ಎಡಪಂಥೀಯರು ಅಡ್ಡಗಾಲು ಹಾಕಿರದಿದ್ದರೆ ಬಹು ಹಿಂದೆಯೇ ಮುಗಿಯುತ್ತಿತ್ತು ವಿವಾದ

ರಾಮಜನ್ಮಭೂಮಿ ಪ್ರಕರಣ ಶಾಂತವಾಗಿ ಬಗೆಹರಿಯುವಲ್ಲಿ ಇದ್ದ ಅಡ್ಡಿ ಆತಂಕ ಒಂದೆರಡಲ್ಲ

Team Udayavani, Nov 11, 2019, 5:08 AM IST

ayodhya

ಸರ್ವೋಚ್ಚ ನ್ಯಾಯಾಲಯದ ಸಾಂವಿಧಾನಿಕ ಪೀಠ ನ.9, 2019 ರಂದು 5-0 ಬಹುಮತದಲ್ಲಿ ನೀಡಿದ ತೀರ್ಪಿನಲ್ಲಿ ರಾಮ ಜನ್ಮಭೂಮಿ – ಬಾಬ್ರಿ ಮಸೀದಿ ಪ್ರಕರಣದ ವಿವಾದಗ್ರಸ್ತ ನಿವೇಶನವನ್ನು ಪೂರ್ತಿಯಾಗಿ ಹಿಂದುಗಳಿಗೆ ನೀಡಿ, ಮಸೀದಿ ನಿರ್ಮಿಸಲು ಮುಸ್ಲಿಮರಿಗೆ ಪ್ರಮುಖ ಪ್ರದೇಶದಲ್ಲಿ 5 ಎಕರೆ ನಿವೇಶನವನ್ನು ನೀಡಲು ಹೇಳಿದೆ.

ಈ ವಿವಾದ 1990ರಲ್ಲೇ ಬಗೆಹರಿದಿದ್ದರೆ ದೇಶ ಈಗ ಹೇಗೆ ಇರುತ್ತಿತ್ತು? ಎಷ್ಟು ಅಮೂಲ್ಯ ಪ್ರಾಣಗಳನ್ನು ಉಳಿಸಬಹುದಿತ್ತು? ಎರಡು ಸಮುದಾಯಗಳ ನಡುವಿನ ದ್ವೇಷ ಮತ್ತು ಸಂಘರ್ಷ ಎಷ್ಟು ಬೇಗ ಮುಗಿದು ಹೋಗುತ್ತಿತ್ತು?
1990ರಲ್ಲೇ ಎರಡೂ ಸಮುದಾಯಗಳಿಗೆ ಸಮ್ಮತವಾಗುವಂಥ ಪರಿಹಾರ ಸೂತ್ರವೊಂದು ತಯಾರಾಗಿತ್ತು. ಆದರೆ ಎಡಪಂಥೀಯ ಇತಿಹಾಸಕಾರರು ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ಪ್ರಯತ್ನವನ್ನು ವಿಫ‌ಲಗೊಳಿಸಿದರು.

ಪುರಾತತ್ವ ಇಲಾಖೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕ ಕೆ.ಕೆ.ಮುಹಮ್ಮದ್‌ ಅವರ ಆತ್ಮಕತೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬೆಳಕು ಚೆಲ್ಲುತ್ತದೆ. ದೇಶದ ‘ಪ್ರಮುಖ’ ಎಡಪಂಥೀಯ ಇತಿಹಾಸಕಾರರು, ಇನ್ನೂ ಹೆಚ್ಚು ಸ್ಪಷ್ಟವಾಗಿ ಹೇಳಬೇಕೆಂದರೆ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ಮತ್ತು ಮುದ್ರಣ ಮತ್ತು ದೃಶ್ಯ ಮಾಧ್ಯಮದ ಹಳೆ ತಲೆಮಾರು ಒಳಗೊಂಡ ದೇಶದಲ್ಲಿದ್ದ ಎಡ ಸೈದ್ಧಾಂತಿಕ ವ್ಯವಸ್ಥೆ ತನ್ನ ಕ್ಷುಲ್ಲಕ ತರ್ಕವನ್ನು ಮುಂದಿಟ್ಟುಕೊಂಡು ಹೇಗೆ ಪ್ರಯತ್ನಗಳನ್ನು ವಿಫ‌ಲಗೊಳಿಸಿತು ಎಂದು ಮುಹಮ್ಮದ್‌ ವಿವರಿಸಿದ್ದಾರೆ.

