ಮೋದಿ ಆಡಳಿತದಲ್ಲಿ ಹೊಸ ಮನ್ವಂತರದತ್ತ ಭಾರತ

ಕಳೆದ ಐದು ವರ್ಷದಲ್ಲಿ ದೇಶದಲ್ಲಿ 5 ಕೋಟಿಗೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ...

Team Udayavani, Apr 14, 2019, 6:00 AM IST

j-26

ಡಿಜಿಟಲ್‌ ಇಂಡಿಯಾ ಮತ್ತು ಸ್ಟಾರ್ಟ್‌ಅಪ್‌ ಇಂಡಿಯಾ ಕಾರ್ಯಕ್ರಮಗಳಂತೂ ಪ್ರಧಾನಿ ಮೋದಿಯವರ ಮಾಸ್ಟರ್‌ಸ್ಟ್ರೋಕ್‌. ದೇಶದ ನವೋದ್ಯಮಗಳಿಗೆ ಕಳೆದ ಐದು ವರ್ಷಗಳಲ್ಲಿ 40 ಶತಕೋಟಿ ಡಾಲರ್‌ಗಳಷ್ಟು ಹೂಡಿಕೆ ಹರಿದುಬಂದಿದೆ.

ಇದೇ ವರ್ಷದ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 5 ವರ್ಷಗಳನ್ನು ಪೂರೈಸಲಿದೆ. ಈ ಅವಧಿಯಲ್ಲಿ ಸರ್ಕಾರ ಅನೇಕ ವಿಶಿಷ್ಟ ಅಭಿವೃದ್ಧಿ ಮಾದರಿಗಳನ್ನು ಅನುಷ್ಠಾನಕ್ಕೆ ತಂದಿದೆ. ಭಾರತೀಯ ಆರ್ಥಿಕತೆ ಮತ್ತು ನಾಗರಿಕರ ಮೇಲೆ ಈ ಮಾದರಿಗಳು ಗುಣಾತ್ಮಕ ಪ್ರಭಾವವನ್ನು ಬೀರಿದ್ದು, ಈ ಮಾದರಿಗಳು ಮುಂದಿನ ಆಡಳಿತಗಳಿಗೆ ಅಧ್ಯಯನ ಯೋಗ್ಯವಾಗಿವೆ.

ಭಾರತವಿಂದು ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದ್ದು, 2018ರ ವೇಳೆಗೆ ನಮ್ಮ ಜಿಡಿಪಿ 2.6 ಟ್ರಿಲಿಯನ್‌ ಡಾಲರ್‌ಗೆ ತಲುಪಿತ್ತು ಮತ್ತು 2030ರ ವೇಳೆಗೆ 10 ಟ್ರಿಲಿಯನ್‌ ಡಾಲರ್‌ಗೆ ತಲುಪುವ ಭರವಸೆಯನ್ನು ನೀಡುತ್ತಿದೆ! ನಿಸ್ಸಂಶಯವಾಗಿಯೂ ಮೋದಿ ಸರ್ಕಾರವು ತನ್ನ ಬಹುಸ್ತರೀಯ ನೀತಿಗಳು ಮತ್ತು ನಿರ್ದಿಷ್ಟ ಹೂಡಿಕೆಗಳ ಮೂಲಕ ಈ ಗುರಿಯೆಡೆಗಿನ ದೇಶದ ವೇಗವನ್ನು ಹೆಚ್ಚಿಸಿದೆ.

