ಶೈಕ್ಷಣಿಕ ಯಶಸ್ಸಿನ ಸೇತುವೆ ‘ವಿಕಾಸ’ ಪದವಿ ಪೂರ್ವ ಕಾಲೇಜು


Team Udayavani, May 9, 2019, 4:47 PM IST

9-May-29

ಶೈಕ್ಷಣಿಕ ಪ್ರಗತಿಯಿಂದಲೇ “ವಿಕಾಸ” ಎಂಬ ಬಲವಾದ ನಂಬಿಕೆಯೊಂದಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳೆರಡರಲ್ಲೂ ಗುಣಮಟ್ಟವನ್ನು ಕಾಯ್ದುಕೊಂಡು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಸ್ಥೆ ಮಂಗಳೂರಿನ ವಿಕಾಸ್ ಪಿ.ಯು. ಕಾಲೇಜ್.

ಶೈಕ್ಷಣಿಕ ಸಾಧನೆ
ಸಂಸ್ಥೆಯ ಶಿಕ್ಷಣದ ಗುಣಮಟ್ಟಕ್ಕೆ ಅದರ ಶೈಕ್ಷಣಿಕ ಸಾಧನೆಯೇ ಕನ್ನಡಿ. ಈ ಹಿನ್ನಲೆಯಲ್ಲಿ ವಿಕಾಸ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಸಿಇಟಿ, ನೀಟ್, ಜೆಇಇ ಮುಂತಾದ ಸ್ಮರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲೂ ಅತ್ಯುತ್ತಮ ಸಾಧನೆ ತೋರಿ ಮಂಗಳೂರಿಗೆ ಕೀರ್ತಿ ತಂದಿದ್ದಾರೆ.

ಸಿಇಟಿ: ಜೆಇಇ ಹಾಗೂ ನೀಟ್ ಸಾಧಕರು
ವಿಕಾಸ್ ಪಿ.ಯು. ಕಾಲೇಜಿನಲ್ಲಿ 2012 ರಿಂದ 2018ನೇ ಶೈಕ್ಷಣಿಕ ಅವಧಿಯಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾದ 1348 ವಿದ್ಯಾರ್ಥಿಗಳ ಪೈಕಿ 717 ವಿದ್ಯಾರ್ಥಿಗಳು ಇಂಜಿನಿಯರಿಂಗ್, 178 ವೈದ್ಯಕೀಯ, 37 ಡೆಂಟಲ್, 23 ಆರ್ಕಿಟೆಕ್ಚರ್ ಹಾಗೂ ಉಳಿದ ವಿದ್ಯಾರ್ಥಿಗಳು ಇನ್ನಿತರ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ಮೂಲಕ ಸಂಸ್ಥೆಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ.

ಪೂರಕ ಸೌಲಭ್ಯಗಳು
ಸುವ್ಯವಸ್ಥಿತ ಕ್ಯಾಂಪಸ್
ಅಚ್ಚುಕಟ್ಟಾದ ಲಾಬಿ, ಸಕಲ ಸೌಕರ್ಯಗಳನ್ನು ಒಳಗೊಂಡ ಕ್ಲಾಸ್ ರೂಂಗಳು, ಅನುಕೂಲಕರ ಲ್ಯಾಬೋರೇಟರಿ, ವಿದ್ಯಾರ್ಥಿಗಳ ಏಕಾಗ್ರತೆಗೆ ಪೂರಕವಾದ ಯೋಗ ತರಬೇತಿ, ಸಾಂಸ್ಕೃತಿಕ ಹಬ್ಬಗಳಲ್ಲಿ ಭಾಗವಹಿಸುವ ಮುಕ್ತ ಅವಕಾಶ, ಸುಂದರ ಹಾಸ್ಟೆಲ್ ಗಳು ಇವೆಲ್ಲವೂ ಕಾಲೇಜು ಕ್ಯಾಂಪಸ್ ನ ವಿಶೇಷತೆಗಳು. ಜೊತೆಗೆ ಕ್ರೀಡಾ ಆಸಕ್ತರಿಗೆ ವಿಶೇಷ ಪ್ರೋತ್ಸಾಹದ ಹಾಗೂ ತರಬೇತಿ ಹಾಗೂ ಪರಿಣತ ಪ್ರಾಧ್ಯಾಪಕ ವರ್ಗವೇ ಕಾಲೇಜು ಕ್ಯಾಂಪಸ್ ನ ಹೈಲೈಟ್.

