ಚಳಿಗಾಲಕ್ಕೆ ಬೆಚ್ಚನೆಯ ಕಲರ್‌ ಮನೆ


Team Udayavani, Jan 22, 2018, 1:01 PM IST

chaligala.jpg

ಮನೆಯಲ್ಲಿ ಆ ಒಂದು ಬೆಚ್ಚಗಿನ ಅನುಭವ ನೀಡುವಲ್ಲಿ ಬಣ್ಣಗಳ ಪಾತ್ರವೂ ಮುಖ್ಯ. ಮನೆಯನ್ನು ಸೂರ್ಯನ ರಶ್ಮಿಗಳ ಮೂಲಕ ಇಲ್ಲವೇ ನೇರವಾಗಿ ಹೀಟರ್‌ ಬಳಸಿ ಬೆಚ್ಚಗಿನ ಅನುಭಸುವ ಗಳಿಸಬಹುದು.  ಬಣ್ಣಗಳ ವರ್ಗೀಕರಣದಲ್ಲಿ ಬೆಚ್ಚನೆಯ ಬಣ್ಣಗಳು – ವಾರ್ಮ್ ಕಲರ್ಸ್‌, ಕೂಲ್‌ ಕಲರ್ ಎಂಬುದೇ ವಾಡಿಕೆಯಲ್ಲಿದೆ! 

ಚುಮುಚುಮು ಚಳಿಯಿಂದ ಪಾರಾಗಲು ಎರಡು ದಾರಿಗಳಿವೆ.  ಬೆಚ್ಚನೆಯ ಉಡುಗೆ ತೊಡುವುದು ಅವುಗಳಲ್ಲಿ ಒಂದಾದರೆ, ಬಿಸಿಲಿಗೆ ಮೈಯನ್ನು ಒಡ್ಡಿಕೊಳ್ಳುವುದು ಮತ್ತೂಂದು. ಚಳಿಯ ಕಾಟ ಹೆಚ್ಚಾದಷ್ಟೂ, ನಮ್ಮ ಮನೆಯ ಪರಿಸರವೂ ಬೆಚ್ಚಗಿದ್ದರೆ ಹೇಗೆ? ಎಂಬ ಯೋಚನೆಯೂ ಸಾಮಾನ್ಯವಾಗೇ ಬರುತ್ತದೆ. ಮನೆಯಲ್ಲಿ ಆ ಒಂದು ಬೆಚ್ಚಗಿನ ಅನುಭವ ನೀಡುವಲ್ಲಿ ಬಣ್ಣಗಳ ಪಾತ್ರವೂ ಮುಖ್ಯ.

ಮನೆಯನ್ನು ಸೂರ್ಯನ ರಶ್ಮಿಗಳ ಮೂಲಕ ಇಲ್ಲವೇ ನೇರವಾಗಿ ಹೀಟರ್‌ ಬಳಸಿ ಬೆಚ್ಚಗಿನ ಅನುಭಸುವ ಗಳಿಸಬಹುದು.  ಬಣ್ಣಗಳ ವರ್ಗೀಕರಣದಲ್ಲಿ ಬೆಚ್ಚನೆಯ ಬಣ್ಣಗಳು – ವಾರ್ಮ್ ಕಲರ್ಸ್‌, ಕೂಲ್‌ ಕಲರ್ ಎಂಬುದೇ ವಾಡಿಕೆಯಲ್ಲಿದೆ! ಹಾಗಾಗಿ  ಕೊರೆಯುವ ಚಳಿಯ ಅನುಭವವನ್ನು ಕಡಿಮೆ ಗೊಳಿಸುವ ಬಣ್ಣಗಳನ್ನೂ ಪರಿಣಾಮಕಾರಿಯಾಗಿ ಬಳಸಿ, ಹೆಚ್ಚೆಚ್ಚು ಬೆಚ್ಚಗಿರಬಹುದು. 