ಅದರಷ್ಟೇ ಮುಖ್ಯವಾಗಿ, ಪ್ರತಿಯೊಬ್ಬ ಭಾರತೀಯನಿಗೂ ಜೀವನದ ಮೂಲ ಅಗತ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳುವ ಅತಿದೊಡ್ಡ ಸವಾಲನ್ನು ಹಿಂದಿನ ಎಲ್ಲಾ ಸರ್ಕಾರಗಳಿಗಿಂಲೂ ಉತ್ತಮವಾಗಿ ನಿಭಾಯಿಸಿದೆ ಈ ಸರ್ಕಾರ. ಪ್ರತಿಯೊಬ್ಬ ನಾಗರಿಕನಿಗೂ ವಾಸಯೋಗ್ಯ ಮನೆ, ಆಹಾರ, ನೀರು, ವಿದ್ಯುತ್‌, ಟಾಯ್ಲೆಟ್‌, ಅಡುಗೆಗೆ ಗ್ಯಾಸ್‌ ಸ್ಟೌವ್‌, ಫ‌ಲಾನುಭವಿಗಳಿಗೆ ಸರ್ಕಾರದ ಹಲವು ಯೋಜನೆಗಳ ಲಾಭವನ್ನು ನೇರ ವರ್ಗಾವಣೆ ಮೂಲಕ ತಲುಪಿಸಲು ಬ್ಯಾಂಕ್‌ ಅಟೌಂಟ್‌ಗಳು, ಭರಿಸಲು ಸುಲಭ ದರದಲ್ಲಿ ಡೇಟಾ ಪ್ಲ್ರಾನ್‌, ಆಯುಷ್ಮಾನ್‌ ಭಾರತದ ಮೂಲಕ ವೈದ್ಯಕೀಯ ವಿಮೆ, ಹೆಚ್ಚುತ್ತಿರುವ ಉದ್ಯೋಗಾವಕಾಶ ಮತ್ತು ಆರ್ಥಿಕ ಅವಕಾಶಗಳು ಲಭ್ಯವಾಗಿವೆ! 2022ರ ವೇಳೆಗೆ ಈ ಉಪಕ್ರಮಗಳೆಲ್ಲವೂ ಕ್ಷಿಪ್ರ ಬೆಳವಣಿಗೆಗೆ ಮತ್ತು ಗುಣಮಟ್ಟದ ಜೀವನಕ್ಕೆ ಬಲಿಷ್ಠ ಬುನಾದಿಯಾಗುತ್ತವೆ.

ಜಿಯೋ ನೆಟರ್ಕ್‌ ಅಭೂತಪೂರ್ವ ರೀತಿಯಲ್ಲಿ ಭಾರತಕ್ಕೆ ಡೇಟಾ ಸೌಲಭ್ಯ ಕೈಗೆಟಕುವಂತೆ ಮಾಡಿದೆ. ಇಂದು ಎಲ್ಲಾ ಭಾರತೀಯರೂ ತಿಂಗಳಿಗೆ ಕೇವಲ 100 ರೂಪಾಯಿ ಪಾವತಿಸಿ ಅನಿಯಮಿತ ಡೇಟಾ ಪಡೆಯುವಂತಾಗಿದೆ. ಪ್ರತಿ ವ್ಯಕ್ತಿಯಿಂದ ತಿಂಗಳಿಗೆ ಸರಾಸರಿ 11 ಜಿಬಿ ಡೇಟಾ ಬಳಕೆಯ ಮೂಲಕ ಭಾರತವಿಂದು ಜಗತ್ತಿನ ಅತಿದೊಡ್ಡ “ಮೊಬೈಲ್‌ ಡೇಟಾ’ ಗ್ರಾಹಕ ದೇಶವಾಗಿ ಬದಲಾಗಿದೆ. ಜನಧನ್‌ ಯೋಜನೆಯ ಜೊತೆಗೆ, ಸ್ಟಾಂಡ್‌ ಅಪ್‌ ಇಂಡಿಯಾ ಮತ್ತು ಮುದ್ರಾ ಯೋಜನೆಗಳು ಎಲ್ಲಾ ವರ್ಗದ ಜನರಿಗೂ ಸಾಲ ಸೌಲಭ್ಯ ಸಿಗುವಂತೆ ಮಾಡಿವೆ. ನೇರ ಹಣ ವರ್ಗಾವಣೆಯು ಸರ್ಕಾರದ ಸೌಲಭ್ಯಗಳನ್ನು ಪುನಶ್ಚೇತನಗೊಳಿಸಿದ್ದಷ್ಟೇ ಅಲ್ಲದೆ, ಸೋರಿಕೆಯನ್ನೂ ತಡೆಗಟ್ಟಿದೆ.