ಸಾವಯವ ಗಾರ್ಡನ್- ಆರೋಗ್ಯವೇ ಭಾಗ್ಯ
ಕಾಲೇಜು ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಜೊತೆಗೆ ವಿದ್ಯಾರ್ಥಿಗಳ ಆರೋಗ್ಯದ ಕಡೆಗೂ ವಿಶೇಷ ಗಮನ ಹರಿಸುತ್ತಿದೆ. ಇದಕ್ಕಾಗಿ ಹಾಸ್ಟೆಲ್ ಖಾದ್ಯಗಳ ತಯಾರಿಕೆಗೆ ಬೇಕಾಗುವ ತರಕಾರಿಯನ್ನು ದೇಶಿ ಸಾವಯವ ವಿಧಾನದ ಮೂಲಕ ಕಾಲೇಜು ಆವರಣದಲ್ಲೇ ಬೆಳೆಸುತ್ತಿದೆ. ಇಲ್ಲಿ ಅಲಸಂಡೆ, ಬಸಳೆ, ಹೀರೆ, ಪಡುವಲಕಾಯಿ, ಕುಂಬಳಕಾಯಿ ಮುಂತಾದ ತರಕಾರಿಯನ್ನು ಬೆಳೆಯಲಾಗುತ್ತಿದ್ದು, ಇಂತಹ ವಿಭಿನ್ನ ಪ್ರಯತ್ನವನ್ನು ಮಾಡಿರುವ ಕೆಲವೇ ಸಂಸ್ಥೆಗಳಲ್ಲಿ ವಿಕಾಸ್ ಕಾಲೇಜು ಮುಂಚೂಣಿ ಸ್ಥಾನವನ್ನು ಪಡೆದುಕೊಳ್ಳುತ್ತದೆ.


ಕ್ಯಾಂಪಸ್ ನಲ್ಲಿರುವ ಮರಗಿಡಗಳಿಗೆ QR Code ಅಳವಡಿಸಲಾಗಿದ್ದು, ಅದನ್ನು ಸ್ಕ್ಯಾನ್ ಮಾಡುವ ಮೂಲಕ ಮರಗಿಡಗಳ ಕುರಿತು ಸಂಪೂರ್ಣ ಮಾಹಿತಿ ಪಡೆಯಬಹುದು. ಕಾಲೇಜಿನ ಈ ಡಿಜಿಟಲ್ ಗಾರ್ಡನ್ ಮಾದರಿ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ರಾಜ್ಯದಲ್ಲೇ ಪ್ರಥಮ ಪ್ರಯತ್ನ.

ಅತ್ಯುತ್ತಮ ಹಾಸ್ಟೆಲ್ ಸೌಕರ್ಯ

ಸಕಲ ಭದ್ರತೆಗಳೊಂದಿಗೆ ಹುಡುಗ, ಹುಡುಗಿಯರಿಗಾಗಿ ಕ್ಯಾಂಪಸ್ ಒಳಗಡೆಯೇ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ AC / Non AC ಕೊಠಡಿಗಳು, 3, 4, 5 ಹಾಗೂ 6 ಬೆಡ್ಗಳುಳ್ಳ ರೂಂಗಳ ಆಯ್ಕೆಯ ಅವಕಾಶ, ಸ್ವಚ್ಛ ಶೌಚಾಲಯ, ಭದ್ರತೆಗಾಗಿ ಸಿಸಿಟಿವಿ ಸೌಲಭ್ಯ ಕೂಡಾ ಇದೆ. ತಿಂಗಳ ಪ್ರತೀ ದಿನವೂ ವಿಭಿನ್ನವಾದ ಸಸ್ಯಾಹಾರ, ಲಾಂಡ್ರಿ ವ್ಯವಸ್ಥೆ, ಪ್ರತೀ ತಿಂಗಳಿಗೊಮ್ಮೆ ಪೋಷಕರ ಜೊತೆ ಔಟಿಂಗ್ಗೆ ಅವಕಾಶ, ಇಂಡೋರ್ ಗೇಮ್ಸ್ ಸೌಲಭ್ಯ ಇತ್ಯಾದಿ ವಿದ್ಯಾಥರ್ಿಗಳಿಗೆ ಸ್ನೇಹಮಯ ವಾತಾವರಣವನ್ನು ಒದಗಿಸುತ್ತಿದೆ.

