ಜಿಡಿಪಿ ಇನ್ನಷ್ಟು ಇಳಿಕೆ; ಆರ್ಥಿಕ ಹಿಂಜರಿತದ ಭೀತಿ?

ಸೆಪ್ಟೆಂಬರ್‌ ತ್ತೈಮಾಸಿಕದಲ್ಲಿ ಶೇ.4.5ರಷ್ಟಕ್ಕೆ ; ವಿತ್ತೀಯ ಕೊರತೆ ಶೇ.102.4ರಷ್ಟಕ್ಕೆ

Team Udayavani, Nov 29, 2019, 6:45 PM IST

Narendra-Modi-Thinking-726

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ದರ ಸೆಪ್ಟೆಂಬರ್‌ ತ್ತೈಮಾಸಿಕದಲ್ಲಿ ಶೇ.4.5ರಷ್ಟಕ್ಕೆ ಇಳಿಕೆಯಾಗಿದೆ. ಈ ಮೊದಲು ಅರ್ಥಶಾಸ್ತ್ರ ಪರಿಣತರು ಜಿಡಿಪಿ ದರ ಶೇ.4.7ರಷ್ಟಿರಬಹುದು ಎಂದು ಹೇಳಿದ್ದರೂ ಅದಕ್ಕಿಂತಲೂ ಜಿಡಿಪಿ ಹಿಂದೆ ಸರಿದಿದೆ. ಇದರಿಂದ ಮಾರುಕಟ್ಟೆಯಲ್ಲಿ ಆರ್ಥಿಕ ಹಿಂಜರಿತದ ಭೀತಿ ಕಾಣಿಸಿದೆ.

ಆದರೆ ಇತ್ತೀಚೆಗೆ ಸರಕಾರದ ಕ್ರಮಗಳಿಂದಾಗಿ ಆರ್ಥಿಕತೆ ತುಸು ಮೇಲ್ಮುಖವಾಗಿದ್ದು, ಅದರ ಪರಿಣಾಮ ಮುಂದೆ ಕಾಣಬಹುದಷ್ಟೇ ಎಂದು ಆರ್ಥಿಕ ತಜ್ಞರು ಲೆಕ್ಕಚಾರ ಹಾಕಿದ್ದಾರೆ. ಕಳೆದ ತ್ತೈಮಾಸಿಕದಲ್ಲಿ ಜಿಡಿಪಿ ದರ ಶೇ.5ರಷ್ಟಿತ್ತು. ಇದರಿಂದ ಕಳೆದ ತ್ತೈಮಾಸಿಕಕ್ಕಿಂತಲೂ ಜಿಡಿಪಿ ದರ ಕಡಿಮೆಯಾದಂತಾಗಿದೆ.

ಜಿಡಿಪಿ ದರ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ಉತ್ತೇಜನಕ್ಕೆ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಅದು ತತ್‌ಕ್ಷಣಕ್ಕೆ ಪರಿಣಾಮ ಬೀರಲು ಸಾಧ್ಯವಾಗಿಲ್ಲ. ರಿಸರ್ವ್‌ ಬ್ಯಾಂಕ್‌ ಕೂಡ ರೆಪೋ ದರಗಳನ್ನು 25 ಮೂಲಾಂಶಗಳಷ್ಟು ಅಂದರೆ ಶೇ.4.90ರಷ್ಟಕ್ಕೆ ಇಳಿಕೆ ಮಾಡಿತ್ತು.

ಬುಧವಾರ ಸಂಸತ್ತಿನಲ್ಲಿ ನಡೆದ ಚರ್ಚೆಯ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಆರ್ಥಿಕತೆ ನಿಧಾನವಾಗಿದೆ ಆದರೆ ಯಾವುದೇ ಹಿಂಜರಿತ ಇಲ್ಲ ಎಂದಿದ್ದರು. ಅಲ್ಲದೇ ಸರಕಾರದ ಹಲವು ಕ್ರಮಗಳಿಂದಾಗಿ ಅಂತಹ ಪರಿಸ್ಥಿತಿಗೆ ಬರುವುದಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದರು. ಗುರುವಾರ ಅವರು ಈ ವಿತ್ತೀಯ ವರ್ಷದಲ್ಲಿ ಹೆಚ್ಚುವರಿ 21 ಸಾವಿರ ಕೋಟಿ ರೂ. ವೆಚ್ಚಕ್ಕೆ ಸಂಸತ್ತಿನ ಅನುಮತಿ ಕೇಳಿದ್ದರು.

ವಿತ್ತೀಯ ಕೊರತೆ ಶೇ.102.4ರಷ್ಟಕ್ಕೆ
ಇನ್ನು ಎಪ್ರಿಲ್‌ನಿಂದ ಅಕ್ಟೋಬರ್‌ ಅವಧಿಯಲ್ಲಿ ವಿತ್ತೀಯ ಕೊರತೆ ಶೇ.102.4ರಷ್ಟಕ್ಕೆ ತಲುಪಿದೆ. ಈ ಮೂಲಕ ಇಡೀ ವಿತ್ತೀಯ ವರ್ಷದ ಗುರಿಯನ್ನು ಮೀರಿದೆ. ಈ ಅವಧಿಯಲ್ಲಿ ವಿತ್ತೀಯ ವರ್ಷದಲ್ಲಿ ವಿತ್ತೀಯ ಕೊರತೆ 6.48 ಲಕ್ಷ ಕೋಟಿ ರೂ. ಮಾತ್ರವೇ ಆಗಬೇಕಿತ್ತು. ಆದರೆ ಅದು ಶೇ.7.2 ಲಕ್ಷ ಕೋಟಿ ರೂ. ಆಗಿದೆ. ಬಜೆಟ್‌ನಲ್ಲಿ ಇದರ ಗುರಿ 7.03 ಲಕ್ಷ ಕೋಟಿ ರೂ. ಎಂದು ಹೇಳಲಾಗಿತ್ತು.

ಟಾಪ್ ನ್ಯೂಸ್

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

5-belagavi

Belagavi: ಗಡಿ ಹೋರಾಟದಲ್ಲಿ‌ ಯಶಸ್ವಿಯಾಗಲು ಒಂದಾಗಿ: ಮನೋಜ್‌ ಜರಾಂಗೆ ಪಾಟೀಲ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.