ಎಲುಬಿಲ್ಲದ ನಾಲಗೆಯ ಚಾಳಿ ಮಹಿಳೆ ಕುರಿತು ಅಗೌರವಯುತ ಹೇಳಿಕೆ


Team Udayavani, Dec 9, 2019, 5:08 AM IST

MAHILE

ದೇಶದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಣ್ಣ ಮುಂದಿದೆ. ಈ ದೌರ್ಜನ್ಯವೆಂದರೆ ಬರೀ ದೈಹಿಕ ಹಿಂಸೆಯಷ್ಟೇ ಅಲ್ಲ. ಸಮಾಜದಲ್ಲಿ ಮಹಿಳೆಯನ್ನು ಲಘುವಾಗಿ ಕಾಣುವುದು, ಕೆಟ್ಟ ಅಭಿರುಚಿಯಲ್ಲಿ ಮಾತನಾಡುವುದು, ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು, ಹೇಗೆಂದರೆ ಹಾಗೆ ನಾಲಗೆಯನ್ನು ಹರಿಯಬಿಟ್ಟು ಯಾವುದೋ ಸಂಗತಿಯನ್ನು ಇನ್ಯಾವುದಕ್ಕೋ ಹೋಲಿಸುವುದು..ಎಲ್ಲವೂ ಮತ್ತೂಂದು ಬಗೆಯ ಹಿಂಸೆ. ಅದರಲ್ಲೂ ಜನ ನಾಯಕರು ಇಂಥ ಹತ್ತಾರು ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ.

ಅತ್ಯಾಚಾರ ಬಗೆಗಂತೂ ಪಕ್ಷಭೇದವಿಲ್ಲದೆ ಹಲವರು ನೀಡಿರುವ ಅತ್ಯಂತ ಕೆಟ್ಟ ಹಾಗೂ ಅಸೂಕ್ಷ್ಮ ಹೇಳಿಕೆಗಳು ಹೇಳತೀರವು. ಅಧಿಕಾರದಲ್ಲಿ ರುವವರು, ಅಭಿಮಾನಿ ಗಳನ್ನು ಹೊಂದಿರುವವರು, ಅಭಿಪ್ರಾಯ ರೂಢಕರೂ ಸೇರಿದಂತೆ ಎಲ್ಲರೂ ತಮ್ಮ ಹೇಳಿಕೆಯ ಪರಿಣಾಮವನ್ನು ಗ್ರಹಿಸಿ ಮಾತನಾಡದಿದ್ದರೆ ಆಗುವ ಅನಾಹುತವೇ ಹೆಚ್ಚು. ಇದರ ಕುರಿತಾಗಿಯೇ ಈ ಅವಲೋಕನ.

ಹೇಮಾ ಮಾಲಿನಿಯ ಕೆನ್ನೆಯಷ್ಟೇ ಮೃದುವಾದ ರಸ್ತೆ ಮಾಡುತ್ತೇವೆ
(2000)
ಹಿಂದೆ 2000ನೇ ಇಸವಿಯಲ್ಲಿ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್‌ ಅವರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ “ಬಿಹಾರದ ರಸ್ತೆಗಳನ್ನು ಹೇಮಾ ಮಾಲಿನಿಯ ಕೆನ್ನೆಯಷ್ಟೇ ಮೃದುವಾಗಿಸುತ್ತೇವೆ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.

