ದಶಕದ ವೈಭವ: ನಾಯಕಿಯರಿಗೆ ಭವಿಷ್ಯವಿಲ್ಲ ಅಂದಿದ್ದು ಯಾರ್‌ ಗುರೂ


Team Udayavani, Apr 13, 2018, 7:30 AM IST

30.jpg

ಕನ್ನಡ ಚಿತ್ರರಂಗಕ್ಕೆ ಬಂದು ಹತ್ತು ವರ್ಷವಾದರೂ ಇನ್ನೂ ನಾಯಕಿಯಾಗಿಯೇ ಉಳಿಯುವ ಜೊತೆಗೆ ಅಕ್ಕ-ತಂಗಿ, ಅತ್ತಿಗೆ ಪಾತ್ರಗಳತ್ತ ವಾಲದೇ ಬೇರೆ ಬೇರೆ ಪಾತ್ರಗಳಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಂಡ ಕೆಲವು ನಟಿಯರು ಹತ್ತು ವರ್ಷ ಪೂರೈಸಿದರೆ ಇನ್ನು ಕೆಲವರು ಏಳೆಂಟು ವರ್ಷವನ್ನು ಯಶಸ್ವಿಯಾಗಿ ಪೂರೈಸಿ, ದಶಕದತ್ತ ಸಾಗುತ್ತಿದ್ದಾರೆ.

ಹಿಂದೊಂದು ಕಾಲವಿತ್ತು. ಹೀರೋಯಿನ್‌ಗಳು ಸಹ ಹೀರೋಗಳ ಸಮನಾಗಿ ಚಿತ್ರರಂಗವನ್ನು ಆಳುತ್ತಿದ್ದರು. ದೊಡ್ಡ ದೊಡ್ಡ ಕಲಾವಿದರೊಂದಿಗೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದರು. ಬಿ. ಸರೋಜಾದೇವಿ, ಲೀಲಾವತಿ, ಜಯಂತಿ, ಭಾರತಿ, ಆರತಿ, ಕಲ್ಪನಾ, ಮಂಜುಳಾ ಇವರೆಲ್ಲಾ ಕಡಿಮೆಯೆಂದರೂ 15 ವರ್ಷಗಳ ಕಾಲ ನಾಯಕಿಯಾಗಿದ್ದವರು. ಆ ನಂತರ ಬಂದ ಮಾಲಾಶ್ರೀ, ಶ್ರುತಿ, ಪ್ರೇಮ, ಅನು ಪ್ರಭಾಕರ್‌ ಮುಂತಾದವರು ಸಹ ಅನೇಕ ವರ್ಷಗಳ ಕಾಲ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದ್ದರು. ಆದರೆ, ಈಗ ಹಾಗಿಲ್ಲ. ಒಬ್ಬ ನಟಿಯ ಚಿತ್ರರಂಗದ ಭವಿಷ್ಯ ಹೆಚ್ಚೆಂದರೆ ಐದು ವರ್ಷ ಎಂಬಂತಾಗಿದೆ. ಅದರ ಮೇಲೂ ಆಕೆ ನಟಿಸಿದರೆ, ಅದು ಪವಾಡವೇ ಸರಿ. ಪರಿಸ್ಥಿತಿ ಹೀಗಿರುವಾಗ ಒಂದಿಷ್ಟು ನಾಯಕಿಯರು ಚಿತ್ರರಂಗದಲ್ಲಿ ಒಂದು ದಶಕ ಕಳೆದಿರುವುದನ್ನು ಗಮನಿಸಬಹುದು.

ಆರಂಭದಲ್ಲಿದ್ದ ಅವರ ಚರಿಷ್ಮಾ ಈಗ ಸ್ವಲ್ಪ ಕಡಿಮೆ ಆಗಿರಬಹುದು.  ಆದರೆ, ಇವತ್ತಿಗೂ ಅವರು ನಾಯಕಿಯರಾಗಿ ನಟಿಸುತ್ತಿದ್ದಾರೆ. ಅವರು ನಟಿಸುತ್ತಿರುವ ಚಿತ್ರಗಳ ಸಂಖ್ಯೆ ಕಡಿಮೆ ಯಾಗಿರಬಹುದು. ಆದರೆ, ಇವತ್ತಿಗೂ ಸಕ್ರಿಯರಾಗಿದ್ದಾರೆ. ಅವರ ಪಾತ್ರಗಳು ಸ್ವಲ್ಪ ಕುಗ್ಗಿರಬಹುದು. ಆದರೆ, ಇವತ್ತಿಗೂ ಅವರು ನಟಿಸುತ್ತಲೇ ಇದ್ದಾರೆ. ನೀವು ಚಿತ್ರರಂಗಕ್ಕೆ ಬಂದು ಏಳೆಂಟು ವರ್ಷ ಪೂರೈಸಿರುವ ನಟಿಯರ ಕೆರಿಯರ್‌ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರ ಪಾತ್ರಗಳ ಆದ್ಯತೆ ಬದಲಾಗಿದೆ. ಆರಂಭದಲ್ಲಿ ಮರ ಸುತ್ತುವ, ಒಂದೆರಡು ಹಾಡುಗಳಿಗೆ ಖುಷಿಪಡುತ್ತಿದ್ದ ನಟಿಯರು ಈಗ ನಟನೆಗೆ ಸ್ಕೋಪ್‌ ಇರುವ ಪಾತ್ರಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಮಾಡಿದ್ದನ್ನೇ ಮಾಡಿ ಏಕತಾನತೆ ಅವರಿಗೂ ಕಾಡತೊಡಗಿದೆ. ಅದೇ ಕಾರಣಕ್ಕೆ ಕೆಲವು ಸಿನಿಮಾಗಳಲ್ಲಿ ಚಿಕ್ಕ ಪಾತ್ರವಾದರೂ, ಆ ಪಾತ್ರಕ್ಕೆ ತೂಕವಿದೆಯೇ ಎಂಬುದನ್ನು ನೋಡುತ್ತಿದ್ದಾರೆ.

