ಟೀಮ್‌ ಇಂಡಿಯಾ ಸ್ವಾತಂತ್ರ್ಯ ಸಂಭ್ರಮ: ಕೊಹ್ಲಿ  ಧ್ವಜಾರೋಹಣ

Team Udayavani, Aug 16, 2017, 11:35 AM IST

11-SPORTS-11.jpg

ಕ್ಯಾಂಡಿ: ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್‌ ತಂಡ ಮಂಗಳವಾರ ಕ್ಯಾಂಡಿಯಲ್ಲಿ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸಿತು. ನಾಯಕ ವಿರಾಟ್‌ ಕೊಹ್ಲಿ, ಕೋಚ್‌ ರವಿಶಾಸ್ತ್ರಿ ಸಹಿತ ತಂಡದ ಎಲ್ಲ ಸದಸ್ಯರೂ ಸ್ವಾತಂತ್ರ್ಯ ಸಂಭ್ರ ಮದಲ್ಲಿ ಪಾಲ್ಗೊಂಡರು. 

ಈ ಸಂದರ್ಭದಲ್ಲಿ ಕೊಹ್ಲಿ ಧ್ವಜಾರೋಹಣ ಮಾಡಿದರು. ಕ್ರಿಕೆಟಿಗರೆಲ್ಲ ಸಾಲಾಗಿ ನಿಂತು ರಾಷ್ಟ್ರಗೀತೆ ಹಾಡಿದರು. ತಂಡದ ಸಹಾಯಕ ಸಿಬಂದಿಗಳು, ಕೆಲವು ಆಟಗಾರರ ಕುಟುಂಬದ ಸದಸ್ಯರೂ ಈ ಸಮಾ ರಂಭಕ್ಕೆ ಸಾಕ್ಷಿಯಾದರು. ಭಾರತೀಯ ಕ್ರಿಕೆಟಿಗರ ಸ್ವಾತಂತ್ರ್ಯ ದಿನಾಚರಣೆಯನ್ನು ಬಿಸಿಸಿಐ ತನ್ನ ಟ್ವಿಟರ್‌ನಲ್ಲಿ ಚಿತ್ರ ಸಹಿತ ಪ್ರಕಟಿ ಸಿದೆ. ಇದರ ವೀಡಿಯೋವನ್ನು “ಡಬ್ಲ್ಯುಡಬ್ಲ್ಯುಡಬ್ಲ್ಯು.ಬಿಸಿಸಿಐ.ಟಿವಿ’ಯಲ್ಲಿ ವೀಕ್ಷಿಸಬಹುದು.

3ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯವನ್ನು ಮೂರೇ ದಿನದಲ್ಲಿ ಮುಗಿಸಿದ ಕಾರಣ ಭಾರತೀಯ ಕ್ರಿಕೆಟಿಗರ ಸ್ವಾತಂತ್ರ್ಯ ದಿನಾಚರಣೆಗೆ ಹೆಚ್ಚಿನ ಕಾಲಾವಕಾಶ ಲಭಿಸಿತ್ತು. ಭಾರತದ ಸ್ವಾತಂತ್ರ್ಯ ದಿನೋ ತ್ಸವದ ಶುಭ ಸಂದರ್ಭದಲ್ಲಿ ಅನಿಲ್‌ ಕುಂಬ್ಳೆ, ವೀರೇಂದ್ರ ಸೆಹವಾಗ್‌, ಗೌತಮ್‌ ಗಂಭೀರ್‌ ಮೊದಲಾದ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಶುಭ ಹಾರೈಸಿ ಟ್ವೀಟ್‌ ಮಾಡಿದ್ದಾರೆ.

ಧೋನಿ ದಾಖಲೆ ಮುರಿದ ಕೊಹ್ಲಿ
ಪಲ್ಲೆಕಿಲೆ: ಶ್ರೀಲಂಕಾ ವಿರುದ್ಧದ ಪಲ್ಲೆಕಿಲೆ ಟೆಸ್ಟ್‌ ಪಂದ್ಯವನ್ನು ಇನ್ನಿಂಗ್ಸ್‌ ಅಂತರದಿಂದ ಗೆಲ್ಲುವುದರೊಂದಿಗೆ ನಾಯಕ ವಿರಾಟ್‌ ಕೊಹ್ಲಿ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ವಿದೇಶಗಳಲ್ಲಿ ಅತ್ಯಧಿಕ ಟೆಸ್ಟ್‌ ಪಂದ್ಯಗಳನ್ನು ಗೆದ್ದ ದ್ವಿತೀಯ ಭಾರತೀಯ ನಾಯಕನೆನಿಸಿದ್ದಾರೆ. 

