ಬಿರಿಯಾನಿ  ವೆರೈಟಿ


Team Udayavani, Mar 9, 2019, 7:25 AM IST

09.jpg

ಎಲ್ಲರ ಬಾಯಲ್ಲೂ ನೀರೂರಿಸುವ ಬಿರಿಯಾನಿ ಹೆಸರು ಕೇಳಿದರೆ ರುಚಿ ನೋಡಬೇಕು ಎಂಬ ಆಸೆ ಹುಟ್ಟಿಸದೇ ಇರಲಾರದು. ಬಿರಿಯಾನಿ ಹೆಸರು ಒಂದೇ ಆದರೂ ಮಾಡುವ ವಿಧಾನಗಳು ಹಲವಾರು. ಜತೆಗೆ ನಮ್ಮ ದೇಶದಲ್ಲೇ ಹಲವಾರು ವೆರೈಟಿಯ ಬಿರಿಯಾನಿಗಳಿವೆ. ಇವುಗಳಲ್ಲಿ ಆಯ್ದ ಕೆಲವೊಂದು ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ. ವಿಶೇಷ ಸಂದರ್ಭದಲ್ಲಿ ಮನೆಯಲ್ಲೂ ರುಚಿರುಚಿಯಾದ ಬಿರಿಯಾನಿ ಮಾಡಿ ಸವಿಯಬಹುದು.

ಹೈದರಾಬಾದ್‌ ದಮ್‌ ಬಿರಿಯಾನಿ
ಬೇಕಾಗುವ ಸಾಮಗ್ರಿಗಳು

 ಕೋಳಿ ಮಾಂಸ; 1 ಕಿ. ಗ್ರಾಂ
 ಉಪ್ಪು; 1 ಚಮಚ
 ಶುಂಠಿ ಬೆಳ್ಳುಳ್ಳಿ ಪೇಸ್ಟ್‌; 3 ಚಮಚ
 ಕೆಂಪು ಮೆಣಸಿನ ಪೇಸ್ಟ್‌; 3ಚಮಚ
 ಹಸಿ ಮೆಣಸು ಪೇಸ್ಟ್‌; 3 ಚಮಚ
 ಅರಿಸಿನ;ಸ್ವಲ್ಪ
 ಪುದೀನಾ, ಕೊತ್ತಂಬರಿ ಸೊಪು;³ ಸ್ವಲ್ಪ
 ಮೊಸರು; 1 ಕಪ್‌
 ಲಿಂಬೆರಸ;2 ಚಮಚ
 ತುಪ್ಪ; 4 ಚಮಚ
 ಅರ್ಧಬೇಯಿಸಿದ ಅನ್ನ; 750 ಗ್ರಾಂ
 ಎಣ್ಣೆ1/2ಕಪ್‌
 ನೀರು; ಅರ್ಧ ಕಪ್‌
 ಈರುಳ್ಳಿ: 4
 ಕೇಸರಿ; ಸ್ವಲ್ಪ

ಮಾಡುವ ವಿಧಾನ:
ಒಂದು ಪಾತ್ರೆಗೆ ಕೋಳಿ ಮಾಂಸ ಹಾಕಿ ಅದಕ್ಕೆ ಮೆಣಸಿನ ಹುಡಿ, ಅರಿಸಿನ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಲಿಂಬೆರಸ, ಮೊಸರು, ಉಪ್ಪು ಹಾಕಿ ಚೆನ್ನಾಗಿ ಮಿಶ್ರಗೊಳಿಸಿ ಎರಡು ಗಂಟೆ ಹೊತ್ತು ಇಡಬೇಕು. ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಈರುಳ್ಳಿಯನ್ನು ಕೆಂಪಾಗುವವರೆಗೆ ಹುರಿಯಬೇಕು. ಮಸಾಲೆಯಲ್ಲಿ ಬೆರೆಸಿಟ್ಟ ಕೋಳಿ ಮಾಂಸವನ್ನು ಎಣ್ಣೆಯಲ್ಲಿ ಅರ್ಧ ಬೇಯುವವರೆಗೆ ಹುರಿಯಬೇಕು. ಬಳಿಕ ಒಂದು ದೊಡ್ಡ ತಳದ ಪಾತ್ರೆಯಲ್ಲಿ ಹುರಿದ ಕೋಳಿಮಾಂಸವನ್ನು ಹಾಕಿ ಅದರ ಮೇಲೆ ಅರ್ಧ ಬೇಯಿಸಿದ ಅನ್ನವನ್ನು ಸ್ವಲ್ಪ ಹಾಕಿ ಹುರಿದ ಈರುಳ್ಳಿಯನ್ನು ಹಾಕಬೇಕು. ಅದರಮೇಲೆ ಅನ್ನ ಹಾಕಿ ಈರುಳ್ಳಿ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ತುಪ್ಪ ಹಾಕಿ ಪಾತ್ರೆಯ ಮುಚ್ಚಳವನ್ನು ಗೋಧಿ ಹಿಟ್ಟಿನಿಂದ ಬಿಗಿಯಾಗಿ ಕಟ್ಟಿ 5 ನಿಮಿಷ ದೊಡ್ಡ ಉರಿಯಲ್ಲಿ ಬೇಯಿಸಬೇಕು. ಅನಂತರ ಸಣ್ಣ ಉರಿಯಲ್ಲಿ ಅರ್ಧ ಗಂಟೆ ಬೇಯಿಸಿದರೆ ಹೈದರಾಬಾದ್‌ ದಮ್‌ ಬಿರಿಯಾನಿ ಸವಿಯಲು ಸಿದ್ಧವಾಗುತ್ತದೆ.

