ಧರ್ಮ, ಆಧಾರ್‌ ಮಾಹಿತಿ ಕೊಡಿ


Team Udayavani, Apr 28, 2017, 2:04 AM IST

AADHAR-Card-Symbolic-600.jpg

ಹೊಸದಿಲ್ಲಿ: ‘ನಿಮ್ಮ ಧರ್ಮ, ಜಾತಿ, ಆಧಾರ್‌ ಸಂಖ್ಯೆಯನ್ನು ಕೊಡಿ.’ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ದೇಶಾದ್ಯಂತದ ಕಾಲೇಜು ಹಾಗೂ ವಿವಿಗಳ ಉಪನ್ಯಾಸಕರಿಗೆ ಇಂತಹುದೊಂದು ಸೂಚನೆ ನೀಡಿದೆ. ಏಕೀ ಮಾಹಿತಿ ಎಂದು ಪ್ರಶ್ನಿಸುತ್ತಿದ್ದೀರಾ? ರಾಷ್ಟ್ರೀಯ ಶಿಕ್ಷಕರ ಪೋರ್ಟಲ್‌ ಆರಂಭಿಸಲು ಮತ್ತು ನಕಲಿ ಉಪನ್ಯಾಸಕರನ್ನು ಪತ್ತೆಹಚ್ಚಲು!

ಹೌದು, ದೇಶದಲ್ಲಿ ನಕಲಿ ಶಿಕ್ಷಕರೆಷ್ಟಿದ್ದಾರೆ ಎಂಬುದನ್ನು ಅರಿಯುವ ಮತ್ತು ಉಪನ್ಯಾಸಕರ ಪೋರ್ಟಲ್‌ವೊಂದನ್ನು ಆರಂಭಿಸುವ ಉದ್ದೇಶದಿಂದ ಸರಕಾರ ಈ ಮಾಹಿತಿ ಕಲೆಹಾಕತೊಡಗಿದೆ. ಈಗಾಗಲೇ 15 ಲಕ್ಷ ಉಪನ್ಯಾಸಕರ ಪೈಕಿ ಶೇ.60ರಷ್ಟು ಮಂದಿಯ ಮಾಹಿತಿ ಸಂಗ್ರಹಿಸಲಾಗಿದೆ. ಯಾರೆಲ್ಲ ವೈಯಕ್ತಿಕ ವಿವರ ನೀಡಿಲ್ಲವೋ ಅವರಿಗೆ ಇನ್ನೂ ಒಂದು ತಿಂಗಳ ಅವಕಾಶ ಒದಗಿಸಲಾಗಿದೆ.

ಈಗಿರುವ ದತ್ತಾಂಶ ಸಂಗ್ರಹ ಮಾದರಿ (ಡಿಸಿಎಫ್) ಅಲ್ಲದೇ, ಹೊಸ ಶಿಕ್ಷಕ ಮಾಹಿತಿ ಮಾದರಿ(ಟಿಐಎಫ್)ಯ ಮೂಲಕ ಮಾಹಿತಿಯನ್ನು ಸಂಗ್ರಹಿಸಿ, ‘ಗುರುಜನ್‌’ ಎಂಬ ಶಿಕ್ಷಕರ ಪೋರ್ಟಲ್‌ (gurujan.gov.in) ಪರಿಚಯಿಸುವುದೇ ಸರಕಾರದ ಉದ್ದೇಶ. ನಾವು ಈ ವೆಬ್‌ಸೈಟ್‌ ಅನ್ನು ಸಾರ್ವಜನಿಕರಿಗೆ ಮುಕ್ತವಾಗಿಸುವುದಿಲ್ಲ. ಅದರೊಳಗಿರುವ ಎಲ್ಲ ಮಾಹಿತಿಯೂ ರಾಷ್ಟ್ರೀಯ ಮಾಹಿತಿ ಕೇಂದ್ರದಲ್ಲಿ ಸುರಕ್ಷಿತವಾಗಿರುತ್ತದೆ ಎನ್ನುತ್ತಾರೆ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಆರ್‌. ಸುಬ್ರಮಣ್ಯನ್‌.

ಆದರೆ, ಅನೇಕ ಶಿಕ್ಷಕರು ಸರಕಾರದ ಈ ಯೋಜನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಹಿತಿ ಬಹಿರಂಗಪಡಿಸುತ್ತಾರೋ, ಇಲ್ಲವೋ ಎಂಬುದು ಬೇರೆ ವಿಷಯ. ಆದರೆ, ವ್ಯಕ್ತಿಗಳನ್ನು ಧರ್ಮ ಮತ್ತು ಜಾತಿಯ ಆಧಾರದಲ್ಲಿ ಗುರುತಿಸುವ ಈ ಚಿಂತನೆಯೇ ಸರಿಯಿಲ್ಲ. ಜತೆಗೆ, ದತ್ತಾಂಶ ಎನ್ನುವುದು ಸೋರಿಕೆಯಾಗಲ್ಲ ಎನ್ನುವುದನ್ನು ಖಾತ್ರಿಪಡಿಸಲೂ ಸಾಧ್ಯವಿಲ್ಲ ಎನ್ನುತ್ತಾರೆ ಕೆಲವು ಶಿಕ್ಷಕರು.

ಟಾಪ್ ನ್ಯೂಸ್

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ

3-bng

Road Mishap: ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

2-bng

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ

1-24-tuesday

Daily Horoscope: ಹೊಸ ವ್ಯವಹಾರ ಆರಂಭಿಸಲು ಚಿಂತನೆ, ಆರೋಗ್ಯ ತೃಪ್ತಿಕರ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ub

Uber ಬಸ್‌ಗಳು ದಿಲ್ಲಿಯ ರಸ್ತೆಯಲ್ಲಿ ಓಡಲಿದೆ!

IMD

Delhi ತಾಪ 47 ಡಿಗ್ರಿ: ಶಾಲೆಗಳಿಗೆ ಸುದೀರ್ಘ‌ ರಜೆ

covid

Covaxin ಸೈಡ್‌ಎಫೆಕ್ಟ್ ವರದಿಗೆ ಐಸಿಎಂಆರ್‌ ಕಿಡಿ

train-track

Train Drivers Association; ಆನೆ ಹಳಿ ದಾಟುವಾಗ ರೈಲು ನಿಲುಗಡೆ ಅಸಾಧ್ಯ

kejriwal

AAP ವಿದೇಶಿ ದೇಣಿಗೆ: ED ದೂರು ಪಿತೂರಿ ಎಂದ ಕೇಜ್ರಿವಾಲ್‌ ಪಕ್ಷ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ

3-bng

Road Mishap: ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

2-bng

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.