ಆರ್ಥಿಕತೆ ಬಗ್ಗೆ ಹೇಳುವುದಾದರೆೆ, ಜಿಎಸ್‌ಟಿ ವ್ಯವಸ್ಥೆಯ ಮೂಲಕ ತೆರಿಗೆ ನಿಯಮಗಳಲ್ಲಿ ಆದ ಸುಧಾರಣೆಗಳು ದೇಶದ ಸರಕು ಮತ್ತು ಸೇವೆಗಳಿಗೆ ಇದೇ ಮೊದಲ ಬಾರಿಗೆ ಒಂದು ಏಕ ಸ್ವರೂಪದ ರಾಷ್ಟ್ರೀಯ ಮಾರುಕಟ್ಟೆಯನ್ನು ನಿರ್ಮಿಸಿವೆ. 5 ವರ್ಷಗಳ ಒಳಗೆ ದೇಶದ 29 ರಾಜ್ಯಗಳನ್ನು ಮತ್ತು 7 ಕೇಂದ್ರಾಡಳಿತ ಪ್ರದೇಶಗಳನ್ನು ಒಂದೇ ತೆರಿಗೆ ವ್ಯವಸ್ಥೆಯಡಿಯಲ್ಲಿ ತಂದಿರುವುದು ಗಮನಾರ್ಹ ಸಾಧನೆಯೇ ಸರಿ! ಆರಂಭದಲ್ಲಿ ಎದುರಾದ ಕೆಲವು ತಾಂತ್ರಿಕ ತೊಂದರೆಗಳನ್ನು ಸರಿಪಡಿಸಲಾಗಿದೆ. ಜಿಎಸ್‌ಟಿಯನ್ನು ವಿರೋಧಿಸಿ ಮುಖ್ಯವಾಗಿ ಪ್ರತಿಭಟಿಸಿದವರೆಲ್ಲ, ಚಿಕ್ಕ ವ್ಯಾಪಾರಿಗಳಾಗಿದ್ದರು…ಏಕೆಂದರೆ ಅವರಿಗೆ ತೆರಿಗೆ ವ್ಯಾಪ್ತಿಯಲ್ಲಿ ಬರಲು ಮನಸ್ಸು ಇರಲಿಲ್ಲ. ಇನ್ನು ಪ್ರತಿಯೊಂದು ಆಮದಿನ ಮೇಲೂ ಲೆವಿ ವಿಧಿಸುವ ಮೂಲಕ ತೆರಿಗೆ ವಂಚನೆ ಮಾಡುತ್ತಿದ್ದವರನ್ನು ಹತ್ತಿಕ್ಕಲಾಗಿದೆ. ಇದೇ ಮೊದಲ ಬಾರಿಗೆ- ತೆರಿಗೆ ಇಳಿಮುಖದಿಂದ, ಸ್ಪರ್ಧಾತ್ಮಕತೆಯ ಸಾಮರ್ಥ್ಯ ವೃದ್ಧಿಯಿಂದ, ಕಡಿಮೆ ದರಗಳಿಂದ ಮತ್ತು ವ್ಯವಹಾರಕ್ರಿಯೆಯು ಸುಗಮವಾಗಿದ್ದರಿಂದ ದೇಶದ ಪ್ರಾಮಾಣಿಕ ತೆರಿಗೆದಾರರಿಗೆ ಲಾಭವಾಗಿದೆ.