ಎಗ್‌ ಬಿರಿಯಾನಿ
ಬೇಕಾಗುವ ಸಾಮಗ್ರಿಗಳು
 ಮೊಟ್ಟೆ; 4
 ಬಾಸುಮತಿ ಅಕ್ಕಿ; 1 ಕಪ್‌
 ಈರುಳ್ಳಿ; 3
 ಮೆಣಸಿನ ಹುಡಿ; 4 ಚಮಚ
 ಅರಿಸಿನ; ಸ್ವಲ್ಪ
 ಶುಂಠಿ, ಬೆಳ್ಳುಳ್ಳಿ ಪೇಸ್ಟ್‌; 1/2ಕಪ್‌
 ಟೊಮೆಟೊ; 3
 ಮೊಸರು; 5 ಚಮಚ
 ಬಿರಿಯಾನಿ ಮಸಾಲ; 2 ಚಮಚ
 ಚಕ್ಕೆ, ಲವಂಗ, ಏಲಕ್ಕಿ; ಸ್ವಲ್ಪ
 ಕೊತ್ತಂಬರಿ ಸೊಪ್ಪು, ಪುದೀನಾ; ಸ್ವಲ್ಪ

ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಸ್ವಲ್ಪ ಎಣ್ಣೆ ಹಾಕಿ ಚಕ್ಕೆ, ಲವಂಗ, ಏಲಕ್ಕಿ ಹಾಕಿ ಹುರಿಯಬೇಕು, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಈರುಳ್ಳಿ ,ಟೊಮೆಟೊ, ಪುದೀನಾ, ಅರಸಿನ, ಮೆಣಸಿನ ಹುಡಿ, ಉಪ್ಪು ಹಾಕಿ ಚೆನ್ನಾಗಿ ಹುರಿಯಬೇಕು.ಮೊಸರು ಸೇರಿಸಬೇಕು. ಹಸಿ ಮೆಣಸು ಮತ್ತು ಬೇಯಿಸಿದ ಮೊಟ್ಟೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಬೇಕು. ಅನಂತರ ಅದಕ್ಕೆ ನೆನೆಸಿಟ್ಟ ಅಕ್ಕಿಯನ್ನು ಹಾಕಬೇಕು. 2 ಕಪ್‌ ನೀರು ಹಾಕಿ ಮುಚ್ಚಳ ಹಾಕಿ 2 ಸೀಟಿ ಹಾಕಬೇಕು. ಆಗ ಎಗ್‌ ಬಿರಿಯಾನಿ ಸಿದ್ಧವಾಗುತ್ತದೆ.

ಮಲಬಾರ್‌ ಫಿಶ್‌ ಬಿರಿಯಾನಿ
ಬೇಕಾಗುವ ಸಾಮಗ್ರಿಗಳು

 ಮೀನು; 1 ಕಿ.ಗ್ರಾಂ ಮುಳ್ಳು ಕಡಿಮೆ ಇರುವ ಮೀನಾದರೆ ಉತ್ತಮ
 ಈರುಳ್ಳಿ:1/2ಕಿ. ಗ್ರಾಂ
 ಟೊಮೆಟೊ;1/4ಕಿ.ಗ್ರಾಂ
 ಬೆಳ್ಳುಳ್ಳಿ; 50 ಗ್ರಾಂ
 ಶುಂಠಿ; ಸ್ವಲ್ಪ
 ಕೊತ್ತಂಬರಿಸೊಪ್ಪು, ಪುದೀನಾ ಸೊಪ್ಪು; 1 ಕಪ್‌
 ಮೆಣಸಿನ ಹುಡಿ; 4 ಚಮಚ
 ಗರಂ ಮಸಾಲ;2 ಚಮಚ
 ಜೀರಿಗೆ; 1 ಚಮಚ
 ಚಕ್ಕೆ, ಲವಂಗ, ಏಲಕ್ಕಿ; ಸ್ವಲ್ಪ
 ಹಸಿಮೆಣಸು; 6
 ಅರ್ಧ ಬೇಯಿಸಿದ ಅನ್ನ; 1 ಕಿ.ಗ್ರಾಂ
 ಲಿಂಬೆ ರಸ; ಸ್ವಲ್ಪ