ಈ ಪಟ್ಟಿಯಲ್ಲಿ ಮೊದಲಿಗೆ ಸಿಗುವ ಹೆಸರು ಹರಿಪ್ರಿಯಾ. ಅದೇ ಸಾಲಿನಲ್ಲಿ ಶುಭಾ ಪೂಂಜಾ, ರಾಗಿಣಿ, ಮೇಘನಾ ರಾಜ್‌, ಸಂಜನಾ, ಸೋನು ಗೌಡ, ಹರ್ಷಿಕಾ ಪೂಣಾತ್ಛ, ರಾಧಿಕಾ ಪಂಡಿತ್‌ ಮುಂತಾದವರನ್ನು ಹೆಸರಿಸಬಹುದು. ನೀವು ಹರಿಪ್ರಿಯಾ ಅವರ ಜರ್ನಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕಷ್ಟು ಏರಿಳಿತಗಳ ನಡುವೆ ಅವರ ಸಿನಿಪಯಣ ಸಾಗಿದೆ. ಹರಿಪ್ರಿಯಾ ಅವರ ಆರಂಭದ ದಿನಗಳನ್ನು  ನೋಡಿದರೆ ಅಲ್ಲಿ ಸಾಕಷ್ಟು ಸಿನಿಮಾಗಳು ಸಿಕ್ಕರೂ ಯಶಸ್ಸಿನ ಸಂಖ್ಯೆ ಕಡಿಮೆಯೇ. ಒಂದು ಹಂತದಲ್ಲಿ ಹರಿಪ್ರಿಯಾ ಕನ್ನಡಕ್ಕಿಂತ ತೆಲುಗು-ತಮಿಳು ಸೇರಿದಂತೆ ಪರಭಾಷೆಯಲ್ಲಿ ಬಿಝಿಯಾದರು.

ಮಧ್ಯೆ ಕನ್ನಡ ಸಿನಿಮಾಗಳಿಂದ ದೂರವಾದಂತೆ ಕಂಡುಬಂದ ಹರಿಪ್ರಿಯಾ, ಈಗ ಕನ್ನಡದಲ್ಲಿ ಸಿಕ್ಕಾಪಟ್ಟೆ ಬಿಝಿ. ಈ ವರ್ಷವೇ
ಹರಿಪ್ರಿಯಾ ನಟನೆಯ ಮೂರು ಚಿತ್ರಗಳು ಬಿಡುಗಡೆಯಾಗಿವೆ. ಇನ್ನೊಂದಿಷ್ಟು ಚಿತ್ರಗಳು ಅವರ ಕೈಯಲ್ಲಿವೆ. ಸತತವಾಗಿ
ಒಂದಲ್ಲ ಒಂದು ಸಿನಿಮಾ ಮೂಲಕ, ಹಾಡಿನ ಮೂಲಕ ಅಥವಾ ತನ್ನ ಗ್ಲಾಮರ್‌ ಮೂಲಕ ಸುದ್ದಿಯಲ್ಲಿರುವ, ಇವತ್ತಿಗೂ
ಬಿಝಿಯಾಗಿರುವ ನಟಿ ಶುಭಾ ಪೂಂಜಾ. “ಜಾಕ್‌ಪಾಟ್‌’ ಮೂಲಕ ಚಿತ್ರರಂಗಕ್ಕೆ ಬಂದ ಶುಭಾ, ಅಂದಿನಿಂದ ಇಂದಿನವರೆಗೆ ಹಿಂದಿರುಗಿ ನೋಡಿಲ್ಲ. ಸಿನಿಮಾ ಮೇಲೆ ಸಿನಿಮಾ ಮಾಡುತ್ತಲೇ ಇದ್ದಾರೆ. ಇಲ್ಲಿವರೆಗೆ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಶುಭಾ ನಟಿಸಿದ್ದಾರೆ. ದಶಕದ ಜರ್ನಿಯಲ್ಲಿ ಶುಭಾ ಸಾಕಷ್ಟು ಗಾಸಿಪ್‌ ಗಳಿಗೂ ಆಹಾರವಾಗಿದ್ದಾರೆ. ಗೆದ್ದಾಗ ಖುಷಿಯಾಗಿದ್ದಾರೆ, ಸೋತಾಗ ಅವಕಾಶದ ಕೊರತೆಯನ್ನೂ ನೋಡಿದ್ದಾರೆ. ಆದರೆ, ಶುಭಾ ಧೃತಿಗೆಡಲಿಲ್ಲ. ಚಿತ್ರರಂಗಕ್ಕೆ 10 ವರ್ಷ ಪೂರೈಸಿರುವ ಶುಭಾ ಅವರ ಪಾತ್ರದ ಆದ್ಯತೆಗಳು ಈಗ ಬದಲಾಗುತ್ತಿವೆ. ಆ ನಿಟ್ಟಿನಲ್ಲೇ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು, ಮಾಡೆಲಿಂಗ್‌ ನಿಂದ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಪಂಜಾಬಿ ಮೂಲದ ರಾಗಿಣಿ ಕನ್ನಡ ಚಿತ್ರರಂಗದ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡೇ ಬಂದಿದ್ದರು.  ಅದಕ್ಕೆ ಸರಿಯಾಗಿ ರಾಗಿಣಿಗೂ ಆರಂಭದಲ್ಲಿ ಸಿಕ್ಕ ಅವಕಾಶಗಳು ಅವರನ್ನು ಸಿಕ್ಕಾಪಟ್ಟೆ ಥ್ರಿಲ್‌ ಆಗಿಸಿದವು. ಸುದೀಪ್‌, ವಿಜಯ್‌, ಉಪೇಂದ್ರ, ದಿಗಂತ್‌, ಶಿವರಾಜಕುಮಾರ್‌ … ಹೀಗೆ ರಾಗಿಣಿ ಬಿಝಿಯಾಗುತ್ತಾ ಹೋಗಿದ್ದನ್ನು ನೋಡಿ ಅದೆಷ್ಟೋ ನಟಿಯರು ಹೊಟ್ಟೆ ಕಿಚ್ಚುಪಡುವಂತಾಯಿತು. ಕನ್ನಡ ಚಿತ್ರರಂಗ ದಲ್ಲಿ ಉದ್ದದ ನಾಯಕಿಯ ಸಮಸ್ಯೆಯನ್ನು ಆ ಸಮಯಕ್ಕೆ ನಿವಾರಿಸಿದವರು ರಾಗಿಣಿ. ಯಶಸ್ಸು ಮನುಷ್ಯನನ್ನು ಉನ್ಮಾದಗೊಳಿಸುತ್ತದೆ ಎಂಬ ಮಾತಿದೆ. ರಾಗಿಣಿ ಕೂಡಾ ಆರಂಭದಲ್ಲಿ ಸಿಕ್ಕ ಯಶಸ್ಸಿನಲ್ಲಿ ತೇಲಾಡಿದರು. ಅದರ ಪರಿಣಾಮವೇ ಅವರ ಲಿಸ್ಟ್‌ನಲ್ಲಿ ಒಂದಷ್ಟು ಸೋತ ಸಿನಿಮಾಗಳು ಕೂಡಾ ಸಿಗುತ್ತವೆ.