ಮುಸ್ಲಿಮರು ಹಠಮಾರಿ ಧೋರಣೆ ತಳೆಯುವಂತೆ ಮಾಡುವ ಮೂಲಕ ಎಡ ಇತಿಹಾಸಕಾರರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದನ್ನು ತಡೆಯುತ್ತಿದ್ದರು ಎಂದು ಆತ್ಮಕತೆ “ಞಾನ್‌ ಎನ್ನ ಭಾರತೀಯನ್‌’ (ನಾನು ಎಂಬ ಭಾರತೀಯ)ನಲ್ಲಿ ಮುಹಮ್ಮದ್‌ ಸ್ಪಷ್ಟವಾಗಿ ಹೇಳಿದ್ದಾರೆ.

ಎಡ ಇತಿಹಾಸಕಾರರ ಬ್ರೈನ್‌ವಾಶ್‌ಗೆ ಮುಸ್ಲಿಂ ಬುದ್ಧಿಜೀವಿಗಳು ಮಿಕಗಳಾಗದೇ ಹೋಗುತ್ತಿದ್ದರೆ ಬಾಬರಿ ವಿವಾದವನ್ನು ಎಂದೋ ಬಗೆಹರಿಸಿಕೊಳ್ಳಬಹುದಾಗಿತ್ತು. ರೊಮಿಲಾ ಥಾಪರ್‌, ಬಿಪಿನ್‌ ಚಂದ್ರ ಮತ್ತು ಎಸ್‌. ಗೋಪಾಲ್‌ ಸೇರಿದಂತೆ ಎಡ ಇತಿಹಾಸಕಾರರ ಗುಂಪೊಂದು 19ನೇ ಶತಮಾನಕ್ಕೆ ಮೊದಲು ದೇವಸ್ಥಾನವನ್ನು ಕೆಡವಿದ ಉಲ್ಲೇಖ ಎಲ್ಲೂ ಕಂಡುಬಂದಿಲ್ಲ ಮತ್ತು ಅಯೋಧ್ಯೆ ಬೌದ್ಧ ಮತ್ತು ಜೈನರ ಶ್ರದಾ œಕೇಂದ್ರವಾಗಿತ್ತು ಎಂಬ ವಿಚಿತ್ರ ವಾದ ವನ್ನು ಮುಂದಿಟ್ಟಿತು. ಇರ್ಫಾನ್‌ ಹಬೀಬ್‌, ಆರ್‌.ಎಸ್‌.ಶರ್ಮ, ಡಿ.ಎನ್‌.ಝಾ, ಸುರಾಜ್‌ ಭನ್‌, ಅಕ್ತರ್‌ ಅಲಿಯಂಥ ಇತಿ ಹಾಸ ಕಾರರು ಈ ವಾದ ಸಮರ್ಥಿಸಿದರು ಎಂದು ಸಂದರ್ಶನ ವೊಂದ ರಲ್ಲಿ ಮುಹಮ್ಮದ್‌ ಹೇಳಿರುವುದನ್ನು ಫ‌ಸ್ಟ್‌ ಪೋಸ್ಟ್‌ ಉಲ್ಲೇಖೀಸಿದೆ.
ಎಡ ಇತಿಹಾಸಕಾರರು ಸೌಹಾರ್ದ ಪರಿಹಾರವನ್ನು ವಿಫ‌ಲ ಗೊಳಿಸಲು ಪ್ರಯತ್ನಿಸಿದ್ದಾರೆ ಎಂಬ ಮುಹಮ್ಮದ್‌ ಹೇಳಿಕೆಯನ್ನು ಸಮರ್ಥಿಸುವ ಅನೇಕ ದೃಷ್ಟಾಂತಗಳು ಸಿಗುತ್ತವೆ. 2010ರಲ್ಲಿ ಅಲಹಬಾದ್‌ ಹೈಕೋರ್ಟ್‌ ವಿವಾದಗ್ರಸ್ತ ಪ್ರದೇಶದ ಮೂರನೇ ಎರಡು ಭಾಗವನ್ನು ಹಿಂದುಗಳಿಗೂ ಮತ್ತು ಮೂರನೇ ಒಂದು ಭಾಗವನ್ನು ಮುಸ್ಲಿಮರಿಗೂ ನೀಡಿ ಸೌಹಾರ್ದಯುತವಾಗಿ ವಿವಾದವನ್ನು ಮುಗಿಸಲು ಮಾಡಿದ ಪ್ರಯತ್ನವನ್ನೂ ಎಡ ಇತಿಹಾಸಕಾರರು ಇದು ವಿವಾದಿತ ನಿವೇಶನವನ್ನು ‘ಮಾರುವ ಪ್ರಯತ್ನ’ ಎಂದು ಟೀಕಿಸಿದ್ದರು.
ರೋಮಿಲಾ ಥಾಪರ್‌ ಬಹಿರಂಗವಾಗಿಯೇ ಇದು ರಾಜಕೀಯ ತೀರ್ಪು. ಈ ನಿರ್ಧಾರವನ್ನು ಸರಕಾರಗಳು ಬಹಳ ಹಿಂದೆಯೇ ಕೈಗೊಳ್ಳಬಹುದಿತ್ತು ಎಂದು ಟೀಕಿಸಿದ್ದರು. ಮೀನಾಕ್ಷಿ ಜೈನ್‌ ಎಂಬ ಇತಿಹಾಸ ತಜ್ಞೆ ಬರೆದ ‘ರಾಮ ಮತ್ತು ಅಯೋಧ್ಯೆ’ ಪುಸ್ತಕ ಎಡ ಇತಿಹಾಸಕಾರರ ಸುಳ್ಳುಗಳನ್ನು ಮತ್ತು ಸಂದರ್ಭಕ್ಕೆ ತಕ್ಕಂತೆ ಬದಲಾದ ಅವರ ಪೊಳ್ಳು ವಾದಗಳನ್ನು ಬೆತ್ತಲುಗೊಳಿಸಿದೆ.

