ಬಿಡುಗಡೆಯಾಗದ ಅನುದಾನ: ಹೋರಾಟಕ್ಕೆ ನಿರ್ಧಾರ


Team Udayavani, Jul 14, 2017, 2:00 AM IST

1307svnr3ph.jpg

ಸವಣೂರು: ಬೆಳಂದೂರು ಜಿ.ಪಂ. ಹಾಗೂ ನೆಟ್ಟಣಿಗೆ ಮುಟ್ನೂರು ಜಿ.ಪಂ.ಕ್ಷೇತ್ರ ವ್ಯಾಪ್ತಿಗೆ ಸೇರಿದ ಸವಣೂರು-ಕುಮಾರಮಂಗಲ-ಮಾಡಾವು ರಸ್ತೆ ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ.

ರಸ್ತೆ ಸರಿಪಡಿಸುವಂತೆ ಈ ಭಾಗದ ಜನಪ್ರತಿನಿಧಿಗಳಿಗೆ ಹಲವುಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜ ನವಾಗಿಲ್ಲ  ಎನ್ನುತ್ತಾರೆ ಇಲ್ಲಿನ ಜನರು. ಮುಖ್ಯ ರಸ್ತೆಗಳು ಅಭಿವೃದ್ಧಿ ಹೊಂದುತ್ತಿದ್ದರೂ ಈ ರಸ್ತೆ ಮಾತ್ರ 15 ವರ್ಷಗಳಿಂದ ಡಾಮರು ಕಂಡಿಲ್ಲ. ಸುತ್ತಮುತ್ತಲಿನ ರಸ್ತೆಗಳು ಅಗಲೀಕರಣ, ಡಾಮರೀಕರಣಗೊಂಡು ಅಭಿ ವೃದ್ಧಿಗೊಳ್ಳುತ್ತಿದ್ದರೂ ಸುಮಾರು 7 ಕಿ.ಮೀ ಉದ್ದದ ಈ ರಸ್ತೆ ಮಾತ್ರವಿನ್ನೂ ಅಭಿವೃದ್ಧಿಗೊಂಡಿಲ್ಲ. ಜಿ.ಪಂ. ರಸ್ತೆಯಾಗಿರುವ ಈ ರಸ್ತೆ, ಅರ್ಧ ಭಾಗ ಪುತ್ತೂರು ವಿಧಾನ ಸಭಾ ಕ್ಷೇತ್ರದ ನೆಟ್ಟಣಿಗೆ ಮುಟ್ನೂರು ಕ್ಷೇತ್ರಕ್ಕೆ ಒಳಪಟ್ಟರೆ, ಅರ್ಧಭಾಗ ಸುಳ್ಯ ವಿಧಾನಸಭಾ ಕ್ಷೇತ್ರದ ಬೆಳಂದೂರು ಕ್ಷೇತ್ರಕ್ಕೆ ಒಳಪಟ್ಟಿದೆ.

ಸವಣೂರಿನಿಂದ ಕುಚ್ಚೆಜಾಲು ಎಂಬಲ್ಲಿವರೆಗೆ ತೇಪೆ ಕಾರ್ಯ ನಡೆದಿದೆ. ಈ ರಸ್ತೆಯ ಮೂಲಕ ಮಾಡಾವು ಪುತ್ತೂರು, ಬೆಳ್ಳಾರೆ, ಪೆರ್ಲಂಪಾಡಿ ಅಮಿcನಡ್ಕ, ಮುಳ್ಳೇರಿಯ ಸಂಪರ್ಕಿಸಬಹುದಾಗಿದೆ. ರಸ್ತೆ ದುರಸ್ತಿ ಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಗ್ರಾಮ ಸಭೆಗಳಲ್ಲಿ ನಿರಂತರವಾಗಿ ಗ್ರಾಮಸ್ಥರು ಆಗ್ರಹಿ ಸುತ್ತಾ ಬಂದಿದ್ದರೂ ಇಲ್ಲಿ ತನಕ ಯಾವುದೇ ಸ್ಪಂದನೆ ದೊರೆತಿಲ್ಲ.