ಬಣ್ಣಗಳಿಂದ ಬೆಚ್ಚನೆಯ ಅನುಭವ ಹೇಗೆ?: ಸಾಮಾನ್ಯವಾಗಿ ಕೆಂಪು ಹಾಗೂ ಹಳದಿಯನ್ನು ಬೆಚ್ಚನೆಯ ಬಣ್ಣಗಳೆಂದು ಪರಿಗಣಿಸಲಾಗುತ್ತದೆ. ಜೊತೆಗೆ ಇವುಗಳ  ಗಾಢತೆ, ಮಿಶ್ರಣ ಅಂದರೆ ಕೇಸರಿ ಜಾತಿಗೆ ಸೇರಿದ ಬಣ್ಣಗಳೂ ವಾರ್ಮ್ ಕಲರ್ಸ್‌ ಗುಂಪಿಗೆ ಸೇರುತ್ತವೆ. ನೀಲಿ, ಹಸಿರು ಇತ್ಯಾದಿ ತಂಪು ಬಣ್ಣಗಳಾಗಿದ್ದು ಇವುಗಳ ಗಾಢ ಹಾಗೂ ಬೆರೆಕೆಯಿಂದ ಸಿಗುವ ಬಣ್ಣಗಳು ಕೂಡ ತಂಪಾಗಿಯೇ ಇರುತ್ತವೆ. ಮಾನಸಿಕವಾಗಿ ಬಹುಶಃ ನೀರು, ಮಳೆ, ಹಸಿರು ಇತ್ಯಾದಿಯೊಂದಿಗೆ ಈ ಬಣ್ಣಗಳು ಬೆಸೆದುಕೊಂಡು ಇರುವುದರಿಂದಲೋ ಏನೋ

ನಮ್ಮ ಮನಸ್ಸಿಗೆ ಆ ಒಂದು ತಂಪನೆಯ ಅನುಭವ ನೀಡುವ ರೀತಿಯಲ್ಲೇ ಬೆಚ್ಚನೆಯ ಬಣ್ಣಗಳೂ ನಮಗೆ ಚಳಿಗಾಲದಲ್ಲಿ ಹೆಚ್ಚು ಹಿತವೆನಿಸುತ್ತದೆ. ಬಣ್ಣಗಳು ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವುದರಲ್ಲಿ ಯಾವುದೇ ಸಂಶಯವಿಲ್ಲ, ಒಂದು ಸುಂದರ ಹೂವನ್ನು ನೋಡಿದರೆ ಎಂಥ ತರಾತುರಿಯಲ್ಲಿ ಇರುವವರಿಗೂ ಒಂದು ಕ್ಷಣದ ಮಟ್ಟಿಗಾದರೂ ಹಾಯ್‌ ಎಂದೆನಿಸುತ್ತದೆ. ಮನಸ್ಸು ಒಂದಷ್ಟು ಹಗುರವಾಗುತ್ತದೆ. ಅದೇ ರೀತಿಯಲ್ಲಿ ನಿಮ್ಮ ಮನೆಯ ಬಣ್ಣವೂ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ.

ಬೆಚ್ಚನೆಯ ಬಣ್ಣ ಎಲ್ಲೆಲ್ಲಿ ಬಳಸಬಹುದು: ಸಮಯವೇ ಇಲ್ಲ ಎಂದು ದಿನದ ಬಹುಹೊತ್ತು ಹೊರಗೆ ಕೆಲಸದಲ್ಲಿ ತೊಡಗುವವರೂ ಕೂಡ ದಿನದ ಬಹುತೇಕ ಅವಧಿಯನ್ನು ಮನೆಯಲ್ಲೇ ಕಳೆಯುತ್ತಾರೆ. ಇದರಲ್ಲಿ ನಿದ್ರೆಹೋಗುವ ಅವಧಿಯೇ ಅಧಿಕವಾಗಿದ್ದರೂ ಮಿಕ್ಕ ವೇಳೆ ಬೆಚ್ಚಗಿನ ಚೇತೋಹಾರಿಯಾಗಿರುವ ಅನುಭವ ನೀಡುವಂತೆ ಮನೆಗೆ ಬಣ್ಣ ನೀಡುವುದು ಉತ್ತಮ. ಬೆಳಗ್ಗೆ ಎದ್ದೊಡನೆ ಒಂದಷ್ಟು ಹೊತ್ತು ತಿಂಡಿತಿನ್ನುತ್ತ ದಿನದ ಕೆಲಸಕ್ಕೆ ತಯಾರಾಗುವ ಯೋಚನೆಯಲ್ಲಿ ಇರುವವರಿಗೆ ಬೆಚ್ಚನೆಯ ಅನುಭವ ನೀಡುವಂತಿರಬೇಕು. ಹಾಗಾಗಿ ಡೈನಿಂಗ್‌ ರೂುಗೆ ಸಾಮಾನ್ಯವಾಗೇ ವಾರ್ಮ್ ಕಲರ್‌ ಅನ್ನು ಬಳಸುವುದು. 