ನಾಯಕ ಪ್ರಧಾನ ಸಿನಿಮಾಗಳಿಂದ ಮುಕ್ತವಾಗಿ ನಾಯಕಿ ಪ್ರಧಾನ ಸಿನಿಮಾಗಳಲ್ಲಿ ಬಿಝಿಯಾಗುತ್ತಾ ತನ್ನ ಅಸ್ತಿತ್ವ ಉಳಿಸಿಕೊಂಡ ರಾಗಿಣಿ, ಈಗ “ಎಂಎಂಸಿಎಚ್‌’, “ಟೆರರಿಸ್ಟ್‌’ ಮುಂತಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗಕ್ಕೆ ಬಂದು ಹತ್ತು ವರ್ಷ ಪೂರೈಸಿರುವ ನಾಯಕಿಯರ ಪಟ್ಟಿಯಲ್ಲಿ ಸಂಜನಾ ಕೂಡಾ ಸಿಗುತ್ತಾರೆ. “ಗಂಡ-ಹೆಂಡತಿ’ ಸಿನಿಮಾ ಮೂಲಕ ಸಂಜನಾ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಾಗ ಇಡೀ ಚಿತ್ರರಂಗವೇ ಅಚ್ಚರಿಯಿಂದ ನೋಡಿತು. ಅದಕ್ಕೆ ಕಾರಣ, “ಗಂಡ-ಹೆಂಡತಿ’ ಚಿತ್ರದಲ್ಲಿ ಆಕೆ ಕಾಣಿಸಿಕೊಂಡ ರೀತಿ. ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಳ್ಳುವ ಸಂಜನಾ, “ಗಂಡ-ಹೆಂಡತಿ’ ಸಂಜನಾರಾದರು. ಸಂಜನಾಗೆ ಇಷ್ಟು ವರ್ಷಗಳ ಕೆರಿಯರ್‌ ಬಗ್ಗೆ ಖುಷಿ ಇದೆ. ಹುಡುಗಾಟಕ್ಕಾಗಿ ಸಿನಿಮಾಕ್ಕೆ ಬಂದು, ಇವತ್ತು ಇದನ್ನೇ ಕೆರಿಯರ್‌ ಆಗಿ ಸ್ವೀಕರಿಸಿ ಜೀವನ ಕಟ್ಟಿಕೊಂಡ ಬಗ್ಗೆ ನೆಮ್ಮದಿಯೂ ಇದೆ. 

ರಮ್ಯಾ ಸ್ಟಾರ್‌ ನಟಿಯಾಗಿ ಮಿಂಚುತ್ತಿದ್ದ ಸಮಯದಲ್ಲೇ ಎಂಟ್ರಿಕೊಟ್ಟವರು ರಾಧಿಕಾ ಪಂಡಿತ್‌. ರಾಧಿಕಾ ಎಷ್ಟು ಸೆಟಲ್ಡ್‌ ಆಗಿ ತಮ್ಮ ವೃತ್ತಿಜೀವನವನ್ನು ರಾಧಿಕಾ ಮುಂದುವರೆಸಿಕೊಂಡು ಬಂದರೆಂದರೆ, ಗಾಂಧಿನಗರದಲ್ಲಿ ರಾಧಿಕಾ ಪಂಡಿತ್‌ ಬಗ್ಗೆ ನೆಗೆಟಿವ್‌ ಮಾತನಾಡಲು ವಿಷಯವೇ ಇಲ್ಲದಂತಾಗಿತ್ತು. ನಟ ಯಶ್‌ ಅವರನ್ನು ಮದುವೆಯಾದ ನಂತರ, ಈಗ ಮತ್ತೆ ರಾಧಿಕಾ ತಮ್ಮ ಸಿನಿಜರ್ನಿ ಮುಂದುವರೆಸಿದ್ದಾರೆ. ಚಿತ್ರರಂಗಕ್ಕೆ ಬಂದು ಎಂಟತ್ತು ವರ್ಷ ಪೂರೈಸುತ್ತಾ, ಬಿಝಿಯಾಗಿರುವ ನಟಿಯರು ಇನ್ನೂ ಅನೇಕರಿದ್ದಾರೆ. ಸೋನು ಗೌಡ, ಹರ್ಷಿಕಾ ಪೂಣಚ್ಛ, ಐಂದ್ರಿತಾ ರೇ, ಶರ್ಮಿಳಾ ಮಾಂಡ್ರೆ, ನಿವೇದಿತಾ, ಕೃತಿ ಕರಬಂದ ಭಾವನಾ ರಾವ್‌, ಕಾರುಣ್ಯ ರಾಮ್‌ … ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಉದ್ದ ಬೆಳೆಯುತ್ತಾ ಹೋಗುತ್ತದೆ. ಇದರಲ್ಲಿ ಕೆಲ ನಟಿಯರು ಹತ್ತು ವರ್ಷ ಪೂರೈಸಿದರೆ, ಇನ್ನು ಕೆಲವರು ಏಳೆಂಟು ವರ್ಷವನ್ನು ಯಶಸ್ವಿಯಾಗಿ ಪೂರೈಸಿ, ದಶಕದತ್ತ ಸಾಗುತ್ತಿದ್ದಾರೆ. ಚಿತ್ರರಂಗದಲ್ಲಿ ಹೊಸ ಹೊಸ ಅನುಭಗಳಾಗುತ್ತಾ, ಅವರ ಪಾತ್ರಗಳ ಆದ್ಯತೆಗಳು ಕೂಡಾ ಬದಲಾಗುತ್ತಿವೆ.

