ಮನೆಯ ಎದುರು ದೊಡ್ಡ ಮರಗಳು ಇರಬೇಕೋ, ಬೇಡವೋ?


Team Udayavani, Feb 26, 2018, 3:50 PM IST

tree.jpg

ಅರಳಿ, ಪಲಾಶ, ಹಲಸು, ಮಾವುಗಳನ್ನು ಮನೆಯ ಸುತ್ತಮುತ್ತ ವಿಸ್ತಾರವಾದ ಜಾಗ ಇದ್ದಲ್ಲಿ ವಾಸ್ತು ಸಲಹೆ ಪಡೆದು ಬೆಳೆಸಿ. ಮನಸ್ಸಿಗೆ ಬಂದಂತೆ, ಗಮನಕ್ಕೆ ಬಾರದೆಯೇ ಗಣೇಶ, ಕೃಷ್ಣ, ದುರ್ಗಾ ಎಂದು ವಿಗ್ರಹಗಳನ್ನು ಮನೆಯ ಆವರಣದಲ್ಲಿ ಸ್ಥಾಪಿಸಲು ಮುಂದಾಗದಿರಿ. ಪ್ರತಿಯೊಂದನ್ನೂ ಸೂಕ್ತವಾದ ಅಳತೆ, ಪರಿಸರ, ವಿಧಾನ ಸ್ಥಾಪನಾ ವಿಧಿಗಳೊಂದಿಗೇ ಕೇಳಿ, ತಿಳಿದು, ಯಥಾರ್ತವಾಗಿ ಮಾಡಿಕೊಳ್ಳಬೇಕು.

ನಿಮ್ಮ ಪರಿಸರ ಪ್ರೀತಿಯನ್ನು ಕೈಬಿಡದಿರಿ. ಮನೆ ಎದುರು ಚಿಕ್ಕಪುಟ್ಟ ಗಿಡಮರ ಬೆಳೆಸಿ. ದೊಡ್ಡ ದೊಡ್ಡ ಮರಗಳನ್ನು ಬೆಳೆಸುವ ವಿಚಾರ ಕೈಬಿಡಿ. ನಿಮ್ಮ ಮನೆಯ ವಾಸ್ತು ಶಕ್ತಿಯ ವಿಚಾರಗಳು ಪಂಚ ಭೂತಗಳ ಸಮೃದ್ಧಿಯೊಂದಿಗೆ ಸೂಕ್ತ ದಿಕ್ಕುಗಳನ್ನು ಬಳಸಿಕೊಂಡು ಬೆಳಕು, ಗಾಳಿ, ಮಣ್ಣು, ಕಾವು ಹಾಗೂ ದೈವ ಸಿದ್ಧಿಗಳನ್ನು ಕೊಡಬೇಕೇ ವಿನಃ ಇವೇ ಪಂಚಭೂತಗಳನ್ನು ಬಳಸಿಕೊಂಡು ಬಲಾಡ್ಯವಾಗಿ ಬೆಳೆಯುವ ಮನೆಯ ತೀರಾ ಸನಿಹದ ಮರಗಳಿಂದ ಸಕಾರಾತ್ಮಕ ಶಕ್ತಿಗೆ ಭಂಗವನ್ನು ತರುವ ಸಂದರ್ಭ ಎದುರಾಗಬಾರದು. ಅಂಗಳದಲ್ಲಿ ಬಣ್ಣದ ಹೂಗಳು ಪುಟ್ಟ ಗಿಡ ಬಳ್ಳಿಗಳು, ಲಾನ್‌ ಬೆಳೆದುಕೊಳ್ಳಲಿ. ಮುಖ್ಯವಾಗಿ ನಿಮ್ಮ ಮನೆಯು ಇಂಥದೇ ದಿಕ್ಕನ್ನು ಬಳಸಿಕೊಳ್ಳುವ ಬಾಗಿಲು ಎಂಬ ಅಂಶದ ಕುರಿತು ಆಧುನಿಕವಾದ ಈ ಕಾಲದಲ್ಲಿ ಗಮನಹರಿಸುವುದು ಕಷ್ಟಕರವಾದ ಸಂಗತಿ. ಹೊಂದಿಬರದ ಬಾಗಿಲುಗಳಿದ್ದರೂ ಮನೆಯಲ್ಲಿ ದೇವರ ಸ್ಥಳ ಎಲ್ಲಿ ಎಂಬುದನ್ನು ಸೂಕ್ತವಾಗಿ ರೂಪಿಸಿಕೊಂಡು, ಮನೆಯೊಳಗಿನ ದೇವರು ಪೂರ್ವದಿಕ್ಕನ್ನು ನೋಡುವಂತೆ ಗಮನ ಹರಿಸಿ, ಆ ದಿಕ್ಕಿಗೆ ದೇವರ ಎದುರಿನ ಪ್ರಧಾನ ದ್ವಾರ, ಮೆಟ್ಟಿಲು ಬರಲಿ.