ಶೈಕ್ಷಣಿಕ ಕೋರ್ಸ್ ಗಳು
PCMB, PCMC, PCMS, BASE, BASBm, BASC  ಕೋರ್ಸ್ ಗಳನ್ನು ಒದಗಿಸಲಾಗುತ್ತದೆ. ಪ್ರತಿ ವಿಷಯಗಳನ್ನು ವಿಶೇಷ ಆಸಕ್ತಿಯೊಂದಿಗೆ ವಿದ್ಯಾರ್ಥಿಗಳಿಗೆ ಮನವರಿಕೆಯಾಗುವ ರೀತಿಯಲ್ಲಿ ವಿವರಿಸಲಾಗುತ್ತದೆ. ಶೈಕ್ಷಣಿಕ ತರಬೇತಿಗಾಗಿ ಎಲ್ಸಿಡಿ ಪ್ರೊಜೆಕ್ಟರ್ಸ್, ಧ್ವನಿವರ್ಧಕ ಸಾಧನಗಳ ಮೂಲಕ ಆಧುನಿಕತೆಯ ಸ್ಪರ್ಶವನ್ನು ನೀಡಲಾಗುತ್ತಿದೆ.

ಪ್ರಯೋಗಾಲಯ
ವಿಕಾಸ್ ಪಿ.ಯು. ಕಾಲೇಜಿನಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಕಂಪ್ಯೂಟರ್ ವಿಷಯಗಳ ಸುಸಜ್ಜಿತ ಪ್ರಯೋಗಾಲಯಗಳಿವೆ. ಎಲ್ಲಾ ಬಗೆಯ ಪರಿಕರಗಳನ್ನು ಒದಗಿಸಿ, ಪ್ರಯೋಗಶೀಲತೆಯನ್ನು ಉತ್ತೇಜಿಸಲಾಗುತ್ತದೆ. ಇಲ್ಲಿ ತರಗತಿಗಳಲ್ಲಿ ಕಲಿತ ಪಠ್ಯ ವಿಷಯಗಳನ್ನು ಪ್ರಯೋಗದ ಮೂಲಕ ಮನದಟ್ಟು ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.

ಪಠ್ಯೇತರ ಚಟುವಟಿಕೆಗಳಲ್ಲೂ ಚಾಂಪಿಯನ್
ವಿಕಾಸ್ ಪಠ್ಯಚಟುವಟಿಕೆಗಳಲ್ಲಿ ಮಾತ್ರ ಮುಂದಿರುವುದಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲೂ ಚಾಂಪಿಯನ್ ಎನಿಸಿಕೊಂಡಿದೆ. ಮುಖ್ಯವಾಗಿ ಕ್ರೀಡಾ ಚಟುವಟಿಕೆಗಳಾದ ಕಬಡ್ಡಿ, ವಾಲಿಬಾಲ್, ತ್ರೋಬಾಲ್, ಚೆಸ್, ಲಾಂಗ್ ಜಂಪ್, ಹೈ-ಜಂಪ್ನಲ್ಲೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳನ್ನು ಜಯಿಸಿದೆ. ಅಷ್ಟೇ ಅಲ್ಲದೇ ಚಚರ್ಾಕೂಟ, ಕ್ವಿಜ್, ವಿಜ್ಞಾನ ಮಾದರಿಗಳು, ಸಾಂಸ್ಕೃತಿಕ ನೃತ್ಯ ವೈಭವ, ಹಾಡುಗಾರಿಕೆ, ಚಿತ್ರಕಲೆ, ಮುಂತಾದ ಕ್ಷೇತ್ರಗಳಲ್ಲೂ ಸೈ ಎನಿಸಿಕೊಂಡಿದೆ.