ಐಬಿಸಿ-ದಿವಾಳಿತನ ಕಾನೂನಿಂದಾಗಿ ಅನೇಕ ಕ್ರೋನಿ ಕ್ಯಾಪಿಟಲಿಸ್ಟ್‌ಗಳು ತಮ್ಮ ಸಾಲ ಹಿಂದುರುಗಿಸುವಂತೆ ಆಗಿದೆ. ಇದೇ ಮೊದಲ ಬಾರಿ ನಮ್ಮ ದೇಶದ ಇತಿಹಾಸದಲ್ಲಿ, ಲೂಟಿದಾರರಿಂದ ಶೇ.45ರ‌ಷ್ಟು ಹಣ ವಾಪಸ್‌ ವಶಪಡಿಸಿಕೊಂಡದ್ದಕ್ಕೆ ಸಾಕ್ಷಿಯಾಗಿದ್ದೇವೆೆ. ಫೋನ್‌ ಬ್ಯಾಂಕಿಂಗ್‌ ಎನ್ನುವುದನ್ನು ಬೆರಗಿನಿಂದ ನೋಡುವ ದಿನಗಳು ದೂರಾಗಿವೆ.

ಈ ಐದು ವರ್ಷಗಳಲ್ಲಿ ದೇಶದಲ್ಲಿ ಮೂಲಸೌಕರ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ಸಿಕ್ಕಿದೆ. ರಸ್ತೆ, ಬಂದರು, ರೈಲ್ವೆ, ವಿಮಾನ ನಿಲ್ದಾಣಗಳು, ಜಲಮಾರ್ಗಗಳು ಮತ್ತು ಇತರೆ ವಲಯಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಲಾಗಿದೆ. ರಸ್ತೆ ಸಾರಿಗೆಯು ದಿನದಿಂದ ದಿನಕ್ಕೆ ಉತ್ತಮವಾಗುತ್ತಿದೆ. ಸರಕು ಸಾಗಣೆ ವೇಗ ಮತ್ತು ಬೃಹತ್‌ ಸರಕು ವಾಹನಗಳ ಸಾಮರ್ಥ್ಯಗಳಲ್ಲಿನ ಹೆಚ್ಚಳದಿಂದಾಗಿ ಸಾಗಾಣಿಕೆ ವೆಚ್ಚಗಳು ತಗ್ಗುವಂತಾಗಿದೆ…

ರೈಲ್ವೆಯಲ್ಲಿನ ಅಭೂತಪೂರ್ವ ಹೂಡಿಕೆ, ಮಾನವರಹಿತ ಕ್ರಾಸಿಂಗ್‌ಗಳ ನಿರ್ಮೂಲನೆ, ಸರಾಸರಿ ವೇಗದಲ್ಲಿ ವೃದ್ಧಿ, ಸ್ಟೇಷನ್‌ಗಳ ಆಧುನೀಕರಣ, ಪ್ರಯಾಣಿಕರ ಸುರಕ್ಷತೆಯಲ್ಲಿ ಸುಧಾರಣೆಯು ನನಸಾಗುತ್ತಿವೆ. ವಿಮಾನಯಾನ ವಲಯವಂತೂ ಜಾಗತಿಕ ಮಟ್ಟದಲ್ಲಿ ಯಶಸ್ಸು ಪಡೆಯುತ್ತಿದೆ. ಸುಮಾರು 60 ತಿಂಗಳ ಕಾಲ ಎರಡಂಕಿಯ ಬೆಳವಣಿಗೆಯಿಂದಾಗಿ, ಪ್ರತಿಯೊಬ್ಬ ಭಾರತೀಯನೂ ಕಡಿಮೆ ದರದಲ್ಲಿ ವಿಮಾನ ಪ್ರಯಾಣ ಕೈಗೊಳ್ಳುವುದು ಸಾಧ್ಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ವಾಹನಗಳಿಗೆ ಆಗುವ ಹಾನಿಯಲ್ಲಿ ಇಳಿಕೆ, ಇಂಧನದ ಸದ್ಬಳಕೆ ಸಾಧ್ಯವಾಗುತ್ತಿದೆ. ಈ ನಿರ್ದಿಷ್ಟ ಹೂಡಿಕೆಗಳು ಭಾರತೀಯ ವ್ಯಾಪಾರವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಿವೆೆ. ಭಾರತೀಯ ಆರ್ಥಿಕತೆಯೂ ಹೆಚ್ಚು ಫ‌ಲಪ್ರದವಾಗಿ ರೂಪಾಂತರವಾಗುತ್ತಿದ್ದು, ಇಡೀ ಜಗತ್ತು ಈ ಬದಲಾವಣೆಯನ್ನು ಗುರುತಿಸುತ್ತಿದೆ, ಗೌರವಿಸುತ್ತಿದೆ ಮತ್ತು ಭಾಗೀದಾರನಾಗುತ್ತಿದೆ. ಮೇಕ್‌ ಇನ್‌ ಇಂಡಿಯಾ ಯೋಜನೆ, ಮೊಬೈಲ್‌ ಪರಿಕರಗಳ ಕುರಿತ ಪಿಎಂಪಿ ಯೋಜನೆ ಹಾಗೂ ರಕ್ಷಣಾ ಉತ್ಪಾದನೆಯಲ್ಲಿ ಭಾರತೀಯ ಕಂಪನಿಗಳ ಭಾಗೀದಾರಿಕೆಯು ದೇಶದ ಉದ್ಯಮ ಬೆಳವಣಿಗೆ ದರವನ್ನು ಬದಲಿಸಲಿದೆ.

