ಸ್ತ್ರೀವೇಷ ತೊಟ್ಟು ಓಡುವಾಗ ಸಿಕ್ಕಿಬಿದ್ದ ಐಸಿಸ್‌ ಉತ್ತರ ಕುಮಾರರು!


Team Udayavani, Jul 23, 2017, 9:35 AM IST

vesha.jpg

ಮೊಸುಲ್‌: ಎಲ್ಲೋ ಕುಳಿತು ವಿಡಿಯೋ ರೆಕಾರ್ಡ್‌ ಮಾಡಿ, ಅದರಲ್ಲಿ ಪೌರುಷ ಕೊಚ್ಚಿಕೊಳ್ಳುವ, ನರಿ ಗಳಂತೆ ಒಳನುಸುಳಿ ಅಮಾಯಕರ ಮೇಲೆ ಬಾಂಬ್‌ ಎಸೆದು, ಗುಂಡಿನ ದಾಳಿ ನಡೆಸಿ ರಕ್ತಪಾತ ಮಾಡುವ ಐಸಿಸ್‌ ಉಗ್ರರು ಕೆಲವೊಮ್ಮ ಮಹಾಭಾರತದ ಉತ್ತರ ಕುಮಾರನನ್ನು ನೆನಪಿಸುತ್ತಾರೆ. ಇರಾಕ್‌ನ ಮೊಸೂಲ್‌ ಪ್ರಾಂತ್ಯದಲ್ಲಿ ನಡೆದ ಘಟನೆಯೊಂದು ಐಸಿಸ್‌ ಉಗ್ರರು ನಿಜವಾಗ್ಯೂ ಉತ್ತರ ಕುಮಾರರೇ ಎಂಬುದನ್ನು ಸಾರಿ ಹೇಳಿದೆ.

ಸತತ ಒಂಬತ್ತು ತಿಂಗಳ ಯುದ್ಧದ ನಂತರ ಮೊಸೂಲ್‌ ಪ್ರಾಂತ್ಯವನ್ನು ಐಸಿಸ್‌ ಹಿಡಿತದಿಂದ ಮುಕ್ತ ಗೊಳಿಸುವಲ್ಲಿ ಇರಾಕ್‌ ಸೇನೆ ಯಶಸ್ವಿಯಾಗಿದ್ದು ಗೊತ್ತೇ ಇದೆ. ಜು.10ರ ಸೇನಾ ವಿಜಯದ ನಂತರ ಅಸಂಖ್ಯ ಐಸಿಸ್‌ ಉಗ್ರರು ಕಂಬಿ ಎಣಿಸುತ್ತಿದ್ದು, ಕಣ್ತಪ್ಪಿಸಿ ಅವಿತುಕೊಂಡಿದ್ದ ನೂರಾರು ಮಂದಿ ಮೊಸೂಲ್‌ನಿಂದ ಪಲಾಯ ನಗೈಯ್ಯುವ ಪ್ರಯತ್ನದಲ್ಲಿದ್ದಾರೆ. ಹೀಗೆ ಮೊಸೂಲ್‌ನಿಂದ ಎಸ್ಕೇಪ್‌ ಆಗಲು ಕೆಲ ಐಸಿಸ್‌ ಉಗ್ರರು ಹೆಂಗಸರಂತೆ ಬಟ್ಟೆ ಧರಿಸಿ, ಮೇಕಪ್‌ ಮಾಡಿಕೊಂಡು, ಬುರ್ಖಾ ತೊಟ್ಟು ರಸ್ತೆಗಿಳಿದಿದ್ದರು. ಆದರೆ ಬುರ್ಖಾಧಾರಿಗಳ “ಗಂಡು ನಡಿಗೆ’, ತಳುಕು-ಬಳುಕಲ್ಲಿದ್ದ ಹುಳುಕು ಕಂಡುಹಿಡಿದ ಸೈನಿಕರು, ಅವರನ್ನು ತಡೆದು, ಬುರ್ಖಾ ತೆಗೆಸಿದಾಗ ಉಗ್ರರ ಅಸಲಿ “ಬಣ್ಣ’ ಬಯಲಾಗಿದೆ.