ಗೆಲುವಿನ ಖುಷಿಯೂ ಹಳತು… ಪತ್ನಿಯೂ ಹಳತಾದಂತೆ.. (2012)
ಬೇರೆ ಬೇರೆ ಸಂದರ್ಭ ಸಿಗುವ ಹೊಸ ಹೊಸ ಗೆಲುವು ಮತ್ತು ಹೊಸ ಮದುವೆಯ ಮಹತ್ವವೇ ಬೇರೆ. ಕಾಲ ಕಳೆದಂತೆ ಗೆಲುವಿನ ಖುಷಿ ಹಳತಾಗುತ್ತದೆ. ಅದೇ ರೀತಿ ವಯಸ್ಸಾದಂತೆ ಪತ್ನಿಯೂ ಅಂದ ಕಳೆದುಕೊಂಡಂತೆಯೇ. ಶ್ರೀ ಪ್ರಕಾಶ್‌ ಜೈಸ್ವಾಲ್‌, ಕೇಂದ್ರ ಕಲ್ಲಿದ್ದಲು ಸಚಿವ (ಪಾಕಿಸ್ಥಾನದ ವಿರುದ್ಧ ಭಾರತ ಟಿ 20 ಪಂದ್ಯದಲ್ಲಿ ಗೆದ್ದ ಸಂದರ್ಭ)

ಜನಸಂಖ್ಯೆಯೂ ಹೆಚ್ಚಾಗುತ್ತಿದೆ (2013)
“ನೀವು ಹೇಳುತ್ತೀರಿ ಅತ್ಯಾಚಾರಗಳು ಹೆಚ್ಚಾಗುತ್ತಿವೆ ಎಂದು. ಜನ ಸಂಖ್ಯೆಯೂ ಹೆಚ್ಚಾಗುತ್ತಿದೆಯಲ್ಲ; ರಾಜ್ಯದಲ್ಲಿ ಜನಸಂಖ್ಯೆ ಬಿಸಿ ರಾಯ್‌ ಅವರ ಕಾಲದಲ್ಲಿದ್ದಷ್ಟೇ ಇದೆಯೇ (ಬಿ.ಸಿ. ರಾಯ್‌ ಪಶ್ಚಿಮ ಬಂಗಾಲದ ಎರಡನೆ ಮುಖ್ಯಮಂತ್ರಿ)? ಕಾರೂಗಳೂ ಹೆಚ್ಚಾಗುತ್ತಿವೆ, ಮಾಲ್‌ಗ‌ಳೂ ಹೆಚ್ಚುತ್ತಿವೆ. ಹುಡುಗ ಮತ್ತು ಹುಡುಗಿಯರೂ ಆಧುನಿಕರಾಗುತ್ತಿದ್ದಾರೆ’.

ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಲದ ಮುಖ್ಯಮಂತ್ರಿ (ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಸಂದರ್ಭ, ವಿಪಕ್ಷದವರು ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯದ ಬಗೆಗಿನ ಹೇಳಿಕೆಗೆ ಪ್ರತಿಕ್ರಿಯೆಯಾಗಿ)

ಲಕ್ಷಾಂತರ ಡಾಲರ್‌ ಹಣಕ್ಕೆ ಮುಳುವಾಯಿತು (2014)
ಸಾಮೂಹಿಕ ಅತ್ಯಾಚಾರ ಪ್ರಕರಣಗಳ ಬಗ್ಗೆ ಹಗುರ ಮಾತಾಡಿದ್ದವರಲ್ಲಿ ಅರುಣ್‌ ಜೇಟಿÉ ಕೂಡ ಸೇರಿದ್ದಾರೆ. ನಿರ್ಭಯಾ ಸಾಮೂಹಿಕ ಅತ್ಯಾಚಾರ ಬಗ್ಗೆ ಪ್ರತಿಕ್ರಿಯಿಸಿದ್ದ ಅವರು ರಾಜ್ಯ ಪ್ರವಾಸೋದ್ಯಮ ಸಚಿವರ ಸಭೆಯಲ್ಲಿ “ದಿಲ್ಲಿಯಲ್ಲಿ ನಡೆದ ಒಂದು ಸಣ್ಣ ಅತ್ಯಾಚಾರ ಪ್ರಕರಣವು ಅಂತಾಷ್ಟ್ರೀಯವಾಗಿ ವ್ಯಾಪಕ ಪ್ರಚಾರ ಪಡೆದು ದೇಶಕ್ಕೆ ಪ್ರವಾಸೋದ್ಯಮದ ಮೂಲಕ ಬರುತ್ತಿದ್ದ ಲಕ್ಷಾಂತರ ಡಾಲರ್‌ ಹಣಕ್ಕೆ ಮುಳುವಾಯಿತು’ ಎಂದಿದ್ದರು.