ಪ್ರಧಾನಿ ನರೇಂದ್ರ ಮೋದಿಯವರು ಖುದ್ದಾಗಿ ಮೂಲಸೌಕರ್ಯಾಭಿವೃದ್ಧಿ ಯೋಜನೆಗಳ ಅನುಷ್ಠಾನ ಕಾರ್ಯಗಳನ್ನು ಪರಿಶೀಲಿಸಿದ್ದರ ಪರಿಣಾಮವಾಗಿ, ಯೋಜನೆಗಳು ತ್ವರಿತವಾಗಿ ಪೂರ್ಣಗೊಂಡಿವೆ, ಹಳೆಯ ಯೋಜನೆಗಳ ಅನುಷ್ಠಾನದಲ್ಲಿದ್ದ ತೊಡರುಗಳು ನಿರ್ಮೂಲನೆಯಾಗಿವೆ, ವಿಳಂಬಗಳಿಂದಾಗುತ್ತಿದ್ದ ಅನಗತ್ಯ ವೆಚ್ಚವನ್ನು ತಡೆಗಟ್ಟಲಾಗಿದೆ. ದೊಡ್ಡ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಕ್ಷಮತೆಯಿರುವ ಬೃಹತ್‌ ಕಂಪನಿಗಳನ್ನು(ನಿರ್ಮಾಣ ಮತ್ತು ಮೂಲಸೌಕರ್ಯ) ಸ್ಥಾಪಿಸಲಾಗಿದೆ. ಕೃಷಿ ಯೋಜನೆಯ ಮೇಲಿನ ಅಗಾಧ ಹೂಡಿಕೆಯಿಂದಾಗಿ ನಮ್ಮ ರೈತರಿಗೆ ಉತ್ತಮ ನೀರು ಸರಬರಾಜು ಸೌಲಭ್ಯಗಳು ಸಿಗುವಂತಾಗಿದೆ. ಇ-ನ್ಯಾಮ್‌ ಮೂಲಕ ಕೃಷಿಯಲ್ಲಿ ತಂದಿರುವ ಸುಧಾರಣೆಗಳಿಂದಾಗಿ ಕೃಷಿ ವಲಯದಲ್ಲಿ ಹಣದ ಹರಿವು ಹೆಚ್ಚಾಗಿದೆ. ರೈತರಿಗೆ ವಾರ್ಷಿಕ 6000 ರೂಪಾಯಿಯ ಕನಿಷ್ಠ ಆದಾಯ ಯೋಜನೆಯು, ನಿಜಕ್ಕೂ ಗೇಮ್‌ ಚೇಂಜರ್‌ ಆಗಿದೆ.