ಇದು ಕೊಹ್ಲಿ ನಾಯಕತ್ವದಲ್ಲಿ ಭಾರತಕ್ಕೆ ವಿದೇಶದಲ್ಲಿ ಒಲಿದ 7ನೇ ಗೆಲುವು. ಇದರೊಂದಿಗೆ ಅವರು 6 ಟೆಸ್ಟ್‌ ಪಂದ್ಯಗಳನ್ನು ಗೆದ್ದ ಮಹೇಂದ್ರ ಸಿಂಗ್‌ ಧೋನಿ ದಾಖಲೆಯನ್ನು ಮುರಿದರು. ವಿದೇಶದಲ್ಲಿ ಭಾರತಕ್ಕೆ ಅತ್ಯಧಿಕ ಟೆಸ್ಟ್‌ ಗೆಲುವುಗಳನ್ನು ತಂದಿತ್ತ ನಾಯಕನೆಂಬ ದಾಖಲೆ ಸೌರವ್‌ ಗಂಗೂಲಿ ಹೆಸರಲ್ಲಿದೆ (11 ಟೆಸ್ಟ್‌). ಇದು ವಿರಾಟ್‌ ಕೊಹ್ಲಿ ನೇತೃತ್ವದಲ್ಲಿ ಭಾರತಕ್ಕೆ ಒಲಿದ ಸತತ 8ನೇ ಟೆಸ್ಟ್‌ ಸರಣಿ ಗೆಲುವು.

ಟೆಸ್ಟ್‌ ಸರಣಿ: ವೈಟ್‌ವಾಶ್‌ ಕಥನ
ಈವರೆಗೆ 3 ಹಾಗೂ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಪಂದ್ಯಗಳ ಸರಣಿಯಲ್ಲಿ 57 ಕ್ಲೀನ್‌ಸ್ವೀಪ್‌ ಫ‌ಲಿತಾಂಶ ದಾಖಲಾಗಿದೆ. ಇವುಗಳಲ್ಲಿ ಆಗ್ರಸ್ಥಾನದಲ್ಲಿರುವ ತಂಡ ಆಸ್ಟ್ರೇಲಿಯ. ಕಾಂಗರೂ ಪಡೆ ಸರ್ವಾಧಿಕ 22 ಸರಣಿಗಳನ್ನು ಕ್ಲೀನ್‌ಸ್ವೀಪ್‌ ಆಗಿ ವಶಪಡಿಸಿಕೊಂಡಿದೆ. ಅನಂತರದ ಸ್ಥಾನದಲ್ಲಿರುವ ತಂಡಗಳೆಂದರೆ ಇಂಗ್ಲೆಂಡ್‌ (13), ಪಾಕಿಸ್ಥಾನ (5), ಭಾರತ (5), ದಕ್ಷಿಣ ಆಫ್ರಿಕಾ, ಶ್ರೀಲಂಕಾ (ತಲಾ 4), ವೆಸ್ಟ್‌ ಇಂಡೀಸ್‌ (3) ಮತ್ತು ಬಾಂಗ್ಲಾದೇಶ (1). 

ಟೆಸ್ಟ್‌ ಇತಿಹಾದಲ್ಲಿ ಮೊದಲ ಕ್ಲೀನ್‌ಸ್ವೀಪ್‌ ಸಾಹಸಕ್ಕೆ ನಿದರ್ಶನವಾದ ತಂಡ ಇಂಗ್ಲೆಂಡ್‌. ಅದು 1886ರ ತವರಿನ ಸರಣಿಯಲ್ಲಿ ಆಸ್ಟ್ರೇಲಿಯಕ್ಕೆ 3-0 ಸೋಲುಣಿಸಿತ್ತು.

ಈವರೆಗೆ ಯಾವುದೇ ತಂಡಗಳು 6 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಕ್ಲೀನ್‌ಸ್ವೀಪ್‌ ಆಗಿ ವಶಪಡಿಸಿಕೊಂಡಿಲ್ಲ. ಆದರೆ 5 ಪಂದ್ಯಗಳ 10 ಸರಣಿಗಳಲ್ಲಿ ಬೇರೆ ಬೇರೆ ತಂಡಗಳು ಕ್ಲೀನ್‌ಸ್ವೀಪ್‌ ಸಾಧನೆಗೈದಿವೆ. ಇವುಗಳಲ್ಲಿ ಆಸ್ಟ್ರೇಲಿಯಕ್ಕೆ ಅಗ್ರಸ್ಥಾನ (5). 

