ಗೂಡೂರು ಗ್ರಾಮಸ್ಥರಲ್ಲಿ ತೀವ್ರ ಆತಂಕ

ವ್ಯಕ್ತಿ ಪ್ರಾಣ ಹೋದ ಮೇಲೂ ಎಚ್ಚರಿಕೆ ಫಲಕ ಹಾಕದ ಅರಣ್ಯ ಇಲಾಖೆ ಅಧಿಕಾರಿಗಳು

Team Udayavani, May 10, 2019, 11:29 AM IST

10-May-9

ಯಾದಗಿರಿ: ನದಿ ದಡದಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಮೊಸಳೆ.

ಯಾದಗಿರಿ: ರಾಜ್ಯಾದ್ಯಂತ ತೀವ್ರ ಬರ ಹಿನ್ನೆಲೆ ನದಿ, ನಾಲೆಗಳೆಲ್ಲ ಬತ್ತಿ ಹೋಗಿದ್ದು, ಅಲ್ಪಸ್ವಲ್ಪ ನೀರಿನಲ್ಲಿರುವ ಜಲಚರಗಳು ಬಿಸಿಲ ಝಳಕ್ಕೆ ತತ್ತರಿಸಿ ಹೋಗುತ್ತಿವೆ. ಈ ಮಧ್ಯೆ ನದಿಯಲ್ಲಿರುವ ಮೊಸಳೆಗಳು ಏ. 28ರಂದು ಅಮಾಯಕ ಕುರಿಗಾಹಿಯನ್ನು ಬಲಿಪಡೆದಿರುವುದು ಜಿಲ್ಲೆಯ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಗೂಡೂರು ಗ್ರಾಮಸ್ಥರಲ್ಲಿ ತೀವ್ರ ಆತಂಕ ಹುಟ್ಟಿಸಿದೆ.

ಗ್ರಾಮದ ಕುರಿ ಗಾಹಿ ಬಸವಲಿಂಗಪ್ಪ ಎಂಬುವವರು ತನ್ನ ಕುರಿಮರಿಗಳನ್ನು ಮೇಯಿಸಲು ಹೋಗಿದ್ದ ವೇಳೆ ನದಿ ದಡಕ್ಕೆ ಕುಳಿತು ಊಟ ಸೇವಿಸಿ ನೀರು ಕುಡಿಯಲು ನದಿಗೆ ಇಳಿದಿದ್ದ ಸಂದರ್ಭದಲ್ಲಿ 2 ಮೊಸಳೆಗಳು ದಾಳಿ ನಡೆಸಿ ಒಂದು ಕಾಲು ಮತ್ತು ಕೈ ತಿಂದಿದ್ದವು, ಘಟನೆಯಲ್ಲಿ ರಕ್ತ ಸ್ರಾವವಾಗಿದ್ದರಿಂದ ಕುರಿಗಾಹಿ ಮೃತಪಟ್ಟಿದ್ದ.

ನದಿ ಪಾತ್ರದ ಗ್ರಾಮಗಳ ಗ್ರಾಮಸ್ಥರಲ್ಲಿ ಸೂಕ್ತ ಎಚ್ಚರಿಕೆ ಮೂಡಿಸಬೇಕಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದೇ ನಿರ್ಲಕ್ಷ್ಯ ವಹಿಸಿದ್ದು, ಇಂತಹ ಘಟನೆ ನಡೆಯಲು ಕಾರಣ ಎಂದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

ಯಾದಗಿರಿಯಿಂದ ಗೂಡೂರು ಮಾರ್ಗವಾಗಿ ಸಂಗಮದ ಕೃಷ್ಣಾ ನದಿಗೆ ಈ ನೀರು ಸೇರುತ್ತದೆ. ಇಷ್ಟು ದಿನ ಅಲ್ಪ ಸ್ವಲ್ಪ ನೀರು ನಿಂತಿದ್ದ ತೆಗ್ಗುಗಳಲ್ಲಿ ಅಡಗಿದ್ದ ಮೊಸಳೆಗಳು ಈ ಭಾಗಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ.

