ಟೈಪ್‌ 1 ಮಧುಮೇಹ 


Team Udayavani, Sep 24, 2017, 6:15 AM IST

TYPE-1-DIABETES7.jpg

ದೇಹದ ಸ್ವಂತ ರೋಗ ನಿರೋಧಕ ಶಕ್ತಿಯು ಮೇದೋಜೀರಕ ಗ್ರಂಥಿಗಳಲ್ಲಿ ಇರುವ ಇನ್ಸುಲಿನ್‌ ಉತ್ಪಾದಕ ಬೀಟಾ ಜೀವಕೋಶಗಳನ್ನು ನಾಶಪಡಿಸಿದಾಗ ಟೈಪ್‌ 1 ಮಧುಮೇಹ ಉಂಟಾಗುತ್ತದೆ. ಟೈಪ್‌ 1 ಮಧುಮೇಹವು ಸಾಮಾನ್ಯವಾಗಿ ಮಕ್ಕಳಲ್ಲಿ ಮತ್ತು ಹದಿಹರಯದವರಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು; ಹೀಗಾಗಿ ಹಿಂದೆ ಇದನ್ನು ಬಾಲ ಮಧುಮೇಹ (ಜ್ಯುವೆನೈಲ್‌ ಆನ್‌ಸೆಟ್‌ ಡಯಾಬಿಟೀಸ್‌ ಮೆಲಿಟಸ್‌) ಎಂದು ಕರೆಯಲಾಗುತ್ತಿತ್ತು. ಟೈಪ್‌ 1 ಮಧುಮೇಹ ರೋಗಿಗಳ ಚಿಕಿತ್ಸೆಗೆ ಇನ್ಸುಲಿನ್‌ ಮಾತ್ರ ಅಗತ್ಯವಾದುದರಿಂದ (ಬಾಯಿಯ ಮೂಲಕ ತೆಗೆದುಕೊಳ್ಳುವ ಮಧುಮೇಹ ನಿರೋಧಕ ಔಷಧಿಗಳು ನಿರರ್ಥಕ) ಇದನ್ನು ಇನ್ಸುಲಿನ್‌ ಅವಲಂಬಿ ಡಯಾಬಿಟೀಸ್‌ ಮೆಲಿಟಸ್‌ (ಐಡಿಡಿಎಂ) ಎಂದು ಕೂಡ ಕರೆಯಲಾಗುತ್ತಿತ್ತು. 

ಟೈಪ್‌ 1 ಮಧುಮೇಹ 
ಉಂಟಾಗಲು ಕಾರಣಗಳೇನು?

ವ್ಯಕ್ತಿಯ ದೇಹದಲ್ಲಿರುವ ರೋಗ ನಿರೋಧಕ ವ್ಯವಸ್ಥೆಯು ದುರದೃಷ್ಟವಶಾತ್‌ ಮೇದೋಜೀರಕ ಗ್ರಂಥಿಗಳಲ್ಲಿ ಇರುವ ಇನ್ಸುಲಿನ್‌ ಉತ್ಪಾದಕ ಬೀಟಾ ಜೀವಕೋಶಗಳನ್ನು ನಾಶಪಡಿಸಿದಾಗ ಟೈಪ್‌ 1 ಮಧುಮೇಹ ಉಂಟಾಗುತ್ತದೆ. ಈ ಕಾಯಿಲೆಯನ್ನು ಮನುಷ್ಯ ಜನಾಂಗ ಹಲವಾರು ಶತಮಾನಗಳಿಂದಲೇ ತಿಳಿದಿದ್ದರೂ ಇನ್ಸುಲಿನ್‌ ಉತ್ಪಾದಕ ಬೀಟಾ ಜೀವಕೋಶಗಳ ನಾಶಕ್ಕೆ ಏನು ಕಾರಣ ಎನ್ನುವುದು ನಿಗೂಢವಾಗಿಯೇ ಇತ್ತು. ವಂಶವಾಹಿ, ಪಾರಿಸರಿಕ ಅಂಶಗಳು ಟೈಪ್‌ 1 ಮಧುಮೇಹ ಉಂಟುಮಾಡುವ ಪ್ರಕ್ರಿಯೆಗಳಿಗೆ ಕಾರಣವಾಗುತ್ತವೆ ಎಂದು ಭಾವಿಸಲಾಗಿದೆ. 

ಪ್ರೌಢ ವಯೋಮಾನದವರಲ್ಲಿ 
ಸಾಮಾನ್ಯವಾಗಿರುವ ಟೈಪ್‌ 
2 ಮಧುಮೇಹಕ್ಕಿಂತ ಟೈಪ್‌ 1 
ಮಧುಮೇಹ ಹೇಗೆ ಭಿನ್ನ?

