ ಧೈರ್ಯವಂತೆಯಾಗಿ ಕಾಣಿಸಿದರು. ಅವರಿಗೆ ಗೊತ್ತಿತ್ತು. ತನ್ನ ನಂಬಿಗಸ್ಥ ಕೈಕೆಳಗಿನವರನ್ನು ನಿಭಾಯಿಸುವ ಜಾಣ್ಮೆ ಹೇಗೆ ಇರಬೇಕು ಎನ್ನುವ ಚಾತುರ್ಯ ಅವರಿಗಿತ್ತು. ಅವರ ವಿಧಿ ಅವರನ್ನು ಮೇಲೆಬ್ಬಿಸಿದ್ದೇ ಅವರ ಕೈಕೆಳಗಿನವರಿಂದ. ಆದರೆ ನಂಬಿಗಸ್ಥ ಕೈಕೆಳಗಿನವರು ಅನಧಿಕೃತ ಬಂಧನದಲ್ಲಿ ಜಯಲಲಿತಾರನ್ನು ಉತ್ಸವ ಮೂರ್ತಿಯಾಗಿ ಕೂರಿಸಿದ್ದು ಈಗ ಗುಟ್ಟೇನಲ್ಲ. ಅವರ ಜಾತಕದಲ್ಲಿನ ಬಂಧನಯೋಗ ಇಡೀ ಜೀವನಕ್ಕೆ ಸಂಬಂಧಿಸಿದ ಅಡೆತಡೆ, ಅವಮಾನ, ಅಸಹಾಯಕತೆ ತಿಳಿದೂ ತಿಳಿದೂ ತಪ್ಪುಮಾಡಿ ಮೇಲೇರಿಸಿದವರೇ ಒತ್ತಡ ತಂದು ಜಯಾರನ್ನು ಸಂಕಟಕ್ಕೆ ಸಿಲುಕಿಸಿದ ಬಗೆಗೆ ಹೇಗೆಲ್ಲಾ ಇತ್ತು ಎಂಬುದನ್ನು ನಾವು ತಿಳಿದಿದ್ದೇವೆ. ಶಶಿ ಮಂಗಳ ಯೋಗ ಅಪಾರವಾದ ಸಂಪತ್ತನ್ನು, ಕಷ್ಟಗಳನ್ನೂ ಒದಗಿಸಿತು. ಅಪಾರ ಧೈರ್ಯವನ್ನು ಒದಗಿಸಿ ಅತಿಯಾದ ಆತ್ಮವಿಶ್ವಾಸ ಒದಗಿಸಿ ಪರದಾಡಿಸಿತು. ಆದರೆ ಜಯಲಲಿತಾ ಅಸ್ತಿತ್ವಕ್ಕಾಗಿನ ಪರದಾಟ ವ್ಯಾಜ್ಯ, ಸವಾಲು, ಪ್ರತಿ ಸವಾಲು, ಛಲ, ಹಠದಿಂದ ಕಾರ್ಯ ಸಾಧಿಸುವ ಮನೋಭಾವ ಇತ್ಯಾದಿಗಳಿಂದ ದುರ್ಬಲವಾದ ಭಾಗ್ಯವನ್ನು ಗಟ್ಟಿಯಾಗಿಸಿಕೊಂಡು ತಾವು ನಡೆದದ್ದೇ ಸಾಫ‌ಲ್ಯದ ದಾರಿ ಎಂದು ನಿರೂಪಿಸಿದರು. ಆದರೆ ಹೋರಾಟದ ಭೀಕರತೆಗಳು ಅನೇಕ ಸಲ ನಮ್ಮನ್ನು ಸದಾ ಗೆಲ್ಲುವ ಕುದುರೆಯನ್ನಾಗಿಸಲಾರವು. ಜಯಲಲಿತಾ ಮಟ್ಟಿಗೆ ವಿಧಿ ಗೆಲ್ಲುವ ಕುದುರೆಯಾಗಿಸಿತು. 