ಯಾರ್ಯಾರು ಏನಂತಾರೆ ಗೊತ್ತಾ? 

ಗಾಡ್‌ಫಾದರ್‌ ಇಲ್ಲದ ಜರ್ನಿ
ಇಷ್ಟು ವರ್ಷದ ಜರ್ನಿಯಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ. ಮುಖ್ಯವಾಗಿ ನನ್ನ ಮನಸ್ಥಿತಿ ಬದಲಾಗಿದೆ. ಹೊರಗಿನವರು
ಏನನ್ನುತ್ತಾರೆ ಅನ್ನೋದಕ್ಕಿಂತ ನಮ್ಮವರಿಗೆ ನಮ್ಮ ಮೇಲೆ ನಂಬಿಕೆ ಇದೆಯಾ ಅನ್ನೋದು ಮುಖ್ಯ. ನನಗೆ ಬೆನ್ನೆಲುಬಾಗಿರುವ ನನ್ನ ತಾಯಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾನು  ಯಾರಿಗಾದರೂ ಹೆದರುವುದಾದರೆ ಅದು ಅಮ್ಮನಿಗೆ ಮಾತ್ರ. ಚಿತ್ರರಂಗ ಅಂದಮೇಲೆ ಸುಖಾಸುಮ್ಮನೆ ಗಾಸಿಪ್‌, ನೆಗೆಟಿವ್‌ ಮಾತು ಸಹಜ. ನಾನು ಅವ್ಯಾವುದನ್ನು ಮನಸಿಗೆ ಹಚ್ಚಿಕೊಳ್ಳೋದಿಲ್ಲ. ಅದೇ ಕಾರಣದಿಂದ ಇಷ್ಟು ವರ್ಷದ ಪಯಣವನ್ನು ಖುಷಿಯಿಂದ ಅನುಭವಿಸುತ್ತಿದ್ದೇನೆ. ಮಾಡುವ ಕೆಲಸಕ್ಕೆ ನಿಯತ್ತಾಗಿದ್ದೇನೆ. ಚಿತ್ರರಂಗಕ್ಕೆ ಬಂದಾಗ ನನ್ನ ಕೆರಿಯರ್‌ ಇಷ್ಟು ವರ್ಷ ಸಾಗಿಬರಬಹುದೆಂಬ ನಂಬಿಕೆ ನನಗಿರಲಿಲ್ಲ. ಎರಡೂ¾ರು ಸಿನಿಮಾ ಮಾಡಿ ಹೋಗಬಹುದೆಂದುಕೊಂಡಿದ್ದೆ. ಅದಕ್ಕಿಂತ ಹೆಚ್ಚಾಗಿ ನನಗೆ ಚಿತ್ರರಂಗದಲ್ಲೇ ಮುಂದುವರಿಯಬೇಕೆಂಬ ಆಸೆ ಇರಲಿಲ್ಲ.
ಏಕೆಂದರೆ, ನನಗೆ ಯಾರ ಮಾರ್ಗದರ್ಶನವೂ ಇರಲಿಲ್ಲ. ನನಗೆ ಬೆಂಬಲವಾಗಿ ಇದ್ದಿದ್ದು ಮತ್ತು ಇರುವುದು ನನ್ನ ಅಮ್ಮ ಮಾತ್ರ. ಆದರೆ, ಕ್ರಮೇಣ ಚಿತ್ರರಂಗದ ಬಗ್ಗೆ ಆಸೆ ಬಂತು. ಅವತ್ತಿನಿಂದ ಹಾರ್ಡ್‌ವರ್ಕ್‌ ಮಾಡುತ್ತಾ ಬಂದೆ. ನನ್ನ ಕಡೆಯಿಂದ ಒಂದು ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಪಟ್ಟೆ. 
ಹರಿಪ್ರಿಯಾ

ಗಾಸಿಪ್‌ಗ್ಳು ಸ್ಟ್ರಾಂಗ್‌ ಮಾಡಿದ್ದು
ನಾನು ಚಿತ್ರರಂಗಕ್ಕೆ ಆರಂಭದಲ್ಲಿ ಬಂದಾಗ ನಾಯಕಿಯರ ಭವಿಷ್ಯ ಮೂರ್‍ನಾಲ್ಕು ವರ್ಷ ಎಂದು ಹೇಳಿದ್ದರು. ಆದರೆ, ನನಗೆ ನನ್ನ ಮೇಲೆ ವಿಶ್ವಾಸವಿತ್ತು. ಅದಕ್ಕಿಂತ ಹೆಚ್ಚು ನಮ್ಮ ಚಿತ್ರರಂಗದಲ್ಲಿ ಕಲ್ಪನಾ, ಆರತಿ, ಲೀಲಾವತಿ ಸೇರಿದಂತೆ ಅನೇಕರು ನಟಿಯರು ಅನೇಕ ವರ್ಷ ಬಿಝಿಯಾಗಿಯೇ ಇದ್ದರು. ಅವರೆಲ್ಲರೂ ನನಗೆ ಸ್ಫೂರ್ತಿ. ಮುಖ್ಯವಾಗಿ ಕಲಾವಿದರಿಗೆ ವಿಶ್ವಾಸಬೇಕು, ಒಂದೆರಡು ಸಿನಿಮಾ ಸೋತ ಕೂಡಲೇ ಕೆರಿಯರ್‌ ಮುಗಿದೇ ಹೋಯಿತು ಎಂದು ಭಾವಿಸಬಾರದು. ಆ ವಿಷಯದಲ್ಲಿ ನಾನು ತುಂಬಾ ಸ್ಟ್ರಾಂಗ್‌ 
ಆಗಿದ್ದೆ. ಬಂದಿದ್ದನ್ನು ಬಂದಂತೆ ಸ್ವೀಕರಿಸುತ್ತಾ ಸಾಗಿದೆ. ನನ್ನ ಬಗ್ಗೆ ಸಾಕಷ್ಟು ಗಾಸಿಪ್‌ಗ್ಳು ಸುತ್ತಿದವು. ಆದರೆ ನಾನು ಅವೆಲ್ಲವನ್ನು
ದಾಟಿ ಮುಂದೆ ಬರುತ್ತಲೇ ಇದ್ದೇನೆ ಎಂದರೆ ಅದಕ್ಕೆ ಕಾರಣ ನನ್ನ ಆರಂಭ. ನಾನು ಚಿತ್ರರಂಗಕ್ಕೆ ಸಾಕಷ್ಟು ಕಷ್ಟಪಟ್ಟು
ಬಂದವಳು. . ನಾನು ತುಂಬಾ ಕಷ್ಟಪಟ್ಟು ಬಂದಿದ್ದರಿಂದ ತುಂಬಾ ಸ್ಟ್ರಾಂಗ್‌ ಆಗಿದ್ದೆ. ಏನೇ ಆರೋಪ, ಗಾಸಿಪ್‌ ಬಂದರೂ 
ನಾನು ಧೃತಿಗೆಡಲಿಲ್ಲ
ಶುಭಾ ಪೂಂಜಾ