ಹಲವರು ಪೂರ್ವದ ದಿಕ್ಕು, ನಂದಿ ಬಾಗಿಲು, ಮುಳುಗುವ ದಿಕ್ಕು ಎಂದು ಬಹಳಷ್ಟು ಪರದಾಡುತ್ತ, ಅಲೆದಾಡುತ್ತ, ಹಳಹಳಿಸುತ್ತ ಇರುತ್ತಾರೆ. ಮನೆಯ ಪ್ರಧಾನ ಬಾಗಿಲು ದೇವರು ನೋಡುವ ದಿಕ್ಕನ್ನು ಆಧರಿಸಿಕೊಂಡೇ ರೂಪಿಸಿಕೊಂಡಾಗ ದಕ್ಷಿಣದಿಕ್ಕು, ಮುಳುಗುವ ದಿಕ್ಕು ಎಂಬು ತಾಕಲಾಟಗಳು ಮುಖ್ಯವಾದವು. ಆದರೆ ಈ ವ್ಯವಸ್ಥೆ ಆಗಿದ್ದರೂ ಮನೆಯ ಸುತ್ತಮುತ್ತಲೂ ದೊಡ್ಡ ಮರಗಳನ್ನು ಬೆಳೆಸಿದರೆ, ಮನೆಯ  ಸಂಪನ್ನತೆಯನ್ನು ಹಾಳು ಮಾಡುತ್ತವೆ.  ಸುವ್ಯವಸ್ಥಿತವಾದ ಶಕ್ತಿ ಸುಳಿ ಹಾಗೂ ಸುಸಂಬದ್ಧ ಸ್ಪಂದನವಿರುವ ಮನೆಯ ತಳಹದಿಗೆ ಈ ಮರಗಳ ಕಠಿಣ ಬೇರುಗಳ ಶಕ್ತಿ ಘಾತದಿಂದ ಧಕ್ಕೆ ಒದಗದಂತೆ ಜಾಗ್ರತೆ ವಹಿಸಲೇ ಬೇಕು. ಚಿಕ್ಕಪುಟ್ಟ ಶಮೀ, ಔದುಂಬರ, ಉತ್ತರಣಿ ಗಿಡ, ಇರಲಿ, ದಟ್ಟವಾದುದು ಬೇಡ. ಎಕ್ಕದ ಗಿಡವನ್ನು ಕೂಡ ಸೂಕ್ತ ವಾಸ್ತು ಸಲಹೆಯೊಂದಿಗೆ ಬೆಳೆಸಬಹುದು.

