ಸಾಲ ಇದ್ದ ವೇಳೆಯಲ್ಲಿ ಹೂಡಿಕೆ ಹೇಗಿರಬೇಕು?


Team Udayavani, Jul 2, 2018, 1:01 PM IST

sala.jpg

ಸಾಲ ಎಂಬುದು ಜೀವನದ ಅನಿವಾರ್ಯ ಭಾಗ. ಅದೇ ರೀತಿ ಬದುಕಿನ ಭದ್ರತೆಗೆ ಹೂಡಿಕೆ ಕೂಡಾ ಮುಖ್ಯ. ಸಾಲ ಮತ್ತು ಹೂಡಿಕೆಯ ಮಧ್ಯೆ ಸಮತೋಲನ ಸಾಧಿಸುವುದು ಅತೀ ಅಗತ್ಯ. ಅವೆರಡನ್ನೂ ಸರಿದೂಗಿಸಲು ನಿಮಗೆ ನೆರವಾಗುವ ಕೆಲ ಸಂಗತಿಗಳು ಇಲ್ಲಿವೆ.

ಹಣಕಾಸಿನ ವಿಚಾರಕ್ಕೆ ಬಂದಾಗ ಹೂಡಿಕೆ ಮತ್ತು ಸಾಲ ಎರಡೂ ಮುಖ್ಯವಾಗುತ್ತವೆ.  ಗೃಹ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸ, ಮದುವೆ, ವೈದ್ಯಕೀಯ ವೆಚ್ಚಗಳಿಗಾಗಿ ದೊಡ್ಡ ಮೊತ್ತದ ಹಣ ಬೇಕಾದಾಗ ಸಾಲ ಮಾಡಲೇಬೇಕಾಗುತ್ತದೆ. ಆದರೆ ಇದೇ ವೇಳೆ ಹೂಡಿಕೆ ಇಲ್ಲದೇ ಹೋದರೆ, ಭವಿಷ್ಯದಲ್ಲಿ ಬಗೆ ಬಗೆಯ ಕಷ್ಟಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆಗಳಿವೆ. ಕಷ್ಟಕಾಲದಲ್ಲಿ, ಕಾಸಿಲ್ಲ ಎಂಬ ಒಂದೇ ಕಾರಣದಿಂದ ಅತಂತ್ರ ಪರಿಸ್ಥಿತಿ ಎದುರಿಸಬೇಕಾದ ಸಂದರ್ಭವೂ ಜೊತೆಯಾ ಗಬಹುದು. ಹಾಗಾಗಿ, ವೈಯಕ್ತಿಕ ಹಣಕಾಸನ್ನು ನಿರ್ವಹಿಸುವಾಗ, ಸಾಲ ಮತ್ತು ಹೂಡಿಕೆಯಲ್ಲಿ ಯಾವುದಕ್ಕೆ ಹೆಚ್ಚು ಒತ್ತು ನೀಡಬೇಕು ಎಂಬ ಗೊಂದಲಕ್ಕೆ ಬೀಳುವುದು ಸಹಜ. ಸಾಲದ ಮರುಪಾವತಿಯನ್ನು ನೀವು ನಿರ್ಲಕ್ಷಿಸಿದರೆ,  ಬಡ್ಡಿ ಹೆಚ್ಚುತ್ತಾ ಹೋಗುತ್ತದೆ. ಅದು ನಿಮ್ಮನ್ನು ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿಸಬಹುದು. ನೀವು ಸಾಲ ತೀರಿಸುವುದರ ಕಡೆಗೆ ಮಾತ್ರ ಗಮನ ನೀಡಿ ಹೂಡಿಕೆಯನ್ನು ನಿರ್ಲಕ್ಷಿಸಿದರೆ, ಅದು ಹಣಕಾಸು ಉದ್ದೇಶಗಳನ್ನು ಈಡೇರಿಸಲು ನೀವು ವಿಫ‌ಲಗೊಳ್ಳಬಹುದು. ಹಾಗಾಗಿ, ಸಾಲ ಮತ್ತು ಹೂಡಿಕೆಯ ಮಧ್ಯೆ ಸಮತೋಲನವನ್ನು ಕಾಪಾಡುವುದು ಅತೀ ಮುಖ್ಯ.
 ಈಗಾಗಲೇ ಸಾಲದಲ್ಲಿರುವಾಗ, ನೀವು ಹಣ ಹೂಡಿಕೆ ಮಾಡಬೇಕೇ ಅಥವಾ ಪ್ರಸ್ತುತ ಇರುವ ಸಾಲ ಶೂನ್ಯವಾಗುವ ತನಕ ಕಾಯಬೇಕೇ?