ಪ್ರಾಣ ಹೋರದೂ ಎಚ್ಚರಿಕೆ ಫಲಕ ಹಾಕದ ಅಧಿಕಾರಿಗಳು: ಅಮಾಯಕನ ಪ್ರಾಣ ಹೋಗುವ ಮೊದಲೇ ಅರಣ್ಯಾಧಿಕಾರಿಗಳು ಸೂಕ್ತ ಎಚ್ಚರಿಕೆ ಫಲಕಗಳನ್ನು ಅಳವಡಿಸಿದ್ದರೆ, ಪ್ರಾಣ ಉಳಿಸಬಹುದಿತ್ತೇನೊ. ಆದರೇ, ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್‌ ಅವರು ಇಲ್ಲಿ ಇಂತಹ ಘಟನೆ ಮೊದಲ ಬಾರಿಗೆ ನಡೆದಿದ್ದು, ಇನ್ನೂ ಒಂದೆರಡು ದಿನದಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸುತ್ತೇವೆ ಎಂದು ಹೇಳಿ ಒಂದು ವಾರ ಕಳೆದರೂ ಇನ್ನೂ ಫಲಕ ಅಳವಡಿಸಿಲ್ಲ.

ಪೊಲೀಸರು, ಆರ್‌ಎಫ್‌ಓ ವರದಿ ಪ್ರಕಾರ ನೀರು ಕುಡಿಸಲು ತೆರಳಿದಾಗ ಘಟನೆ ನಡೆದಿರುವುದು ಗೊತ್ತಾಗಿದೆ. ನೀರಿನ ಹತ್ತಿರ ಹೋದಾಗ ಮೊಸಳೆ ದಾಳಿಯಾಗಿದೆ. ನೀರಿನಿಂದ ಆಚೆ ಬಂದು ದಾಳಿ ಮಾಡಿಲ್ಲ. ಇದು ಆಕಸ್ಮಿಕ ಅಪಘಾತ. ಎಲ್ಲರೂ ನೀರಿರುವ ಕಡೆ ಎಚ್ಚರಿಕೆಯಿಂದ ಇರಬೇಕು. ಅಗತ್ಯ ಕ್ರಮ ವಹಿಸಲು ನಿರ್ದೇಶಿಸಲಾಗಿದೆ ಎಂದು ಹೇಳಿ ಜಾರಿಕೊಂಡು, ಜಾಗೃತಿ ಮೂಡಿಸುವುದು ನಮ್ಮ ಇಲಾಖೆ ಕರ್ತವ್ಯವಾಗಿದೆ ಎಂದಿದ್ದರು.

5ಕ್ಕೂ ಹೆಚ್ಚು ಮೊಸಳೆಗಳಿರುವ ಭೀತಿ: ಗೂಡುರು ನದಿದಡದಲ್ಲಿ ಸುಮಾರು 5ಕ್ಕೂ ಹೆಚ್ಚು ಮೊಸಳೆಗಳಿವೆ ಎನ್ನಲಾಗಿದ್ದು, ಸುತ್ತಲಿನ ಗ್ರಾಮಸ್ಥರಲ್ಲಿ ಭೀತಿ ಎದುರಾಗಿದೆ. ಗ್ರಾಮಸ್ಥರು ದನ-ಕರು, ಕುರಿಗಳಿಗೆ ನೀರು ಕುಡಿಸುವುದಕ್ಕೂ ಭಯದ ವಾತಾವರಣ ನಿರ್ಮಾಣವಾಗಿದೆ. ಮೊಸಳೆಗಳ ಆತಂಕದಿಂದ ಗ್ರಾಮಸ್ಥರು ತಮ್ಮ ಕುರಿಗಳನ್ನು ಮೇಯಿಸಿಲು ತೆರಳದೇ ಮನೆ ಮುಂದೆ ಮೇಯಿಸುತ್ತಿದ್ದಾರೆ.

ಮೊಸಳೆ ಸೆರೆ ಹಿಡಿಯಲು ಆಗ್ರಹ: ನದಿ ದಡದಲ್ಲಿ ಮೊಸಳೆಗಳಿರುವುದು ನಿತ್ಯ ಕಣ್ಣಾರೆ ನೋಡುತ್ತಿದ್ದು, ಆತಂಕ ಸೃಷ್ಟಿಸಿದೆ. ಅನಾಹುತದಿಂದ ಈಗಾಗಲೇ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇನ್ನು ಅಧಿಕಾರಿಗಳು ಹೆಚ್ಚಿನ ಅನಾಹುತಗಳಿಗೆ ಎಡೆ ಮಾಡದೇ ಮೊಸಳೆಗಳನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮೊಸಳೆ ದಾಳಿಗೆ ಬಲಿಯಾದ ಕುರಿಗಾಯಿ ಬಸಲಿಂಗಪ್ಪ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಮೃತ ಬಸಲಿಂಗಪ್ಪನ ಕುರಿಗಳೊಂದಿಗೆ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಹೋರಾಟ ನಡೆಸಲಾಗುವುದು.
•ಉಮೇಶ ಮುದ್ನಾಳ,
ಟೋಕ್ರೆ ಕೋಲಿ ಸಮಾಜದ ಜಿಲ್ಲಾಧ್ಯಕ್ಷ