ಪ್ಲ್ರಾನ್‌ ಮಾಡಿ ಬರಲಿಲ್ಲ
ಚಿತ್ರರಂಗಕ್ಕೆ ಬರುವಾಗ ನನಗಿದ್ದ ಆಲೋಚನೆ ಒಳ್ಳೆಯ ಕಲಾವಿದೆಯಾಗಬೇಕೆಂಬುದಷ್ಟೇ. ಇಲ್ಲೇ ಬಂದು ದುಡ್ಡು ಮಾಡಬೇಕೆಂಬ ಆಲೋಚನೆ ಇರಲಿಲ್ಲ. ಆದರೆ, ಚಿತ್ರರಂಗಕ್ಕೆ ಬಂದ ನಂತರ ಗೊತ್ತಾಯಿತು. ನಾನು ಕೂಡಾ ಬೇರೆ ತರಹ, ಇತರ ನಟಿಯರಂತೆ
ಯೋಚಿಸಿದ್ದರೆ ಇವತ್ತು ನಾನೂ ಟಾಪ್‌ ನಟಿಯರ ಸಾಲಿನಲ್ಲಿ ಇರುತ್ತಿದ್ದೆ. ಆದರೆ, ನಾನು ಕೆರಿಯರ್‌ ಪ್ಲ್ರಾನ್‌ ಮಾಡಲೇ ಇಲ್ಲ.
ಆ ಸ್ಟಾರ್‌ ನಟನ ಜೊತೆ ನಟಿಸಬೇಕು, ಈ ನಿರ್ದೇಶಕನ ಸಿನಿಮಾದಲ್ಲಿ ನಟಿಸಿದರೆ ಮೈಲೇಜ್‌ ಸಿಗುತ್ತದೆ ಎಂಬ ಲೆಕ್ಕಾಚಾರ ನನಗೆ ಗೊತ್ತಾಗುವ ಹೊತ್ತಿಗೆ ತಡವಾಗಿತ್ತು. ಇಷ್ಟು ವರ್ಷದ ಜರ್ನಿಯಲ್ಲಿ ಎರಡೂ¾ರು ವರ್ಷ ಕೆಲಸ ಇರಲಿಲ್ಲ. ಸಹಜವಾಗಿಯೇ ಹಣಕಾಸಿನ
ಸಮಸ್ಯೆ ತಲೆದೋರಿತ್ತು. ಪ್ರತಿಯೊಂದಕ್ಕೂ ಮನೆಯಲ್ಲಿ ಕಾಸು ಕೇಳ್ಳೋದು ಚೆನ್ನಾಗಿರಲಿಲ್ಲ. ಆ ಕಾರಣದಿಂದಲೇ ನಾನು ಕೆಲವು 
ಸಿನಿಮಾಗಳಲ್ಲಿ ಐಟಂ ಸಾಂಗ್‌ ಮಾಡಿದೆ, ಬಿಗ್‌ಬಾಸ್‌ ಶೋಗೆ ಹೋದೆ. ಅವೆಲ್ಲವೂ ನನ್ನ ಆರ್ಥಿಕ ಸಮಸ್ಯೆಗಳಿಗಾಗಿ. ಹಾಗಂತ
ನನಗೆ ಅವ್ಯಾವುದರ ಬಗ್ಗೆಯೂ ಬೇಸರವಿಲ್ಲ. 
ನೀತು