ಅತ್ಯಾಚಾರ ಕೆಲವೊಮ್ಮೆ ತಪ್ಪಿ ನಡೆಯುವ ಘಟನೆ (2014)
ಅತ್ಯಾಚಾರ ಘಟನೆಗಳ ಬಗ್ಗೆ ಛತ್ತೀಸ್‌ಗಢದ ಗೃಹ ಸಚಿವ ಪೈಕ್ರಾ ಸುದ್ದಿ ವಾಹಿನಿಯೊಂದರಲ್ಲಿ, “ಅತ್ಯಾ ಚಾರಗಳು ತಪ್ಪಾಗಿ ಸಂಭವಿಸುತ್ತವೆ ವಿನಾ ಉದ್ದೇಶಪೂರ್ವಕವಾಗಿ ನಡೆ ಯುವುದಲ್ಲ’ ಎಂದು ಹೇಳಿ ಕೋಲಾಹಲ ಸೃಷ್ಟಿಸಿದ್ದರು.

ಸಾಮೂಹಿಕ ಅತ್ಯಾಚಾರ ಎಂದರೆ 4ರಿಂದ 5 ಜನರಿರಬೇಕು (2015)
ಬಿಪಿಒ ಉದ್ಯೋಗಿ ಮಹಿಳೆಯೊಬ್ಬರ ಮೇಲೆ ನಡೆದ ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ವಿಧಾನಸಭೆಯಲ್ಲಿ ಪ್ರತಿಕ್ರಿಯಿಸುವ ಭರದಲ್ಲಿ ಆಗಿನ ಗೃಹ ಸಚಿವ ಕೆ.ಜೆ. ಜಾರ್ಜ್‌, “ಅದನ್ನು ಗ್ಯಾಂಗ್‌ ರೇಪ್‌ ಅಂತ ಹೇಗೆ ಕರೆಯುತ್ತೀರಿ? ಸಾಮೂಹಿಕ ಅತ್ಯಾಚಾರ ಎಂದರೆ ಕನಿಷ್ಠ ನಾಲ್ಕರಿಂದ ಐದು ಜನರಿರಬೇಕು’ ಎಂಬ ಅತ್ಯಂತ ಅಸೂಕ್ಷ್ಮವಾದ ಹೇಳಿಕೆ ಹೇಳಿದ್ದರು. ಸಚಿವರ ಈ ಹೇಳಿಕೆ ದೇಶ ಮಟ್ಟದಲ್ಲಿ ವಿವಾದಕ್ಕೆ ನಾಂದಿ ಹಾಡಿತ್ತು.

ಬಿಸಿಲಿನಲ್ಲಿ ಸತ್ಯಾಗ್ರಹ ಮಾಡಿದರೆ ಒಳ್ಳೆಯ ವರ ಸಿಗಲಾರ (2015)
“ಮಹಿಳೆಯರು ಬಿಸಿಲಿನಲ್ಲಿ ಕುಳಿತು ಉಪವಾಸ ಸತ್ಯಾಗ್ರಹ ಮಾಡಬಾರದು. ಯಾಕೆಂದರೆ, ಸೂರ್ಯನ ಬಿಸಿಲಿನಿಂದ ನಿಮ್ಮ ಸೌಂದರ್ಯ ಹಾಳಾಗುತ್ತದೆ, ಮೈ ಬಣ್ಣ ಕಪ್ಪಾದರೆ, ಒಳ್ಳೆಯ ವರ ಸಿಗುವುದು ಕಷ್ಟವಾಗುತ್ತದೆ’.ಲಕ್ಷ್ಮೀಕಾಂತ್‌ ಪರ್ಶೇಕರ್‌, ಗೋವಾದ ಮಾಜಿ ಮುಖ್ಯಮಂತ್ರಿ (2015ರಲ್ಲಿ ದಾದಿಯರು ವೃತ್ತಿ ಸಂಬಂಧ ಬೇಡಿಕೆಗಳಿಗಾಗಿ ಆಗ್ರಹಿಸಿ ಸತ್ಯಾಗ್ರಹ ನಡೆಸುತ್ತಿದ್ದ ಸಂದರ್ಭ)

