ಬಂಧಿತ ಪಂಚೆನ್‌ ಲಾಮಾ ಬಿಡುಗಡೆಗೆ ಟಿಬೆಟ್‌ ಸಂಘಟನೆಗಳ ಒತ್ತಾಯ

Team Udayavani, Apr 30, 2019, 6:30 AM IST

ottaya

ಮಡಿಕೇರಿ: ಕಳೆದ 24 ವರ್ಷಗಳಿಂದ ಚೀನಾ ಸರಕಾರ ರಾಜಕೀಯ ಕೆೈದಿಯಾಗಿ ಬಂಧಿಸಿರುವ ಪಂಚೆನ್‌ ಲಾಮಾ ಅವರನ್ನು ತತ್‌ಕ್ಷಣ ಬಿಡುಗಡೆಗೊಳಿಸುವಂತೆ ಪ್ರಾಂತೀಯ ಟಿಬೆಟ್‌ ಯುವ ಕಾಂಗ್ರೆಸ್‌ ಮತ್ತು ಮಹಿಳಾ ಟಿಬೆಟ್‌ ಸಂಘಟನೆಗಳು ಒತ್ತಾಯಿಸಿದೆ.

ಕುಶಾಲನಗರ ಸಮೀಪ ಬೈಲು ಕೊಪ್ಪೆಯ ಸಂಘಟನೆ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ, ತಶಿ ಲೊಂಪೊ ಬೌದ್ಧ ಮಂದಿರ ಧರ್ಮಗುರುಗಳಾದ ಕೆಲ್ಕನ್‌ ರಿಂಪೋಚೆ, 11ನೇ ಪಂಚೆನ್‌ ಲಾಮ ಮತ್ತು ಅವರ ಪೋಷಕರನ್ನು ಚೀನಾ ಸರಕಾರ ತಮ್ಮ ವಶಕ್ಕೆ ಪಡೆದುಕೊಂಡಿದ್ದು ಇದುವರೆಗೂ ಅವರ ವಾಸ್ತವ ಸ್ಥಿತಿ ಬಗ್ಗೆ ಹೊರ ಜಗತ್ತಿಗೆ ಮಾಹಿತಿ ನೀಡುತ್ತಿಲ್ಲ. ಅವರ ಎಲ್ಲ ಹಕ್ಕುಗಳನ್ನು ಮೊಟಕುಗೊಳಿಸಿ ಬಂಧನಕ್ಕೆ ಒಳಪಡಿಸಿದ್ದಾರೆ.

ತಮ್ಮ ಸಮುದಾಯದ ಧರ್ಮ ಗುರುಗಳೆಂದು ಬಿಂಬಿಸಲಾಗಿದ್ದ ಪಂಚೆನ್‌ ಲಾಮ ಅವರನ್ನು ಕೂಡಲೆ ಬಿಡುಗಡೆ ಗೊಳಿಸುವಂತೆ ಒತ್ತಾಯಿಸಿದರು.
ಪ್ರಸಕ್ತ 30 ವರ್ಷ ಪ್ರಾಯದ ಪಂಚೆನ್‌ ಲಾಮ ಅವರು ಬೌದ್ಧ ಧರ್ಮೀಯರ ಮುಂದಿನ ಪರಮೋಚ್ಚ ಗುರುಗಳಾಗಬೇಕಾಗಿದ್ದು ಅವರ ಧಾರ್ಮಿಕ ಚಟುವಟಿಕೆಗಳಿಗೆ ಕೂಡ ಅಡ್ಡಿ ಮಾಡಿರುವ ಸಾಧ್ಯತೆಯಿದೆ. ಚೀನಾ ಸರಕಾರ ಟಿಬೇಟಿಯನ್ನರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ನಡೆಸುತ್ತಾ ಬಂದಿದ್ದು ಈ ಬಗ್ಗೆ ವಿಶ್ವಸಂಸ್ಥೆಗೆ ಹಲವು ಬಾರಿ ದೂರು ನೀಡಲಾಗಿದೆ ಎಂದಿದ್ದಾರೆ.