ಪಾಸಿಟಿವ್‌ ಆಗಿದ್ದೇನೆ
ಹತ್ತು ವರ್ಷಗಳ ಹಿಂದೆ ನಾನು ಚಿತ್ರರಂಗಕ್ಕೆ ಬರುವಾಗ ನನಗೆ ಸಿನಿಮಾ ಬಗ್ಗೆ ಕಲ್ಪನೆಯೇ ಇರಲಿಲ್ಲ. ನಿಜ ಹೇಳಬೇಕೆಂದರೆ
ಹುಡುಗಾಟಕ್ಕಾಗಿ ಸಿನಿಮಾಕ್ಕಾಗಿ ಬಂದವಳು ನಾನು. ಯಾವ ಗುರಿನೂ ಇರಲಿಲ್ಲ. ಅದರಲ್ಲೂ ಮೊದಲ ಸಿನಿಮಾ ಒಪ್ಪಿಕೊಳ್ಳಲು ಕಾರಣ ಕಾಸು. ಎರಡು ಲಕ್ಷ ಸಂಭಾವನೆ ಕೊಡುತ್ತಾರೆಂದಾಗ ಖುಷಿಯಾಗಿ ಸಿನಿಮಾ ಒಪ್ಪಿಕೊಂಡೆ. ಆ ಕಾಸಿನಿಂದ ಸೆಕೆಂಡ್‌ ಹ್ಯಾಂಡ್‌ ಜೆನ್‌ ಕಾರು ತಗೊಂಡು ಕಾಲೇಜಿಗೆ ಹೋಗಿ ಸ್ಟೈಲ್‌ ಮಾಡಬಹುದೆಂಬ ಆಸೆ ಇತ್ತು. ಆದರೆ ಬರಬರುತ್ತಾ ಸಿನಿಮಾ ಎಂದರೆ ಇದಲ್ಲ, ಇದರಾಚೆ ಏನೋ ಇದೆ ಎಂದು ತಿಳಿಯಿತು. ಸೀರಿಯಸ್‌ ಆಗಿ ಸಿನಿಮಾ ಬಗ್ಗೆ ಫೋಕಸ್‌ ಮಾಡಿದೆ. ನಾನು ತುಂಬಾ ಸ್ಟ್ರಾಂಗ್‌, ನನ್ನ
ಬಗ್ಗೆ ಯಾರೂ ಏನೇ ನೆಗೆಟಿವ್‌ ಮಾತನಾಡಿದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ. ಎಷ್ಟು ಪಾಸಿಟಿವ್‌ ಆಗಿರಲು ಸಾಧ್ಯವೋ ಅಷ್ಟು ಇರುತ್ತೇನೆ. ಇಲ್ಲಿವರೆಗೆ ನಾನು 35ಕ್ಕೂ ಹೆಚ್ಚು ಸಿನಿಮಾಗಳನ್ನು ಪೂರೈಸಿದ್ದೇನೆ. ಗುರಿ ಇಲ್ಲದೇ ಆರಂಭವಾದ ನನ್ನ ಜರ್ನಿ ಒಂದು ಗುರಿಯತ್ತ ಸಾಗಿದೆ. ಆರಂಭದಲ್ಲಿ ಒಂದಷ್ಟು ಸಿನಿಮಾಗಳನ್ನು ಬೇಕಾಬಿಟ್ಟಿ ಒಪ್ಪಿಕೊಂಡಿದ್ದು ನಿಜ. ಆದರೆ ಈಗ ಹೆಚ್ಚು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದೇನೆ. ಇನ್ನೂ ಹಲವು ಪಾತ್ರಗಳನ್ನು ಮಾಡೋದು ಬಾಕಿ ಇದೆ. “ಬಾಹುಬಲಿ’ ನಿರ್ಮಾಪಕರು ನಿರ್ಮಿಸುತ್ತಿರುವ ತೆಲುಗು ಟಿವಿ ಶೋವೊಂದರಲ್ಲಿ ನಟಿಸುತ್ತಿದ್ದೇನೆ. 
ಸಂಜನಾ

ಏರಿಳಿತದ ಪಯಣ
“ಮುಂಗಾರು ಮಳೆ ಚಿತ್ರದ ಅವಕಾಶ ಸಿಕ್ಕಾಗ ನನಗೆ ಕನ್ನಡ ಚಿತ್ರರಂಗದ ಬಗ್ಗೆ ಏನೂ ಗೊತ್ತಿರಲಿಲ್ಲ. ಡಾ.ರಾಜ್‌ ಕುಮಾರ್‌ ಅವರ ಬಗ್ಗೆ ಗೊತ್ತಿತ್ತಷ್ಟೇ. ಆ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿ ನನಗೊಂದು ಬ್ಯೂಟಿಫ‌ುಲ್‌ ಕೆರಿಯರ್‌ ಕೊಟ್ಟಿದ್ದು ಸುಳ್ಳಲ್ಲ. ಆರಂಭದಲ್ಲಿ ಸಿನಿಮಾ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಸಿಕ್ಕ ಅವಕಾಶಗಳನ್ನು ಒಪ್ಪಿಕೊಳ್ಳುತ್ತಿದ್ದೆ. ಕೆಲವು ಹಿಟ್‌ ಆದರೆ, ಇನ್ನು ಕೆಲವು ಇನ್ನಿಲ್ಲದಂತೆ ಸೋತವು. ಅದೇನೇ ಆದರೂ ಚಿತ್ರರಂಗದಲ್ಲಿ ನನ್ನ ಬೆಳವಣಿಗೆ ಬಗ್ಗೆ ನನಗೆ ಖುಷಿ ಇದೆ. ಅದ್ಭುತ ಎನ್ನುವಂತಹ ಸಿನಿಮಾದಿಂದ ಹಿಡಿದು ಡಬ್ಟಾ ಎನ್ನುವ ಸಿನಿಮಾದವರೆಗೂ ಮಾಡಿದ್ದೀನಿ. ಕಲಾವಿದೆ ಎಂದ ಮೇಲೆ ಇವೆಲ್ಲವೂ ಸಾಮಾನ್ಯ. ಒಳ್ಳೊಳ್ಳೆ ತಂತ್ರಜ್ಞರ ಜೊತೆಯೂ ನಟಿಸಿದ್ದೇನೆ. ನನಗೆ ಕನ್ನಡ ಚಿತ್ರರಂಗ ಎಲ್ಲವನ್ನು ಕೊಟ್ಟಿದೆ ಎನ್ನಬಹುದು. ಸೋಲು-ಗೆಲುವು ಏರಿಳಿತಗಳು ಸಹಜ. ಅವೆಲ್ಲವನ್ನು ನಾನು ಸಮಾನವಾಗಿ ಸ್ವೀಕರಿಸುತ್ತಾ ಬರುತ್ತಿದ್ದೇನೆ. ನನಗೆ ಏನು ಇಷ್ಟವಾಗುತ್ತೋ ಅದನ್ನು ಮಾಡುತ್ತಿದ್ದೇನೆ. “ದಂಡುಪಾಳ್ಯ’ ಚಿತ್ರದ ಪಾತ್ರ ನನಗೆ ಹೊಸದಾಗಿ ಕಂಡಿತು. ಅದಕ್ಕಾಗಿ ಮಾಡಿದೆ. ಅದೇ ರೀತಿ ಇಷ್ಟಪಟ್ಟು ಅನೇಕ ಪಾತ್ರಗಳನ್ನು
ಮಾಡಿದ್ದೇನೆ. ಇನ್ನು ಕೆಲವು ನಾನು ನಟಿಸಿದ ಸಿನಿಮಾಗಳನ್ನು ನಾನೇ ನೋಡಿಲ್ಲ
ಪೂಜಾ ಗಾಂಧಿ