ಇಷ್ಟೊಂದು ಚಿಕ್ಕ ಅವಧಿಯಲ್ಲಿ ಭಾರತದಂತೆ ಮತ್ಯಾವ ರಾಷ್ಟ್ರವೂ ಈ ಪರಿಯ ಅಗಾಧ ಬದಲಾವಣೆ ಸಾಧಿಸಿಲ್ಲ. ನಿಮ್ಮ ರಾಜಕೀಯ ಧೋರಣೆಗಳು ಏನೇ ಇರಲಿ, ಮೇಲೆ ತಿಳಿಸಿದ ಸಂಗತಿಗಳು ದೇಶದಲ್ಲಾಗುತ್ತಿರುವ ಗುಣಾತ್ಮಕ ಬೆಳವಣಿಗೆಗಳು ಎನ್ನುವುದು ನಿರ್ವಿವಾದ.

ಬಿಜೆಪಿ ನೇತೃತ್ವದ ಎನ್‌ಡಿಎದ 5 ವರ್ಷದ ಆಡಳಿತದಲ್ಲಿ ಭಾರತದ ಜಿಡಿಪಿಯು 76 ಲಕ್ಷ ಕೋಟಿಗೆ ಏರುವ ಅಂದಾಜಿದ್ದು, ಕಡಿಮೆ ಹಣದುಬ್ಬರ, ಕಡಿಮೆ ಹಣಕಾಸಿನ ಕೊರತೆ ಮತ್ತು ಕುಗ್ಗಿದ ಚಾಲ್ತಿ ಖಾತೆಯ ಕೊರತೆಯು- ಗುಣಮಟ್ಟದ ಬೆಳವಣಿಗೆಯನ್ನು ಸೂಚಿಸುತ್ತಿವೆ. ಇದಕ್ಕೆ ಹೋಲಿಸಿದರೆ, ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಕಡೆಯ ಐದು ವರ್ಷಗಳ ಆಡಳಿತದಲ್ಲಿ ದೇಶವು ಅಧಿಕ ಹಣದುಬ್ಬರ, ಅಧಿಕ ಹಣಕಾಸಿನ ಕೊರತೆ ಮತ್ತು ಅಧಿಕ ಚಾಲ್ತಿ ಖಾತೆಯ ಕೊರತೆಯನ್ನು ಎದುರಿಸಿ, ನಮ್ಮ ಆರ್ಥಿಕತೆಯ ಬೇರುಗಳನ್ನೇ ಅಲುಗಾಡಿಸಿಬಿಟ್ಟಿತ್ತು. ಇತ್ತೀಚಿನ ಅಂಕಿಅಂಶಗಳು, ಭಾರತದಲ್ಲಿ ಉಳಿತಾಯ ಮತ್ತು ಹೂಡಿಕೆ ದರಗಳು ಏರುತ್ತಿರುವುದನ್ನು ತೋರಿಸುತ್ತಿವೆ.

ಕಳೆದ ಐದು ವರ್ಷಗಳಲ್ಲಿ ಖಾಸಗಿ ವಲಯದಲ್ಲಿನ ಹೂಡಿಕೆ ದರವೂ ಗಮನಾರ್ಹವಾಗಿ ಏರಿಕೆ ಆಗಿದೆ. 2014-2019ರ ನಡುವೆ, ವಿದೇಶಿ ನೇರಬಂಡವಾಳ ಹೂಡಿಕೆ(ಎಫ್ಡಿಐ)ಯಲ್ಲೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ವಿದೇಶಿ ಹೂಡಿಕೆದಾರರಿಗೆ ನಮ್ಮ ದೇಶದ ಮೇಲೆ ವೃದ್ಧಿಸಿರುವ ವಿಶ್ವಾಸವೇ ಇದಕ್ಕೆ ಕಾರಣ.