ರಾತ್ರಿ 12 ಗಂಟೆ ಬಳಿಕ ನೀನು ಮನೆ ಬಿಟ್ಟು ಏಕೆ ಹೊರಗೆ ಹೋಗಬೇಕಿತ್ತು? (2017)
ಹರಿಯಾಣದ ಐಎಎಸ್‌ ಅಧಿಕಾರಿಯ ಪುತ್ರಿಯನ್ನು ಹಿಂಬಾ ಲಿಸಿ, ಅಪಹರಣಕ್ಕೆ ಯತ್ನಿಸಿದ ಘಟನೆ ನಡೆದಿತ್ತು. ಆಗ ಬಿಜೆಪಿ‌ ಉಪಾಧ್ಯಕ್ಷ ರಾಮ…ವೀರ್‌ ಭಟ್ಟಿ, “ಆ ಹುಡುಗಿ ಏಕೆ ರಾತ್ರಿ 12 ಗಂಟೆ ಅನಂತರ ಮನೆ ಬಿಟ್ಟು ಹೊರಗೆ ಹೋಗಬೇಕಿತ್ತು? ವಾತಾವರಣ ಸರಿ ಇಲ್ಲ ಎಂಬುದು ಆಕೆಗೆ ಗೊತ್ತಿಲ್ಲವೇ?’ ಎಂದು ಪ್ರಶ್ನಿಸಿದ್ದರು.

ಎಲ್ಲ ಯುವಕರಿಗೂ ಐಶ್ವರ್ಯಾ ರೈ ಬೇಕು ಎಂದರೆ ಹೇಗೆ ? (2019)
“ರಾಜ್ಯದಲ್ಲಿ ಮತ್ತೆ ಹೆಚ್ಚುವರಿ ಉಪ ಮುಖ್ಯಮಂತ್ರಿ ಹು¨ªೆ ಸೃಷ್ಟಿ ಮಾಡುವ ಸಾಧ್ಯತೆ ಇದೆಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡುವ ಭರದಲ್ಲಿ ನಾಲಿಗೆಯನ್ನು ಹರಿಯಬಿಟ್ಟಿರುವ ಅವರು, ಉಪ ಮುಖ್ಯಮಂತ್ರಿ ಹುದ್ದೆಯನ್ನು ಬಾಲಿವುಡ್‌ ನಟಿ ಐಶ್ವರ್ಯಾ ರೈಗೆ ಹೋಲಿಕೆ ಮಾಡಿದ್ದಾರೆ. “ಉಪ ಮುಖ್ಯಮಂತ್ರಿ ಆಗುವುದಕ್ಕೆ ರಾಜಕಾರಣದಲ್ಲಿ ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ. ಎಲ್ಲರಿಗೂ ಆಸೆ ಇದ್ದೇ ಇರುತ್ತದೆ. ವಯಸ್ಸಿಗೆ ಬಂದವರೆಲ್ಲ ಐಶ್ವರ್ಯಾ ರೈ ಬೇಕು ಎಂದು ಕೇಳುತ್ತಾರೆ. ಆದರೆ ಅವಳು ಇರುವುದು ಒಬ್ಬಳೇ ತಾನೇ?’ ಎಂದು ಹೇಳಿಕೆ ನೀಡಿದ್ದಾರೆ.