ಬಡ್ಡಿದರದಂಥ ನಿರ್ದಿಷ್ಟ ಅಂಶಗಳು ಹೂಡಿಕೆ ಮಾಡಬೇಕೇ ಅಥವಾ ಸಾಲವನ್ನು ಮೊದಲು ಪಾವತಿಸಬೇಕೇ ಎಂಬುದನ್ನು ನಿರ್ಧರಿಸಲು ನೆರವಾಗುತ್ತವೆ. ನೀವು ಹೂಡಿಕೆಯ ಮೂಲಕ ಗಳಿಸುವ ನಿರೀಕ್ಷೆ ಇರುವ ಬಡ್ಡಿ ಅಥವಾ ರಿಟರ್ನ್ಗೆ ಹೋಲಿಸಿದಾಗ ಸಾಲದ ಮೇಲೆ ಪ್ರಸ್ತುತ ಇರುವ ಮತ್ತು ನಿರೀಕ್ಷಿತ ಬಡ್ಡಿದರವು ಗಣನೀಯವಾಗಿ ಕಡಿಮೆ ಇದ್ದರೆ, ಆಗ ನೀವು ಸಾಲದ ಪೂರ್ವಪಾವತಿಯ ಬದಲು ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ, ಗೃಹ ಸಾಲದ ಮೇಲಿನ ಬಡ್ಡಿದರ ಶೇ.8.5ರಷ್ಟಿದ್ದು, ವಾರ್ಷಿಕ ಬೋನಸ್‌ ಮೂಲಕ ಹೆಚ್ಚುವರಿ ಗಳಿಸಿದ್ದೀರಿ ಎಂದಿಟ್ಟುಕೊಳ್ಳೋಣ. ಆಗ ನೀವು ಸಾಲವನ್ನು ಪೂರ್ವ ಪಾವತಿ ಮಾಡುವ ಅಥವಾ ಬೋನಸ್‌ ಮೊತ್ತವನ್ನು ಸಮತೋಲಿತ ಫ‌ಂಡ್‌ನ‌ಲ್ಲಿ ಹೂಡಿಕೆ ಮಾಡುವ ಆಯ್ಕೆಗಳನ್ನು ಹೊಂದುತ್ತೀರಿ. ಫ‌ಂಡ್‌ನ‌ಲ್ಲಿ ಮಾಡುವ ಹೂಡಿಕೆ ತೆರಿಗೆ ಕಳೆದು ಶೇ.12ರಷ್ಟು ವಾರ್ಷಿಕ ರಿಟರ್ನ್ ನೀಡುವ ನಿರೀಕ್ಷೆ ಇರುತ್ತದೆ. ಹೀಗಿದ್ದಾಗ ನೀವು ಗೃಹ ಸಾಲದ ಇಎಂಐ ಮುಂದುವರಿಸಿಕೊಂಡು, ಉತ್ತಮ ಗಳಿಕೆಗಾಗಿ ಬೋನಸ್‌ ಮೊತ್ತವನ್ನು ಫ‌ಂಡ್‌ನ‌ಲ್ಲಿ ಹೂಡಲು ಬಳಸಬೇಕು. ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಹಣ ಹೂಡುವಾಗ ರಿಸ್ಕ್ ಬಗ್ಗೆ ಎಚ್ಚರದಿಂದಿರಿ.

