ಬೇಸಿಗೆಯನು ಕೂಲ್‌ ಆಗಿಸುವ ಸಮರ್ಪಣ


Team Udayavani, Apr 15, 2017, 3:38 PM IST

14.jpg

ಬೆಂಗ್ಳೂರಿನ ಮಾಲ್‌ಗ‌ಳಲ್ಲಿ ಯಾವುದೇ ವಸ್ತುವಿಗೆ ಕೈ ಹಾಕಿ, ಅದು ಪ್ಲಾಸ್ಟಿಕ್‌ ಆಗಿರುತ್ತೆ! ದಿನಬಳಕೆಯ ಆ ಪ್ಲಾಸ್ಟಿಕ್‌ ವಸ್ತುಗಳೆಲ್ಲ ಬರೋದು ಚೀನಾದಿಂದ. ಉದ್ಯಾನ ನಗರಿಯ ಪರಿಸರ ಮಾಲಿನ್ಯದಲ್ಲಿ ಇವುಗಳ ಪಾತ್ರ ದೊಡ್ಡದು. ಇದಕ್ಕೀಗ ಬ್ರೇಕ್‌ ಹಾಕಲು ಅಲ್ಲಲ್ಲಿ ದೇಸಿ ಮಾದರಿಗಳು ಸಿದ್ಧಗೊಳ್ಳುತ್ತಿವೆ. ಮಣ್ಣಿನಿಂದ ನಿರ್ಮಿತ ಬಾಟಲಿಯೂ ನಿಮ್ಮ ಕೈಸೇರುತ್ತಿದೆ!

ಬೆಂಗ್ಳೂರು ಅಂದ್ರೆ ಸದಾ ಕೂಲ್‌ ಅನ್ನೋದು ಹೊರಗಿನವರ ವ್ಯಾಖ್ಯಾನ. ಈ ಕೂಲ್‌ನೆಸ್‌ ಕಾಪಾಡುವ ರಾಜಧಾನಿಯ ಪರಿಸರ ಸೈನಿಕರಲ್ಲಿ ಒಬ್ಬರು ಶಿವಕುಮಾರ್‌ ಹೊಸಮನಿ. “ಸಮರ್ಪಣ’ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಗಿರುವ ಹೊಸಮನಿ, ಪ್ರತಿ ಬೇಸಿಗೆಯಲ್ಲಿ ಏನನ್ನಾದರೂ ಹೊಸ ಮಾದರಿಯನ್ನು ಪರಿಚಯಿಸುತ್ತಾರೆ. ಒಮ್ಮೆ ಮುಟ್ಟಿದರೆ, ಮುತ್ತಿಕ್ಕೋಣ ಎನ್ನುವ ಸೌಂದರ್ಯದಲ್ಲಿರುವ ಮಣ್ಣಿನ ಬಾಟಲಿಗಳನ್ನು ಅವರು ಮಾರುಕಟ್ಟೆಗೆ ಬಿಟ್ಟಿದ್ದಾರೆ.

ಇದು ದೇಸಿ ಕೈಚಳಕ

500 ಮಿಲಿ ಲೀಟರ್‌, 1 ಲೀಟರ್‌, ಒಂದೂವರೆ ಲೀಟರ್‌ನ ಬಾಟಲಿಗಳು ಸದ್ಯ ಮಾರುಕಟ್ಟೆಯಲ್ಲಿವೆ. ಜನರ ಬೇಡಿಕೆ, ಅಭಿರುಚಿಗೆ ತಕ್ಕಂತೆ ಬಾಟಲಿಗಳನ್ನು ನಿರ್ಮಿಸಲಾಗಿದ್ದು, ಕೆಲವು ಬಿಯರ್‌ ಬಾಟಲಿಯ ಶೈಲಿಯಲ್ಲಿಯೂ ವಿನ್ಯಾಸಗೊಂಡಿವೆ. ಕೆಲವು ಸಾಂಪ್ರದಾಯಿಕ ಲುಕ್ಕಿನಲ್ಲಿ ನಿಮ್ಮನ್ನು ಸೆಳೆಯುತ್ತವೆ. ಇದರ ಮೇಲೆ ಮಾಗಡಿಯ ಕಲಾವಿದನೊಬ್ಬನ ಚಿತ್ತಾರಗಳೂ ಆಕರ್ಷಿಸುತ್ತವೆ. ಈ ಬಾಟಲಿಗಳಲ್ಲಿ ನೀರು ಹಾಕಿ ಕುಡಿದರೆ, ಫ್ರಿಡಿjನಲ್ಲಿನ ತಣ್ಣನೆ ಪಾನೀಯ ಕುಡಿದಷ್ಟು ಕೂಲ್‌ ಆದ ಅನುಭವ ದಕ್ಕುತ್ತದೆ. ಸಾಕಷ್ಟು ಗಟ್ಟಿಮುಟ್ಟಾಗಿಯೇ ಇರುತ್ತವೆ. ಒಂದು ವೇಳೆ ಇವು ಬಿದ್ದು ಒಡೆದು ಹೋದರೂ, ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತವೆ. ಪ್ಲಾಸ್ಟಿಕ್‌ನಂತೆ ಮಣ್ಣಿನಲ್ಲಿ ಕರಗದೆ, ಪರಿಸರಕ್ಕೆ ಮಾರಕ ಆಗುವುದಿಲ್ಲ ಎನ್ನುತ್ತಾರೆ ಶಿವಕುಮಾರ್‌.

