ಮಂಗಳೂರು ಫ್ಲವರ್‌ ಸಿಟಿಯಾಗಿಸಲು ಸಸಿ ನಾಟಿ

Team Udayavani, Oct 2, 2017, 12:01 PM IST

2-Mng–3.jpg

ಮಹಾನಗರ : ಪರಿಸರ ಪ್ರೇಮಿಗಳ ತಂಡವೊಂದು ಕೆ.ಪಿ.ಟಿ. ವೃತ್ತದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಡುವ ಯೋಜನೆ ಹಾಕಿಕೊಂಡಿದ್ದು, ಕದ್ರಿ ಐಟಿಐ ಕಾಲೇಜಿನಲ್ಲಿ ರವಿವಾರ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಜೆ.ಆರ್‌. ಲೋಬೋ, ಮೇಯರ್‌ ಕವಿತಾ ಸನಿಲ್‌ ಮೊದಲಾದವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಮೇಯರ್‌ ಕವಿತಾ ಸನಿಲ್‌, ಸಸಿ ನೆಡುವುದರ ಜತೆಗೆ ಅದರ ಪೋಷಣೆ ಕೂಡ ಅತಿ ಮುಖ್ಯ ಎಂದರು.

ಸಂಸ್ಥೆಯ ಕಾರ್ಯದರ್ಶಿ ಶವಾಜ್‌ ಮಹಮ್ಮದ್‌, ಹಣಕಾಸು ವ್ಯವಸ್ಥಾಪಕ ಗೋವಿಂದ ಪ್ರಸಾದ್‌, ಟ್ರಸ್ಟ್‌ ಸದಸ್ಯ ಕ್ಲಿಫ‌ರ್ಡ್‌ ಲೋಬೋ, ಯೋಗ ಕುಟೀರ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಅಜಾಜ್‌ ಸ್ಟೀಲ್‌ನ ಮನ್ಸೂರ್‌ ಅಜಾಜ್‌, ಬಯೋಗ್ರೀನ್‌ ನರ್ಸರಿಯ ಮೋಹನ್‌ ಕುಮಾರ್‌, ಸಾಫ್ಟ್ವೇರ್‌ ಎಂಜಿನಿಯರ್‌ ಶೇಖ್‌, ನ್ಯಾಯವಾದಿ ಲಕ್ಷ್ಮಣ್‌ ಕುಂದರ್‌ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

ನಾಲ್ಕು ವರ್ಷಗಳಲ್ಲಿ ಹೂವಿನ ನಗರಿ 
ಮುಂದಿನ ನಾಲ್ಕು ವರ್ಷಗಳಲ್ಲಿ ಮಂಗಳೂರನ್ನು ಹೂವಿನ ನಗರಿಯಾಗಿಮಾಡುವ ನಿಟ್ಟಿನಲ್ಲಿ ಈ ಉತ್ಸಾಹಿ ತಂಡ ಕೆಲಸ ಮಾಡುತ್ತಿದೆ. ಮೊದಲ ಹಂತವಾಗಿ ಕೆ.ಪಿ.ಟಿ. ವೃತ್ತದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 2,000 ಮೇ ಫ್ಲವರ್‌ ಸಸಿಗಳನ್ನು ನೆಡುವ ಯೋಜನೆ ಹಾಕಿಕೊಂಡಿದೆ. ಮುಂದಿನ 2 ತಿಂಗಳುಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಅವುಗಳು ಮುಂದಿನ ನಾಲ್ಕು ವರ್ಷದಲ್ಲಿ ಹೂ ಬಿಡಲಿದ್ದು, ಆಗ ರಸ್ತೆಯ ಎರಡೂ ಬದಿಯಲ್ಲಿ ಹೂವಿನ ಸೌಂದರ್ಯ ಬಣ್ಣಿಸಲು ಅಸಾಧ್ಯ ಎನ್ನುತ್ತಾರೆ ಆಯೋಜಕರು.