ಈ  ರಸ್ತೆಯಲ್ಲಿ  ಬೆಳಗ್ಗೆ  ಪುತ್ತೂರಿನಿಂದ ಹೊರಡುವ ಕೆಎಸ್‌ಆರ್‌ಟಿಸಿ ಬಸ್‌ ಮಾಡಾವು ಮೂಲಕ ಕುಮಾರಮಂಗಲ, ಸವಣೂರಾಗಿ ಮತ್ತೆ ಪುತ್ತೂರಿಗೆ ತಲುಪುತ್ತದೆ. ಸಂಜೆ  ಪುತ್ತೂರಿನಿಂದ ಹೊರಟು ಸವಣೂರು, ಕುಮಾರಮಂಗಲ ಮಾಡಾವು ಮಾರ್ಗವಾಗಿ ಬಸ್‌ ಪುನಃ ಪುತ್ತೂರಿಗೆ ಸಾಗುತ್ತದೆ. ಶಾಲಾ ಮಕ್ಕಳು ಸೇರಿದಂತೆ ಅನೇಕರು ಈ ರಸ್ತೆಯಲ್ಲಿ ಓಡಾಡುತ್ತಾರಾದರೂ ದುರಸ್ತಿ ಮಾಡದೇ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ  ಕಾರಣವಾಗಿದೆ.

ಹೋರಾಟಕ್ಕೆ ಸಿದ್ಧತೆ
ನಮ್ಮ  ಮನವಿಗೆ ಹಲವು ವರ್ಷಗಳಿಂದ ಯಾವುದೇ ಸ್ಪಂದನೆ ದೊರಕುತ್ತಿಲ್ಲ. ಹಲವು ಸಲ ನಾವು ಶ್ರಮ ದಾನದಿಂದ ರಸ್ತೆಯ ಹೊಂಡ ಮುಚ್ಚುವ,ಪೊದರು ಕಡಿಯುವ ಕೆಲಸವನ್ನು  ಶ್ರಮದಾನದ ಮೂಲಕ ಮಾಡುತ್ತಿದ್ದೆವು. ಈ ಬಾರಿ ನಾವು ಶ್ರಮದಾನ ಮಾಡದಿರಲು ತೀರ್ಮಾನಿಸಿದ್ದೇವೆ. ಹಲವು ಬಾರಿ ಗ್ರಾಮಸಭೆಗಳಲ್ಲಿ , ಸಾಮಾನ್ಯ ಸಭೆಗಳಲ್ಲಿ  ಈ ಕುರಿತು ನಿರ್ಣಯ ಕೈಗೊಂಡು ಸಂಬಂಧಿಸಿದವರಿಗೆ ಕಳುಹಿಸಲಾಗಿದೆ. ಆದರೂ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಇನ್ನು ನಮಗಿರುವು ಹೋರಾಟದ ಹಾದಿ ಮಾತ್ರ. ನಾವು ಇನ್ನು  ರಸ್ತೆ ಡಾಮರೀಕರಣಕ್ಕಾಗಿ ಹೋರಾಟ ನಡೆಸುತ್ತೇವೆ ಎಂದು ಸವಣೂರು ಗ್ರಾ.ಪಂ. ಸದಸ್ಯ ಗಿರಿಶಂಕರ್‌ ಸುಲಾಯ ಅವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

rachana-rai

Devil ಚಿತ್ರದ ನಾಯಕಿ ರಚನಾ ರೈ ಕನಸು ಭಗ್ನ

Tata Nexon: ಟಾಟಾ ನೆಕ್ಸಾನ್‌ SUV ಏಳು ವರ್ಷಗಳಲ್ಲಿ ಭರ್ಜರಿ 7 ಲಕ್ಷ ಮಾರಾಟ!

Tata Nexon: ಟಾಟಾ ನೆಕ್ಸಾನ್‌ SUV ಏಳು ವರ್ಷಗಳಲ್ಲಿ ಭರ್ಜರಿ 7 ಲಕ್ಷ ಮಾರಾಟ!

