ವಿದ್ಯಾರ್ಥಿಗಳಲ್ಲಿ ಕಾಡುತ್ತಿರುವ ಶ್ರೀಗಳ ನೆನಪು

ವೃಂದಾವನದ ದರ್ಶನಕ್ಕಾಗಿ ರಾಜ್ಯದ ವಿವಿಧೆಡೆಗಳಿಂದ ಭಕ್ತರ ಆಗಮನ

Team Udayavani, Dec 31, 2019, 7:30 AM IST

ve-40

ಬೆಂಗಳೂರು: ಪೇಜಾವರ ಶ್ರೀಗಳು ನಮ್ಮೊಂದಿಗೆ ಇಲ್ಲ… ವೃಂದಾವನದಲ್ಲಿ ನಮ್ಮನ್ನು ನೋಡುತ್ತಿರುತ್ತಾರೆ. ಆದರೆ ನಮಗೆ ಅವರ ಲಾಲನೆ, ಪಾಲನೆ ಸಿಗುತ್ತಿಲ್ಲವಲ್ಲ… ಇದು ಇಲ್ಲಿನ ವಿದ್ಯಾಪೀಠ ಗುರುಕುಲದ ವಿದ್ಯಾರ್ಥಿಗಳ ಅಳಲು. ವಿಶ್ವೇಶತೀರ್ಥರು ವೃಂದಾವನಸ್ಥರಾಗಿರುವುದು ವಿದ್ಯಾಪೀಠ ಗುರುಕುಲದ ಶಿಕ್ಷಣಾರ್ಥಿಗಳಿಗೆ ಗೊತ್ತಿದ್ದರೂ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ತಂಡೋಪತಂಡವಾಗಿ ವೃಂದಾವನ ಇರುವ ಜಾಗಕ್ಕೆ ಬಂದು ಕೈಮುಗಿದು ನಮಸ್ಕರಿಸುತ್ತಿದ್ದರು. ಪೂರ್ಣಪ್ರಜ್ಞ ವಿದ್ಯಾಪೀಠದ ಬೋಧನಾ ಶಾಲೆ, ವಸತಿ ನಿಲಯ ಸಹಿತವಾಗಿ ಎಲ್ಲೆಡೆ ಶ್ರೀಗಳಿಲ್ಲದೆ ಅನಾಥ ಭಾವ ಎದ್ದು ಕಾಣುತ್ತಿತ್ತು.

ವೃಂದಾವನ ವೀಕ್ಷಣೆಗೆ ಬಂದ ಭಕ್ತರ ದಂಡು
ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳ ವೃಂದಾವನ ವೀಕ್ಷಣೆಗೆ ಸೋಮವಾರ ಬೆಳಗ್ಗೆಯಿಂದಲೇ ಭಕ್ತರು ಆಗಮಿಸಿದರು. ಬೆಂಗಳೂರಿನ ವಿವಿಧ ಪ್ರದೇಶ ಮಾತ್ರವಲ್ಲದೆ, ಮಂಗಳೂರು, ಉಡುಪಿ ಸಹಿತವಾಗಿ ಮೂಲೆ ಮೂಲೆಗಳಿಂದ ಭಕ್ತರು ಹಾಗೂ ಶಿಷ್ಯವೃಂದ ಭೇಟಿ ನೀಡಿ ಶ್ರೀಗಳ ವೃಂದಾವನ ದರ್ಶನ ಪಡೆದರು. ವೃಂದಾವನ ವೀಕ್ಷಣೆಗಾಗಿ ಬಂದಿದ್ದವರಿಗೆ ಮಧ್ಯಾಹ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ವಿಶ್ವಪ್ರಸನ್ನರಿಂದ ಹಸ್ತೋದಕ
ಮಧ್ಯಾಹ್ನ 12.30ಕ್ಕೆ ಮಠದ ಯತಿಗಳಾದ ವಿಶ್ವ ಪ್ರಸನ್ನ ಶ್ರೀಗಳು ವೃಂದಾವನಕ್ಕೆ ಹಸ್ತೋದಕ ನೆರವೇರಿಸಿದರು. ಮಠದಲ್ಲಿ ತಯಾರಿಸಿದ್ದ ವಿವಿಧ ಬಗೆಯ ಪ್ರಸಾದಗಳನ್ನು ವೃಂದಾವನದ ಮುಂಭಾಗದಲ್ಲಿಟ್ಟು ಪೂಜೆ ನೆರವೇರಿಸಿದರು. ಸಂಸ್ಕೃತ, ವೇದ ಸಹಿತ ವಿವಿಧ ಕೋರ್ಸ್‌ ಗಳನ್ನು ವ್ಯಾಸಂಗ ಮಾಡುತ್ತಿರುವ 1ರಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಬೆಳಗ್ಗೆಯಿಂದ ಸಂಜೆಯವರೆಗೂ ಮಂತ್ರ ಪಠಣ ಮಾಡಿದರು.