ಭಾಗ್ಯಸ್ಥಾನ ಮತ್ತು ಬದುಕಿನ ಇತರ ವಿಚಾರಗಳು
ಅಲೌಕಿಕದ ಬಗೆಗಿನ ಧಾರ್ಮಿಕ ಮನೋಭಾವ ಪರರ ದುಃಖಕ್ಕೆ ಸ್ಪಂದಿಸುವ ಮನೋಭಾವ ಪಿತೃಸಂಬಂಧವಾದ ಪ್ರಾಪ್ತಿ, ತಂದೆಯಿಂದ ಒದಗುವ ಶಕ್ತಿ ಪ್ರತಿಭೆ ಹಾಗೂ ಸಂಸ್ಕಾರಗಳು ಭಾಗ್ಯ ಸ್ಥಾನದಿಂದ ಸ್ಪಷ್ಟ. ತಂದೆ ಬಡವನೇ ಆಗಿದ್ದರೂ ತಂದೆ ಒದಗಿಸಿದ ಸಂಸ್ಕಾರ, ವಿದ್ಯೆ, ವಿನಯ, ಬುದ್ಧಿ, ಬಲಗಳು ಬದುಕನ್ನು ಗೆಲ್ಲುವ ದಿಕ್ಕಿಗೆ ಹೊರಳಬಹುದು. ಬಿಲ್‌ ಗೇಟ್ಸ್‌ ಬಾಲ್ಯ ಅತ್ಯಂತ ಸಾಮಾನ್ಯ ಸ್ತರದಿಂದ ಮೇಲೆದ್ದು ಬಂದಿದ್ದು ಆದರೆ ಅವರ ಜಾತಕದ ಚಂದ್ರನಿಂದ ಭಾಗ್ಯವನ್ನು ಗಟ್ಟಿಯಾಗಿಸಿಕೊಂಡರು. ಕೊಡುಗೈ ದೊರೆಯಾದದ್ದು ಅವರ ಖ್ಯಾತಿ. ನಿಂತ ನೆಲದ ಮೇಲೆ ಕಾಲುಗಳು ಇದ್ದವು. ಜಗತ್ತಿನ ಅತ್ಯಂತ ಶ್ರೀಮಂತರಾದಾಗಲೂ ಅವರ ಕಾಲ್ಗಳು ನೆಲದ ಮೇಲೇ ಇದ್ದವು. ಶುಕ್ರ ದಶೆ ಬರುವ ಹೊತ್ತಿಗೆ ಪ್ರಪಂಚದ ವ್ಯಾಖ್ಯೆಯನ್ನು ಮೈಕ್ರೋ ಸಾಫ್ಟ್ ಕಂಪೆನಿಯ ಸ್ಥಾಪನೆಯಿಂದ ಒದಗಿದ ಸಾಫ‌ಲ್ಯತೆಯಿಂದ ಬದಲಿಸಿದ ಖ್ಯಾತಿ ಇವರದ್ದು. ಬದುಕಿನಲ್ಲಿ ಹಾಗಾದರೆ 
ಹಣವೋ, ಸುಖವೋ, ಭಾಗ್ಯವೋ, ಬಂಧು ಬಾಂಧವರೋ, ಗೆಳೆಯರೋ ಸಹೋದ್ಯೋಗಿಗಳ್ಳೋ ಯಾರು, ಯಾವಾಗ, ಏಕೆ, ಎಷ್ಟು ಮುಖ್ಯ ಎಂದು ತಿಳಿಯಲಾಗದು. ಹೆಂಡತಿ ಮತ್ತು ಮಕ್ಕಳು ಕೈಗೆ ಸಿಗುವ ಆರೋಗ್ಯಕರ ಬೆಳವಣಿಗೆ ದೈವಾನುಗ್ರಹದ ಶಕ್ತಿಯಿಂದ ಇವೆಲ್ಲಾ ಭಾಗ್ಯ ಸ್ಥಾನದಿಂದ ಲಭ್ಯ. ಭಾಗ್ಯಸ್ಥಾನದ ಶಕ್ತಿಯಲ್ಲಿ ಕೊರತೆ ಯಾದಾಗ ವ್ಯಕ್ತಿತ್ವದಿಂದ ಲಭ್ಯ. 

ಅನಂತಶಾಸ್ತ್ರಿ

ಟಾಪ್ ನ್ಯೂಸ್

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

IPL 2024: 8 ಅಂಕ ಹೊಂದಿರುವ ಆರ್ ಸಿಬಿಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ಲೆಕ್ಕಾಚಾರ

IPL 2024: 8 ಅಂಕ ಹೊಂದಿರುವ ಆರ್ ಸಿಬಿಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ಲೆಕ್ಕಾಚಾರ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gayatri Siddeshwar: “ರಾಹುಲ್‌ ಪ್ರಧಾನಿಯಾಗಿಸುವ ಪಾಕಿಸ್ತಾನ ಷಡ್ಯಂತ್ರ ಫಲ ನೀಡಲ್ಲ’

Gayatri Siddeshwar: “ರಾಹುಲ್‌ ಪ್ರಧಾನಿಯಾಗಿಸುವ ಪಾಕಿಸ್ತಾನ ಷಡ್ಯಂತ್ರ ಫಲ ನೀಡಲ್ಲ’

B.Y. Raghavendra: ಕಮಲದ ಗುರುತಿಗೆ ಮತ ನೀಡಿ; ಬಿವೈಆರ್‌

B.Y. Raghavendra: ಕಮಲದ ಗುರುತಿಗೆ ಮತ ನೀಡಿ; ಬಿವೈಆರ್‌

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

ಬಿಲ್ಡರ್‌ಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನು ಮರಳಿಸುವ ಆದೇಶಕ್ಕೆ ತಡೆ: ಜಲಮಂಡಳಿಗೆ ರಿಲೀಫ್

ಬಿಲ್ಡರ್‌ಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನು ಮರಳಿಸುವ ಆದೇಶಕ್ಕೆ ತಡೆ: ಜಲಮಂಡಳಿಗೆ ರಿಲೀಫ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.