ಸಾಲದ ಬಡ್ಡಿದರವು ಹೂಡಿಕೆಯ ನಿರೀಕ್ಷಿತ ರಿಟರ್ನ್ನಷ್ಟೇ ಇದ್ದರೆ ಅಥವಾ ಹೆಚ್ಚಿದ್ದರೆ, ಆಗ ನಿಮ್ಮ ಹೆಚ್ಚುವರಿ ಆದಾಯದಿಂದ ಮೊದಲು ಬಾಕಿಯಿರುವ ಸಾಲವನ್ನು ತೀರಿಸಬೇಕು. ಆನಂತರವೂ ಸ್ವಲ್ಪ ಹಣ ಉಳಿದರೆ ಅದನ್ನು ಸೂಕ್ತ ಹೂಡಿಕೆಗೆ ಬಳಸಬೇಕು.

ನಿಮ್ಮ ಪ್ರಸ್ತುತ ದ್ರವ್ಯತೆಯ ಪರಿಸ್ಥಿತಿಯ ವಿಶ್ಲೇಷಣೆಯೂ ಇನ್ನೊಂದು ಪ್ರಮುಖ ಅಂಶವಾಗಿದೆ. ಇಎಂಇ ಪಾವತಿಸಿದ ಬಳಿಕ ನಿಮ್ಮ ನಿಯಮಿತ ಮಾಸಿಕ ವೆಚ್ಚವನ್ನು ನಿರ್ವಹಿಸಲು ಕಷ್ಟವಾಗುತ್ತಿದ್ದರೆ, ಆಗ ಹೆಚ್ಚುವರಿ ಆದಾಯವನ್ನು ಸಾಲ ಮರುಪಾವತಿಗೆ ಉಪಯೋಗಿಸುವುದರಿಂದ ನಿಮ್ಮ ಹಣಕಾಸು ಹೊರೆ ತಗ್ಗಿಸಲು ಅನುಕೂಲವಾಗುತ್ತದೆ.

ಉತ್ತಮ ಕ್ರೆಡಿಟ್‌ ಸ್ಕೋರ್‌ ನಿರ್ವಹಿಸಲು ನಿಗಧಿತ ಸಮಯದಲ್ಲಿ ಸಾಲದ ಮರುಪಾವತಿ ಮಾಡುವುದು ತೀರಾ ಅಗತ್ಯವಾಗಿದೆ. ನೀವು ಹೆಚ್ಚುವರಿ ಹಣ ಹೊಂದಿದ್ದರೆ ಅದನ್ನು ಹೂಡಿಕೆ ಮಾಡಿ. ಮತ್ತು ಯಾವುದೇ ತುರ್ತು ಸಂದರ್ಭದಲ್ಲಿ, ಯಾವುದೇ ಬಂಡವಾಳ ನಷ್ಟಲ್ಲದೆ ಅದನ್ನು ಹಿಂತೆಗೆದು ಬಳಸಲು ಸಾಧ್ಯವೇ ಎಂದು ಯೋಚಿಸಿ ನೋಡಿ.

ಸಾಧ್ಯವೆಂದಾದರೆ, ಸಾಲದ ಮೊತ್ತವನ್ನು ಪೂರ್ವಪಾವತಿ ಮಾಡುವ ಬದಲು ಹೂಡಿಕೆಗೆ ಬಳಸಬಹುದು. ಉದಾಹರಣೆಗೆ, ನೀವು ಉದ್ಯೋಗ ನಷ್ಟ ಅಥವಾ ಅಪಘಾತದಂತಹ ಸಮಸ್ಯೆಗೆ ಸಿಲುಕಿಕೊಂಡು ಹಣಕಾಸಿನ ತುರ್ತು ಎದುರಿಸಿದರೆ, ಪ್ರಸ್ತುತವಿರುವ ಸಾಲದ ಇಎಂಐ ಪಾವತಿಸಲು ಸಾಕಷ್ಟು ಹಣ ನಿಮ್ಮಲ್ಲಿ ಇಲ್ಲದಿದ್ದರೆ, ಆಗ ನೀವು ಈ ಹೂಡಿಕೆಯನ್ನು ತುರ್ತು ನಗದು ಹರಿಗೆ ಬಳಸಬಹುದು. ಆದಾಗ್ಯೂ, ಫ‌ಂಡ್‌ನ‌ಲ್ಲಿ ಮಾಡಿದ ಹೂಡಿಕೆಯ ಮೌಲ್ಯ ಉಳಿಸಿಕೊಳ್ಳುವ ಬಗ್ಗೆ ಖಾತ್ರಿ ಇಲ್ಲವಾದರೆ, ಅಂತಹ ಹೂಡಿಕೆ ಮಾಡದಿರುವುದೇ ಸೂಕ್ತ.