ಖುಷಿಕೊಟ್ಟ ಜರ್ನಿ
ನಾನು ಚಿತ್ರರಂಗಕ್ಕೆ ಬರುವಾಗ ಕನ್ನಡ ಕಲಿಯುತ್ತೇನೆ, ನಿಮ್ಮೆಲ್ಲರಲ್ಲಿ ಕನ್ನಡದಲ್ಲಿ ಮಾತನಾಡುತ್ತೇನೆ ಎಂದುಕೊಂಡಿರಲಿಲ್ಲ. ಆದರೆ ಇಷ್ಟು ವರ್ಷ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಬಿಝಿಯಾಗಿದ್ದೇನೆ. ಒಳ್ಳೆಯ ಪಾತ್ರಗಳು ಸಿಕ್ಕ ಖುಷಿ ಇದೆ. ಬಹುತೇಕ ನಾಯಕ ನಟರ ಜೊತೆ ನಟಿಸಿದ್ದೇನೆ. ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾಗಳಿಂದ ಹಿಡಿದು ಹೀರೋಯಿನ್‌ ಓರಿಯೆಂಟೆಡ್‌ 
ಸಿನಿಮಾಗಳಲ್ಲೂ ಮಾಡಿದ್ದೇನೆ. ಒಳ್ಳೆಯ ಅನುಭವ, ಕೆಟ್ಟ ಅನುಭವ ಎರಡೂ ಆಗಿದೆ. ಎಲ್ಲಾ ಕಲಾವಿದರಂತೆ ನನ್ನ ಸಿನಿಪಯಣದಲ್ಲೂ ಸಾಕಷ್ಟು ಏರಿಳಿತಗಳಾಗಿವೆ. ಹಾಗಂತ ನಾನು ಬೇಸರಪಟ್ಟುಕೊಳ್ಳಲಿಲ್ಲ. ಏಕೆಂದರೆ ಸಮಯ ಯಾವತ್ತೂ ಒಂದೇ ರೀತಿ ಇರೋದಿಲ್ಲ.
ಅದನ್ನು ನಂಬಿಕೊಂಡು ಜರ್ನಿ ಮುಂದುವರೆಸಿದವಳು ನಾನು. ಒಂದು ಹಂತದಲ್ಲಿ ನಾನು ದಪ್ಪಗಾದ ಬಗ್ಗೆ ಅನೇಕರು ಟೀಕೆ
ಮಾಡಿದರು, ಇನ್ನು ಇವಳ ಕೆರಿಯರ್‌ ಇಷ್ಟೇ ಎಂದು ಮಾತನಾಡಿಕೊಂಡರು. ಆಗ ನಾನು ಏನೂ ಮಾತನಾಡದೇ ಸ್ಲಿಮ್‌ ಆಗುವ ಮೂಲಕ ಉತ್ತರ ಕೊಟ್ಟೆ. ಚಿತ್ರರಂಗದಲ್ಲಿ ಅನುಭವ ಆಗುತ್ತಿದ್ದಂತೆ ನಮ್ಮ ಆದ್ಯತೆಗಳು ಕೂಡಾ ಬದಲಾಗುತ್ತಾ ಹೋಗುತ್ತವೆ. ಅದಕ್ಕೆ ತಕ್ಕಂತಹ ಪಾತ್ರಗಳನ್ನು ಈಗ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ.
ರಾಗಿಣಿ

ನಮ್ಮ ಸಾಮರ್ಥ್ಯ ಮುಖ್ಯ
“ಕೆಲವು ನಟಿಯರಂತೆ ನಾನು ಚಿತ್ರರಂಗದಲ್ಲಿ ತುಂಬಾ ಕಷ್ಟಪಟ್ಟಿಲ್ಲ. ಏಕೆಂದರೆ ನಮ್ಮ ತಂದೆ ಚಿತ್ರರಂಗದಲ್ಲೇ ಇದ್ದವರಾದ್ದರಿಂದ ಆರಂಭ ಸುಲಭವಾಯಿತು. ಚಿತ್ರರಂಗದ ಒಳಹರಿವು ಕೂಡಾ ತಕ್ಕಮಟ್ಟಿಗೆ ಗೊತ್ತಿತ್ತು. ಆದರೆ ನಟಿಯಾಗಿ ನನ್ನ ಸಾಮರ್ಥ್ಯ ಸಾಬೀತುಮಾಡಿಕೊಳ್ಳುವ ಸವಾಲು ನನ್ನ ಮೇಲಿತ್ತು. ಅಲ್ಲಿ ಯಾವ ಪ್ರಭಾವ, ಪರಿಚಯ ನಡೆಯೋದಿಲ್ಲ. ಆ ನಿಟ್ಟಿನಲ್ಲಿ ನಾನು ಒಳ್ಳೆಯ ಸಿನಿಮಾಗಳನ್ನು ಆಯ್ಕೆ ಮಾಡಲು ಪ್ರಯತ್ನಪಟ್ಟೆ. ಹಾಗಂತ ನಾವು ಆಯ್ಕೆ ಮಾಡಿದ ಸಿನಿಮಾಗಳೆಲ್ಲವೂ ನಮ್ಮ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತವೆ ಎನ್ನುವಂತಿಲ್ಲ. ಅಲ್ಲಿ ನಿರ್ದೇಶಕರ ಕಲ್ಪನೆ ಕೂಡಾ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ನಾನು ನಟಿಸಿದ ಸಿನಿಮಾಗಳ ಬಗ್ಗೆ ಖುಷಿ ಇದೆ. ಸಹಜವಾಗಿಯೇ ಕೆಲವು ಕಡೆ ಎಡವಿದ್ದೇನೆ. ಅದೊಂದು ಪಾಠ ಎಂದುಕೊಂಡು ಮುಂದೆ ಸಾಗಿದ್ದೇನೆ. ಇಷ್ಟು ವರ್ಷಗಳಲ್ಲಿ ನಾನು ನಟಿಸಿದ್ದು ಕೇವಲ 18 ಚಿತ್ರಗಳಲ್ಲಿ ಮಾತ್ರ. ಯಾಕೆ ಎಂದು ನೀವು ಕೇಳಬಹುದು. ನಾನೊಂದು ತಮಿಳು ಸಿನಿಮಾ ಒಪ್ಪಿಕೊಂಡಿದ್ದೆ ಮತ್ತು ಆ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಕೂಡಾ ಇಟ್ಟುಕೊಂಡಿದ್ದೆ. ಆದರೆ ಆ ಸಿನಿಮಾ ಅರ್ಧಕ್ಕೆ ನಿಂತು ಹೋಯಿತು. ಆಗ ನನಗೆ ಒಂದು ಸಿನಿಮಾಕ್ಕೆ ನಿರ್ಮಾಪಕರು ಎಷ್ಟು ಮುಖ್ಯ ಎಂದು. ಅಂದಿನಿಂದ ನಾನು ತುಂಬಾ ಚೂಸಿಯಾಗುತ್ತಾ ಹೋದೆ.
ಸೋನು ಗೌಡ

