ಗಣೇಶ ವಿಸರ್ಜನೆ ಚಿಂತೆಗೆ ಬಿಗ್‌ ರಿಲೀಫ್‌!

Team Udayavani, Aug 19, 2017, 12:09 PM IST

hub5.jpg

ಹುಬ್ಬಳ್ಳಿ: ನಗರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮಹಾಮಂಡಳದವರಿಗೆ ಮೂರ್ತಿಗಳನ್ನು ಎಲ್ಲಿ ವಿಸರ್ಜಿಸಬೇಕೆಂಬ ಬಗ್ಗೆಯೇ ದೊಡ್ಡ ಚಿಂತೆ ಕಾಡುತ್ತದೆ. ಆದರೆ, ಈ ಬಾರಿ ಪಾಲಿಕೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಕಳೆದ ವರ್ಷದಿಂದ ಮೂರ್ತಿ ವಿಸರ್ಜನೆಗೆ ಬಳಕೆ ಮಾಡುತ್ತಿರುವ ಇಲ್ಲಿನ ಹೊಸೂರು ವೃತ್ತ ಸಮೀಪದ ಕೆನರಾ ಹೋಟೆಲ್‌ ಎದುರು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.16ರ ಬಳಿ ಪಾಲಿಕೆ ಜಾಗದಲ್ಲಿದ್ದ ಬ್ರಿಟಿಷರ ಕಾಲದ ಕೆಳಮಟ್ಟದ ವಾಟರ್‌ ಟ್ಯಾಂಕ್‌ಅನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲಾಗುತ್ತಿದೆ. 

ಪಾಲಿಕೆಯು ಇಂದಿರಾ ಗಾಜಿನ ಮನೆ ಬಳಿ 2002ರಲ್ಲಿ ಬಾವಿಯೊಂದನ್ನು ನಿರ್ಮಿಸಿತ್ತು. ಈ ಬಾವಿಯೂ ಚಿಕ್ಕದಾಗಿದ್ದು, ದೊಡ್ಡಗಾತ್ರದ 15-20 ಗಣೇಶ ವಿಗ್ರಹಗಳನ್ನು ವಿಸರ್ಜಿಸಿದರೆ ಸಾಕು ತುಂಬಿ ಹೋಗುತ್ತಿತ್ತು. ಅನಂತರ ಬರುವ ವಿಗ್ರಹಗಳ ವಿಸರ್ಜನೆಗೆ ಮಂಡಳಿಯವರು ಪರದಾಡಬೇಕಿತ್ತು. ಪರ್ಯಾಯ ವ್ಯವಸ್ಥೆಯೇ ಇರಲಿಲ್ಲ. ಇದನ್ನು ಮನಗಂಡ ಗಣೇಶೋತ್ಸವ ಮಹಾಮಂಡಳ ಪದಾಧಿಕಾರಿಗಳು ಪ್ರತ್ಯೇಕವಾಗಿ ಮತ್ತೂಂದು ಬಾವಿ ನಿರ್ಮಿಸಬೇಕೆಂದು ಪಾಲಿಕೆಗೆ ಮನವಿ ಮಾಡಿದ್ದರು. ಪಾಲಿಕೆಯು ಸಹಿತ ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆಸಿತ್ತು.

ವಿಶಾಲ ಟ್ಯಾಂಕ್‌: ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ವಿಶಾಲ ಬಾವಿ ಹುಡುಕಾಟ ನಡೆಸುತ್ತಿದ್ದ ಇಲ್ಲವೆ ಹೊಸದಾಗಿ ವಿಶಾಲವಾದ ಹೊಂಡ ನಿರ್ಮಿಸಲು ಯೋಜಿಸುತ್ತಿದ್ದ ಪಾಲಿಕೆ ಮತ್ತು ಗಣೇಶ ಮಹಾಮಂಡಳದವರಿಗೆ ಹೊಸೂರ ಸರಕಾರಿ ಶಾಲೆ ಬಳಿ ನಿರ್ಮಿಸಲಾಗಿದ್ದ ಹಳೆಯದಾದ ಹಾಳು ಬಿದ್ದಿದ್ದ ವಾಟರ್‌ ಟ್ಯಾಂಕ್‌ ವರವಾಗಿ ಪರಿಣಮಿಸಿತು. 