ಪಕ್ಷಿಗಳಿಗೆ ಗುಟುಕು ನೀರು!
ಇದು “ಸಮರ್ಪಣ’ ಸಂಸ್ಥೆಯ ಇನ್ನೊಂದು ಅಭಿಯಾನ. 5 ವರ್ಷದಿಂದ ಈ ಯೋಜನೆ ಹಮ್ಮಿಕೊಂಡು ಬಂದಿದ್ದು, ಬೇಸಿಗೆಯಲ್ಲಿ ಕುಡಿಯಲು ನೀರಿಲ್ಲದೆ ಪರಿತಪಿಸುವ ಪಕ್ಷಿಗಳಿಗೆ ಈ ಸಂಸ್ಥೆ ನೆರವಾಗುತ್ತದೆ. ಕರಟ, ತ್ರಿಕೋನಾಕೃತಿ, ಹರಿವಾಣ, ಹೂಕುಂಡ, ಬೋಗುಣಿಯ ಶೈಲಿಯಲ್ಲಿ ನೀರಿನ ಆಸರೆಗಳನ್ನು ನಿರ್ಮಿಸಿ ಉಚಿತವಾಗಿಯೇ ಸಾರ್ವಜನಿಕರಿಗೆ ನೀಡುತ್ತಾರೆ ಶಿವಕುಮಾರ್‌. ಈ ವರ್ಷ ಸುಮಾರು 50 ಸಾವಿರ ಮಂದಿಗೆ ಗುಟುಕು ನೀರಿನ ಆಸರೆ ಮಾದರಿಗಳನ್ನು ವಿತರಿಸಲಾಗಿದೆ.

ಇವಲ್ಲದೆ ಗಣಪತಿ ಹಬ್ಬದ ವೇಳೆ ಜೇಡಿಮಣ್ಣಿನ ಗಣೇಶ ಮೂರ್ತಿಗಳ ನಿರ್ಮಾಣದಲ್ಲೂ ಸಂಸ್ಥೆ ಭಾಗಿಯಾಗಿ, ಪರಿಸರ ಜಾಗೃತಿ ಮೂಡಿಸಿತ್ತು. ಗಣಪನನ್ನು ಯಾರೂ ಸಾರ್ವಜನಿಕ ಕೆರೆಗಳಿಗೆ ಬಿಡಬಾರದೆಂದು, ಆ ಮೂರ್ತಿಯೊಳಗೆ ಬೆಳ್ಳಿ ನಾಣ್ಯಗಳನ್ನು ಹಾಕಿ, ಮನೆಯ ನೀರಿನ ಮೂಲಗಳಲ್ಲಿಯೇ ವಿಸರ್ಜಿಸಲು ಪ್ರೇರೇಪಿಸಿದ್ದರು.

ಮಣ್ಣಿನ ಬಾಟಲಿ ಬೇಕಿದ್ದರೆ…
ಬೆಂಗಳೂರಿಗೆ ಈ ಮಣ್ಣಿನ ಬಾಟಲಿಗಳನ್ನು ಪೂರೈಸುವುದು ಬೆಳಗಾವಿ ಜಿಲ್ಲೆಯ ಕುಂಬಾರ ಸಮುದಾಯ. ಗೋಕಾಕ್‌ ಸಮೀಪದ ಸಾವಳಿಗಿಯ ಶಿವಬಸಪ್ಪ ಅವರ ಬಳಿ ಶಿವಕುಮಾರ್‌ ಹೊಸಮನಿ ಈ ಮಣ್ಣಿನ ಮಾದರಿಗಳನ್ನು ಮಾಡಿಸುತ್ತಾರೆ. ಅಲ್ಲಿನ 30-35 ಕುಟುಂಬಗಳಿಗೆ ಇದು ಒಂದು ಉದ್ಯೋಗವೇ ಆಗಿದೆ. ಬೆಂಗಳೂರು ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಮಾದರಿಗಳನ್ನು ಅಲ್ಲಿ ಸಿದ್ಧಪಡಿಸಲಾಗುತ್ತದೆ. ವಿನ್ಯಾಸಕ್ಕೆ ಅಗತ್ಯ ಸಲಹೆಗಳನ್ನು ಶಿವಕುಮಾರ್‌ ನೀಡುತ್ತಾರೆ. ನಿಮಗೂ ಮಣ್ಣಿನ ಬಾಟಲಿ ಮಾದರಿ ಬೇಕಿದ್ದರೆ ಮೊ. 9980008074, 7795255676 ಸಂಪರ್ಕಿಸಬಹುದು.

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.