9-bantwala

Bantwala: ಚರಂಡಿಯಲ್ಲಿ ಪ್ರಾಣಿಯ ಅವಶೇಷಗಳು ಪತ್ತೆ

Udupi: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಬಿಜೆಪಿಯಿಂದ ರಸ್ತೆ ತಡೆದು ಪ್ರತಿಭಟನೆ

Udupi: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಬಿಜೆಪಿಯಿಂದ ರಸ್ತೆ ತಡೆದು ಪ್ರತಿಭಟನೆ

7-

Gundlupete: ಕುಡಿದ ಮತ್ತಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ

Kanchanjunga Express ರೈಲಿಗೆ ಗೂಡ್ಸ್ ರೈಲು ಡಿಕ್ಕಿ; 5 ಮೃತ್ಯು, 25ಕ್ಕೂ ಹೆಚ್ಚು ಗಾಯ

Kanchanjunga Express ರೈಲಿಗೆ ಗೂಡ್ಸ್ ರೈಲು ಡಿಕ್ಕಿ; 5 ಮೃತ್ಯು, 25ಕ್ಕೂ ಹೆಚ್ಚು ಗಾಯ

b-c-patil

Price Hike; ಸರ್ಕಾರ ಜನರನ್ನು ನೇರವಾಗಿ ಸುಲಿಗೆ ಮಾಡುತ್ತಿದೆ…: ಬಿ.ಸಿ.ಪಾಟೀಲ್ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-bantwala

Bantwala: ಚರಂಡಿಯಲ್ಲಿ ಪ್ರಾಣಿಯ ಅವಶೇಷಗಳು ಪತ್ತೆ

5-sulya

Sulya: ಶಾಲಾ ಆವರಣದಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

3-belthangady

ತಿರುವನಂತಪುರ ಅನಂತಪದ್ಮನಾಭ ದೇಗುಲ; ಪ್ರಧಾನ ಅರ್ಚಕರಾಗಿ ಸತ್ಯನಾರಾಯಣ ತೋಡ್ತಿಲ್ಲಾಯ ಆಯ್ಕೆ

Charmadi Ghat ಪ್ರವಾಸಿಗರ ಮೋಜುಮಸ್ತಿ: ರಜಾ ದಿನದ ಸಂಭ್ರಮ: ಅಪಾಯಕ್ಕೆ ಆಹ್ವಾನ

Charmadi Ghat ಪ್ರವಾಸಿಗರ ಮೋಜುಮಸ್ತಿ: ರಜಾ ದಿನದ ಸಂಭ್ರಮ: ಅಪಾಯಕ್ಕೆ ಆಹ್ವಾನ

Missing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆMissing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆ

Missing Case ಉಪ್ಪಿನಂಗಡಿ: ತಾಯಿ, ಮಗ ನಾಪತ್ತೆ

MUST WATCH

udayavani youtube

ಗಂಗೊಳ್ಳಿಯಲ್ಲಿ ಈದ್ ಅಲ್ ಅಝ್ಹಾ ಆಚರಣೆ

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

ಹೊಸ ಸೇರ್ಪಡೆ

rachana-rai

Devil ಚಿತ್ರದ ನಾಯಕಿ ರಚನಾ ರೈ ಕನಸು ಭಗ್ನ

Tata Nexon: ಟಾಟಾ ನೆಕ್ಸಾನ್‌ SUV ಏಳು ವರ್ಷಗಳಲ್ಲಿ ಭರ್ಜರಿ 7 ಲಕ್ಷ ಮಾರಾಟ!

Tata Nexon: ಟಾಟಾ ನೆಕ್ಸಾನ್‌ SUV ಏಳು ವರ್ಷಗಳಲ್ಲಿ ಭರ್ಜರಿ 7 ಲಕ್ಷ ಮಾರಾಟ!

9-bantwala

Bantwala: ಚರಂಡಿಯಲ್ಲಿ ಪ್ರಾಣಿಯ ಅವಶೇಷಗಳು ಪತ್ತೆ

Gadag; ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

Gadag; ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

8-

Lokapura: ಬಕ್ರೀದ್ ಹಬ್ಬದ ನಿಮಿತ್ತ ಮುಸ್ಲಿಂ ಬಾಂಧವರಿಂದ ವಿಶೇಷ ಪ್ರಾರ್ಥನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.