ವೃತ್ತಿಪರ ಮಾರ್ಗದರ್ಶನ
ವರ್ಷ ಒಂದರಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗಾಗಿ 2 ಮಾರ್ಗದರ್ಶನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. 1) ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ (NEET, JEE, NATA, CET, COMED-K, AIIMS) ಮುಂತಾದ ವಿಷಯಗಳಲ್ಲಿ ಯಾವ ಕ್ಷೇತ್ರಕ್ಕೆ ಯಾವ ಪರೀಕ್ಷೆ ಮಹತ್ವದ್ದಾಗಿದೆ ಎಂಬುದರ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ. ಉದಾಹರಣೆ: ಮೆಡಿಕಲ್ ಸೀಟ್ ಗಾಗಿ ನೀಟ್, ಆರ್ಕಿಟೆಕ್ಚರ್ಗೆ ಸಂಬಂಧಿಸಿ ನಾಟಾ, ವಿದ್ಯಾರ್ಥಿವೇತನದ ಪ್ರಯೋಜನಕ್ಕಾಗಿ ಕೆವಿಪಿವೈ, ತಾಂತ್ರಿಕ ಶಿಕ್ಷಣಕ್ಕಾಗಿ ಅಇಖಿ, ಅಔಒಇಆ-ಏ. ಇನ್ನು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಆಯ್ದ ವಿಷಯಗಳಲ್ಲಿ Extra Remedial Classಗಳನ್ನು ನಡೆಸಲಾಗುತ್ತದೆ.
2) ದ್ವಿತೀಯ ಪಿಯುಸಿ ವಿದ್ಯಾಥರ್ಿಗಳಿಗೆ ವೃತ್ತಿಪರ ಮಾರ್ಗದರ್ಶನಕ್ಕಾಗಿ ಪ್ರತೀ ಕ್ಷೇತ್ರದಲ್ಲಿನ ಸಾಧಕರನ್ನು ಕರೆಸಿ ಅವರ ಅನುಭವಗಳನ್ನು ವಿದ್ಯಾಥರ್ಿಗಳೊಂದಿಗೆ ಹಂಚಿಕೊಳ್ಳುವ ಹಾಗೂ ವಿದ್ಯಾರ್ಥಿಗಳಿಗೆ ಅವರೊಂದಿಗೆ ಸಂವಾದ ನಡೆಸಲು ಅನುವು ಮಾಡಿಕೊಡುವ ವಿನೂತನ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಇಂತಹ ಅತ್ಯಪೂರ್ವ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಮಾರ್ಗಸೂಚಿಯಾಗಿವೆ ಎಂಬುದು ಸಂಸ್ಥೆಯ ಭರವಸೆ.

ಸಂಸ್ಥೆಯ ಲಾಂಛನಕ್ಕೆ ಹೊಸ ಸ್ಪರ್ಶ


ವಿಕಾಸ್ ಶಿಕ್ಷಣ ಸಂಸ್ಥೆಯು ತನ್ನ ಶೈಕ್ಷಣಿಕ ಸಾಧನೆಯಿಂದ ಈಗಾಗಲೇ ಖ್ಯಾತವಾಗಿದ್ದು ತನ್ನ ಲಾಂಛನಕ್ಕೆ ಹೊಸ ಸ್ಪರ್ಶ ನೀಡುವ ಮೂಲಕ ತನ್ನ ಹೆಗ್ಗುರುತನ್ನು ರಾಷ್ಟ್ರವ್ಯಾಪಿ ಖ್ಯಾತವಾಗಿಸುವಲ್ಲಿ ದಿಟ್ಟ ಹೆಜ್ಜೆ ಇರಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್ ಸೈಟ್ : www.vikaascollege.comನ್ನು ಸಂದರ್ಶಿಸಿ ಅಥವಾ ಇ ಮೇಲ್: [email protected]/ ದೂರವಾಣಿ ಸಂಖ್ಯೆ: 0824-2210300/301 ಮೂಲಕ ಸಂಪರ್ಕಿಸಿ.

