ಧಾರ್ಮಿಕ ಮೌಲ್ಯಗಳಿಂದ ಉತ್ತಮ ಸಮಾಜ ನಿರ್ಮಾಣ


Team Udayavani, May 13, 2019, 11:52 AM IST

hub-9

ಹುಬ್ಬಳ್ಳಿ: ಮನುಷ್ಯ ಭೌತಿಕ ಸಂಪತ್ತು ಹೊಂದಿದ್ದರೂ ಮಾನಸಿಕ ಶಾಂತಿ ಸಮಾಧಾನಗಳಿಲ್ಲ. ಧಾರ್ಮಿಕ ಮೌಲ್ಯಗಳ ಸಂರಕ್ಷಣೆ ಮತ್ತು ಪರಿಪಾಲನೆಯಿಂದ ಉತ್ತಮ ಸಮಾಜ ನಿರ್ಮಾಣಗೊಳಲು ಸಾಧ್ಯ. ಈ ದಿಶೆಯಲ್ಲಿ ಮಠಗಳು ಜನಸಮುದಾಯದಲ್ಲಿ ಶಾಂತಿ-ನೆಮ್ಮದಿ ಬೆಳೆಸುವ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ‌ ರೇಣುಕ ಡಾ| ವೀರಸೋಮೇÍ್ವ‌ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಕಲಘಟಗಿ ತಾಲೂಕಿನ ದ್ಯಾಮನಕೊಪ್ಪ ಹುಲಕೊಪ್ಪದ ಶ್ರೀ ಹೋಟೇಶ್ವರ ಹಿರೇಮಠದ ಗುರುಪಟ್ಟಾಧಿಕಾರ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸತ್ಯ ಶುದ್ಧವಾದ ಬದುಕಿಗೆ ಸಂಸ್ಕಾರ ಸಂಸ್ಕೃತಿ ಮುಖ್ಯ. ವೀರಶೈವ ಧರ್ಮದ ಮಠಗಳು ಸಂಸ್ಕಾರ ಸಂವರ್ಧನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತ ಬಂದಿವೆ. ತತ್ವಕ್ಕಿಂತ ಆಚರಣೆಗೆ ಪ್ರಾಮುಖ್ಯತೆ ಕೊಟ್ಟ ಧರ್ಮ ಕಾಯಕ ದಾಸೋಹದ ಮೂಲಕ ಬದುಕಿನ ಉನ್ನತಿಗೆ ಕಾರಣವಾಗಿದೆ. ಜಗದ್ಗುರು ರೇಣುಕಾಚಾರ್ಯರು ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿ ಭಕ್ತರ ಬಾಳಿಗೆ ಬೆಳಕು ತೋರಿದ್ದಾರೆ. ತತ್ವತ್ರಯಗಳ ಪರಿಪಾಲನೆಯಿಂದ ಜೀವನ ಉಜ್ವಲಗೊಳ್ಳುñ್ತ‌ದೆ ಎಂದು ಹೇಳಿದರು.

ದ್ಯಾಮನಕೊಪ್ಪ ಹುಲಕೊಪ್ಪದ ಹೋಟೇಶ್ವರ ಹಿರೇಮಠ ರಂಭಾಪುರಿ ಪೀಠದ ಶಾಖಾ ಮಠವಾಗಿದೆ. ಹಲವು ವರ್ಷಗಳಿಂದ ನಿಂತು ಹೋದ ಗುರು ಪರಂಪರೆ ಮತ್ತೆ ಪುನರುತ್ಥಾನಗೊಳ್ಳುತ್ತಿರುವುದು ಸಂತಸದ ಸಂಗತಿ. ಪರಿಪಕ್ವಗೊಂಡ 85 ವಯಸ್ಸಿನ ಶ್ರೀ ಬಸವರಾಜ ಸ್ವಾಮಿಗಳವರಿಗೆ ಶ್ರೀ ಶಿವರಾಮ ಶಿವಾಚಾರ್ಯ ಸ್ವಾಮಿಗಳು ಎಂಬ ನೂತನ ನಾಮಾಂಕಿತದಿಂದ ಶ್ರೀಗುರು ಪಟ್ಟಾಧಿಕಾರ ನೆರವೇರಿದ್ದು ಭಕ್ತ ಸಂಕುಲಕ್ಕೆ ಹರುಷ ತಂದಿದೆ ಎಂದರು. ಸುಳ್ಳದ ಶಿವಸಿದ್ಧರಾಮೇಶ್ವರ ಶ್ರೀಗಳು ನೂತನ ಸ್ವಾಮಿಗಳಿಗೆ ಧಾರ್ಮಿಕ ಸಂಸ್ಕಾರ ನೀಡಿ ಷಟ್ಸ್ಥ§ಲ ಬ್ರಹ್ಮೋಪದೇಶ ನೀಡಿ ಗುರುತ್ವಾಧಿಕಾರ ಅನುಗ್ರಹಿಸಿದರು. ಕಲಘಟಗಿ ಹನ್ನೆರಡು ಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಶಿರಕೋಳ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತವನ್ನಿತ್ತರು. ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು.