ಟೈಪ್‌ 1 ಮಧುಮೇಹ ಹೊಂದಿರುವ ರೋಗಿಗಳಲ್ಲಿ ರೋಗಪತ್ತೆಯ ಸಮಯಕ್ಕೆ ಶೇ.90ರಷ್ಟು ಇನ್ಸುಲಿನ್‌ ಉತ್ಪಾದಕ ಬೀಟಾ ಜೀವಕೋಶಗಳು ನಾಶ ಹೊಂದಿರುತ್ತವೆ. ಇದಕ್ಕೆ ಹೋಲಿಸಿದರೆ, ಟೈಪ್‌ 2 ಮಧುಮೇಹಕ್ಕೆ ತುತ್ತಾಗಿರುವವರಲ್ಲಿ ಶೇ.50ರಷ್ಟು ಇನ್ಸುಲಿನ್‌ ಉತ್ಪಾದಕ ಬೀಟಾ ಜೀವಕೋಶಗಳು ನಾಶವಾಗಿರುತ್ತವೆ; ಹೀಗಾಗಿ ದೇಹದಲ್ಲಿ ಇನ್ಸುಲಿನ್‌ ಉತ್ಪಾದಿಸುವ ಸಾಮರ್ಥ್ಯ ಇರುತ್ತದೆ. ಆದ್ದರಿಂದ ಟೈಪ್‌ 1 ಮಧುಮೇಹ ಹೊಂದಿರುವ ರೋಗಿಗಳು 
ಇನ್ಸುಲಿನ್‌ಗೆ ಮಾತ್ರ ಪ್ರತಿಸ್ಪಂದಿಸುತ್ತಾರಲ್ಲದೆ ಟೈಪ್‌ 2 ಮಧುಮೇಹಿಗಳಿಗೆ ಉಪಯೋಗಿಸಬಹುದಾದ ಬಾಯಿಯ ಮೂಲಕ ತೆಗೆದುಕೊಳ್ಳುವ ಯಾವುದೇ ಮಧುಮೇಹ ನಿರೋಧ ಔಷಧಿಗೆ ಪ್ರತಿಸ್ಪಂದಿಸುವುದಿಲ್ಲ.

ಟೈಪ್‌ 1 ಮಧುಮೇಹ ಎಷ್ಟು  ಸಾಮಾನ್ಯ?
ಟೈಪ್‌ 2 ಮಧುಮೇಹಕ್ಕೆ ಹೋಲಿಸಿದರೆ, ಟೈಪ್‌ 1 ಮಧುಮೇಹ ಅಪರೂಪದ್ದು ಮತ್ತು ಜನಸಂಖ್ಯೆಯಲ್ಲಿ ಶೇ.5ರಷ್ಟು ಮಾತ್ರವೇ ಕಾಣಸಿಗುತ್ತದೆ. ಅದು ಪುರುಷರು ಮತ್ತು ಸ್ತ್ರೀಯರನ್ನು ಸಮಾನವಾಗಿ ಬಾಧಿಸುತ್ತದೆ. ಸಾಮಾನ್ಯವಾಗಿ ಇದು 20 ವರ್ಷಕ್ಕಿಂತ ಕಡಿಮೆ ವಯೋಮಾನದಲ್ಲಿ ಆರಂಭವಾಗುತ್ತದಾದರೂ ಯಾವುದೇ ವಯಸ್ಸಿನಲ್ಲಿಯೂ ತಲೆದೋರಬಹುದು. 

ಟೈಪ್‌ 1 ಮಧುಮೇಹದ ಎದ್ದುತೋರುವ 
ಸಾಮಾನ್ಯ ಲಕ್ಷಣಗಳೇನು?

