6ಜಿ ಅಭಿವೃದ್ಧಿಗೆ ಮುಂದಡಿ ಇಟ್ಟ ಚೀನ
Team Udayavani, Nov 8, 2019, 1:52 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೀಜಿಂಗ್: ಇತ್ತೀಚೆಗಷ್ಟೇ, 5ಜಿ ಮೊಬೈಲ್ ತಂತ್ರಜ್ಞಾನವನ್ನು ಜಾರಿಗೊಳಿಸಿರುವ ಚೀನ, ಈಗ 6ಜಿ ತಂತ್ರಜ್ಞಾನದ ಅಭಿವೃದ್ಧಿಗೆ ಕೈಹಾಕಿದೆ. ಈ ಮೂಲಕ, ಮುಂದಿನ ಪೀಳಿಗೆಯ ದೂರವಾಣಿ ಸಂಪರ್ಕ ತಂತ್ರ ಜ್ಞಾನದಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿರುವ ಅಮೆರಿಕ, ಇನ್ನಿತರ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಹಿಂದಿಕ್ಕಲು ನಿರ್ಧರಿಸಿದೆ.
6ಜಿ ತಂತ್ರಜ್ಞಾನದ ಅಭಿವೃದ್ಧಿಗೆ ಪೂರಕವಾಗಿ ಈಗಾಗಲೇ ಎರಡು ಕಚೇರಿಗಳನ್ನು ತೆರೆದಿರುವುದಾಗಿ ಚೀನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಪ್ರಕಟಿಸಿದೆ. ಇವು ಗಳಲ್ಲೊಂದು ಕಚೇರಿಯು, 6ಜಿ ತಂತ್ರ ಜ್ಞಾನದ ನೀತಿ ಸಂಹಿತೆ ರೂಪಿಸಲಿದೆ. ಮತ್ತೂಂದು ಕಚೇರಿಯು, 6ಜಿ ತಂತ್ರಜ್ಞಾನದ ಅಭಿವೃದ್ಧಿಗೆ ಮೀಸಲಾಗಿರಲಿದೆ.