ಗುರಿ ಇದ್ದಾಗಲಷ್ಟೇ ಗೆಲ್ಲುವುದು ಸುಲಭ


Team Udayavani, Jul 30, 2018, 12:55 PM IST

guri.png

ಅದೊಂದು ಹಲವು ದಾರಿಗಳು ಸೇರುವ ಮಾರ್ಗ. ಅಲ್ಲಿ ಒಂದು ಬೆಕ್ಕು ಇನ್ನೊಂದು ಬೆಕ್ಕನ್ನು ಭೇಟಿ ಆಗುತ್ತದೆ. ದೊಡ್ಡ ಬೆಕ್ಕನ್ನು ನೋಡಿ ಚಿಕ್ಕ ಬೆಕ್ಕು ಎದುರಿರುವ ದಾರಿ ತೋರಿಸಿ, ಈ ದಾರಿ ಎಲ್ಲಿಗೆ ಹೋಗುತ್ತದೆ? ನಾನು ಈ ದಾರಿಯಲ್ಲಿ ಹೋಗಬಹುದಾ?  ಎಂದು ಕೇಳುತ್ತದೆ. ಅದಕ್ಕೆ ಆ ಬೆಕ್ಕು, ನೀನು ಎಲ್ಲಿಗೆ  ಹೋಗಬೇಕು? ಎಂದು ಕೇಳುತ್ತದೆ.  ಆಗ ಚಿಕ್ಕ ಬೆಕ್ಕು, ನನಗೆ ಎಲ್ಲಿಗೆ ಹೊಗಬೇಕೆಂದು ಗೊತ್ತಿಲ್ಲ ಎನ್ನುತ್ತದೆ. ಆಗ ದೊಡ್ಡ ಬೆಕ್ಕು, ನಿನಗೆ ಎಲ್ಲಿಗೆ ಹೋಗಬೇಕೆಂದು ಗೊತ್ತಿರದಿದ್ದರೆ, ನೀನು ಯಾವ ಹಾದಿಯಲ್ಲಿ ಬೇಕಾದರೂ ಹೋಗಬಹುದು.  ಆಗ ನಿನಗೆ ಯಾವ ದಾರಿ ಅದರೂ ಆಗಬಹುದು. ರಸ್ತೆ ಹೋದಲ್ಲಿ ಹೋಗಬಹುದು ಎಂದು ಉತ್ತರಿಸುತ್ತದೆ. 

ಇದು ಕೇವಲ ಚಿಕ್ಕ ಬೆಕ್ಕಿಗೆ ಅನ್ವಯಿಸುವ ಮಾತಲ್ಲ. ನಮಗೆಲ್ಲರಿಗೂ ಅನ್ವಯಿಸುವ ಮಾತು ಇದು. ನಾವು ಮಾಡುವ ಹೂಡಿಕೆಯ ಬಗೆಗೆ ಸರಿಯಾದ ಅರಿವು ಇರದಿದ್ದರೆ ಯಾವ ಹೂಡಿಕೆ ಮಾಡಿದರೇನು? ಬಿಟ್ಟರೇನು? ಬಹುತೇಕರು ಹೀಗೇ ಇರುತ್ತಾರೆ. ದುಡ್ಡು ಮಾಡಬೇಕು ಎಂದು ಬಾಯಿಯಲ್ಲಿ ಹೇಳುತ್ತಾರೆ. ಆದರೆ ಅವರು ಕಡೆಗೂ ದುಡ್ಡು ಮಾಡುವುದೇ ಇಲ್ಲ. ಬದಲಿಗೆ ದುಡ್ಡು ಕಳೆದುಕೊಳ್ಳುತ್ತಾರೆ. ಲಾಭ ಮಾಡುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಹೆಚ್ಚಿನವರು ನಷ್ಟ ಹೊಂದುತ್ತಾರೆ. ಯಾಕೆ ಹೀಗೆ?