ಭಾರತ ಈವರೆಗಿನ ಮೊದಲ 4 ಸರಣಿ ಗೆಲುವುಗಳನ್ನು ತವರಿನಲ್ಲೇ ಒಲಿಸಿಕೊಂಡಿದೆ. ಇವುಗಳೆಂದರೆ 1993ರಲ್ಲಿ ಇಂಗ್ಲೆಂಡ್‌ ವಿರುದ್ಧ 3-0, 1994ರಲ್ಲಿ ಶ್ರೀಲಂಕಾ ವಿರುದ್ಧ 3-0, 2013ರಲ್ಲಿ ಆಸ್ಟ್ರೇಲಿಯ ವಿರುದ್ಧ 4-0 ಹಾಗೂ ಕಳೆದ ವರ್ಷ ನ್ಯೂಜಿಲ್ಯಾಂಡ್‌ ವಿರುದ್ಧ 3-0 ಸರಣಿ ಗೆಲುವು. ಶ್ರೀಲಂಕಾವನ್ನು 3-0 ಅಂತರದಿಂದ ಮಣಿಸುವ ಮೂಲಕ ವಿದೇಶದಲ್ಲೂ ಕ್ಲೀನ್‌ಸ್ವೀಪ್‌ ಖಾತೆ ತೆರೆಯಿತು.

ಅಜರುದ್ದೀನ್‌ ಮತ್ತು ವಿರಾಟ್‌ ಕೊಹ್ಲಿ ಅತೀ ಹೆಚ್ಚು 2 ಸಲ ಕ್ಲೀನ್‌ಸ್ವೀಪ್‌ ಸರಣಿಗೆ ಸಾಕ್ಷಿಯಾದ ಭಾರತದ ನಾಯಕರಾಗಿದ್ದಾರೆ. 1993ರ ಇಂಗ್ಲೆಂಡ್‌ ವಿರುದ್ಧದ 3-0 ಹಾಗೂ 1994ರ ಶ್ರೀಲಂಕಾ ವಿರುದ್ಧದ 3-0 ಗೆಲುವು ಅಜರ್‌ ನಾಯಕತ್ವದಲ್ಲೇ ಒಲಿದಿತ್ತು. 2016ರಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ 3-0 ಗೆಲುವಿನ ವೇಳೆ ವಿರಾಟ್‌ ಕೊಹ್ಲಿ ನಾಯಕರಾಗಿದ್ದರು.

ಟಾಪ್ ನ್ಯೂಸ್

ಕಾರು ಅಪಘಾತ; ಅಪಾಯದಿಂದ ಪಾರಾದ ಚನ್ನವೀರ ಶಿವಾಚಾರ್ಯರು

Bidar; ಕಾರು ಅಪಘಾತ; ಅಪಾಯದಿಂದ ಪಾರಾದ ಚನ್ನವೀರ ಶಿವಾಚಾರ್ಯರು

Bidar; ಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಯಲ್ಲಿ ರಾಜ ಮರ್ಯಾದೆ ಸಿಗುತ್ತಿದೆ: ಬೊಮ್ಮಾಯಿ

Bidar; ಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಯಲ್ಲಿ ರಾಜ ಮರ್ಯಾದೆ ಸಿಗುತ್ತಿದೆ: ಬೊಮ್ಮಾಯಿ

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

The Election Commission banned the BJP candidate from campaigning for 24 hours

W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ

17

Mollywood: 5 ತಿಂಗಳಿನಲ್ಲಿ 1000 ಕೋಟಿಗೂ ಅಧಿಕ ಗಳಿಕೆ: ಈ 3 ಸಿನಿಮಾಗಳ ಕೊಡುಗೆಯೇ ಹೆಚ್ಚು

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adsadasdas

IPL ಮೊದಲ ಕ್ವಾಲಿಫೈಯರ್‌ ಇಂದು; ಕೆಕೆಆರ್‌-ಹೈದರಾಬಾದ್‌ ಬಿಗ್‌ ಹಿಟ್ಟರ್ ಫೈಟ್‌

pvs

Malaysia Masters ಬ್ಯಾಡ್ಮಿಂಟನ್‌ ; ಬ್ರೇಕ್‌ ಮುಗಿಸಿ ಆಡಲಿಳಿದ ಪಿ.ವಿ.ಸಿಂಧು

Rohan Bopanna

Paris Olympics; ಬಾಲಾಜಿ, ಭಾಂಬ್ರಿ: ಜತೆಗಾರನ ಹೆಸರು ಸೂಚಿಸಿದ ಬೋಪಣ್ಣ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ಕಾರು ಅಪಘಾತ; ಅಪಾಯದಿಂದ ಪಾರಾದ ಚನ್ನವೀರ ಶಿವಾಚಾರ್ಯರು

Bidar; ಕಾರು ಅಪಘಾತ; ಅಪಾಯದಿಂದ ಪಾರಾದ ಚನ್ನವೀರ ಶಿವಾಚಾರ್ಯರು

Bidar; ಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಯಲ್ಲಿ ರಾಜ ಮರ್ಯಾದೆ ಸಿಗುತ್ತಿದೆ: ಬೊಮ್ಮಾಯಿ

Bidar; ಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಯಲ್ಲಿ ರಾಜ ಮರ್ಯಾದೆ ಸಿಗುತ್ತಿದೆ: ಬೊಮ್ಮಾಯಿ

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

The Election Commission banned the BJP candidate from campaigning for 24 hours

W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.