ವೃಂದಾವನ ಈಗ ಹೇಗಿದೆ?
ರವಿವಾರ ರಾತ್ರಿ 9.30ರ ಸುಮಾರಿಗೆ ಮಾಧ್ವ ಸಂಪ್ರದಾಯದಂತೆ ಶ್ರೀಗಳ ಪಾರ್ಥಿವ ಶರೀರ ವೃಂದಾವನ ಪ್ರವೇಶ ಪೂರ್ಣಗೊಂಡಿದೆ. ವೃಂದಾವನ ಮೇಲ್ಭಾಗದಲ್ಲಿ ಚತುರ್ಭುಜಾಕೃತಿಯ ತುಳಸಿ ಕಟ್ಟೆ ಪ್ರತಿಷ್ಠಾಪಿಸಲಾಗಿದೆ. ಅದರ ಸುತ್ತಲೂ ಮರದ ಮಂಟಪ ಕಟ್ಟಲಾಗಿದೆ. ಮರದ ಮಂಟಪದ ಮೇಲೆ ಬಿಸಿಲು ಬೀಳದಂತೆ ತೆಂಗಿನ ಗರಿಯ ಚಪ್ಪರ ಹಾಕಲಾಗಿದೆ. ವೃಂದಾವನದ ಸಮೀಪಕ್ಕೆ ಯಾರೂ ಪ್ರವೇಶಿಸಬಾರದು ಎಂಬ ಉದ್ದೇಶ ದಿಂದ ಬ್ಯಾರಿಕೇಡ್‌ಗಳಿಂದ ಸುತ್ತಲೂ ರಕ್ಷಣೆ ನೀಡಲಾಗಿದೆ. ಬ್ಯಾರಿಕೇಡ್‌ ಹೊರಗಿನಿಂದಲೇ ಭಕ್ತರು ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡುತ್ತಿದ್ದಾರೆ.

ಟಾಪ್ ನ್ಯೂಸ್

T20 World Cup; ಡ್ವೇನ್‌ಬ್ರಾವೊ ಅಫ್ಘಾನ್‌ ಬೌಲಿಂಗ್‌ ಸಲಹೆಗಾರ

Molakalmuru ಆಸ್ಪತ್ರೆಯಲ್ಲಿ ಮೊಂಬತ್ತಿಯಲ್ಲಿ ಚಿಕಿತ್ಸೆ!

Molakalmuru ಆಸ್ಪತ್ರೆಯಲ್ಲಿ ಮೊಂಬತ್ತಿಯಲ್ಲಿ ಚಿಕಿತ್ಸೆ!

ಕಾಂಗ್ರೆಸ್‌ಗೆ 5 ಸ್ಥಾನದಲ್ಲಿ ಗೆಲುವು: ರಾಮಲಿಂಗಾ ರೆಡ್ಡಿ

ಕಾಂಗ್ರೆಸ್‌ಗೆ 5 ಸ್ಥಾನದಲ್ಲಿ ಗೆಲುವು: ರಾಮಲಿಂಗಾ ರೆಡ್ಡಿ

bjpMLC Elections: ಬಿಜೆಪಿಯಲ್ಲಿ 3 ಸ್ಥಾನಕ್ಕೆ 30 ಆಕಾಂಕ್ಷಿಗಳು

MLC Elections: ಬಿಜೆಪಿಯಲ್ಲಿ 3 ಸ್ಥಾನಕ್ಕೆ 30 ಆಕಾಂಕ್ಷಿಗಳು

DK Shivakumar ರಕ್ಷಿಸಿದರೆ ಮುಂದೆ ಬೆಲೆ ತೆರಬೇಕಾಗುತ್ತದೆ: ಎಚ್‌ಡಿಕೆ ಎಚ್ಚರಿಕೆ

DK Shivakumar ರಕ್ಷಿಸಿದರೆ ಮುಂದೆ ಬೆಲೆ ತೆರಬೇಕಾಗುತ್ತದೆ: ಎಚ್‌ಡಿಕೆ ಎಚ್ಚರಿಕೆ

British Prime Minister Sunak thought to change the student visa policy!

U.K; ವಿದ್ಯಾರ್ಥಿ ವೀಸಾ ನೀತಿ ಬದಲಿಸಲು ಬ್ರಿಟನ್‌ ಪ್ರಧಾನಿ ಸುನಕ್‌ ಚಿಂತನೆ!