ಆರಂಭದಲ್ಲಿ ಎಡ ಇತಿಹಾಸಕಾರರು ವಿವಾದಗ್ರಸ್ತ ಕಟ್ಟಡವನ್ನು (ಬಾಬರಿ ಮಸೀದಿ) ನಿರ್ಮಿಸಿದ ಸ್ಥಳ ಹಿಂದೆ ಯಾವುದೇ ಪೂಜಾ ಸ್ಥಾನವಾಗಿರಲೂ ಇಲ್ಲ, ಹಿಂದುಗಳ ದೇವಸ್ಥಾನವೂ ಆಗಿರಲಿಲ್ಲ ಮತ್ತು ರಾಮ ಅಲ್ಲಿ ಹುಟ್ಟಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ವಾದಿಸುತ್ತಿದ್ದರು. ಆದರೆ ನ್ಯಾಯಾಲಯದ ಆದೇಶದಂತೆ ಪುರಾತತ್ವ ಇಲಾಖೆಯ ಉತVನನ ಕಾರ್ಯ ಮುಂದುವರಿದಾಗ ಅವರ ಧೋರಣೆಯಲ್ಲಿ ‘ಗಮನಾರ್ಹವಾದ ಬದಲಾವಣೆ’ ಗೋಚರಿಸಿತು. ಸುನ್ನಿ ವಕ್ಫ್ ಮಂಡಳಿಯ ಪರವಾಗಿದ್ದ ಕೆಲವು ಇತಿಹಾಸಕಾರರು ‘ಹೊಸ ತರ್ಕ’ವನ್ನು ಮಂಡಿಸಲು ತೊಡಗಿದರು.

ವಿವಾದಗ್ರಸ್ತ ಕಟ್ಟಡದ ಅಡಿಯಲ್ಲಿ ಇರುವುದು ಮುಸ್ಲಿಮರ ಕಟ್ಟಡ ಎನ್ನುವುದು ಅವರ ಹೊಸ ವಾದವಾಗಿತ್ತು. ಉತVನನದಲ್ಲಿ ಒಂದಲ್ಲ ಹಲವು ಹಿಂದು ಮಂದಿರದ ಕಂಬಗಳು ಕಂಡು ಬಂದಾಗ ವಾದ ಮತ್ತೆ ಬದಲಾಯಿತು. ಈಗ ಅಯೋಧ್ಯೆ ಬೌದ್ಧ ಮತ್ತು ಜೈನರ ಶ್ರದ್ಧಾ ಕೇಂದ್ರವಾಯಿತು ಎಂದು ಬರೆದಿದ್ದಾರೆ ಮೀನಾಕ್ಷಿ ಜೈನ್‌.