ಮಾಡುವ ವಿಧಾನ
ಮೀನನ್ನು ಬೇಕಾದ ಆಕರದಲ್ಲಿ ಕತ್ತರಿಸಿ, ಮೆಣಸಿನ ಹುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್‌, ಲಿಂಬೆರಸದ ಮಿಶ್ರಣದಲ್ಲಿ 1 ಗಂಟೆ ಮುಳುಗಿಸಿಡಬೇಕು. ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿಯಬೇಕು.ಅನಂತರ ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಪೇಸ್ಟ್‌ ಹಾಕಬೇಕು.ಅದರ ಹಸಿ ವಾಸನೆ ಹೋಗುವವರೆಗೆ ಚೆನ್ನಾಗಿ ಬಿಸಿ ಮಾಡಬೇಕು. ಜೀರಿಗೆ, ಗರಂ ಮಸಾಲ, ಮೆಣಸಿನ ಹುಡಿಯ ಜತೆಗೆ ಟೊಮೆಟೊವನ್ನು ಹಾಕಬೇಕು ಚೆನ್ನಾಗಿ ಬೇಯುವವರೆಗೆ ಬಿಸಿ ಮಾಡಬೇಕು. ಅನಂತರ ಮಸಾಲೆಯಲ್ಲಿ ಮುಳುಗಿಸಿಟ್ಟ ಮೀನನ್ನು ಹುರಿದು ಇದಕ್ಕೆ ಸೇರಿಸಬೇಕು. ಬಿರಿಯಾನಿ ಅಕ್ಕಿಯನ್ನು ತುಪ್ಪ, ಚಕ್ಕೆ ಲವಂಗ ಸೇರಿಸಿ ಬೇಯಿಸಬೇಕು. ಅನಂತರ ಅನ್ನ ಮತ್ತು ಮಸಾಲೆಯನ್ನು ಒಂದು ಪಾತ್ರೆಯಲ್ಲಿ ಲೇಯರ್‌ಗಳಾಗಿ ಹಾಕಿದಾಗ ಮಲಬಾರ್‌ ಫಿಶ ಬಿರಿಯಾನಿ ಸವಿಯಲು ಸಿದ್ಧವಾಗುತ್ತದೆ.

ಕೀಮಾ ಬಿರಿಯಾನಿ
ಬೇಕಾಗುವ ಸಾಮಗ್ರಿಗಳು
 ಮಟನ್‌ ಕೀಮಾ; 1/2ಕಿ.ಗ್ರಾಂ
 ಮೊಸರು; 1 ಕಪ್‌
 ತುಪ್ಪ; 2 ಚಮಚ
 ಈರುಳ್ಳಿ; 1 ಕಪ್‌
 ಹಸಿಮೆಣಸು; 6
 ಶುಂಠಿ, ಬೆಳ್ಳುಳ್ಳಿ ಪೇಸ್ಟ್‌; 3 ಚಮಚ
 ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು; ಸ್ವಲ್ಪ
 ಚಕ್ಕೆ, ಲವಂಗ, ಏಲಕ್ಕಿ ; ಸ್ವಲ್ಪ
 ಉಪ್ಪು; ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಒಂದು ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾಗುವಾಗ ಚಕ್ಕೆ, ಲವಂಗ, ಏಲಕ್ಕಿ, ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಬೇಕು. ಅನಂತರ ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಪೇಸ್ಟ್‌, ಮೆಣಸಿನ ಹುಡಿಯ ಜತೆ ಮಟನ್‌ ಕಿಮಾವನ್ನು ಹಾಕಬೇಕು. ಜತೆಗೆ ಕೊತ್ತಂಬರಿ ಸೊಪ್ಪು, ಪುದೀನಾ, ಟೊಮೇಟೊ ಹಾಗೂ 1 ಕಪ್‌ ನೀರು ಹಾಕಿ 10 ನಿಮಿಷ ಬೇಯಿಸಬೇಕು. ಅನಂತರ ಮೊಸರು ಸೇರಿಸಿ ಸ್ವಲ್ಪ ಕುದಿಸಿ ಕೆಳಗಿಡಬೇಕು. ಗ್ಯಾಸ್‌ನ ಮೇಲೆ ತವಾ ಇಟ್ಟು ಅದರ ಮೇಲೆ ಮಸಾಲೆಯ ಪಾತ್ರೆ ಇಟ್ಟು ಅದಕ್ಕೆ ಅರ್ಧ ಬೇಯಿಸಿದ ಅನ್ನವನ್ನು ಮಿಶ್ರಗೊಳಿಸಬೇಕು. ತವದ ಮೇಲಿಟ್ಟು 10 ನಿಮಿಷ ಬೇಯಿಸಿದಾಗ ಕೀಮಾ ಬಿರಿಯಾನಿ ಸಿದ್ಧವಾಗುತ್ತದೆ.

ಸುಶ್ಮಿತಾ ಶೆಟ್ಟಿ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.