ಬುರ್ಖಾ ಸುಟ್ಟು ಸಂಭŠಮಿಸಿದ ಸ್ತ್ರೀಯರು!
“ಅವರ ಒತ್ತಡಕ್ಕೆ ಮಣಿದು ಧರಿಸಿದ ಈ ನನ್ನ ಉಡುಪುಗಳೇ ನನ್ನವರ ಸಾವಿಗೆ ಕಾರಣವಾದವು. ಈ ಬುರ್ಖಾದಿಂದಾಗೆÂà ಅವರು (ಉಗ್ರರು) ನನ್ನ ತಂದೆಯನ್ನ ಸುಟ್ಟು ಕೊಂದರು. ಇಂಥ ವಸ್ತ್ರಗಳಿಗೆ ಬೆಂಕಿ ಹಚ್ಚುವುದೇ ಲೇಸು. ನಾವು ಈ ಬಟ್ಟೆಗಳನ್ನು ಸುಡೋಣ, ಅಲ್ಲಾಹ್‌ ಅವರನ್ನು (ಉಗ್ರರನ್ನು) ಸುಡುತ್ತಾನೆ…’

ಹೀಗೆ ಹೇಳುತ್ತಾ ತಾವು ಧರಿಸಿದ್ದ ಬುರ್ಖಾ ತೆಗೆದು ಬೆಂಕಿ ಹಚ್ಚಿದ್ದು ಸಿರಿಯಾ ಮಹಿಳೆಯರು. ಐಸಿಸ್‌ ಉಗ್ರರ ದಬ್ಟಾಳಿಕೆಯ ಆಡಳಿತದಿಂದ ಮುಕ್ತರಾದ ಸಂದರ್ಭವನ್ನು ಸಿರಿಯಾದ ರಖಾV ನಗರದ ಮಹಿಳೆಯರು ಸಭ್ರಮಿಸಿದ ಪರಿ ಇದು. ಮಹಿಳೆಯರು ಬುರ್ಖಾ ಸುಡುವಾಗ ಸುತ್ತ ನೆರೆದ ಪುಟ್ಟ ಹೆಣ್ಮಕ್ಕಳು, ಯುವತಿಯರು, “ಅವರು ನನ್ನ ತಂದೆಯ ಕೊಂದರು, ನನ್ನ ಪತಿಯ ಕೊಂದರು. ನನ್ನ ಮನೆಯನ್ನೇ ಸ್ಫೋಟಿಸಿ ಛಿದ್ರಗೊಳಿಸಿದರು,’ ಎನ್ನುತ್ತಿದ್ದರು. ಅತ್ತ ಪುರುಷ ನೊಬ್ಬ, “ಉಗ್ರರ ಒತ್ತಾಯಕ್ಕೆ ಮಣಿದೇ ನಾನು ಉದ್ದದ ಗಡ್ಡ ಬೆಳೆಸಬೇಕಾಯ್ತು. ನನ್ನವರ ಸಾವಿಗೆ ಕಾರಣವಾದ ಗಡ್ಡವನ್ನು ತೆಗೆದುಬಿಡು,’ ಎಂದು ಕೌÒರಿಕನತ್ತ ನೋಡಿದ. ಈ ವೇಳೆ ಉಗ್ರ ರಿಂದ ಮುಕ್ತರಾದ ಖುಷಿಗಿಂತ ತಮ್ಮವರನ್ನು ಕಳೆದುಕೊಂಡ ನೋವು ಅವರ ಕಂಗಳಲ್ಲಿ ತುಂಬಿತ್ತು.