11ನೇ ಪಂಚೆನ್‌ ಲಾಮಾರ ಶೀಘ್ರ ಬಿಡುಗಡೆಗೆ ಪ್ರಾರ್ಥಿಸಿ ಬೈಲುಕೊಪ್ಪೆಯ ಟಿಬೇಟಿಯನ್‌ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.

ಈ ಸಂದರ್ಭ ಭಾರತೀಯ ಸಮುದಾಯ ಸೇರಿದಂತೆ ವಿಶ್ವದ ಜನರ ಸಹಕಾರ ತಮಗೆ ಅವಶ್ಯಕತೆಯಿದೆ ಎಂದು ಸಹಾಯ ಕೋರಿದರು.

ಸುದ್ದಿಗೋಷ್ಠಿಯಲ್ಲಿ ಟಿಬೇಟಿಯನ್‌ ಯೂತ್‌ ಕಾಂಗ್ರೆಸ್‌ ಅಧ್ಯಕ್ಷರಾದ ಲಕ್ಯಪ್‌ ಜನಿಯಲ್‌ ಮತ್ತು ಟಿಬೇಟಿಯನ್‌ ಮಹಿಳಾ ಘಟಕದ ಅಧ್ಯಕ್ಷೆ ತಶಿ ಚೋಡನ್‌ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

1-wqeqweqwewq

IPL; ಸೂರ್ಯ ಶತಕದ ಪ್ರತಾಪ: ಹೈದರಾಬಾದ್ ವಿರುದ್ಧ ಮುಂಬೈಗೆ 7 ವಿಕೆಟ್ ಜಯ

ಮೊಬೈಲ್‌ಗ‌ಳಲ್ಲಿ ಅಶ್ಲೀಲ ವೀಡಿಯೋ ಇಟ್ಟುಕೊಳ್ಳದಿರಿ: ಎಸ್‌ಐಟಿ

ಮೊಬೈಲ್‌ಗ‌ಳಲ್ಲಿ ಅಶ್ಲೀಲ ವೀಡಿಯೋ ಇಟ್ಟುಕೊಳ್ಳದಿರಿ: ಎಸ್‌ಐಟಿ

Bhavani ರೇವಣ್ಣಗೂ ಶೀಘ್ರ ಎಸ್‌ಐಟಿ ನೋಟಿಸ್‌

Bhavani ರೇವಣ್ಣಗೂ ಶೀಘ್ರ ಎಸ್‌ಐಟಿ ನೋಟಿಸ್‌

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

1-wqeqweqw

Yellow alert; ಬೆಂಗಳೂರು ನಗರ ಸೇರಿ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ

1-wqewqewqe

Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

KR Nagar ಶಾಸಕರ ಚಿತಾವಣೆ ಮೇರೆಗೆ ರೇವಣ್ಣ ವಿರುದ್ಧ ಪ್ರಕರಣ: ಜೆಡಿಎಸ್‌

1-wqeqweqwewq

IPL; ಸೂರ್ಯ ಶತಕದ ಪ್ರತಾಪ: ಹೈದರಾಬಾದ್ ವಿರುದ್ಧ ಮುಂಬೈಗೆ 7 ವಿಕೆಟ್ ಜಯ

ಮೊಬೈಲ್‌ಗ‌ಳಲ್ಲಿ ಅಶ್ಲೀಲ ವೀಡಿಯೋ ಇಟ್ಟುಕೊಳ್ಳದಿರಿ: ಎಸ್‌ಐಟಿ

ಮೊಬೈಲ್‌ಗ‌ಳಲ್ಲಿ ಅಶ್ಲೀಲ ವೀಡಿಯೋ ಇಟ್ಟುಕೊಳ್ಳದಿರಿ: ಎಸ್‌ಐಟಿ

Bhavani ರೇವಣ್ಣಗೂ ಶೀಘ್ರ ಎಸ್‌ಐಟಿ ನೋಟಿಸ್‌

Bhavani ರೇವಣ್ಣಗೂ ಶೀಘ್ರ ಎಸ್‌ಐಟಿ ನೋಟಿಸ್‌

police

Chikkaballapur: ಆಂಧ್ರದಿಂದ ಗಾಂಜಾ ತರುತ್ತಿದ್ದ ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.