ಡಿಜಿಟಲ್‌ ಇಂಡಿಯಾ ಮತ್ತು ಸ್ಟಾರ್ಟ್‌ಅಪ್‌ ಇಂಡಿಯಾ ಕಾರ್ಯಕ್ರಮಗಳಂತೂ ಪ್ರಧಾನಿ ಮೋದಿಯವರ ಮಾಸ್ಟರ್‌ಸ್ಟ್ರೋಕ್‌. ದೇಶದ ನವೋದ್ಯಮಗಳಿಗೆ ಕಳೆದ ಐದು ವರ್ಷಗಳಲ್ಲಿ 40 ಶತಕೋಟಿ ಡಾಲರ್‌ಗಳಷ್ಟು ಹೂಡಿಕೆ ಹರಿದುಬಂದಿದೆ, ತತ#ಲವಾಗಿ 26 ಯೂನಿಕಾರ್ನ್ ಕಂಪನಿಗಳು (1 ಶತಕೋಟಿ ಡಾಲರ್‌ಗೂ ಹೆಚ್ಚಿನ ಮೌಲ್ಯವಿರುವ ಖಾಸಗಿ ಒಡೆತನದ ನವೋದ್ಯಮಕ್ಕೆ ಯೂನಿಕಾರ್ನ್ ಕಂಪೆನಿಗಳೆನ್ನುತ್ತಾರೆ), 31 ಸೂನಿಕಾರ್ನ್ ಕಂಪೆನಿಗಳು(ಯೂನಿಕಾರ್ನ್ ಆಗುವ ಸಾಧ್ಯತೆ ಹೊಂದಿರುವ ಕಂಪನಿಗಳು), 7 ಲಕ್ಷಕ್ಕೂ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಿವೆ ಮತ್ತು ಭಾರತವನ್ನು ಆಮೂಲಾಗ್ರವಾಗಿ ಬದಲಿಸಿ, ದೇಶವನ್ನು ಜಗತ್ತಿನ 3ನೇ ಅತಿದೊಡ್ಡ ನವೋದ್ಯಮ ವ್ಯವಸ್ಥೆಯಾಗಿ ಬದಲಿಸಿದೆ.

ಕೆಲವು ಪೂರ್ವಗ್ರಹ ಪೀಡಿತ ಅರ್ಥಶಾಸ್ತ್ರಜ್ಞರು ಮತ್ತು ರಾಜಕಾರಣಿಗಳು, ಭಾರತದಲ್ಲಿ ಉದ್ಯೋಗಗಳು ಸೃಷ್ಟಿಯಾಗಿಲ್ಲ ಎಂದು ಹುಸಿ ಕಥೆಗಳನ್ನು ಹೇಳುತ್ತಾರೆ. ಸತ್ಯವೇನೆಂದರೆ ಉದ್ಯೋಗ ಸೃಷ್ಟಿಯು ಈ ಸರ್ಕಾರದ ಪ್ರಮುಖ ಸಾಧನೆಯಾಗಿದೆ. ಇಪಿಎಫ್ಒ ಮತ್ತು ಇಎಸ್‌ಐನ ಅಂಕಿಅಂಶಗಳು ಕಳೆದ ಐದು ವರ್ಷಗಳಲ್ಲಿ 2 ಕೋಟಿಗೂ ಹೆಚ್ಚು ಔಪಚಾರಿಕ ವಲಯದ ಉದ್ಯೋಗಗಳು ಸೃಷ್ಟಿಯಾಗಿರುವುದನ್ನು ತೋರಿಸುತ್ತವೆ. ಬೆಳೆಯುತ್ತಿರುವ ಸಾರಿಗೆ ವಲಯವು ಕಳೆದ ಐದು ವರ್ಷಗಳಲ್ಲಿ 1.5 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ. ಇನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರಿಗಳಲ್ಲಿ 35 ಲಕ್ಷ ಹೊಸ ಹುದ್ದೆಗಳನ್ನು ಸೇರಿಸಲಾಗಿರುವುದನ್ನು ಎನ್‌ಪಿಎಸ್‌ನ ದಾಖಲೆಗಳು ತೋರಿಸುತ್ತವೆ. ವೃತ್ತಿಪರ ವಲಯದಲ್ಲಿನ ಉದ್ಯೋಗಗಳ ಕುರಿತ ಆದಾಯ ತೆರಿಗೆ ದತ್ತಾಂಶವು, 40ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿರುವುದನ್ನು ಸಾರುತ್ತಿದೆ. ಕಳೆದ ಐದು ವರ್ಷದಲ್ಲಿ 4.25 ಕೋಟಿಗೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಿರುವುದನ್ನು ಈ ನಾಲ್ಕು ಮೂಲಗಳೇ ತೋರಿಸುತ್ತಿವೆ. ನಾವು ಇನ್ನುಳಿದ ಉದ್ಯೋಗ ಸೃಷ್ಟಿ ದಾಖಲೆಗಳನ್ನು ಪರಿಗಣಿಸಿದರೆ, ಪ್ರಧಾನಿ ಮೋದಿ ಅವರ ಅವಧಿಯಲ್ಲಿ ದೇಶದಲ್ಲಿ 5 ಕೋಟಿಗೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ ಎನ್ನುವುದು ಗೋಚರಿಸುತ್ತದೆ.