ಅಧಿಕಾರ ಸಿಗದಕ್ಕೆ ಎಚ್‌ಡಿಕೆ ಹತಾಶರಾಗಿ ಮಾತನಾಡುತ್ತಿದ್ದಾರೆ: ಡಿಕೆಶಿ ಲೇವಡಿ

ಅಧಿಕಾರ ಸಿಗದಕ್ಕೆ ಎಚ್‌ಡಿಕೆ ಹತಾಶರಾಗಿ ಮಾತನಾಡುತ್ತಿದ್ದಾರೆ: ಡಿಕೆಶಿ ಲೇವಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bjpMLC Elections: ಬಿಜೆಪಿಯಲ್ಲಿ 3 ಸ್ಥಾನಕ್ಕೆ 30 ಆಕಾಂಕ್ಷಿಗಳು

MLC Elections: ಬಿಜೆಪಿಯಲ್ಲಿ 3 ಸ್ಥಾನಕ್ಕೆ 30 ಆಕಾಂಕ್ಷಿಗಳು

DK Shivakumar ರಕ್ಷಿಸಿದರೆ ಮುಂದೆ ಬೆಲೆ ತೆರಬೇಕಾಗುತ್ತದೆ: ಎಚ್‌ಡಿಕೆ ಎಚ್ಚರಿಕೆ

DK Shivakumar ರಕ್ಷಿಸಿದರೆ ಮುಂದೆ ಬೆಲೆ ತೆರಬೇಕಾಗುತ್ತದೆ: ಎಚ್‌ಡಿಕೆ ಎಚ್ಚರಿಕೆ

ಅಧಿಕಾರ ಸಿಗದಕ್ಕೆ ಎಚ್‌ಡಿಕೆ ಹತಾಶರಾಗಿ ಮಾತನಾಡುತ್ತಿದ್ದಾರೆ: ಡಿಕೆಶಿ ಲೇವಡಿ

ಅಧಿಕಾರ ಸಿಗದಕ್ಕೆ ಎಚ್‌ಡಿಕೆ ಹತಾಶರಾಗಿ ಮಾತನಾಡುತ್ತಿದ್ದಾರೆ: ಡಿಕೆಶಿ ಲೇವಡಿ

“Phone Tapping’ ಮಾಡಿಲ್ಲ; ಮಾಹಿತಿ ಕೊಟ್ಟರೆ ತನಿಖೆ: ಪರಮೇಶ್ವರ್‌

“Phone Tapping’ ಮಾಡಿಲ್ಲ; ಮಾಹಿತಿ ಕೊಟ್ಟರೆ ತನಿಖೆ: ಪರಮೇಶ್ವರ್‌

ಚೀನಾ ಯಂತ್ರಗಳ ಮೂಲಕ ಟ್ಯಾಪಿಂಗ್‌: ಅಶೋಕ್‌

China ಯಂತ್ರಗಳ ಮೂಲಕ ಟ್ಯಾಪಿಂಗ್‌: ಅಶೋಕ್‌

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

T20 World Cup; ಡ್ವೇನ್‌ಬ್ರಾವೊ ಅಫ್ಘಾನ್‌ ಬೌಲಿಂಗ್‌ ಸಲಹೆಗಾರ

Molakalmuru ಆಸ್ಪತ್ರೆಯಲ್ಲಿ ಮೊಂಬತ್ತಿಯಲ್ಲಿ ಚಿಕಿತ್ಸೆ!

Molakalmuru ಆಸ್ಪತ್ರೆಯಲ್ಲಿ ಮೊಂಬತ್ತಿಯಲ್ಲಿ ಚಿಕಿತ್ಸೆ!

ಕಾಂಗ್ರೆಸ್‌ಗೆ 5 ಸ್ಥಾನದಲ್ಲಿ ಗೆಲುವು: ರಾಮಲಿಂಗಾ ರೆಡ್ಡಿ

ಕಾಂಗ್ರೆಸ್‌ಗೆ 5 ಸ್ಥಾನದಲ್ಲಿ ಗೆಲುವು: ರಾಮಲಿಂಗಾ ರೆಡ್ಡಿ

bjpMLC Elections: ಬಿಜೆಪಿಯಲ್ಲಿ 3 ಸ್ಥಾನಕ್ಕೆ 30 ಆಕಾಂಕ್ಷಿಗಳು

MLC Elections: ಬಿಜೆಪಿಯಲ್ಲಿ 3 ಸ್ಥಾನಕ್ಕೆ 30 ಆಕಾಂಕ್ಷಿಗಳು

DK Shivakumar ರಕ್ಷಿಸಿದರೆ ಮುಂದೆ ಬೆಲೆ ತೆರಬೇಕಾಗುತ್ತದೆ: ಎಚ್‌ಡಿಕೆ ಎಚ್ಚರಿಕೆ

DK Shivakumar ರಕ್ಷಿಸಿದರೆ ಮುಂದೆ ಬೆಲೆ ತೆರಬೇಕಾಗುತ್ತದೆ: ಎಚ್‌ಡಿಕೆ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.