ಅಫ್ಘಾನಿಸ್ಥಾನ: ತಾಲಿಬಾನ್ ದಾಳಿಗೆ 10 ಸಾವು
Team Udayavani, Jan 30, 2020, 1:18 AM IST
ಕಾಬೂಲ್: ಉತ್ತರ ಅಫ್ಘಾನಿಸ್ಥಾನದ ಬಗ್ಲಾನ್ ಪ್ರಾಂತ್ಯದ ಖ್ವಾಜಾ ಅಲ್ವಾನ್ ಎಂಬಲ್ಲಿ ಮಂಗಳವಾರ ತಾಲಿಬಾನ್ ಉಗ್ರರು ನಡೆಸಿದ ದಾಳಿಯಲ್ಲಿ 10 ಮಂದಿ ಪೊಲೀಸರು ಅಸುನೀಗಿದ್ದಾರೆ.
ಪೊಲೀಸ್ ಚೆಕ್ಪೋಸ್ಟ್ ಮೇಲೆ ಏಕಕಾಲದಲ್ಲಿ ಹಲವು ದಿಕ್ಕಿನಿಂದ ಉಗ್ರರು ದಾಳಿ ನಡೆಸಿದರು. ಉಗ್ರರ ಕಡೆಯಲ್ಲಿಯೂ ಸಾವುನೋವುಗಳು ಉಂಟಾಗಿವೆ ಎಂದು ಸ್ಥಳೀಯ ಸರಕಾರ ಹೇಳಿದೆ.