ಇನ್ನು ಆಡಳಿತದ ವಿಷಯಕ್ಕೆ ಬಂದರೆ, ಬಿಜೆಪಿ ನೇತೃತ್ವದ ಎನ್‌ಡಿಎಗೆ ಅದ್ಭುತ ಟ್ರ್ಯಾಕ್‌ ರೆಕಾರ್ಡ್‌ ಇದೆ. ಆದಾಗ್ಯೂ ಪ್ರತಿಪಕ್ಷವು ರಫೇಲ್‌ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಪುರಾವೆಯಿಲ್ಲದೇ ಆರೋಪ ಮಾಡುತ್ತದೆಯಾದರೂ, ಸತ್ಯವೇನೆಂದರೆ, ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರದಲ್ಲಿ ಒಂದೇ ಒಂದು ಭ್ರಷ್ಟಾಚಾರ ಹಗರಣವೂ ನಡೆದಿಲ್ಲ. ಸರ್ಕಾರಿ ಗುತ್ತಿಗೆಗಳಲ್ಲಿ, ಪಾರದರ್ಶಕತೆ ಮತ್ತು ಮುಕ್ತತೆಯು ಹೈಲೈಟ್‌ ಆಗಿದೆ.

ಹಾಗಿದ್ದರೆ ಭವಿಷ್ಯದ ಕಥೆಯೇನು? ಭಾರತ ಮತ್ತು ಭಾರತೀಯರು ನವ ಆಶಾವಾದದೊಂದಿಗೆ ಭವಿಷ್ಯವನ್ನು ಎದುರು ನೋಡುತ್ತಿದ್ದಾರೆ. ಯುಪಿಎ-2ರ ಅವಧಿಯಲ್ಲಿ ಅಗಾಧ ಭ್ರಷ್ಟಾಚಾರ ಮತ್ತು ಬೃಹತ್‌ ಆರ್ಥಿಕ ಅಧೋಗತಿಯಿಂದ ಕತ್ತಲೆಯಲ್ಲಿ ಮುಳುಗಿದ್ದ ಭಾರತವು, ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಆಡಳಿತದಲ್ಲಿ ನಿಜಕ್ಕೂ ರೂಪಾಂತರಗೊಂಡಿದ್ದು, ನಮಗೆಲ್ಲರಿಗೂ ಭವ್ಯ ಭವಿಷ್ಯವನ್ನು ಖಾತ್ರಿ ಪಡಿಸಿದೆ.

ಟಿ.ವಿ. ಮೋಹನ್‌ದಾಸ್‌ ಪೈ

ಟಾಪ್ ನ್ಯೂಸ್

12-gangavathi

ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ

11-

Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ

10-mudigere

Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-gangavathi

ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

10

Bengaluru: ಫ್ಲೈಓವರ್‌ಗಳಲ್ಲೂ ಕಸ ಸುರಿಯುವ ವಾಹನ ಸವಾರರು 

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

Godrej:  ಜನಪ್ರಿಯ ಗೋದ್ರೆಜ್‌ ಸಮೂಹ ಇಬ್ಭಾಗ: ಜಮ್ಶೆಡ್‌, ನಾದಿರ್‌ ನೂತನ ಮುಖ್ಯಸ್ಥರು

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದನ್ನು ಪ್ಲ್ಯಾನ್ ಮಾಡಿದವರು ದೇವೇಗೌಡರು – ಸಿಎಂ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.