ಟಾಪ್ ನ್ಯೂಸ್

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

IPL Eliminator match between RCB and RR

IPL 2024: ರಾಜಸ್ಥಾನಕ್ಕೆ ಬಿಸಿ ಮುಟ್ಟಿಸುವ ತವಕದಲ್ಲಿ ಆರ್‌ಸಿಬಿ

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Dina Bhavishya

ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿ. ಆಪ್ತರಿಂದ ಸಕಾಲದಲ್ಲಿ ಸ್ಪಂದನ

NIA Raid ರಾಮೇಶ್ವರಂ ಕೆಫೆ ಸ್ಫೋಟ: ಬೆಂಗಳೂರಿನಲ್ಲಿ ವೈದ್ಯ ವಶಕ್ಕೆ

NIA Raid ರಾಮೇಶ್ವರಂ ಕೆಫೆ ಸ್ಫೋಟ: ಬೆಂಗಳೂರಿನಲ್ಲಿ ವೈದ್ಯ ವಶಕ್ಕೆ

Prajwal Revanna ವಿರುದ್ಧ ಸಾಕ್ಷ್ಯ ಸಂಗ್ರಹ ಚುರುಕುಗೊಳಿಸಿದ ಎಸ್‌ಐಟಿ

Prajwal Revanna ವಿರುದ್ಧ ಸಾಕ್ಷ್ಯ ಸಂಗ್ರಹ ಚುರುಕುಗೊಳಿಸಿದ ಎಸ್‌ಐಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Udupi ಗಾಳಿ ಮಳೆ ಮನ್ಸೂಚನೆ ಜಿಲ್ಲೆಯಲ್ಲಿ ವಾಟರ್‌ ಸ್ಪೋರ್ಟ್ಸ್ ತಾತ್ಕಾಲಿಕ ನಿರ್ಬಂಧ

Udupi ಗಾಳಿ ಮಳೆ ಮನ್ಸೂಚನೆ ಜಿಲ್ಲೆಯಲ್ಲಿ ವಾಟರ್‌ ಸ್ಪೋರ್ಟ್ಸ್ ತಾತ್ಕಾಲಿಕ ನಿರ್ಬಂಧ

Pudu ಗ್ರಾಮದ ಪುರಾತನ ಫರಂಗಿ ಕೆರೆ; ನರೇಗಾದಲ್ಲಿ ಪ್ರಯತ್ನಿಸಿದರೂ ಕೈಗೂಡದ ಅಭಿವೃದ್ಧಿ ಕಾರ್ಯ

Puttur ಕಾಳುಮೆಣಸು ಧಾರಣೆ ಏರಿಕೆ ಸಾಧ್ಯತೆ

Puttur ಕಾಳುಮೆಣಸು ಧಾರಣೆ ಏರಿಕೆ ಸಾಧ್ಯತೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

ಕರಾವಳಿ ಹೈನುಗಾರರಿಗೆ 1 ಲೀ. ಹಾಲಿಗೆ 5 ರೂ. ಏರಿಕೆ “ಸೂತ್ರ’!

IPL Eliminator match between RCB and RR

IPL 2024: ರಾಜಸ್ಥಾನಕ್ಕೆ ಬಿಸಿ ಮುಟ್ಟಿಸುವ ತವಕದಲ್ಲಿ ಆರ್‌ಸಿಬಿ

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

ಒಳ್ಳೇ ಸಿನೆಮಾ ಕೊಡಿ, ಇಲ್ಲವಾದರೆ ಮುಳುಗುತ್ತೇವೆ…!

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Mangaluru ವಿಮಾನ ದುರಂತ: ಇಂದಿಗೆ 14 ವರ್ಷ

Dina Bhavishya

ಉದ್ಯೋಗ ಸ್ಥಾನದಲ್ಲಿ ಸಂತೃಪ್ತಿ. ಆಪ್ತರಿಂದ ಸಕಾಲದಲ್ಲಿ ಸ್ಪಂದನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.