ನೀವೂ ಪ್ರತಿಕ್ರಿಯಿಸಿ
ಮಹಿಳೆಯರ ಗೌರವಕ್ಕೆ ಚ್ಯುತಿ ತರುವ ಇಂತಹ ಕೀಳು ಅಭಿರುಚಿಯ ಹೇಳಿಕೆಗಳನ್ನು ನೀಡುವುದು ಎಷ್ಟು ಸರಿ? ಇದರ ಬಗ್ಗೆ ನೀವು ಪ್ರತಿಕ್ರಿಯಿಸಿ. 9148594259 ನಂಬರ್‌ಗೆ ವಾಟ್ಸ್‌ಆ್ಯಪ್‌ ಮಾಡಿ.

ಟಾಪ್ ನ್ಯೂಸ್

1-eweweq

Gadag: ರಥೋತ್ಸವ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಮೃತ್ಯು

1-wewqewq

RCB vs CSK ರೋಚಕ ಪಂದ್ಯಕ್ಕೆ ಮಳೆ ಅಡ್ಡಿ: ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ

1-ew-eqw-e

BJP ಕಚೇರಿಗೆ ಬರುತ್ತಿದ್ದೇವೆ.. ಎಲ್ಲರನ್ನೂ ಬಂಧಿಸಿ: ಪ್ರಧಾನಿಗೆ ಕೇಜ್ರಿವಾಲ್ ಸವಾಲು

yogi-2

Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ

1-qewwqeqqw

RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

drowned

Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Sunil Chhetri

Sunil Chhetri ಸರಿಸಾಟಿಯಿಲ್ಲದ ಆಟಗಾರ; ಭಾರತ ಫುಟ್‌ಬಾಲ್‌ನ ತೆಂಡುಲ್ಕರ್‌ ಚೆಟ್ರಿ

ರಘುಪತಿ ಭಟ್‌

ಈಗಿನ ಬಿಜೆಪಿಯಲ್ಲಿ ಚಮಚಾಗಿರಿಗೆ ಟಿಕೆಟ್‌!: ಟಿಕೆಟ್‌ ವಂಚಿತ ರಘುಪತಿ ಭಟ್‌ ಬಿರುನುಡಿ

POK ಆಜಾದಿ ರಣಕಹಳೆ! ಪಾಕಿಸ್ಥಾನ ದೌರ್ಜನ್ಯ ವಿರುದ್ಧ ಬೀದಿಗಿಳಿದ ಪಾಕ್‌ ಆಕ್ರಮಿತ ಕಾಶ್ಮೀರ ಜನ

POK ಆಜಾದಿ ರಣಕಹಳೆ! ಪಾಕಿಸ್ಥಾನ ದೌರ್ಜನ್ಯ ವಿರುದ್ಧ ಬೀದಿಗಿಳಿದ ಪಾಕ್‌ ಆಕ್ರಮಿತ ಕಾಶ್ಮೀರ ಜನ

1-wewqeqwe

Karachi ಭಾರತೀಯ ಮಹಿಳೆಯ ವಡಾಪಾವ್‌, ಪಾವ್‌ಭಾಜಿ ಕಮಾಲ್‌!

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-qwqeewqe

Vijayapura;ದಲಿತರ ಭವನ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ:ಪೊಲೀಸರ ಮಧ್ಯಸ್ಥಿಕೆ

Minchu

Banavasi ; ಕ್ರಿಕೆಟ್ ಆಡುತ್ತಿದ್ದ ಬಾಲಕ ಸಿಡಿಲಿಗೆ ಬಲಿ

1-eweweq

Gadag: ರಥೋತ್ಸವ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಮೃತ್ಯು

1-wewqewq

RCB vs CSK ರೋಚಕ ಪಂದ್ಯಕ್ಕೆ ಮಳೆ ಅಡ್ಡಿ: ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ

1-ew-eqw-e

BJP ಕಚೇರಿಗೆ ಬರುತ್ತಿದ್ದೇವೆ.. ಎಲ್ಲರನ್ನೂ ಬಂಧಿಸಿ: ಪ್ರಧಾನಿಗೆ ಕೇಜ್ರಿವಾಲ್ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.