– ಸಾಮಾನ್ಯ ರಕ್ತಪರೀಕ್ಷೆಗಳು ಅಥವಾ ಜ್ವರದಂತಹ ಇತರ ಯಾವುದೇ ಅನಾರೋಗ್ಯಗಳ ತಪಾಸಣೆಯ ಸಂದರ್ಭದಲ್ಲಿ ಪತ್ತೆಯಾಗುವ ಟೈಪ್‌ 2 ಮಧುಮೇಹದಂತೆ ಟೈಪ್‌ 1 ಮಧುಮೇಹ ಪತ್ತೆಯಾಗುವುದಿಲ್ಲ. ಟೈಪ್‌ 1 ಮಧುಮೇಹಿಗಳು ಹೈಪರ್‌ ಗ್ಲೆ„ಸೆಮಿಕ್‌ನ ಸಿದ್ಧ ಚಿಹ್ನೆಗಳಾದ ಪಾಲಿಯೂರಿಯಾ, ಪಾಲಿಡಿಪ್ಸಿಯಾ, ಪಾಲಿಫೇಜಿಯಾ (ಅತಿಯಾದ ಮೂತ್ರಶಂಕೆ, ಅತಿಯಾದ ಬಾಯಾರಿಕೆ ಮತ್ತು ತೀವ್ರ ಹಸಿವು) ಗಳನ್ನು ಹೊಂದಿರುತ್ತಾರೆ ಮತ್ತು ತೀವ್ರ ತೂಕ ನಷ್ಟವನ್ನು ಅನುಭವಿಸಿರುತ್ತಾರೆ. ಟೈಪ್‌ 1 ಮಧುಮೇಹ ರೋಗಿಗಳಲ್ಲಿ ಇದು ತೀವ್ರ ಇನ್ಸುಲಿನ್‌ ಕೊರತೆಯಿಂದಾಗಿ ರಕ್ತದಲ್ಲಿ ಸಕ್ಕರೆಯ ಅಂಶ ಅತಿಯಾದ ಮಟ್ಟಕ್ಕೇರುವುದರಿಂದ ಉಂಟಾಗುತ್ತದೆ. 
–  ರಕ್ತದಲ್ಲಿಯ ಹೆಚ್ಚುವರಿ ಸಕ್ಕರೆಯ ಅಂಶವು ಮೂತ್ರಕ್ಕೆ ವಿಸರ್ಜನೆಯಾಗಿ (ಗ್ಲೆ„ಕೊಸೂರಿಯಾ) ಹೆಚ್ಚು ಪ್ರಮಾಣದಲ್ಲಿ ಮೂತ್ರ ವಿಸರ್ಜನೆ (ಪಾಲಿಯೂರಿಯಾ) ಮತ್ತು ತೀವ್ರ ಬಾಯಾರಿಕೆ (ಪಾಲಿಡಿಪ್ಸಿಯಾ)ಗಳಿಗೆ ಕಾರಣವಾಗುತ್ತದೆ. 
– ಇದರ ಜತೆಗೆ, ಇನ್ಸುಲಿನ್‌ ಕೊರತೆಯಿಂದಾಗಿ ದೈಹಿಕ ಕೊಬ್ಬು ಮತ್ತು ಪ್ರೊಟೀನುಗಳು ಶಕ್ತಿಯ ಮೂಲಕ್ಕೆ ಪರ್ಯಾಯವಾಗಿ ಉಪಯೋಗಿಸಲ್ಪಡುತ್ತವೆ. ಹೀಗಾಗಿ ಕಾರಣವಿಲ್ಲದ ತೀವ್ರ ತೂಕನಷ್ಟ ಹಾಗೂ ದಣಿವಿನ ಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ಮೊದಲಾಗಿ ಅನಿಯಂತ್ರಿತ ಮಧುಮೇಹಕ್ಕಾಗಿಯೇ ತಪಾಸಿಸಬೇಕು.
–  ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ, ಟೈಪ್‌ 1 ಮಧುಮೇಹ ರೋಗಿಗಳು ತೀವ್ರ ಹೊಟ್ಟೆನೋವಿನ ಕಾರಣಕ್ಕಾಗಿ ವೈದ್ಯರನ್ನು ಸಂದರ್ಶಿಸಬಹುದು. ಇದನ್ನು “ಡಯಾಬಿಟಿಕ್‌ ಕೆಟೊ ಆ್ಯಸಿಡೋಸಿಸ್‌’ ಎನ್ನಲಾಗುತ್ತದೆ, ಇದು ರಕ್ತದಲ್ಲಿ ಅತಿಯಾದ ಸಕ್ಕರೆಯ ಅಂಶ ಮತ್ತು ಕೆಟೋನ್‌ ಬಾಡೀಸ್‌ ಎಂದು ಕರೆಯಲ್ಪಡುವ ಆಮ್ಲಿàಯ ಅಂಶ ರಕ್ತದಲ್ಲಿ ಶೇಖರಗೊಂಡಿರುವ ಲಕ್ಷಣಗಳನ್ನು ಹೊಂದಿರುತ್ತದೆ. ತತ್‌ಕ್ಷಣ ಗುರುತಿಸಿ, ಸಮರ್ಪಕ ಚಿಕಿತ್ಸೆ ಒದಗಿಸದಿದ್ದರೆ ಈ ಸ್ಥಿತಿ ಮಾರಣಾಂತಿಕವಾಗಬಹುದಾಗಿದೆ.

ಟೈಪ್‌ 1 ಮಧುಮೇಹದ ಮೂಲಕ 
ಒದಗಬಹುದಾದ ದೀರ್ಘ‌ಕಾಲಿಕ ಸಂಕೀರ್ಣ 
ಸಮಸ್ಯೆಗಳೇನು?