ಟಾಪ್ ನ್ಯೂಸ್

MAHE

MAHE ಟೈಮ್ಸ್‌ ಉನ್ನತ ಶಿಕ್ಷಣ ಯುವ ವಿ.ವಿ. ಶ್ರೇಯಾಂಕ: ಮಾಹೆಗೆ 175ನೇ ಸ್ಥಾನ

ಸ್ಟಾರ್ಕ್‌ ಸುಂಟರಗಾಳಿ ; ಕೋಲ್ಕತಾ ಫೈನಲ್‌ ಸವಾರಿ

IPL 2024; ಸ್ಟಾರ್ಕ್‌ ಸುಂಟರಗಾಳಿ ; ಕೋಲ್ಕತಾ ಫೈನಲ್‌ ಸವಾರಿ

puPU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು

PU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು

ಸಾಲ ಮರುಪಾವತಿ ಮಾಡದಿದ್ದಕ್ಕೆ ಪತ್ನಿ, ಪುತ್ರನಿಗೆ ಗೃಹ ಬಂಧನ: ರೈತ ಆತ್ಮಹತ್ಯೆ

ಸಾಲ ಮರುಪಾವತಿ ಮಾಡದಿದ್ದಕ್ಕೆ ಪತ್ನಿ, ಪುತ್ರನಿಗೆ ಗೃಹ ಬಂಧನ: ರೈತ ಆತ್ಮಹತ್ಯೆ

T20 World Cup; Dwayne Bravo is the Afghanistan bowling consultant

T20 World Cup; ಡ್ವೇನ್‌ಬ್ರಾವೊ ಅಫ್ಘಾನ್‌ ಬೌಲಿಂಗ್‌ ಸಲಹೆಗಾರ

Molakalmuru ಆಸ್ಪತ್ರೆಯಲ್ಲಿ ಮೊಂಬತ್ತಿಯಲ್ಲಿ ಚಿಕಿತ್ಸೆ!

Molakalmuru ಆಸ್ಪತ್ರೆಯಲ್ಲಿ ಮೊಂಬತ್ತಿಯಲ್ಲಿ ಚಿಕಿತ್ಸೆ!

ಕಾಂಗ್ರೆಸ್‌ಗೆ 5 ಸ್ಥಾನದಲ್ಲಿ ಗೆಲುವು: ರಾಮಲಿಂಗಾ ರೆಡ್ಡಿ

ಕಾಂಗ್ರೆಸ್‌ಗೆ 5 ಸ್ಥಾನದಲ್ಲಿ ಗೆಲುವು: ರಾಮಲಿಂಗಾ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

British Prime Minister Sunak thought to change the student visa policy!

U.K; ವಿದ್ಯಾರ್ಥಿ ವೀಸಾ ನೀತಿ ಬದಲಿಸಲು ಬ್ರಿಟನ್‌ ಪ್ರಧಾನಿ ಸುನಕ್‌ ಚಿಂತನೆ!

3 students of Indian origin passed away in Georgia

Georgia ಕಾರು ಅಪಘಾತ: ಭಾರತ ಮೂಲದ 3 ವಿದ್ಯಾರ್ಥಿಗಳ ಸಾವು

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

5

ಜಾರ್ಜಿಯಾದಲ್ಲಿ ಕಾರು ಪಲ್ಟಿಯಾಗಿ ಮೂವರು ಇಂಡೋ-ಅಮೆರಿಕನ್‌ ವಿದ್ಯಾರ್ಥಿಗಳು ದುರ್ಮರಣ

1-wewew

Dubai; 12 ವರ್ಷದ ಯತ್ನ: 8 ಕೋಟಿ ರೂ. ಗೆದ್ದ ಭಾರತೀಯ ಮಹಿಳೆ!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

MAHE

MAHE ಟೈಮ್ಸ್‌ ಉನ್ನತ ಶಿಕ್ಷಣ ಯುವ ವಿ.ವಿ. ಶ್ರೇಯಾಂಕ: ಮಾಹೆಗೆ 175ನೇ ಸ್ಥಾನ

ಸ್ಟಾರ್ಕ್‌ ಸುಂಟರಗಾಳಿ ; ಕೋಲ್ಕತಾ ಫೈನಲ್‌ ಸವಾರಿ

IPL 2024; ಸ್ಟಾರ್ಕ್‌ ಸುಂಟರಗಾಳಿ ; ಕೋಲ್ಕತಾ ಫೈನಲ್‌ ಸವಾರಿ

puPU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು

PU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು

T20 World Cup: McGurk is Australia’s reserve player

T20 World Cup: ಮೆಕ್‌ಗರ್ಕ್‌ ಆಸ್ಟ್ರೇಲಿಯದ ಮೀಸಲು ಆಟಗಾರ

ಸಾಲ ಮರುಪಾವತಿ ಮಾಡದಿದ್ದಕ್ಕೆ ಪತ್ನಿ, ಪುತ್ರನಿಗೆ ಗೃಹ ಬಂಧನ: ರೈತ ಆತ್ಮಹತ್ಯೆ

ಸಾಲ ಮರುಪಾವತಿ ಮಾಡದಿದ್ದಕ್ಕೆ ಪತ್ನಿ, ಪುತ್ರನಿಗೆ ಗೃಹ ಬಂಧನ: ರೈತ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.