ಹಿಜ್ಬುಲ್ ಉಗ್ರನ ಸೆರೆ
Team Udayavani, Nov 6, 2019, 12:17 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಜಮ್ಮು: ಜಮ್ಮು -ಕಾಶ್ಮೀರದ ಕಿಶ್ವಾರ್ ಜಿಲ್ಲೆಯಲ್ಲಿ ಉಗ್ರರ ಅಡಗು ತಾಣಗಳ ಮೇಲೆ ಭದ್ರತಾ ಪಡೆ ದಾಳಿ ನಡೆಸಿ, ಹಿಜ್ಬುಲ್ ಮುಜಾಹಿದೀನ್ ಸಂಘಟನೆಗೆ ಕೆಲಸ ಮಾಡುತ್ತಿದ್ದ ಉಗ್ರ ಆಸಿಫ್ ಮುಸ್ತಫಾನನ್ನು ಬಂಧಿಸಿದೆ.
ಜೊತೆಗೆ ಸ್ಥಳದಿಂದ 7.63 ಎಂಎಂ ಪಿಸ್ತೂಲು, ಗುಂಡುಗಳು ಸೇರಿ ಹಲವಾರು ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಂಡಿದೆ. ಮತ್ತೂಬ್ಬ ಉಗ್ರ ಮುಸ್ತಫಾ ಎಂಬಾತನ ನಿವಾಸದಿಂದ ಮತ್ತಷ್ಟು ಪಿಸ್ತೂಲು, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.