ಆರೆಸ್ಸೆಸ್‌ ಕಾರ್ಯಾಲಯ ಬೆಂಕಿ; ಸಿಪಿಎಂ ಕಾರ್ಯಕರ್ತರ ಮನೆಗಳಿಗೆ ಹಾನಿ

Team Udayavani, Jul 13, 2017, 3:55 AM IST

fire-12-2017-07.jpg

ಪಯ್ಯನ್ನೂರು: ರಾಜಕೀಯ ದ್ವೇಷದಿಂದ ನಡೆದ ಕೊಲೆ ಪ್ರಕರಣಗಳ ವಾರ್ಷಿಕ ದಿನವಾದ ಮಂಗಳವಾರ ಪಯ್ಯನ್ನೂರಿನಲ್ಲಿ ವ್ಯಾಪಕವಾಗಿ ಘರ್ಷಣೆಗಳು  ಸಂಭವಿಸಿವೆ.ಆರ್‌ಎಸ್‌ಎಸ್‌ ಕಾರ್ಯಾಲಯಗೆ  ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಸಿಪಿಎಂ ಕಾರ್ಯಕರ್ತರ ಮೇಲೆ  ಹಾಗೂ ಅವರ  ಮನೆಗಳ ಮೇಲೆ ಬಾಂಬೆಸೆಯಲಾಗಿದೆ. ಹಲವು ಮನೆಗಳು ಬೆಂಕಿಗಾಹುತಿಯಾಗಿವೆ. ಮಂಗಳವಾರ ರತ್ರಿ ಹಾಗೂ ಬುಧವಾರ  ಮುಂಜಾನೆ ವ್ಯಾಪಕ ಹಿಂಸೆ ಗಳು ನಡೆದವು. 

ಕಳೆದ ವರ್ಷ ಜು. 11ರಂದು ಕೊಲೆಗೀಡಾದ ಸಿಪಿಎಂ ಕಾರ್ಯಕರ್ತ ರಾಮಂತಳಿ ಕುನ್ನುರು ತರಂದಾಟ್‌ನ ಸಿ.ವಿ.ಧನರಾಜ್‌ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಿಪಿಎಂ ಕಾರ್ಯಕರ್ತರ ಮೇಲೆ ರಾಮಂತಳಿ ಕಕ್ಕಂಪಾರೆಯಲ್ಲಿ ತಂಡವೊಂದು ಬಾಂಬೆಸೆದಿದೆ. ಆರ್‌ಎಸ್‌ಎಸ್‌, ಬಿಜೆಪಿ ಕಾರ್ಯಕರ್ತರು ಈ ಕೃತ್ಯ ನಡೆಸಿದ್ದಾರೆಂದು ಸಿಪಿಎಂ ಆರೋಪಿಸಿದೆ. ಈ ಘಟನೆಯ ಬೆನ್ನಲ್ಲೇ ಪಯ್ಯನ್ನೂರು ಪೇಟೆಯಲ್ಲಿರುವ ಆರ್‌ಎಸ್‌ಎಸ್‌ ಕಾರ್ಯಾಲಯಕ್ಕೆ ಬೆಂಕಿ ಹಚ್ಚ‌ಲಾಗಿದೆ. ಸಮೀಪದಲ್ಲಿರುವ ಬಿಜೆಪಿ ಕಚೇರಿಯನ್ನೂ ಹಾನಿಗೊಳಿಸಲಾಗಿದೆ.

ಬಿಜೆಪಿ ಪಯ್ಯನ್ನೂರು ಮಂಡಲ ಕಾರ್ಯದರ್ಶಿ ಕೋರೋತ್‌ ಪನಕಿಲ್‌ ಬಾಲಕೃಷ್ಣನ್‌ ಅವರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಮನೆ ಪೂರ್ಣ  ನಾಶಗೊಂಡಿದೆ. ಬೆಂಕಿ ಆರಿಸಲು ಬರುತ್ತಿದ್ದ ಅಗ್ನಿಶಾಮಕ ದಳವನ್ನು ತಂಡವೊಂದು ದಾರಿ ಮಧ್ಯೆ ತಡೆಯೊಡ್ಡಿ ಹಿಂದೆ ಕಳುಹಿಸಿತು. ಮನೆ ಮುಂದೆ ನಿಲ್ಲಿಸಿದ್ದ ಆಟೋ ರಿಕ್ಷಾ, ಸ್ಕೂಟರ್‌ಗೆ ಕಿಚ್ಚಿಟ್ಟು ನಾಶಗೊಳಿಸಲಾಗಿದೆ. ಪಯ್ಯನ್ನೂರು ಕಾರದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತ ರಾಜೇಶ್‌ ಅವರ ಮನೆಗೆ ಕಿಚ್ಚಿಡಲಾಗಿದೆ. ರಾಜೇಶ್‌ ಅವರ ಬಸ್ಸನ್ನು ಬೆಂಕಿ ಹಚ್ಚಿ ಹಾನಿಗೊಳಿಸಲಾಗಿದೆ. ಯುವಮೋರ್ಚಾ ಜಿಲ್ಲಾಧ್ಯಕ್ಷ ಅನ್ನೂರು ಕಾರಮೇಲ್‌ನ ಅರುಣ್‌ ಅವರ ಮನೆ, ಬಿಜೆಪಿ ಕಾರ್ಯಕರ್ತ ಆಟೋ ಚಾಲಕ ಅನ್ನೂರಿನ ಗಣೇಶನ್‌, ಕಾರಮೇಲ್‌ನ ಎ.ಕೆ.ಉಣ್ಣಿಕೃಷ್ಣನ್‌ ಅವರ ಮನೆಗಳನ್ನು ಹಾನಿಗೊಳಿಸಲಾಗಿದೆ. ಬಿಜೆಪಿ ಕಾರ್ಯಕರ್ತ ಅನ್ನೂರು ಪಡಿಂಞರ ಕರೆಯ ಪೂತ್ತಲಾತ್‌ ಕುಮಾರನ್‌ ಅವರ ಮನೆಗೆ ಬಾಂಬೆಸೆಯಲಾಗಿದೆ. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಗಂಗನ್‌ ತಾಯಿನೇರಿ ಅವರ ಅಂಗಡಿಗೆ ಬಾಂಬೆಸೆದು ಹಾನಿಗೊಳಿಸಲಾಗಿದೆ. 