ನೂತನವಾಗಿ ಪಟ್ಟಾಭಿಷಿಕ್ತರಾದ ಶಿವರಾಮ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಶ್ರೀ ರಂಭಾಪುರಿ ಜಗದ್ಗುರುಗಳವರ ಆದೇಶದಂತೆ ಮುನ್ನಡೆದು ವೀರಶೈವ ಧರ್ಮಸಂಸ್ಕೃತಿ ಮತ್ತು ಗುರುಪರಂಪರೆ ಬೆಳೆಸುವುದಾಗಿ ಸಂಕಲ್ಪ ಕೈಗೊಂಡರು. ಪ್ರಕಾಶ ಬೆಂಡಿಗೇರಿ ಸ್ವಾಗತಿಸಿದರು. ಜಿ.ವಿ. ಹಿರೇಮಠ ನಿರೂಪಿಸಿದರು.

ಟಾಪ್ ನ್ಯೂಸ್

5

ಜಾರ್ಜಿಯಾದಲ್ಲಿ ಕಾರು ಪಲ್ಟಿಯಾಗಿ ಮೂವರು ಇಂಡೋ-ಅಮೆರಿಕನ್‌ ವಿದ್ಯಾರ್ಥಿಗಳು ದುರ್ಮರಣ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

1

ಪೋರ್ಷೆ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ: ಪ್ರಕರಣ ಸಂಬಂಧ ಬಾಲಕನ ತಂದೆ ಬಂಧನ

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Parameshwar

CBI ಗೆ ಕೊಡುವ ಅಗತ್ಯವಿಲ್ಲ; ಅಂಜಲಿ ಪ್ರಕರಣ ಕೂಡ ಸಿಐಡಿಗೆ:ಡಾ.ಜಿ.ಪರಮೇಶ್ವರ್

1-qweeqwe

Hubballi; ನೇಹಾ, ಅಂಜಲಿ ನಿವಾಸಗಳಿಗೆ ಡಾ.ಜಿ.ಪರಮೇಶ್ವರ್ ಭೇಟಿ

Hubli; ಅಂಜಲಿ ಕುಟುಂಬಸ್ಥರಿಗೆ ಸರ್ಕಾರ ಪರಿಹಾರ ಘೋಷಿಸಬೇಕು: ಶಂಕರ ಪಾಟೀಲ್ ಮುನೇನಕೊಪ್ಪ

Hubli; ಅಂಜಲಿ ಕುಟುಂಬಸ್ಥರಿಗೆ ಸರ್ಕಾರ ಪರಿಹಾರ ಘೋಷಿಸಬೇಕು: ಶಂಕರ ಪಾಟೀಲ್ ಮುನೇನಕೊಪ್ಪ

Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ

Hubli: ರೌಡಿಶೀಟರ್ ಮೇಲೆ ಗ್ಯಾಂಗ್ ನಿಂದ ಹಲ್ಲೆ; ಪೊಲೀಸರಿಗೆ ಅವಾಜ್ ಹಾಕಿದ ರೌಡಿ

1-wqqewqeq

Hubli; ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ: ಎಡಿಜಿಪಿ ಹಿತೇಂದ್ರ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

10-hunsur

Hunsur: ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಚಾವಣಿ, ಬ್ಯಾರನ್‌ಗೂ ಹಾನಿ

5

ಜಾರ್ಜಿಯಾದಲ್ಲಿ ಕಾರು ಪಲ್ಟಿಯಾಗಿ ಮೂವರು ಇಂಡೋ-ಅಮೆರಿಕನ್‌ ವಿದ್ಯಾರ್ಥಿಗಳು ದುರ್ಮರಣ

9-davangere

Davangere: ಮರ ಬಿದ್ದು ಕಾರು ಜಖಂ; ಚಾಲಕ ಪ್ರಾಣಾಪಾಯದಿಂದ ಪಾರು

8-doddanagudde

ದೊಡ್ಡಣ್ಣಗುಡ್ಡೆ: ಕ್ಷೇತ್ರದಲ್ಲಿ ಬ್ರಹ್ಮಕಲಾಶೋತ್ಸವದ ಪೂರ್ವಭಾವಿ ಕಾರ್ಯಕ್ರಮ ಸಂಪನ್ನ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.