ಸಿನಿಮಾದೊಳಗೊಂದು ಸಿನಿಮಾ

Team Udayavani, Dec 22, 2017, 6:10 AM IST

cinema.jpg

ಕಳೆದ ವರ್ಷ ಏಪ್ರಿಲ್‌ನಲ್ಲಿ “ಡಿಸೆಂಬರ್‌ 16′ ಚಿತ್ರದ ಆಡಿಯೋ ಬಿಡುಗಡೆಯಾಗಿತ್ತು. ಈಗ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಹಾರರ್‌ ಚಿತ್ರ. ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಕೂಡ ಇಲ್ಲಿದೆ. ಮಧುಸೂದನ್‌ ಹವಾಲ್ದಾರ್‌ ನಿರ್ದೇಶನದ ಈ ಚಿತ್ರಕ್ಕೆ ಉಮೇಶ್‌ ಬಣಕಾರ್‌ ಅವರು ಒಂಥರಾ ಹೀರೋ ಇದ್ದಂಗೆ. ಅವರೊಬ್ಬರೇ ಅಲ್ಲ, ಇಲ್ಲಿ ಇತರೆ ಕಲಾವಿದರೂ ಇದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಬ್ಬರು ಶೀನಾ ರೈ, ಮತ್ತೂಬ್ಬರು ಸಂಹಿತಾ. ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಕೊಡಲೆಂದೇ ನಿರ್ದೇಶಕರು ತಂಡದೊಂದಿಗೆ ಪತ್ರಕರ್ತರ ಎದುರು ಬಂದಿದ್ದರು. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ಸಂಗೀತದ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ನಿರ್ದೇಶಕರು, ಚಿತ್ರದ ಬಗ್ಗೆ ಸಾಕಷ್ಟು ನಂಬಿಕೆ ಇಟ್ಟುಕೊಂಡಿದ್ದಾರೆ. 

“ಅಂದಹಾಗೆ, ಇದು ಸಿನಿಮಾದೊಳಗಿನ ಸಿನಿಮಾ ಕಥೆ ಹೊಂದಿದೆ. ಚಿತ್ರದಲ್ಲಿ  ಕಥೆಯೊಂದನ್ನು ಸಿದ್ಧಪಡಿಸಿಕೊಂಡು ಒಂದು ತಂಡ ಚಿತ್ರೀಕರಣಕ್ಕೆ ಆಯ್ದ ತಾಣಗಳನ್ನು ಹುಡುಕಲು ಜರ್ನಿ ಶುರುಮಾಡುತ್ತೆ. ಒಂದು ಹಂತದಲ್ಲಿ ಒಂದು ಸ್ಥಳಕ್ಕೆ ಹೋದ ಆ ತಂಡಕ್ಕೆ, ಸಾಕಷ್ಟು ವಿಚಿತ್ರ ಘಟನೆಗಳು ನಡೆಯುತ್ತವೆ. ಅಲ್ಲಿ ಹೋದವರು, ಎದುರಾದ ಸಮಸ್ಯೆಯನ್ನು ಎದುರಿಸಿ ಹೇಗೆ ಹೊರ ಬರುತ್ತಾರೆ’ ಎಂಬುದು ಕಥೆ ಎನ್ನುತ್ತಾರೆ ನಿರ್ದೇಶಕರು.