ಟೈಪ್‌ 1 ಮಧುಮೇಹದಿಂದಾಗಿ ಒದಗಬಹುದಾದ ದೀರ್ಘ‌ಕಾಲಿಕ ಸಮಸ್ಯೆಗಳು ಟೈಪ್‌ 2 ಮಧುಮೇಹದ ದೀರ್ಘ‌ಕಾಲಿಕ ಸಂಕೀರ್ಣ ಸಮಸ್ಯೆಗಳಿಗೆ ಸಮನಾಗಿವೆ ಮತ್ತು ಇವು ರಕ್ತದಲ್ಲಿನ ಅನಿಯಂತ್ರಿತ ಸಕ್ಕರೆಯ ಅಂಶದಿಂದಾಗಿ ಉಂಟಾಗುತ್ತವೆ. ಇವು ದೇಹದ ಸೂಕ್ಷ್ಮ ರಕ್ತನಾಳಗಳನ್ನು ಬಾಧಿಸುವ ಮೂರು “”ಮೈಕ್ರೊವಾಸ್ಕಾಲಾರ್‌” ಮತ್ತು ದೊಡ್ಡ ರಕ್ತನಾಳಗಳನ್ನು ಬಾಧಿಸುವ ಮೂರು “”ಮಾಕ್ರೊವಾಸ್ಕಾಲಾರ್‌” ಸಂಕೀರ್ಣ ಸಮಸ್ಯೆಗಳಾಗಿರುತ್ತವೆ.  ಅನಿಯಂತ್ರಿತ ಮಧುಮೇಹದಿಂದ ಉಂಟಾಗುವ ಮೂರು ಮೈಕ್ರೊವಾಸ್ಕಾಲಾರ್‌ ಸಮಸ್ಯೆಗಳು ಕಣ್ಣುಗಳಲ್ಲಿ, ಮೂತ್ರಪಿಂಡಗಳಲ್ಲಿ ಮತ್ತು ನರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಡಯಾಬಿಟಿಕ್‌ ರೆಟಿನೋಪತಿ, ನೆಫೊÅàಪತಿ ಮತ್ತು ನ್ಯೂರೋಪತಿ ಎಂದು ಕರೆಯಿಸಿಕೊಳ್ಳುತ್ತವೆ. ಹೀಗೆಯೇ ದೊಡ್ಡ ರಕ್ತನಾಳಗಳನ್ನು ಬಾಧಿಸುವ ಮೂರು ಸಂಕೀರ್ಣ ಸಮಸ್ಯೆಗಳು ಮಿದುಳು, ಹೃದಯ ಮತ್ತು ಕಾಲುಗಳಲ್ಲಿ ಉಂಟಾಗುತ್ತಿದ್ದು, ಲಕ್ವಾ, ಕೊರೊನರಿ ಆರ್ಟರಿ ಕಾಯಿಲೆಗಳು ಮತ್ತು ಪೆರಿಫ‌ರಲ್‌ ವಾಸ್ಕಾಲಾರ್‌ ಕಾಯಿಲೆಗಳಿಗೆ ಕಾರಣವಾಗುತ್ತವೆ. 

ಬಾಯಿಯ ಮೂಲಕ ತೆಗೆದುಕೊಳ್ಳುವ ಮಧುಮೇಹ 
ನಿರೋಧಕ ಔಷಧಗಳ ಮೂಲಕ ಟೈಪ್‌ 1 
ಮಧುಮೇಹಕ್ಕೆ ಚಿಕಿತ್ಸೆ ನೀಡಬಹುದೇ ಅಥವಾ 
ಪರ್ಯಾಯ ಔಷಧ ವ್ಯವಸ್ಥೆ ಅಗತ್ಯವೇ?

ಟೈಪ್‌ 1 ಮಧುಮೇಹಕ್ಕೆ ಇನ್ಸುಲಿನ್‌ ಇಂಜೆಕ್ಷನ್‌ಗಳ ಮೂಲಕ ಮಾತ್ರ ಚಿಕಿತ್ಸೆ ಸಾಧ್ಯ. ದುರದೃಷ್ಟವಶಾತ್‌, ಟೈಪ್‌ 1 ಮಧುಮೇಹ ಚಿಕಿತ್ಸೆಯಲ್ಲಿ ಬಾಯಿಯ ಮೂಲಕ ತೆಗೆದುಕೊಳ್ಳಬಹುದಾದ ಯಾವುದೇ ಔಷಧಗಳು ಅಥವಾ ಪರ್ಯಾಯ ರೂಪದ ಔಷಧಗಳು ಪರಿಣಾಮಕಾರಿಯಲ್ಲ. 

ಟೈಪ್‌ 1 ಮಧುಮೇಹ 
ಹೊಂದಿರುವವರು ಎಷ್ಟು 
ಕಾಲದ ವರೆಗೆ ಇನ್ಸುಲಿನ್‌ 
ಇಂಜೆಕ್ಷನ್‌ ತೆಗೆದುಕೊಳ್ಳಬೇಕು?