ನೀವು ಬಿಗ್‌ ಟಿಕೆಟ್‌ ಖರೀದಿಗಾಗಿ ಸಾಲ ಮಾಡಲು ಯೋಚಿಸುತ್ತಿದ್ದರೆ, ಆಗ ಹೆಚ್ಚುವರಿ ಆದಾಯವನ್ನು ಈ ಸಂದರ್ಭದ ಸಾಲದ ಮರುಪಾವತಿಯ ಬದಲಾಗಿ, ಸೂಕ್ತ ಹೂಡಿಕೆಗೆ ಬಳಸಿ ನಂತರ ನಿಮ್ಮ ಖರೀದಿಗಾಗಿ ಅದನ್ನು ಬಳಸುವುದು ಒಳ್ಳೆಯದು. ಉದಾಹರಣೆಗೆ, ಮೂರು ತಿಂಗಳ ನಂತರ ನೀವು ಕಾರು ಖರೀದಿಸಲು ಯೋಜಿಸುತ್ತಿದ್ದೀರಿ ಮತ್ತು ನಿಮ್ಮ ಕೈಗೆ ಈಗ 5 ಲಕ್ಷ ರೂ.ನಷ್ಟು ಹೆಚ್ಚುವರಿ ಆದಾಯ ಬಂತು ಎಂದುಕೊಳ್ಳೋಣ. ಪ್ರಸ್ತುತ ಶೇ.8.8 ಬಡ್ಡಿದರದ ಗೃಹ ಸಾಲ 20 ಲಕ್ಷ ರೂ.ನಷ್ಟು ಬಾಕಿ ಇದೆ, 15 ವರ್ಷಗಳಷ್ಟು ಪಾವತಿ ಅವಧಿ ಉಳಿದಿದೆ ಎಂದಾದರೆ, ಆ ಹೆಚ್ಚುವರಿ ಆದಾಯವನ್ನು ನಿಮ್ಮ ಗೃಹ ಸಾಲದ ಪೂರ್ವಪಾವತಿಗೆ ಬಳಸಿ ಕಾರು ಖರೀದಿಸಲು ವಾಹನ ಸಾಲ ಮಾಡುವ ಬದಲು, ನೀವು ಮೂರು ತಿಂಗಳ ಕಾಲಕ್ಕೆ ಫ‌ಂಡ್‌ನ‌ಲ್ಲಿ ಹೂಡಿಕೆ ಮಾಡಬೇಕು. ಹೂಡಿಕೆ ಮಾಡಿದ ಹಣ ಕೈಗೆ ಬಂದ ನಂತರ ಕಾರು ಖರೀದಿಸಬೇಕು.

ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ನಿಮ್ಮ ನಿವೃತ್ತಿಯ ಗುರಿ, ಮತ್ತು ಇತರೆ ಹಣಕಾಸು ಉದ್ದೇಶಗಳ ಮೇಲಾಗುವ ಪರಿಣಾಮಗಳನ್ನು ಒಂದು ಬಾರಿ ಅವಲೋಕಿಸಿ. ಹೀಗೆಲ್ಲ ಯೋಚಿಸದೆ, ದುಡುಕಿ, ಅವಸರದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ. ಯಾವತ್ತೂ ಅಷ್ಟೇ; ಹೆಚ್ಚು ಸಾಲವಿದ್ದವನು ಬೇಗನೆ ಸೋತುಹೋಗುತ್ತಾನೆ. ಹಾಗಾಗಿ, ಗಳಿಕೆಯ ಸಾಮರ್ಥಯ ಇಲ್ಲ ಅನ್ನಿಸಿದರ, ಸಾಲ ಪಡೆಯುವ ವಿಚಾರದಲ್ಲಿ ಅಪಾಯದ ಸಂಗತಿಗಳಿಗೆ ಕೈ ಹಾಕಬೇಡಿ.

– ರಾಧ

ಟಾಪ್ ನ್ಯೂಸ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.