ಉಮೇಶ್‌ ಬಣಕಾರ್‌ ಅವರಿಗೆ ಡಬ್ಬಿಂಗ್‌ ವೇಳೆ ಚಿತ್ರ ನೋಡಿದಾಗಲೇ, ಇದೊಂದು ಬೇರೆ ರೀತಿಯ ಸಿನಿಮಾ ಆಗಿ ನೋಡುಗರಿಗೆ ಇಷ್ಟವಾಗುತ್ತೆ ಅಂತಂದುಕೊಂಡರಂತೆ. ಅವರಿಲ್ಲಿ ಸುಪಾರಿ ಕಿಲ್ಲರ್‌ ಆಗಿ ನಟಿಸಿದ್ದಾರಂತೆ. “ಚಿತ್ರದಲ್ಲಿ ಸಿನಿಮಾ ಕಥೆ ಇದೆ. ಅದರ ಜರ್ನಿ ಶುರುವಾದಾಗ, ಒಂದು ಸಮಸ್ಯೆ ಎದುರಾಗುತ್ತೆ. ಅಲ್ಲಿ ಏನೆಲ್ಲಾ ಆಗಿಹೋಗುತ್ತೆ ಎಂಬುದನ್ನು ನಿರ್ದೇಶಕರು ರೋಚಕವಾಗಿ ತೋರಿಸಿದ್ದಾರೆ. ಒಂದು ಸಸ್ಪೆನ್ಸ್‌, ಥ್ರಿಲ್ಲರ್‌ ಮತ್ತು ಹಾರರ್‌ ಅಂಶ ಹೊಂದಿರುವ ಈ ಚಿತ್ರಕ್ಕೆ ಎಲ್ಲರ ಸಹಕಾರ ಇರಲಿ’ ಅಂದರು ಉಮೇಶ್‌ ಬಣಕಾರ್‌.

ಮನ್‌ದೀಪ್‌ ರಾಯ್‌ ಇಲ್ಲೊಂದು ವಿಶೇಷ ಪಾತ್ರ ನಿರ್ವಹಿಸಿದ್ದಾರಂತೆ. “ಇದು ಅಲ್ಫೆ†ಡ್‌ ಹಿಚ್‌ಕಾಕ್‌ ಶೈಲಿಯ ಸಿನಿಮಾ. ಇದೊಂದು ಥ್ರಿಲ್ಲರ್‌ ಅಂಶಗಳೊಂದಿಗೆ ಸಾಗುವ ಚಿತ್ರ. ನಾನು ಹವಾಲ್ದಾರ ಜತೆ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದೆ. ಆಗೆಲ್ಲಾ ರೀಲ್‌ನಲ್ಲಿ ಶೂಟ್‌ ಆಗುತ್ತಿತ್ತು. ಈಗ ಡಿಜಿಟಲ್‌ ಬಂದಿದೆ. ಇದರಿಂದ ಯಾವ್ಯಾವುದೋ ಆ್ಯಂಗಲ್‌ನಲ್ಲಿ ಶೂಟ್‌ ಮಾಡಿದ್ದಾರೆ. ನನ್ನ ಅಭಿನಯದ ಭಾಗವನ್ನು ಜಾಸ್ತಿ ಶಾಟ್ಸ್‌ ತಗೊಂಡಿದ್ದು ವಿಶೇಷ’ ಅಂದರು ಮನ್‌ದೀಪ್‌ರಾಜ್‌.

ದೆಹಲಿ ಮೂಲದ ಶೀನಾ ರೈಗೆ ಇಲ್ಲಿ ಗಟ್ಟಿತನದ ಪಾತ್ರವಿದೆಯಂತೆ. ಸಂಹಿತಾಗೆ ಇಲ್ಲಿ ನಂದಿನಿ ಪಾತ್ರ ಸಿಕ್ಕಿದೆ. ಹಾರರ್‌ ಚಿತ್ರ ಇದಾಗಿದ್ದರೂ, ಹೊಸಬಗೆಯ ನಿರೂಪಣೆ ಇದೆ ಅಂದರು ಸಂಹಿತಾ. ಅಭಿಷೇಕ್‌ ಪಾಟೀಲ್‌, ಪದ್ಮನಾಭರೆಡ್ಡಿ ಮಾತನಾಡಿದರು. ಇನ್ನೊಂದು ವಿಶೇಷವೆಂದರೆ, ಇಲ್ಲಿ ಬಾಲಿವುಡ್‌ ನಟ ಜಾಕಿಶ್ರಾಫ್ ಕೂಡ ನಟಿಸಿದ್ದಾರೆ.

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.