ಸಸಿ ನೆಡುವ ಕಾರ್ಯಕ್ರಮವನ್ನು “ಮಂಗಳೂರು ಫ್ಲವರ್‌ ಸಿಟಿ” ಆಯೋಜಿಸಿದ್ದು, ಕೆಇಡಿಐಯುಎಂ ಅವರು ಅಗತ್ಯವಿರುವ ಫ್ಲೈವುಡ್‌ ನೀಡಿದ್ದಾರೆ. ಕ್ರೆಡಾೖ ಪ್ರಾಯೋಜಕತ್ವ ನೀಡಿದ್ದು, ಸಸಿಗಳ ಪೋಷಣೆಯ ಜವಾಬ್ದಾರಿಯನ್ನು ಬಯೋಗ್ರೀನ್‌ ನರ್ಸರಿ ವಹಿಸಿಕೊಂಡಿದೆ. ಒಂದು ಗಿಡಕ್ಕೆ 100 ರೂ. ನೀಡಿ ಬೆಂಗಳೂರಿನಿಂದ ತರಲಾಗಿದ್ದು, ಮೊದಿನ್‌ ವುಡ್‌ ಯುಎಇ 5 ಲಕ್ಷ ರೂ. ಧನ ಸಹಾಯ ನೀಡಿದ್ದಾರೆ. ಇದರ ಜತೆಗೆ ಮುಂದಿನ ದಿನಗಳಲ್ಲಿ ಕೊಟ್ಟಾರ ಚೌಕಿಯಿಂದ ನಂತೂರು ಜಂಕ್ಷನ್‌ ವರೆಗೆ ಹಾಗೂ ನಗರದ ಕೆಲ ಸರ್ಕಲ್‌ಗ‌ಳು, ಪಾರ್ಕ್‌, ನದಿ ತೀರ ಸಹಿತ ಅನೇಕ ಕಡೆಗಳಲ್ಲಿ ಸಸಿಗಳನ್ನು ನೆಡುವ ಯೋಜನೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಫ್ಲವರ್‌ ಸಿಟಿಯಾಗಲಿ
ಮಂಗಳೂರನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂಬುದು ನಮ್ಮ ಉದ್ದೇಶ. ಬೆಂಗಳೂರಿಗೆ ಗಾರ್ಡನ್‌ ಸಿಟಿ ಎಂದು ಹೆಸರಿದೆ. ಹೂವಿನ ಸಸಿಗಳನ್ನು ರಸ್ತೆ ಬದಿಗಳಲ್ಲಿ ನೆಟ್ಟು, ಮುಂದಿನ ದಿನಗಳಲ್ಲಿ ಮಂಗಳೂರನ್ನು ಫ್ಲವರ್‌ ಸಿಟಿ ಎಂದು ಕರೆಯುವಂತೆ ಮಾಡಬೇಕು ಹಾಗೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವುದು ನಮ್ಮ ಗುರಿ.
ಮಹಾಬಲ ಮಾರ್ಲ, ಮಾಜಿ ಮೇಯರ್‌ 

ಟಾಪ್ ನ್ಯೂಸ್

Prajwal Revanna ಪತ್ತೆಗೆ ವಿತ್ತ ಅಸ್ತ್ರ ! ಬ್ಯಾಂಕ್‌ ವ್ಯವಹಾರ ಪರಿಶೀಲನೆ

Prajwal Revanna ಪತ್ತೆಗೆ ವಿತ್ತ ಅಸ್ತ್ರ ! ಬ್ಯಾಂಕ್‌ ವ್ಯವಹಾರ ಪರಿಶೀಲನೆ

1-wq-eeqeqwe

Kyrgyzstan:ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ; ಪಾಕಿಸ್ಥಾನದ 3 ವಿದ್ಯಾರ್ಥಿಗಳ ಕೊಲೆ?