ಯಾಕೆ ನಷ್ಠ ಆಗುತ್ತಿದೆ ಎನ್ನುವುದು ಗೊತ್ತಾದ ತಕ್ಷಣವೇ ಲಾಭದ ಹಾದಿ ಸಿಗುತ್ತದೆ. ಯಾಕೆ ಸೋತೆ ಎನ್ನುವುದು ಅರಿವಾದರೆ, ಗೆಲ್ಲುವುದು ಬಹಳ ಸುಲಭ. ಸೋತಾಗ ನಾವು ಸಮರ್ಥನೆ ಮಾಡಿಕೊಳ್ಳುತ್ತೇವೆ. ನಷ್ಟ ಆದಾಗಲೂ ಅದೃಷ್ಟವನ್ನು ಹಳಿಯುತ್ತೇವೆ. ನಾವು ಮಾಡುತ್ತಿರುವ ಕೆಲಸ ಹಾಗೂ ಹೂಡಿಕೆಯ ಕುರಿತು ನಮಗೇ ಸ್ಪಷ್ಟತೆ ಇರದಿದ್ದರೆ ನಷ್ಟ ಎನ್ನುವುದು ಹೊಸತಲ್ಲ. ಲಾಭ ಒಂದು ಮ್ಯಾಜಿಕ್‌ ಅಲ್ಲವೇ ಅಲ್ಲ.

ಎಷ್ಟೋ ಮಂದಿಗೆ, ಯಾವುದು ಹೂಡಿಕೆ, ಯಾವುದು ಹೂಡಿಕೆ ಅಲ್ಲ ಎನ್ನುವುದೂ ಗೊತ್ತಿರುವುದಿಲ್ಲ. ಒಬ್ಬರ ಮನೆಗೆ ಹೋದಾಗ ಅವರು ಮೂರು ವರ್ಷದ ಮಗುವಿನ ಹೆಸರಿನಲ್ಲಿ ಇನ್ಶೂರೆನ್ಸ್‌ ಮಾಡಿಸಿದೀವಿ ಅಂದರು. ಅಷ್ಟು ಚಿಕ್ಕ ಮಗುವಿಗೆ ಜೀವ ವಿಮೆಯ ಅಗತ್ಯ ಇಲ್ಲ. ವಿಮೆ ಹೂಡಿಕೆ ಅಲ್ಲ. ಈಗ ಬೇರೆ ಬೇರೆ ಯೋಜನೆಗಳನ್ನು ಒಟ್ಟಿಗೆ ಸೇರಿಸಿಕೊಡಲಾಗುತ್ತಿದೆ. ಯಾವುದು ಹೂಡಿಕೆ, ಯಾವುದು ಭದ್ರತೆ ಎನ್ನುವುದು ನಮಗೆ ಗೊತ್ತಿರದಿದ್ದರೆ ನಾವು ಮುಂದೆ ಹೀಗೆಲ್ಲ ಆಗಬಹುದೇನೋ, ಮುಂದೊಂದು ದಿನ ಇಷ್ಟು ಹಣ ಸಿಗಬಹುದೇನೋ ಎಂದು ಭಾವಿಸಿರುತ್ತೇವೆ. ಊಹಿಸಿರುತ್ತೇವೆ.

ದುಡಿಯುವ ವಯಸಿನಲ್ಲಿ ಭದ್ರತೆಗಾಗಿ ಜೀವ ವಿಮೆ ಬೇಕು. ಬೆಳೆಯುವ ವಯಸಿನಲ್ಲಿ ಉಳಿಸಿದ ಹಣ ಅಧಿಕವಾಗಲು ಹೂಡಿಕೆ ಬೇಕು. ಇಳಿ ವಯಸಿನಲ್ಲಿ ವೈದ್ಯಕೀಯ ವೆಚ್ಚ ಭರಿಸಲು ಆರೋಗ್ಯ ವಿಮೆ ಬೇಕು. ಹೀಗೆ ಬೇರೆ ಬೇರೆ ವಯೋಮಾನದ ಅಗತ್ಯಗಳಿಗೆ ಅನುಗುಣವಾದ ಹೂಡಿಕೆಯ ಆಯ್ಕೆಗೆ ಅವಕಾಶ ಇದೆ. ಸಂದೇಹಗಳನ್ನು ಕೇಳಿದರೆ ನಮಗೆ ತಿಳುವಳಿಕೆ ಮೂಡುತ್ತದೆ. ಕೇಳದಿದ್ದರೆ ಅರಿಯದೇ ಉಳಿದುಬಿಡುತ್ತೇವೆ.

– ಆರ್ಕಿಟೆಕ್ಟ್ ಕೆ. ಜಯರಾಮ್‌

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.