ಬಿಜೆಪಿ ಕಾರ್ಯಕರ್ತ ಕವ್ವಾಯಿಯ ಶ್ಯಾಮ್‌ ಅವರ ಬೈಕ್‌ಗೆ ಕಿಚ್ಚಿಡಲಾಗಿದೆ. ಬಿಜೆಪಿ ಪಯ್ಯನ್ನೂರು ಮಂಡಲ ಕಾರ್ಯದರ್ಶಿ ಸಿ.ಕೆ.ರಮೇಶನ್‌ ಮಾಸ್ತರ್‌, ರಾಜ್ಯ ಕೌನ್ಸಿಲ್‌ ಸದಸ್ಯ ಎ.ಕೆ.ರಾಜಗೋಪಾಲನ್‌ ಮಾಸ್ತರ್‌ ಅವರ ಮನೆಗಳಿಗೂ ಹಾನಿಗೈಯ್ಯಲಗಿದೆ.

ಬಾಂಬೆಸತದಲ್ಲಿ ಸಿಪಿಎಂ ಕಾರ್ಯಕರ್ತರಾದ ರಾಮಂತಳಿ ಮೊಟ್ಟಂಕುನ್ನು ನಿವಾಸಿಗಳಾದ ಮೊಹಮ್ಮದ್‌(19), ಅದೀಪ್‌(22), ಅನ್ಸಾರ್‌(21), ಅಶ್ಪಾಕ್‌(19), ನಜೀಬ್‌(18) ಮತ್ತು ಸುಬೈರ್‌(22) ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಸಿಪಿಎಂ ಬ್ರಾಂಚ್‌ ಕಾರ್ಯದರ್ಶಿ ಕಕ್ಕಂಪಾರದ ಸಿ.ಪಿ.ಜನಾರ್ದನ ಅವರ ಮನೆಯನ್ನು ಹಾನಿಗೊಳಿಸಲಾಗಿದೆ. ಸಿಪಿಎಂ ಕಾರ್ಯಕರ್ತ ಶ್ಯಾಮ್‌ ಕುಟ್ಟನ್‌ ಅವರ ಮನೆಗೆ ಬಾಂಬೆಸದು ಹಾನಿಗೊಳಿಸಲಾಗಿದೆ. ಪಿ.ವಿ.ಭರತನ್‌, ಪಿ.ಪಿ.ಕುಂಞಿಕಣ್ಣನ್‌ ಅವರ ಮನೆಗೂ ಹಾನಿಗೊಳಿಸಲಾಗಿದೆ.ಕಳೆದ ವರ್ಷ ಜು.11 ರಂದು ಬಿಎಂಎಸ್‌ ಕಾರ್ಯಕರ್ತ ಅನ್ನೂರು ಸಿ.ಕೆ.ರಾಮಚಂದ್ರನ್‌ ಅವರನ್ನು ಕೊಲೆ ಮಾಡಲಾಗಿತ್ತು.

ಟಾಪ್ ನ್ಯೂಸ್

1-24-tuesday

Daily Horoscope: ಹೊಸ ವ್ಯವಹಾರ ಆರಂಭಿಸಲು ಚಿಂತನೆ, ಆರೋಗ್ಯ ತೃಪ್ತಿಕರ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

vJune 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫ‌ಲಿತಾಂಶ

June 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫ‌ಲಿತಾಂಶ

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain ಕೊಡಗಿನಲ್ಲಿ ಉತ್ತಮ ಮಳೆ: ಅಂಗಡಿ, ಮನೆಗಳಿಗೆ ನುಗ್ಗಿದ ನೀರು

Rain ಕೊಡಗಿನಲ್ಲಿ ಉತ್ತಮ ಮಳೆ: ಅಂಗಡಿ, ಮನೆಗಳಿಗೆ ನುಗ್ಗಿದ ನೀರು

Road Mishap ಕಾಸರಗೋಡು; ಕಾರು-ಸ್ಕೂಟರ್‌ ಢಿಕ್ಕಿ: ದಂಪತಿ ಸಾವು

Road Mishap ಕಾಸರಗೋಡು; ಕಾರು-ಸ್ಕೂಟರ್‌ ಢಿಕ್ಕಿ: ದಂಪತಿ ಸಾವು

ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು

ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

Misbehavior: ಅನುಚಿತ ವರ್ತನೆ; ಕೇಂದ್ರ ವಿ.ವಿ. ಅಧ್ಯಾಪಕನ ಅಮಾನತು

Misbehavior: ಅನುಚಿತ ವರ್ತನೆ; ಕೇಂದ್ರ ವಿ.ವಿ. ಅಧ್ಯಾಪಕನ ಅಮಾನತು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-24-tuesday

Daily Horoscope: ಹೊಸ ವ್ಯವಹಾರ ಆರಂಭಿಸಲು ಚಿಂತನೆ, ಆರೋಗ್ಯ ತೃಪ್ತಿಕರ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.