BCCI

T20 ವಿಶ್ವಕಪ್‌: ಮೇ 25ರಂದು ಭಾರತದ ಬಹುತೇಕ ಆಟಗಾರರ ಮೊದಲ ತಂಡ ನ್ಯೂಯಾರ್ಕ್‌ಗೆ

1-wewewqe

Swimwear ಫ್ಯಾಶನ್‌ ಶೋ: ಮೊದಲ ಬಾರಿಗೆ ಸೌದಿಯಿಂದ ಅನುಮತಿ!

1-wqewewq

IPL ವಿಚಿತ್ರ; ಎಲ್ಲ ಪಂದ್ಯ ಮುಗಿದ ಬಳಿಕ ನಾಯಕ ಪಾಂಡ್ಯಗೆ ಒಂದು ಪಂದ್ಯ ನಿಷೇಧ!

ಉಭಯ ಜಿಲ್ಲೆಯಲ್ಲೂ ಶಾಲಾರಂಭಕ್ಕೆ ಭರದ ಸಿದ್ಧತೆ

ಉಭಯ ಜಿಲ್ಲೆಯಲ್ಲೂ ಶಾಲಾರಂಭಕ್ಕೆ ಭರದ ಸಿದ್ಧತೆ

1-wewqeewqe

Actor Jackie Shroff ಹೆಸರು ಬಳಕೆಗೆ ಹೈಕೋರ್ಟ್‌ ನಿಷೇಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Mangaluru ಫಾತಿಮಾ ರಲಿಯಾ ಸಹಿತ ಆರು ಮಂದಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ

Mangaluru ಫಾತಿಮಾ ರಲಿಯಾ ಸಹಿತ ಆರು ಮಂದಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ

Surathkal ಶಬರಿಮಲೆ ಯಾತ್ರೆ ಸಂದರ್ಭ ಹೃದಯಾಘಾತದಿಂದ ಸಾವು

Surathkal ಶಬರಿಮಲೆ ಯಾತ್ರೆ ಸಂದರ್ಭ ಹೃದಯಾಘಾತದಿಂದ ಸಾವು

Fake CBI ಅಧಿಕಾರಿಗಳ ಬಲೆಯಿಂದ ಸಂಗೀತ ಕಲಾವಿದ ಪಾರು

Fake CBI ಅಧಿಕಾರಿಗಳ ಬಲೆಯಿಂದ ಸಂಗೀತ ಕಲಾವಿದ ಪಾರು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Prajwal Revanna ಪತ್ತೆಗೆ ವಿತ್ತ ಅಸ್ತ್ರ ! ಬ್ಯಾಂಕ್‌ ವ್ಯವಹಾರ ಪರಿಶೀಲನೆ

Prajwal Revanna ಪತ್ತೆಗೆ ವಿತ್ತ ಅಸ್ತ್ರ ! ಬ್ಯಾಂಕ್‌ ವ್ಯವಹಾರ ಪರಿಶೀಲನೆ

1-wq-eeqeqwe

Kyrgyzstan:ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ; ಪಾಕಿಸ್ಥಾನದ 3 ವಿದ್ಯಾರ್ಥಿಗಳ ಕೊಲೆ?

BCCI

T20 ವಿಶ್ವಕಪ್‌: ಮೇ 25ರಂದು ಭಾರತದ ಬಹುತೇಕ ಆಟಗಾರರ ಮೊದಲ ತಂಡ ನ್ಯೂಯಾರ್ಕ್‌ಗೆ

1-wewewqe

Swimwear ಫ್ಯಾಶನ್‌ ಶೋ: ಮೊದಲ ಬಾರಿಗೆ ಸೌದಿಯಿಂದ ಅನುಮತಿ!

1-wqewewq

IPL ವಿಚಿತ್ರ; ಎಲ್ಲ ಪಂದ್ಯ ಮುಗಿದ ಬಳಿಕ ನಾಯಕ ಪಾಂಡ್ಯಗೆ ಒಂದು ಪಂದ್ಯ ನಿಷೇಧ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.