ಹಲಸಿನ ಬೀಜದ ಹೋಳಿಗೆ
Team Udayavani, Jun 30, 2018, 3:55 PM IST
ಬೇಕಾಗುವ ಸಾಮಗ್ರಿ:
ಒಣಗಿದ ಹಲಸಿನ ಬೀಜ- 6ರಿಂದ 8 ಕಪ್
ನೀರು – 2 ಲೀಟರ್
ತೆಂಗಿನ ಕಾಯಿಯ ತುರಿ – 2 ಕಪ್
ಬೆಲ್ಲ -ಅರ್ಧ ಕೆ.ಜಿ.
ಬೆಳ್ತಿಗೆ ಅಕ್ಕಿ – 2 ಕಪ್
ಅರಸಿನ ಪುಡಿ -ಅರ್ಧ ಚಮಚ
ತುಪ್ಪ – 4 ಚಮಚ
ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ
ಅಕ್ಕಿಯನ್ನು ಮೂರು ಕಪ್ ನೀರಿನಲ್ಲಿ ಒಂದು ಗಂಟೆ ಕಾಲ ನೆನೆ ಹಾಕಿ. ಒಣಗಿದ ಹಲಸಿನ ಬೀಜದ ಸಿಪ್ಪೆ ತೆಗೆದು ಚೆನ್ನಾಗಿ ತೊಳೆಯಿರಿ. ತೊಳೆದ ಹಲಸಿನ ಬೀಜವನ್ನು ಮೂರು ಕಪ್ ನೀರು ಹಾಕಿ ಬೇಯಿಸಿರಿ. ಬೇಯಿಸಿದ ಹಲಸಿನ ಬೀಜ ತಣಿದಾಗ ಅದಕ್ಕೆ ಬೆಲ್ಲ ಸೇರಿಸಿ, ನೀರು ಹಾಕದೆ ಗಟ್ಟಿಯಾಗಿ ರುಬ್ಬಿ. ಹೀಗೆ ತಯಾರಿಸಿದ ಹಿಟ್ಟನ್ನು ಹಣ್ಣಡಿಕೆ ಅಥವಾ ಹದಗಾತ್ರದ ಲಿಂಬೆಹಣ್ಣಿನಷ್ಟು ದೊಡ್ಡದಾದ ಉಂಡೆ ಮಾಡಿ.
ಆ ಉಂಡೆಗಳನ್ನು ಅರ್ಧ ಸೆಂ.ಮೀ. ದಪ್ಪಕ್ಕೆ (ರೊಟ್ಟಿಯಂತೆ) ತಟ್ಟಿ. ನೆನೆ ಹಾಕಿದ ಅಕ್ಕಿಯನ್ನು ತೊಳೆದು, ಬೇಕಾದಷ್ಟು ನೀರು, ಅರಸಿನ ಪುಡಿ, ಉಪ್ಪು ಹಾಕಿ ತೆಳುವಾಗಿ (ನೀರು ದೋಸೆಯ ಹಿಟ್ಟಿನಂತೆ)ರುಬ್ಬಿ. ಅನಂತರ ಕಾವಲಿಯನ್ನು ಸಣ್ಣ ಉರಿಯಲ್ಲಿಡಿ. ಬಿಸಿಯಾದಾಗ, ತಟ್ಟಿದ ಹಲಸಿನ ಬೀಜದ ಹಿಟ್ಟನ್ನು ಅಕ್ಕಿ ಹಿಟ್ಟಿನಲ್ಲಿ ಮುಳುಗಿಸಿ ಕಾವಲಿಗೆ ಹಾಕಿ. ಅದರ ಮೇಲ್ಗಡೆಗೆ ಸ್ವಲ್ಪ ತುಪ್ಪ ಸವರಿ ಐದು ನಿಮಿಷ ಬೇಯಿಸಿ. ಅನಂತರ ಅದನ್ನು ತಿರುಗಿಸಿ ಹಾಕಿ ಮತ್ತೆ ಐದು ನಿಮಿಷ ಬೇಯಿಸಿ. ಈಗ ಹಲಸಿನ ಬೀಜದ ಹೋಳಿಗೆ ತಯಾರು. ಬಿಸಿ ಬಿಸಿ ತಿನ್ನಲು ಇದು ಬಲುರುಚಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