ಯಾರಿಗೂ ಕಣ್ಣೀರು ಹಾಕಿಸಿಲ್ಲ
ನಾನು ಚಿತ್ರರಂಗಕ್ಕೆ 15 ವರ್ಷದವಳಾಗಿದ್ದಾಗ ಬಂದೆ. ಆ ನಂತರ ಐದು ವರ್ಷ ಎಜುಕೇಶನ್‌ಗಾಗಿ ಗ್ಯಾಪ್‌ ತಗೊಂಡು ಕೆರಿಯರ್‌ ಬಗ್ಗೆ ಹೆಚ್ಚು ಗಮನಹರಿಸಿಲ್ಲ. ಆರು ವರ್ಷಗಳಿಂದ ನಾನು ಸಂಪೂರ್ಣವಾಗಿ ಸಿನಿಮಾ ಕಡೆ ಗಮನಕೊಟ್ಟೆಯಷ್ಟೇ. ಇಲ್ಲಿವರೆಗೆ ಮಾಡಿದ ಯಾವುದೇ ಸಿನಿಮಾಗಳ ಬಗ್ಗೆ ನನಗೆ ಬೇಸರವಿಲ್ಲ. ಎಲ್ಲವನ್ನು ಖುಷಿಯಿಂದಲೇ ಮಾಡಿದ್ದೇನೆ. ಕೆಲವೊಮ್ಮೆ ನಾನು ತಪ್ಪು ಹೆಜ್ಜೆ ಇಟ್ಟೆ, ಯಾವುದೋ ಸಿನಿಮಾ ಒಪ್ಪಿಕೊಂಡೆ ಅನಿಸುತ್ತದೆ. ಆದರೂ ಅದರ ಹಿಂದಿನ ಉದ್ದೇಶ ನನಗೆ ಖುಷಿಕೊಟ್ಟಿದೆ. ನನ್ನ ಮೇಕಪ್‌
ಮ್ಯಾನ್‌ಗಾಗಿಯೂ ನಾನು ಸಿನಿಮಾ ಒಪ್ಪಿಕೊಂಡೆ. ಸತತವಾಗಿ ಸಿನಿಮಾವನ್ನು ನಂಬಿರುವ ಅವರಿಗೆ ನನ್ನ ಸಿನಿಮಾ ಚಿತ್ರೀಕರಣ
ಮುಗಿದಾಗ ಮುಂದೇನು ಎಂದು ಬೇಸರಿಸಿಕೊಂಡರು. ಆಗ ಮತ್ತೂಂದು ಸಿನಿಮಾಕ್ಕೆ ಸಹಿ ಮಾಡಿದೆ. ಆ ಮೂಲಕ ಅವರಿಗೆ ಕೆಲಸ 
ಸಿಕ್ಕಿತು. ಒಂದಂತೂ ಖುಷಿ ಇದೆ. ನಾನು ಯಾರ ಸಹಾಯ ಇಲ್ಲದೇ ಚಿತ್ರರಂಗಕ್ಕೆ ಬಂದವಳು. ಅವಕಾಶಕ್ಕಾಗಿ ಯಾವುದೇ ಅಡ್ಡದಾರಿ ಹಿಡಿದಿಲ್ಲ. ನಂದೇ ಆದ ಗತ್ತಲ್ಲಿ ಬಂದಿದ್ದೀನಿ, ಅದನ್ನೇ ಮುಂದುವರೆಸಿಕೊಂಡು ಹೋಗಿದ್ದೀನಿ. ಅವಕಾಶಕ್ಕಾಗಿ ಯಾರ ಕಾಲಿಗೂ ಬಿದ್ದಿಲ್ಲ. ಅದಕ್ಕಿಂತ ಹೆಚ್ಚಾಗಿ ನನ್ನಿಂದ ಯಾವ ನಿರ್ಮಾಪಕರು ಕಣ್ಣೀರು ಹಾಕಿಲ್ಲ.
 ಹರ್ಷಿಕಾ ಪೂಣಚ್ಛ

ರವಿಪ್ರಕಾಶ್ ರೈ 

ಟಾಪ್ ನ್ಯೂಸ್

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

naksal (2)

Chhattisgarh; ನಿಲ್ಲದ ನಕ್ಸಲ್‌ ಬೇಟೆ: ಓರ್ವನ ಹತ್ಯೆ

prahlad-joshi

Congress ಪಕ್ಷದಿಂದ ಅಂಬೇಡ್ಕರ್‌ಗೆ ಅಗೌರವ: ಸಚಿವ ಜೋಶಿ ಆರೋಪ

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ರಘುನಂದನ ಕಾಮತ್‌ ಪಂಚಭೂತಗಳಲ್ಲಿ ಲೀನ

Naturals Ice Cream; ರಘುನಂದನ ಕಾಮತ್‌ ಪಂಚಭೂತಗಳಲ್ಲಿ ಲೀನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

movies

Sandalwood; ಇಂದು ತೆರೆಗೆ ಬರುತ್ತಿದೆ ನಾಲ್ಕು ಸಿನಿಮಾಗಳು

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Aditya’s kangaroo movie released

Kangaroo; ಥ್ರಿಲ್ಲರ್‌ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

ec-aa

Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

naksal (2)

Chhattisgarh; ನಿಲ್ಲದ ನಕ್ಸಲ್‌ ಬೇಟೆ: ಓರ್ವನ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.