ಟಾಪ್ ನ್ಯೂಸ್

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Dandeli: ಮದುವೆಗೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ… 8 ಮಂದಿಗೆ ಗಾಯ

Dandeli: ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ.. ಮಕ್ಕಳು ಸೇರಿ 8 ಮಂದಿಗೆ ಗಾಯ

Praveen Nettar Case; Arrest of main accused Mustafa Paychar of Sulya

Praveen Nettar Case; ಪ್ರಮುಖ ಆರೋಪಿ ಸುಳ್ಯದ ಮುಸ್ತಫಾ ಪೈಚಾರ್ ಬಂಧನ

ಪಾಕ್‌ಗೆ ಗೌರವ ಕೊಡಿ… ಇಲ್ಲವಾದಲ್ಲಿ ಅಣುಬಾಂಬ್ ಹಾಕುತ್ತಾರೆ: ಮಣಿಶಂಕರ್ ಅಯ್ಯರ್ ಹೇಳಿಕೆ

Pak ಬಳಿ ಅಣುಬಾಂಬ್ ಇದೆ ಅವರಿಗೆ ಗೌರವ ಕೊಡಿ… ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ

movies

Sandalwood; ಇಂದು ತೆರೆಗೆ ಬರುತ್ತಿದೆ ನಾಲ್ಕು ಸಿನಿಮಾಗಳು

Chitradurga: ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ

Chitradurga: ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

Fraud: ಕ್ರೈಂ ಬ್ರಾಂಚ್‌ ಹೆಸರಲ್ಲಿ 1.60 ಕೋ.ರೂ. ಪಡೆದು ವಂಚನೆ   

Fraud: ಕ್ರೈಂ ಬ್ರಾಂಚ್‌ ಹೆಸರಲ್ಲಿ 1.60 ಕೋ.ರೂ. ಪಡೆದು ವಂಚನೆ   

Mangaluru: ಅಪಹರಿಸಲು ಸುಪಾರಿ; ಇಬ್ಬರ ಬಂಧನ

Mangaluru: ಅಪಹರಿಸಲು ಸುಪಾರಿ; ಇಬ್ಬರ ಬಂಧನ

Mangaluru: ಟಿಪ್ಪರ್‌ ಲಾರಿ ಹರಿದು ಸ್ಕೂಟರ್‌ ಸವಾರ ಸಾವು

Mangaluru: ಟಿಪ್ಪರ್‌ ಲಾರಿ ಹರಿದು ಸ್ಕೂಟರ್‌ ಸವಾರ ಸಾವು

Mangaluru: ರೈಲು ನಿಲ್ದಾಣದ ಬಳಿ ಗಲಾಟೆ; ಪ್ರಕರಣ ದಾಖಲು

Mangaluru: ರೈಲು ನಿಲ್ದಾಣದ ಬಳಿ ಗಲಾಟೆ; ಪ್ರಕರಣ ದಾಖಲು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Dandeli: ಮದುವೆಗೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ… 8 ಮಂದಿಗೆ ಗಾಯ

Dandeli: ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಪಲ್ಟಿ.. ಮಕ್ಕಳು ಸೇರಿ 8 ಮಂದಿಗೆ ಗಾಯ

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ

Kalaburagi; ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ

Raichur; ಶ್ರೀ ಬಸವೇಶ್ವರ ಜಯಂತಿ ಆಚರಣೆ

Raichur; ಶ್ರೀ ಬಸವೇಶ್ವರ ಜಯಂತಿ ಆಚರಣೆ

Praveen Nettar Case; Arrest of main accused Mustafa Paychar of Sulya

Praveen Nettar Case; ಪ್ರಮುಖ ಆರೋಪಿ ಸುಳ್ಯದ ಮುಸ್ತಫಾ ಪೈಚಾರ್ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.