ಗಣೇಶ ಮೂರ್ತಿಗಳ ವಿಸರ್ಜನೆಗೆ ಆಯ್ಕೆ ಮಾಡಲಾದ ಟ್ಯಾಂಕ್‌ ವಿಶಾಲವಾಗಿದ್ದು, 100 ಅಡಿ ಅಗಲ, 100 ಅಡಿ ಉದ್ದ ಹಾಗೂ 16 ಅಡಿ ಆಳದ್ದಾಗಿದೆ. ಇದು ಎರಡು ಎಕರೆ ಜಾಗದಲ್ಲಿದ್ದು, ವಾಹನಗಳ ನಿಲುಗಡೆಗೆ ಹಾಗೂ ಸಾರ್ವಜನಿಕರಿಗೆ ನಿಲ್ಲಲ್ಲು ಸಾಕಷ್ಟು ಸ್ಥಳಾವಕಾಶವಿದೆ ಹಾಗೂ ಯಾವುದೇ ಗಡಿಬಿಡಿಯಿಲ್ಲದೆ ಮಹಾಮಂಡಳದವರು ಗಣೇಶ ಮೂರ್ತಿಗಳನ್ನು ನಿರಾಯಾಸವಾಗಿ ವಿಸರ್ಜನೆ ಮಾಡಬಹುದು. 

50 ಲಕ್ಷ ರೂ. ವೆಚ್ಚದಲ್ಲಿ ನವೀಕರಣ: ಗಣೇಶ ಮೂರ್ತಿಗಳ ವಿಸರ್ಜನೆ ಆಯ್ಕೆ ಮಾಡಲಾದ ವಿಶಾಲವಾದ ಟ್ಯಾಂಕ್‌ ಅನ್ನು ಪಾಲಿಕೆಯು ಅಂದಾಜು 50 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸುತ್ತಿದೆ. ಟ್ಯಾಂಕ್‌ ತಳಮಟ್ಟದಲ್ಲಿದ್ದು, ಸುರಕ್ಷತೆ ದೃಷ್ಟಿಯಿಂದ ಅದರ ಸುತ್ತಲೂ ಆವರಣ ಗೋಡೆ ನಿರ್ಮಾಣ, 

-ವಿಸರ್ಜನೆಗೂ ಮುನ್ನ ಗಣೇಶ ಮೂರ್ತಿಗಳನ್ನು ಇಟ್ಟು ಪೂಜೆ ಮಾಡಲು ವೇದಿಕೆ, ಸಾರ್ವಜನಿಕರು ಮೂರ್ತಿಗಳ ವಿಸರ್ಜನೆಯನ್ನು ಕುಳಿತುಕೊಂಡು ನೋಡಲು ಆಸನ ವ್ಯವಸ್ಥೆ, ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ಕ್ರೇನ್‌ ವ್ಯವಸ್ಥೆ, ವಾಹನಗಳು ಸುಗಮವಾಗಿ ಬರಲು ಮತ್ತು ಹೋಗಲು ಪ್ರತ್ಯೇಕ ರಸ್ತೆ ಹಾಗೂ ಫ್ಲಡ್‌ ವಿದ್ಯುತ್‌ ದೀಪಗಳ ವ್ಯವಸ್ಥೆ ಮಾಡಲಾಗುತ್ತಿದೆ.

* ಶಿವಶಂಕರ ಕಂಠಿ

ಟಾಪ್ ನ್ಯೂಸ್

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewqewqe

Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!

Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು

Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು

Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ

Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ

1-wqeqewqe

BJP vs Congress ; ಧಾರವಾಡದಲ್ಲಿ ಯಾರೇ ಗೆದ್ದರೂ ದಾಖಲೆ!

Hubli; ಪ್ರಧಾನಿ ಮೋದಿ ಪ್ರಧಾನ ಸುಳ್ಳುಗಾರ, ಸುಳ್ಳಿನ ಸರದಾರ: ಬಿ.ಕೆ.ಹರಿಪ್ರಸಾದ್

Hubli; ಪ್ರಧಾನಿ ಮೋದಿ ಪ್ರಧಾನ ಸುಳ್ಳುಗಾರ, ಸುಳ್ಳಿನ ಸರದಾರ: ಬಿ.ಕೆ.ಹರಿಪ್ರಸಾದ್

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.