ಫ್ಲಿಪ್ಕಾರ್ಟ್ ಜೊತೆಗೆ ಸ್ನ್ಯಾಪ್ಡೀಲ್ ವಿಲೀನ ಇಲ್ಲ
Team Udayavani, Aug 1, 2017, 9:41 AM IST
ನವದೆಹಲಿ: ದೇಶದ ಇ-ಕಾಮರ್ಸ್ ಕ್ಷೇತ್ರದ ಪ್ರಮುಖ ಕಂಪನಿಗಳಾಗಿರುವ ಸ್ನ್ಯಾಪ್ಡೀಲ್ ಮತ್ತು ಫ್ಲಿಪ್ಕಾರ್ಟ್ ವಿಲೀನವಾಗುತ್ತದೆ ಎಂಬ ಊಹೆ ಸುಳ್ಳಾಗಿದೆ. ವಿಲೀನ ಮಾತುಕತೆಯಿಂದ ಸ್ನ್ಯಾಪ್ಡೀಲ್ ಹಿಂದೆ ಸರಿದಿದ್ದು, ತಾನು ಏಕಾಂಗಿಯಾಗಿ ವಹಿವಾಟು ಮುಂದುವರಿಸುವುದಾಗಿ
ಸೋಮವಾರ ಘೋಷಿಸಿದೆ.
ವಿಲೀನ ಮತ್ತು ವಿಭಜನೆಗಾಗಿ ಫ್ಲಿಪ್ಕಾರ್ಟ್ 11,232 ಕೋಟಿ ರೂ. ಮೊತ್ತದ ಭರ್ಜರಿ ಆಫರ್ ನೀಡಿತ್ತು. ಇದು ದೇಶದ ಇ-ಕಾಮರ್ಸ್ ಕ್ಷೇತ್ರದ ಅತಿ ದೊಡ್ಡ ಆಫರ್ ಆಗಿತ್ತು. ಇನ್ನೊಂದೆಡೆ, ವಿಲೀನ ಪ್ರಕ್ರಿಯೆ ರದ್ದಾದ ಬೆನ್ನಲ್ಲೇ ಸ್ನ್ಯಾಪ್ಡೀಲ್ ತನ್ನ ಶೇ.80ರಷ್ಟು ಉದ್ಯೋಗಿಗಳನ್ನು ಕೆಲಸದಿಂದ
ಕಿತ್ತುಹಾಕುವ ನಿರ್ಧಾರ ಕೈಗೊಂಡಿದೆ. ಕಂಪನಿಯ ಆಡಳಿತ ಮಂಡಳಿ ಈ ಬಗ್ಗೆ ಮೌಖೀಕವಾಗಿ ಆದೇಶ ನೀಡಿದೆ. ಒಟ್ಟು 1,200 ಮಂದಿ ಉದ್ಯೋಗಿಗಳಿದ್ದು, ಆ ಪೈಕಿ 1 ಸಾವಿರ ಮಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ವರ್ಷದ ಜುಲೈನಲ್ಲಿ ಕಂಪನಿಯಲ್ಲಿ 9 ಸಾವಿರ ಉದ್ಯೋಗಿಗಳಿದ್ದರು. ಅವರ ಸಂಖ್ಯೆಯನ್ನು 1,200ಕ್ಕೆ ಇಳಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RTO: ಇನ್ನು ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ಗಾಗಿ ಆರ್ಟಿಒ ಕಚೇರಿಗೆ ಹೋಗ್ಬೇಕಿಲ್ಲ!
Lucknow; ಶಕ್ತಿಯನ್ನು ಮಹಾಶಕ್ತಿ ಆಗಿ ಪರಿವರ್ತಿಸುವೆ: ಮೋದಿ
Election; ದ್ವೇಷ ಕಾರುವ ಪಿಎಂ ಮೋದಿ ರಾಜಕೀಯ ತ್ಯಜಿಸಲಿ: ಖರ್ಗೆ
GalaxEye; ರಾತ್ರಿಯಲ್ಲೂ ಭೂಮಿ ಚಿತ್ರ ಕ್ಲಿಕ್ಕಿಸುವ ಟೆಕ್ನಾಲಜಿ ಪರೀಕ್ಷೆ
Loksabha; ಬಿಜೆಪಿಗೆ 300 ಕ್ಷೇತ್ರಗಳಲ್ಲಿ ಜಯ ನಿಶ್ಚಿತ: ಪ್ರಶಾಂತ್ ಕಿಶೋರ್ ಭವಿಷ್ಯ