ಟೈಪ್‌ 1 ಮಧುಮೇಹ ರೋಗಿಗಳಿಗೆ ಒಮ್ಮೆ ಆರಂಭಿಸಿದರೆ ಇನ್ಸುಲಿನ್‌ ಇಂಜೆಕ್ಷನ್‌ ಚಿಕಿತ್ಸೆಯು ಆಜೀವ ಪರ್ಯಂತ ಮುಂದುವರಿಯುತ್ತದೆ. ಆದರೆ, ಇನ್ಸುಲಿನ್‌ ಚಿಕಿತ್ಸೆಯ ಸಕಾರಾತ್ಮಕ ಆಯಾಮದಿಂದ ನೋಡುವುದಾದರೆ, ಇನ್ಸುಲಿನ್‌ ಆವಿಷ್ಕಾರಕ್ಕೆ ಮುನ್ನ ಎಲ್ಲ ಟೈಪ್‌ 1 ಮಧುಮೇಹಿಗಳು ಬೇಗನೆ ಸತ್ತುಹೋಗಬಹುದು ಎಂದು ಭಾವಿಸಲಾಗುತ್ತಿತ್ತು. ಆದರೆ ಹಾಗಾಗಿಲ್ಲ. ನಿಯಮಿತ ವ್ಯಾಯಾಮ ಇತ್ಯಾದಿಯಾಗಿ ಶಿಸ್ತುಬದ್ಧ ಆರೋಗ್ಯಕರ ಜೀವನವಿಧಾನವನ್ನು ರೂಢಿಸಿಕೊಳ್ಳುವ ಮೂಲಕ ರಕ್ತದಲ್ಲಿಯ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿ ಇರಿಸಿಕೊಂಡರೆ ಇತರ ಆರೋಗ್ಯವಂತರಂತೆಯೇ ಟೈಪ್‌ 1 ಮಧುಮೇಹಿಗಳು ಕೂಡ ಯಾವುದೇ ಸಂಕೀರ್ಣ ಸಮಸ್ಯೆಗಳಿಲ್ಲದೆ ಆರೋಗ್ಯಕರ ಜೀವನವನ್ನು ನಡೆಸಬಹುದಾಗಿದೆ. 

ಟೈಪ್‌ 1 ಮಧುಮೇಹಿಗಳಿಗೆ 
ರಕ್ತದಲ್ಲಿಯ ಸಕ್ಕರೆಯ 
ಅಂಶವನ್ನು ನಿಯಂತ್ರಣದಲ್ಲಿ 
ಇರಿಸಿಕೊಳ್ಳಲು ಎಷ್ಟು ಡೋಸ್‌ 
ಇನ್ಸುಲಿನ್‌ ಅಗತ್ಯ? 

ಟೈಪ್‌ 1 ಮಧುಮೇಹಿಗಳಿಗೆ ರಕ್ತದಲ್ಲಿಯ ಸಕ್ಕರೆಯ ಅಂಶವನ್ನು ಪ್ರಶಸ್ತವಾಗಿ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ನಾಲ್ಕು ಡೋಸ್‌ ಇನ್ಸುಲಿನ್‌ ಅಗತ್ಯವಾಗಿದೆ. ಇದು, ಫಾಸ್ಟಿಂಗ್‌ ಬ್ಲಿಡ್‌ ಶುಗರ್‌ ನಿಯಂತ್ರಣವನ್ನು ಗುರಿಯಾಗಿ ಇರಿಸಿಕೊಂಡು ತೆಗೆದುಕೊಳ್ಳುವ “”ಬೇಸಲ್‌ ಇನ್ಸುಲಿನ್‌” ಅಂದರೆ ಮಲಗುವ ಹೊತ್ತಿಗೆ ತೆಗೆದುಕೊಳ್ಳುವ ಇನ್ಸುಲಿನ್‌ ಇಂಜೆಕ್ಷನ್‌ ಹಾಗೂ ಪ್ರತೀ ಊಟದ ಬಳಿಕ ಪೋಸ್ಟ್‌ ಪ್ರಾಂಡಿಯಲ್‌ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಗುರಿ ಇರಿಸಿಕೊಂಡು ತೆಗೆದುಕೊಳ್ಳುವ ಮೂರು ಡೋಸ್‌ “”ಬೋಲಸ್‌” ಇನ್ಸುಲಿನ್‌ ಇಂಜೆಕ್ಷನ್‌ಗಳನ್ನು ಒಳಗೊಂಡಿದೆ. ಆದರೆ, ಮಕ್ಕಳು ಹೀಗೆ ನಾಲ್ಕು ಇನ್ಸುಲಿನ್‌ ಇಂಜೆಕ್ಷನ್‌ ಡೋಸ್‌ಗಳನ್ನು ತೆಗೆದುಕೊಳ್ಳುವುದು ಕಷ್ಟಸಾಧ್ಯವಾದ ಕಾರಣ ಟೈಪ್‌ 1 ಮಧುಮೇಹಿ ಮಕ್ಕಳಲ್ಲಿ ಬಹುತೇಕರನ್ನು ಮೂರು ಇನ್ಸುಲಿನ್‌ ಇಂಜೆಕ್ಷನ್‌ ಡೋಸ್‌ಗಳಿಂದ ನಿಭಾಯಿಸಬಹುದಾಗಿದೆ. ಟೈಪ್‌ 2 ಮಧುಮೇಹಿ ವಯಸ್ಕರಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ಕೇವಲ ಎರಡು ಡೋಸ್‌ ಇನ್ಸುಲಿನ್‌ ಇಂಜೆಕ್ಷನ್‌, ಟೈಪ್‌ 1 ಮಧುಮೇಹಿಗಳಲ್ಲಿ ಪರಿಣಾಮಕಾರಿಯಲ್ಲ. ಇದಕ್ಕೆ ಹೆಚ್ಚು ಬಾರಿಯ ಇನ್ಸುಲಿನ್‌ ಡೋಸೇಜ್‌ ಬಯಸುವ ಈ ಅನಾರೋಗ್ಯದ ಸೂಕ್ಷ್ಮ ಗುಣ ಕಾರಣವಾಗಿದೆ. 