ಲಿವಿಂಗ್‌ ರೂಮ್‌ ಲೆಕ್ಕಾಚಾರ: ಬೆಳಗಿನ ಹೊತ್ತು ಹೆಚ್ಚು ಸಮಯ ಕಳೆಯಲು ಆಗದಿದ್ದರೂ, ಹೊರಗೆ ಕೊರೆಯುವ ಚಳಿಯಿಂದ ತಪ್ಪಿಸಿಕೊಂಡು ಬೇಗ ಮನೆ ತಲುಪೋಣ ಎನ್ನುವವರಿಗೆ ಒಳಗೆ ಬಂದೊಡನೆ ಸ್ವಾಗತಿಸುವುದೇ ಹಾಲ್‌. ಇಲ್ಲಿನ ಬಣ್ಣ ಬೆಚ್ಚನೆಯ ಅನುಭವ ನೀಡುವಂತಿದ್ದರೆ ಹೊರಗಿನ ಚಳಿಯ ಜೊತೆಗೆ ಇತರೆ ತಾಪತ್ರಯಗಳನ್ನೂ ದೂರವಿಡಲು ಸಹಾಯಕಾರಿ. ವಾರ್ಮ್ ಕಲರ್ಸ್‌ ಎಂದರೆ ತೀರ ಕಡುಗೆಂಪು, ಹಳದಿ ಬಣ್ಣ ಬಳಿದು ಇಡಬೇಕು ಎಂದೇನೂ ಇಲ್ಲ. ಇದೇ ಬಣ್ಣಗಳ ತೆಳು – ಲೈಟ್‌ ಶೇಡ್‌ಗಳನ್ನು “ಪೇಸ್ಟಲ್‌ ಕಲರ್ಸ್‌’ ಪಂಗಡಕ್ಕೆ ಸೇರಿದವನ್ನು ಧಾರಾಳವಾಗಿ ಬಳಸಬಹುದು. ಕೆಲವೊಮ್ಮೆ ಬಣ್ಣ ಎದ್ದು ಕಾಣಲು, ಒಂದಷ್ಟು ಕಾಂಟ್ರಾಸ್ಟ್‌ -ಪೈಪೋಟಿ ಬಣ್ಣಗಳನ್ನೋ ಇಲ್ಲ ಹಾರ್ಮೊನಿ ಕಲರ್ಸ್‌ -ಹೀಗೆ ಬಣ್ಣದ ಜೋಡಿಗಳನ್ನು ಬಳಸಬಹುದು.

ಬೆಳಕು ಮತ್ತು ಬಣ್ಣಗಳು: ಬಣ್ಣಗಳು ಪರಿಣಾಮಕಾರಿಯಾಗಿ ಕಾಣಬೇಕೆಂದರೆ ಅದಕ್ಕೆ ಸೂಕ್ತ ರೀತಿಯ ಬೆಳಕೂ ಇರಬೇಕಾಗುತ್ತದೆ. ಸಾಮಾನ್ಯವಾಗಿ ದಿನದ ಹೊತ್ತು ಕಿಟಕಿಗಳಿಂದ ನೈಸರ್ಗಿಕವಾಗಿ ಬೆಳಕು ಮನೆಯನ್ನು ಪ್ರವೇಶಿಸುವುದರಿಂದ ನಾವು ಇದನ್ನೂ ಪರಿಗಣಿಸಿ ಬಣ್ಣಗಳ ಆಯ್ಕೆ ಮಾಡಬೇಕು. ಹೆಚ್ಚು ಬೆಳಕು ಬೀಳುವ ಸ್ಥಳದಲ್ಲಿ ಸ್ವಲ್ಪ ಗಾಢ ಬಣ್ಣವೂ,  ತೆಳುವಾಗಿಯೂ ಮನಸ್ಸಿಗೆ ಆಹ್ಲಾದಕರವಾಗಿಯೂ ಇರುತ್ತದೆ. ಅದೇ ರೀತಿ, ಹೆಚ್ಚು ಬೆಳಕು ಬೀಳದ ಸ್ಥಳಗಳು ಮಬ್ಬುಮಬ್ಟಾಗಿದ್ದು ಗಾಢಬಣ್ಣ ಹೊಡೆಯಲು ಸೂಕ್ತವಾಗಿರುವುದಿಲ್ಲ.