ಅರಳಿ, ಪಲಾಶ, ಹಲಸು, ಮಾವುಗಳನ್ನು ಮನೆಯ ಸುತ್ತಮುತ್ತ ವಿಸ್ತಾರವಾದ ಜಾಗ ಇದ್ದಲ್ಲಿ ವಾಸ್ತು ಸಲಹೆ ಪಡೆದು ಬೆಳೆಸಿ. ಮನಸ್ಸಿಗೆ ಬಂದಂತೆ, ಗಮನಕ್ಕೆ ಬಾರದೆಯೇ ಗಣೇಶ, ಕೃಷ್ಣ, ದುರ್ಗಾ ಎಂದು ವಿಗ್ರಹಗಳನ್ನು ಮನೆಯ ಆವರಣದಲ್ಲಿ ಸ್ಥಾಪಿಸಲು ಮುಂದಾಗದಿರಿ. ಪ್ರತಿಯೊಂದನ್ನೂ ಸೂಕ್ತವಾದ ಅಳತೆ, ಪರಿಸರ, ವಿಧಾನ ಸ್ಥಾಪನಾ ವಿಧಿಗಳೊಂದಿಗೇ ಕೇಳಿ, ತಿಳಿದು, ಯಥಾರ್ತವಾಗಿ ಮಾಡಿಕೊಳ್ಳಬೇಕು. ಈ ಕಾರಣಕ್ಕಾಗಿಯೇ ಕುಲ ದೇವರು, ಗ್ರಾಮ ದೇವರು, ಊರ ದೇವರು ಎಂದು ಸಮುಷ್ಟಿಯ ಒಳಿತುಗಳನ್ನು ಗಮನದಲ್ಲಿ ಇಟ್ಟುಕೊಂಡ ದೇವ ಮಂದಿರ, ಗುಡಿ, ದೇವಸ್ಥಾನಗಳ ರಚನೆ ಮಾಡುತ್ತಾರೆಯೇ ವಿನಃ ಮನೆ ಮನೆಯ ಅಂಗಳದಲ್ಲಿ ಮಾಡುವುದು ಸೂಕ್ತವೆನಿಸದು. ಮೂಲದಲ್ಲಿ ಜಲಾಶಯ, ಕೆರೆ, ತೂಬುಗಳಿರುವ, ಮೋರಿಗಳಿರುವ ಜಾಗದಲ್ಲಿ ಮನೆ ಕಟ್ಟದಿರಿ. ಹೊರ ವಲಯಗಳು ಎಂದು ಗುರುತಿಸಿಕೊಂಡ ಜಾಗಗಳಲ್ಲಿ ಮನೆ ಕಟ್ಟಲು ಮುಂದಾಗದಿರಿ. ಕೆಲವು ಮನೋ ವಿಪ್ಲವಗಳನ್ನು, ಅಶಾಂತಿಗಳನ್ನು ಇದು ಸೃಷ್ಟಿಸಬಹುದು. ಇಂದು ನಗರಗಳಲ್ಲಿ ಪ್ರತಿಷ್ಠಿತ ಬಡಾವಣೆಗಳು ಎಂಬಲ್ಲಿ ಕೂಡ ಸ್ಥಿತಿವಂತರಾಗಿದ್ದೂ ಮನಃ ಶಾಂತಿ ಕಳಕೊಂಡ ಸಾವಿರಾರು ಕುಟುಂಬಗಳು ಇರುತ್ತವೆ. ನಿಷಿದ್ಧ ಸ್ಥಳಗಳು ನವೀಕರಣದ ಭರಾಟೆಯಲ್ಲಿ ಬಹು ಬೆಲೆ ಬಾಳುವ ನಿವೇಶನಗಳ ಕಾಲನಿಗಳಾಗಿ, ಲೇಔಟ್‌ಗಳಾಗಿ ಪರಿವರ್ತನೆಗೊಂಡಿರುತ್ತವೆ. ಆದರೆ ನಿರ್ದಿಷ್ಟ ನಿಷೇಧಿತ ಗುಣಧರ್ಮಗಳ ಕ್ರೂಢೀಕರಣದ ಪರಿಣಾಮಗಳನ್ನು ತಿಳಿಯಲಾರದೆ, ನಿಷಿದ್ಧ ( ಅನ್ಯ ಕಾರಣಗಳಿಗಾಗಿ ಬಹುಕಾಲದಿಂದ, ಹಿಂದಿನ ಏನೋ ಒಂದು ಅನಿಷ್ಟ ಜಾಗವೆಂದು ಪರಿಗಣಿಸಲ್ಪಟ್ಟ ಸ್ಥಳಗಳಲ್ಲಿ) ಜಾಗಗಳಲ್ಲಿ ಇ ಮಾರತುಗಳು, ಸೌಧಗಳು, ವಿಲ್ಲಾಗಳು ತಲೆ ಎತ್ತಿ ನಿಲ್ಲುತ್ತವೆ. ಆದರೆ ವಾಸಿಸುವ ಜನಕ್ಕೆ ಸುಖ ಮರೀಚಿಕೆ ಆಗಿ ಹೋಗುತ್ತದೆ.

ವಾಸ್ತು ಸಂಬಂಧಿತ ಗುಣಧರ್ಮದ ಅಳತೆಗೋಲಿನೊಂದಿಗೆ ಮನೆ ಕಟ್ಟಿದರೂ, ಜಾಗಕ್ಕೆ ಒಂದು ಸುಸಂಬದ್ಧ, ವಾಸ್ತವ, ಪಾಸಿಟಿವ್‌ ವೈಬ್ರೇಶನ್‌ ಇರದೇ ಹೋದರೆ, ಎಲ್ಲವೂ ಇದ್ದಾಗಲೂ ಸಮಾಧಾನದ ಕೊರತೆ ಇದ್ದೇ ಇರುತ್ತದೆ.  

– ಅನಂತಶಾಸ್ತ್ರಿ

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.