ಇನ್ಸುಲಿನ್‌ ಇಂಜೆಕ್ಷನ್‌ಗಳು ನೋವುಂಟು 
ಮಾಡುತ್ತವೆಯೇ?

ಈ ದಿನಗಳಲ್ಲಿ ಬಳಕೆಯಲ್ಲಿರುವ ಇನ್ಸುಲಿನ್‌ ಇಂಜೆಕ್ಷನ್‌ ಸೂಜಿಗಳು ಬಳಸಿ ಎಸೆಯುವಂಥವಾಗಿದ್ದು, ಅತ್ಯಂತ ತೆಳು ಹಾಗೂ ಉತ್ಕೃಷ್ಟವಾಗಿವೆ. ಹೀಗಾಗಿ ಇನ್ಸುಲಿನ್‌ ಚುಚ್ಚುವಾಗ ಅವು ಬಹಳ ಅಲ್ಪ ಪ್ರಮಾಣದ ನೋವುಂಟು ಮಾಡುತ್ತವೆ. ಒಂದು ಕೂದಲಿನೆಳೆಯಷ್ಟು ಸೂಕ್ಷ್ಮವಾದ ಮತ್ತು ಕಿರಿದಾದ ಸೂಜಿಯನ್ನು ಹೊಂದಿರುವ ಪೆನ್‌ ಉಪಕರಣವನ್ನು ಉಪಯೋಗಿಸಿ ಇನ್ಸುಲಿನ್‌ ನೀಡಿದರೆ ನೋವು ಇನ್ನಷ್ಟು ನಗಣ್ಯ ಪ್ರಮಾಣದಲ್ಲಿರುತ್ತದೆ. 

ಇನ್ಸುಲಿನ್‌ 
ಇಂಜೆಕ್ಷನ್‌ ನೀಡುವ 
ದೇಹಭಾಗಗಳಾವುವು?

ಇನ್ಸುಲಿನ್‌ ಇಂಜೆಕ್ಷನ್‌ ಚುಚ್ಚುವ ವಿವಿಧ ದೇಹಭಾಗಗಳೆಂದರೆ, ತೋಳುಗಳು, ತೊಡೆಗಳು, ಪೃಷ್ಠ ಮತ್ತು ಹೊಟ್ಟೆ. ಅವುಗಳನ್ನು ಕೆಳಕಂಡ ಚಿತ್ರದಲ್ಲಿ ಕಾಣಿಸಲಾಗಿದೆ. ಹೊಟ್ಟೆಯಲ್ಲಿ, ಹೊಕ್ಕುಳಿನಿಂದ ಎರಡು ಇಂಚು ಅಂತರ ಇರಿಸಿಕೊಂಡು ಇನ್ಸುಲಿನ್‌ ಇಂಜೆಕ್ಷನ್‌ ಚುಚ್ಚಬೇಕಾಗುತ್ತದೆ. ಸ್ವಯಂ ಇನ್ಸುಲಿನ್‌ ಇಂಜೆಕ್ಷನ್‌ ಚುಚ್ಚಿಕೊಳ್ಳಲು ಹೊಟ್ಟೆ ಅತ್ಯಂತ ಅನುಕೂಲವಾದ ಭಾಗವಾಗಿದ್ದು, ಹೊಟ್ಟೆ ಕೊಬ್ಬಿನಿಂದ ಕೂಡಿರುವುದಲ್ಲದೆ ಮೃದುವಾಗಿಯೂ ಇರುವುದರಿಂದ ಇಲ್ಲಿ ಚುಚ್ಚಿದರೆ ನೋವು ಅತ್ಯಂತ ಅಲ್ಪವಾಗಿರುತ್ತದೆ (ಚಿತ್ರದಲ್ಲಿ ಕಾಣಿಸಿದಂತೆ).

ಇನ್ಸುಲಿನ್‌ ಚುಚ್ಚುವ 
ಭಾಗಗಳನ್ನು ಆಗಾಗ 
ಬದಲಾಯಿಸುತ್ತಿರಬೇಕೇ?

ರೋಗಿಗಳು ಇನ್ಸುಲಿನ್‌ ಇಂಜೆಕ್ಷನ್‌ ಚುಚ್ಚುವ ಜಾಗವನ್ನು ಬದಲಾಯಿಸುತ್ತಿರಬೇಕು ಹಾಗೂ ಒಂದೇ ಜಾಗದಲ್ಲಿ ಚುಚ್ಚುತ್ತಿರಬಾರದು. ಉದಾಹರಣೆಗೆ; ಹೊಟ್ಟೆಯಲ್ಲಿ – ಹೊಕ್ಕುಳಿನ ಸುತ್ತ ಒಂದು ವೃತ್ತಾಕಾರವಾಗಿ ಜಾಗವನ್ನು ಬದಲಾಯಿಸುತ್ತ ಇನ್ಸುಲಿನ್‌ ಚುಚ್ಚಬೇಕು. ಅದಾದ ಬಳಿಕ ತೊಡೆಯ ಮೇಲು ಹೊರಭಾಗ, ತೋಳುಗಳ ಮೇಲು ಹೊರಭಾಗ – ಹೀಗೆ ಜಾಗವನ್ನು ಬದಲಾಯಿಸಿ ಚುಚ್ಚಬೇಕು. 