ಇಂಥ  ಸ್ಥಳಗಳಲ್ಲಿ ಕಡ್ಡಾಯವಾಗಿ ಮಾರ್ಮ್ ಕಲರ್ ಅನ್ನು ಲೈಟ್‌ ಶೇಡ್‌ನ‌ಲ್ಲಿ ಬಳಸಬೇಕು.ದಿನದಹೊತ್ತು ಬೀಳುವ ಬೆಳಕಿನ ಮೂಲಕ್ಕೆ ಹೊಂದಿಕೊಂಡಂತೆ ನಾವು ಸಾಮಾನ್ಯವಾಗಿ ನಮ್ಮ ದೈನಂದಿನ ಚಟುವಟಿಕೆಗಳನ್ನು ಮಾಡಿಕೊಳ್ಳುತ್ತೇವೆ. ದಿನದ ಪೇಪರ್‌ ಓದುವುದು ಇತ್ಯಾದಿ ಕಿಟಕಿಯ ಬಳಿ ಮಾಡಿದಂತೆಯೇ ಸಂಜೆ ಕಿಟಕಿಯ ಮೂಲಕ ಬೆಳಕು ಬಾರದಿದ್ದರೂ ನಾವು ನಮ್ಮ ಪ್ರಿಯ ಆಸನವನ್ನು ಬೇರೆಡೆ ತೆಗೆದುಕೊಂಡು ಹೋಗುವುದಿಲ್ಲ. ಹಾಗಾಗಿ ಕಿಟಕಿಯ ಮೇಲೆ ವಿದ್ಯುತ್‌ ದೀಪ ಇಟ್ಟರೆ, ರಾತ್ರಿಹೊತ್ತೇ ಅಲ್ಲದೆ, ಇತರೆ ವೇಳೆಯಲ್ಲೂ ಬೆಳಕು ಕಡಿಮೆ ಇದ್ದರೆ, ದೀಪ ಹತ್ತಿಸಿಕೊಂಡು ಓದಲು ಅನುಕೂಲಕರ.

ಮನೆ ಬೆಚ್ಚಗಿಡುವಲ್ಲಿ ಬೆಳಕಿನ ಮಹಾತ್ಮೆ: ಬೆಳಕು ಹೆಚ್ಚಿದ್ದಷ್ಟೂ ಚಳಿಗಾಲದಲ್ಲಿ ನಮಗೆ ಬೆಚ್ಚನೆಯ ಅನುಭವ ಹೆಚ್ಚಾಗುತ್ತದೆ. ಹೇಳಿಕೇಳಿ ಈ ಅವಧಿಯಲ್ಲಿ ದಿನದ ಹೊತ್ತು ಕಡಿಮೆ ಇದ್ದು ರಾತ್ರಿಯ ಅವಧಿ ಹೆಚ್ಚು ಇರುವುದರ ಜೊತೆಗೆ ಸೂರ್ಯ ಕಿರಣಗಳೂ ಕೂಡ ಕೆಳಕೋನದಲ್ಲಿ ನಮ್ಮನ್ನು ತಾಗುವುದರಿಂದ, ಬೆಳಕಿನ ಅಭಾವ ಇರುತ್ತದೆ. ಆದುದರಿಂದ ಮನೆಯನ್ನು ವಿನ್ಯಾಸ ಮಾಡುವಾಗಲೇ ಸೂರ್ಯ ಕಿರಣಗಳು ಚಳಿಗಾಲದಲ್ಲಿ ಬರುವ ದಿಕ್ಕನ್ನು ಗಮನಿಸಿ ಸಾಕಷ್ಟು ವಿಶಾಲವಾದ ಕಿಟಕಿಗಳನ್ನು ಇಟ್ಟುಕೊಂಡರೆ, ನಾವು ಬಳಸುವ ಬೆಚ್ಚನೆಯ ಬಣ್ಣಗಳ ಪರಿಣಾಮ ಮತ್ತೂ ಹೆಚ್ಚಾಗುತ್ತದೆ.

ಬಣ್ಣಗಳನ್ನು ಬಯಸದವರು ಯಾರೂ ಇಲ್ಲ.  ಆದರೆ ಇದೇ ಬಣ್ಣಗಳು ನಮ್ಮನ್ನು ವಿವಿಧ ಋತುಗಳಲ್ಲಿ, ವಿವಿಧ ರೀತಿಯಲ್ಲಿ ಸ್ಪಂದಿಸುವಂತೆ ಮಾಡುತ್ತವೆ. ಆದುದರಿಂದ ನಿಮ್ಮ ಮನೆಯ ಬಣ್ಣವನ್ನು ಸ್ವಲ್ಪ ಯೋಚಿಸಿ ಬಳಸಿದರೆ, ಹೆಚ್ಚು ಖರ್ಚಿಲ್ಲದೆ ಬೆಚ್ಚನೆಯ ಮನೆ ಚಳಿಗಾಲದಲ್ಲಿ ನಿಮ್ಮದಾಗುತ್ತದೆ.

ಹೆಚ್ಚಿನ ಮಾಹಿತಿಗೆ: 98441 32826

* ಆರ್ಕಿಟೆಕ್ಟ್ ಕೆ ಜಯರಾಮ್‌

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.