ಇದು ತಿಳಿಯಾಗುತ್ತಿರುವ ನೀರನ್ನು ಮತ್ತೆ ಕದಡಿ ರಾಡಿ ಎಬ್ಬಿಸುವಂತೆ ಹಳೆ ವಿವಾದ ಮುಗಿಯದಂತೆ ನೋಡಿಕೊಳ್ಳಲು ಹೊಸ ವಿವಾದಗಳನ್ನು ಸೃಷ್ಟಿಸುವ ಅಪ್ರಾಮಾಣಿಕ ಪ್ರಯತ್ನವಷ್ಟೆ ಆಗಿತ್ತು. ಒಂದೇ ಶಬ್ದದಲ್ಲಿ ಇದನ್ನು ವರ್ಣಿಸುವುದಾದರೆ ಅದು ಕುತಂತ್ರ. ಮುಸ್ಲಿಮರ ವಾದವನ್ನು ಸಮರ್ಥಿಸುವ ಎಡಪಂಥೀ ಯರ ಹುನ್ನಾರದ ಹಿಂದೆ ಇದ್ದದ್ದು ಮುಸ್ಲಿಮರ ಪರವಾದ ಪ್ರಾಮಾ ಣಿಕ ಕಾಳಜಿಯಲ್ಲ ಬದಲಾಗಿ ಕುಟಿಲ ರಾಜಕೀಯ ಕುತಂತ್ರ ಮಾತ್ರ.
ದೇಶದಲ್ಲಿ ಮತೀಯ ಹಿಂಸಾಚಾರ ಭುಗಿಲೇಳಬೇಕೆನ್ನುವುದು ಎಡ ಚಿಂತಕರ ಮನದಾಳದ ಬಯಕೆಯಾಗಿತ್ತು ಎನ್ನುವುದು ಮುಹಮ್ಮದ್‌ ಅವರ ಆತ್ಮಕತೆಯಿಂದಲೇ ಸ್ಪಷ್ಟವಾಗುತ್ತದೆ. ಎಡ ಇತಿಹಾಸಕಾರರಲ್ಲಿ ನಾಚಿಕೆಯ ಲವಲೇಷವೇನಾದರೂ ಇದ್ದರೆ ತಮ್ಮ ಹಿಂದಿನ ಸುಳ್ಳುಗಳಿಗೆ ಮತ್ತು ಅಪ್ರಾಮಾಣಿಕತೆಗೆ ಅವರು ದೇಶದ ಕ್ಷಮೆ ಕೇಳಬೇಕು. ಸುಳ್ಳು ಇತಿಹಾಸವನ್ನು ಬರೆದರೆ ಅಥವಾ ಅಸಮರ್ಥನೀಯ ವಿಚಾರವನ್ನು ಸಮರ್ಥಿಸಿದರೆ ಹೊಸ ಇತಿಹಾಸ ಸೃಷ್ಟಿಸಿದಂತಾಗುವುದಿಲ್ಲ ಎಂಬುದನ್ನು ಅವರು ತಿಳಿದುಕೊಳ್ಳಬೇಕು.

ವರ್ಗೀಯ ಸಂಘರ್ಷದಲ್ಲಿ ಸುಳ್ಳು ಮತ್ತು ಅಪ್ರಾಮಾ ಣಿಕತೆಯೂ ಸರಿ ಎಂದು ನಂಬುವವರಿಂದ ಇದನ್ನೆಲ್ಲ ನಿರೀಕ್ಷಿಸಲು ಸಾಧ್ಯವಿಲ್ಲ. ಸುಳ್ಳನ್ನು ಸತ್ಯ ಎಂದು ಪ್ರತಿಪಾದಿಸುವುದು ಹೇಗೆ ಎನ್ನುವುದನ್ನು ಕೆ ಮಾರ್ಕ್ಸ್ ಬರೆದ ಅವರ ಪವಿತ್ರ ಗ್ರಂಥದಲ್ಲೇ ವಿವರಿಸಲಾಗಿದೆ.

ಲೇಖನ ಕೃಪೆ : ಸ್ವರಾಜ್ಯ

ಟಾಪ್ ನ್ಯೂಸ್

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.