ಟೈಪ್‌ 1 ಮಧುಮೇಹವು ಮಕ್ಕಳ ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆಯೇ? ಅಧ್ಯಯನ ಮತ್ತು ಕ್ರೀಡಾಚಟುವಟಿಕೆಗಳಲ್ಲಿ ಅವರು ಇತರ ಆರೋಗ್ಯವಂತ ಮಕ್ಕಳಂತೆಯೇ ನಿರ್ವಹಣೆ ತೋರಬಹುದೇ?
ನಿಯಂತ್ರಣಕ್ಕೊಳಪಡದೇ ಇದ್ದರೆ ಟೈಪ್‌ 1 ಮಧುಮೇಹ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಕುಂಠಿತ ಬೆಳವಣಿಗೆಗೆ ಕಾರಣವಾಗಬಹುದು. ಆದರೆ, ಇನ್ಸುಲಿನ್‌ ಇಂಜೆಕ್ಷನ್‌ಗಳನ್ನು ನಿಯಮಿತವಾಗಿ ನೀಡುವ ಮೂಲಕ ಸಕ್ಕರೆಯ ಅಂಶವನ್ನು ಚೆನ್ನಾಗಿ ನಿಯಂತ್ರಣದಲ್ಲಿ ಇರಿಸಿಕೊಂಡರೆ ಟೈಪ್‌ 1 ಮಧುಮೇಹಿ ಮಕ್ಕಳು ಕೂಡ ಎಲ್ಲ ಮಕ್ಕಳಂತೆ ಅಧ್ಯಯನ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮ ನಿರ್ವಹಣೆಯನ್ನು ಪ್ರದರ್ಶಿಸಬಹುದಾಗಿದೆ. 

ಟೈಪ್‌ 1 ಮಧುಮೇಹಿ 
ಮಕ್ಕಳು ಎದುರಿಸುವ 
ಮನೋ – ಸಾಮಾಜಿಕ 
ಸಮಸ್ಯೆಗಳೇನು?

ಟೈಪ್‌ 1 ಮಧುಮೇಹದ ಜತೆಗೆ ಬದುಕು ಸಾಗಿಸುವುದು ಸಾಕಷ್ಟು ಕಠಿನವಾಗಿದೆ ಮತ್ತು ಮಗುವಿನ ಕುಟುಂಬ ಸದಸ್ಯರು, ಶಾಲೆಯಲ್ಲಿ ಗೆಳೆಯ – ಗೆಳತಿಯರು ಮತ್ತು ಶಿಕ್ಷಕ ವೃಂದದವರಿಂದ ಸಹಕಾರ ಹಾಗೂ ಬೆಂಬಲವನ್ನು ಅಪೇಕ್ಷಿಸುತ್ತದೆ. ಇಲ್ಲವಾದರೆ ಟೈಪ್‌ 1 ಮಧುಮೇಹವುಳ್ಳ ಮಗು ಖನ್ನತೆ, ಉದ್ವಿಗ್ನತೆ, ಮಾನಸಿಕ ಏಕಾಕಿತನ, ಒತ್ತಡ, ಆಹಾರಾಭ್ಯಾಸ ಸಮಸ್ಯೆಗಳು ಮತ್ತು ಮಾದಕದ್ರವ್ಯ ವ್ಯಸನಕ್ಕೆ ತುತ್ತಾಗುವ ಅಪಾಯವಿದೆ. ಟೈಪ್‌ 1 ಮಧುಮೇಹಿ ಮಗುವಿನ ಗೆಳೆಯ – ಗೆಳತಿಯರು ಮತ್ತು ಶಿಕ್ಷಕರು ಮಗುವಿನ ಅನಾರೋಗ್ಯದ ಕುರಿತು ತಿಳಿದಿರಬೇಕು, ಇದರಿಂದ ಅವರ ಬಗ್ಗೆ ವಿಶೇಷ ಕಾಳಜಿ ಮತ್ತು ಗಮನ ನೀಡುವುದು ಸಾಧ್ಯವಾಗುತ್ತದೆ. 

ಆಟವಾಡುವುದು ಅಥವಾ ಯಾವುದೇ
ದೈಹಿಕ  ಚಟುವಟಿಕೆಗೆ ಮುನ್ನ ಟೈಪ್‌ 
1 ಮಧುಮೇಹ ರೋಗಿಗಳು 
ಯಾವ ಬಗೆಯ ಮುನ್ನೆಚ್ಚರಿಕೆ 
ತೆಗೆದುಕೊಳ್ಳಬೇಕು?

ಟೈಪ್‌ 1 ಮಧುಮೇಹಿಗಳು ಯಾವುದೇ ಬಗೆಯ ಕ್ರೀಡೆ ಅಥವಾ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದಕ್ಕೆ ಮುನ್ನ ಹೈಪೊಗ್ಲೆ„ಸೇಮಿಯಾವನ್ನು ತಡೆಯಲು ಲಘು ಉಪಾಹಾರವನ್ನು ಸೇವಿಸಬೇಕು. ಆಟವಾಡುವುದಕ್ಕೆ ಮುನ್ನ ಇನ್ಸುಲಿನ್‌ ತೆಗೆದುಕೊಂಡಿದ್ದರೆ, ಆಟ – ದೈಹಿಕ ಚಟುವಟಿಕೆಯ ಸಂದರ್ಭದಲ್ಲಿ  ರಕ್ತದ ಸಕ್ಕರೆಯ ಅಂಶವು ಸ್ನಾಯುಗಳಲ್ಲಿ ಬಳಕೆಯಾಗುವುದರಿಂದಾಗಿ ರಕ್ತದಲ್ಲಿನ ಸಕ್ಕರೆಯ ಅಂಶ ಕುಸಿಯುವ ಬಗ್ಗೆ ಎಚ್ಚರಿಕೆ ವಹಿಸಬೇಕು. ವ್ಯಾಯಾಮ – ಆಟದ ಸಂದರ್ಭದಲ್ಲಿ ಕಾಲುಗಳ ಉಪಯೋಗ ಹೆಚ್ಚು ಇರುವುದರಿಂದ ಅಲ್ಲಿ ಇನ್ಸುಲಿನ್‌ ಇಂಜೆಕ್ಷನ್‌ ಚುಚ್ಚಿದರೆ ಅದು ಬೇಗನೆ ಹೀರಿಕೆಯಾಗಿ ಹೈಪೊಗ್ಲೆ„ಸೇಮಿಯಾ ಉಂಟಾಗುವ ಸಂಭವ ಇರುವುದರಿಂದ ಕಾಲುಗಳಿಗೆ ಇನ್ಸುಲಿನ್‌ ಇಂಜೆಕ್ಷನ್‌ ಚುಚ್ಚುವುದು ಯೋಗ್ಯವಲ್ಲ.

ಟೈಪ್‌ 1 ಮಧುಮೇಹಿಗಳು ಯಾವಾಗಲೂ ತಮ್ಮ ಹೆಸರು, ಅನಾರೋಗ್ಯ ಮತ್ತು ತುರ್ತು ಸಂಪರ್ಕ ದೂರವಾಣಿ ಸಂಖ್ಯೆ ಹೊಂದಿರುವ ಬ್ರೇಸ್‌ಲೆಟ್‌ ಅಥವಾ ಕಾರ್ಡ್‌ ಹೊಂದಿರಬೇಕು. ಆಟವಾಡುವುದಕ್ಕೆ ಮುನ್ನ ಗೆಳೆಯರಿಗೆ ತನ್ನ ಅನಾರೋಗ್ಯದ ಕುರಿತು ಮಾಹಿತಿ ನೀಡುವುದು ಉತ್ತಮ; ಯಾಕೆಂದರೆ ತೀವ್ರ ಹೈಪೊಗ್ಲೆ„ಸೇಮಿಯಾ ಉಂಟಾದ ಸಂದರ್ಭದಲ್ಲಿ ಅವರು ನೆರವಾಗಬಹುದು. 

ಟೈಪ್‌ 1 ಮಧುಮೇಹಿಗಳು 
ದೀರ್ಘ‌ಕಾಲ ಉಪವಾಸ 
ಇರಬಹುದೇ?

ಇಲ್ಲ, ಟೈಪ್‌ 1 ಮಧುಮೇಹಿಗಳು ದೀರ್ಘ‌ಕಾಲ ಉಪವಾಸ ಇರಕೂಡದು. ಉಪವಾಸವಿದ್ದರೆ ಹೈಪೊಗ್ಲೆ„ಸೇಮಿಯಾ ಉಂಟಾಗುವ ಸಾಧ್ಯತೆಯಿದೆ. ಅವರು ಪ್ರತೀ ಎರಡೂವರೆಯಿಂದ ಮೂರು ತಾಸುಗಳ ಅಂತರದಲ್ಲಿ ಅಲ್ಪಪ್ರಮಾಣದ ಉಪಾಹಾರಗಳನ್ನು ಸೇವಿಸುತ್ತಿರಬೇಕು. 

(ಮುಂದುವರಿಯುತ್ತದೆ)

– ಡಾ| ಕಾರ್ತಿಕ್‌ ಎನ್‌. ರಾವ್‌,   
ಎಂಡಿ, ಡಿಎನ್‌ಬಿ (ಜನರಲ್‌ ಮೆಡಿಸಿನ್‌)
ಫೆಲೊಶಿಪ್‌ ಇನ್‌ ಡಯಾಬಿಟೀಸ್‌, 
ಡಾ| ಟಿ. ಎಂ.ಎ.ಪೈ ರೋಟರಿ ಆಸ್ಪತ್ರೆ, ಕಾರ್ಕಳ.

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.