ಸಿಬ್ಬಂದಿ ಪಿಕಪ್‌ಡ್ರಾಪ್‌ಗೆ ಆ್ಯಂಬುಲೆನ್ಸ್‌ ಬಳಕೆ


Team Udayavani, Feb 4, 2020, 4:16 PM IST

br-tdy-1

ನೆಲಮಂಗಲ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಂಕವಸೂಲಿ ಮಾಡುವ ಟೋಲ್‌ಗ‌ಳ ತುರ್ತು ಸೇವೆಗಾಗಿರುವ ಆ್ಯಂಬುಲೆನ್ಸ್‌ಗಳನ್ನು ಟೋಲ್‌ ಸಿಬ್ಬಂದಿಗಳ ಪಿಕಪ್‌ಡ್ರಾಪ್‌ಗೆ ಬಳಕೆಯಾಗುತ್ತಿವೆ.

ತಾಲೂಕಿನ ಮೂಲಕ 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಸಂಪರ್ಕ ಸೇತುವೆಯಾಗಿರುವ ಎರಡು ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಲ್ಕು ಟೋಲ್‌ಗ‌ಳಿದ್ದು, ಬೆಂಗಳೂರಿಗೆ ಪ್ರವೇಶಿಸಲು ನವಯುಗ ಟೋಲ್‌ ದಾಟಬೇಕಾಗುತ್ತದೆ. ಈ ಹೆದ್ದಾರಿಯಲ್ಲಿ ಪ್ರತಿನಿತ್ಯ ಹಲವು ಅಪಘಾತ ಪ್ರಕರಣಗಳು ದಾಖಲಾಗುತಿದ್ದರೂ, ಈ ಟೋಲ್‌ನವರು ಮಾತ್ರ, ತುರ್ತುಸೇವೆಗಾಗಿ ನೀಡಿರುವ ಆ್ಯಂಬುಲೆನ್ಸ್‌ ಅನ್ನು ಗಾಯಾಳುಗಳ ರಕ್ಷಣೆ ಮಾಡುವುದನ್ನು ಬಿಟ್ಟು ಎಬಿಸಿ ಎಂಬ ಮೂರು ಪಾಳಿಯಾಗಿ 150ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

ಒಂದೇ ಆ್ಯಂಬುಲೆನ್ಸ್‌ : ಬೆಂಗಳೂರಿನಿಂದ ನೆಲಮಂಗಲದವರಗೂ 28 ಕಿ.ಮೀ ದೂರವಿರುವ ನವಯುಗ ಟೋಲ್‌ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುವುದನ್ನು ಕಾಣ ಬಹುದಾಗಿದೆ. ಆದರೆ, ಟೋಲ್‌ನಿಂದ ತುರ್ತು ಸೇವೆಗಾಗಿ ನೀಡಿರುವ ಕೇವಲ ಒಂದು ಆಂಬುಲೆನ್ಸ್‌ ಕೂಡ ಸಿಬ್ಬಂದಿ ಪಿಕಪ್‌ಡ್ರಾಪ್‌ಗಾಗಿ ಬಳಕೆಯಾಗುತ್ತಿದೆ.ಅಪಘಾತವಾದರೆ ಖಾಸಗಿ ವಾಹನಗಳು ಅಥವಾ ಅದೃಷ್ಟವಿದ್ದರೆ 108 ಅಂಬುಲೆನ್ಸ್‌ ಮೂಲಕ ಆಸ್ಪತ್ರೆ ಸೇರುವ ಅನಿವಾರ್ಯತೆ ಎದುರಾಗಿದೆ.

ಅಪಘಾತಗಳ ಪ್ರಮಾಣ : ರಾಷ್ಟ್ರೀಯ ಹೆದ್ದಾರಿ 48 ಹಾಗೂ 75ರಲ್ಲಿ 2018ರಲ್ಲಿ 590 ಅಪಘಾತಗಳಾಗಿ, 132 ಜನ ಮೃತರಾಗಿದ್ದಾರೆ. ಇನ್ನೂ 2019ರಲ್ಲಿ 521 ಅಪಘಾತಗಳಿಂದ 133 ಜನ ಸಾವಿಗೀಡಾಗಿದ್ದು, 553 ಜನರು ಗಾಯಾಳುಗಳಾಗಿದ್ದಾರೆ. ಇದರ ಜೊತೆ ಹೊಸವರ್ಷದ ಆರಂಭದ ತಿಂಗಳಿನಲ್ಲಿ 56 ಅಪಘಾತಗಳಾಗಿದ್ದು , 11 ಜನರು ಪ್ರಾಣಬಿಟ್ಟಿದ್ದಾರೆ. ಈ ಪ್ರಮಾಣದ ಅಪಘಾತ ಸಂಭವಿಸುವ ರಸ್ತೆಗಳಲ್ಲಿ ಕೋಟಿಕೋಟಿ ಸುಂಕವಸೂಲಿ ಮಾಡುವ ಟೋಲ್‌ಗಳು ಆ್ಯಂಬುಲೆನ್ಸ್‌ ಸೇವೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ದುರಂತ.

ಅಧಿಕಾರಿಗಳ ಎಡವಟ್ಟು : ಕಚೇರಿಯಿಂದಲೇ ಸಿಬ್ಬಂದಿಗಳನ್ನು ಅಂಬುಲೆನ್ಸ್‌ ಮೂಲಕ ಡ್ರಾಪ್‌ ಮಾಡುವ ಪದ್ಧತಿಯನ್ನು ರೂಢಿ ಮಾಡಿಕೊಂಡಿರುವ ಅಧಿಕಾರಿಗಳ ಎಡವಟ್ಟಿಗೆ ಅಮಾಯಕ ಜೀವಗಳು ಬಲಿಯಾಗಿವೆ. ಈ ಬಗ್ಗೆ ಪ್ರಶ್ನಿಸಿದರೆ ಯಾವೊಬ್ಬ ಅಧಿಕಾರಿಯೂ ಉತ್ತರ ನೀಡುತ್ತಿಲ್ಲ.

ಪ್ರತಿಕ್ರಿಯಿಸಿ ಆ್ಯಂಬುಲೆನ್ಸ್‌ ಈ ರೀತಿ ಸಿಬ್ಬಂದಿಗಳ ಬಳಕೆಗಾಗಿ ಬಳಸಿಕೊಳ್ಳುತ್ತಿರುವುದು ಬೇಸರ ತಂದಿದೆ. ತಕ್ಷಣ ಪ್ರಕರಣದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ಮಾನವೀಯತೆಯಿಂದ ವರ್ತಿಸಬೇಕಾಗಿರುವುದು ಟೋಲ್‌ ಅಧಿಕಾರಿಗಳ ಕರ್ತವ್ಯ.  –ಸೋಮಶೇಖರ್‌ ,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ

 

-ಕೊಟ್ರೇಶ್‌ ಆರ್‌

ಟಾಪ್ ನ್ಯೂಸ್

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-ragi-crop

Devanahalli: ಕೈಕೊಟ್ಟ ಮಳೆ: ಮೊಳಕೆಯಲ್ಲೇ ಒಣಗುತ್ತಿದೆ ರಾಗಿ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Doddaballapura ಮಳೆಗಾಗಿ ಪ್ರಾರ್ಥಿಸಿ ಮಕ್ಕಳಿಗೆ ಮದುವೆ

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

Anekal: ದೌರ್ಜನ್ಯ; ಕುಡುಕನ ನಗ್ನಗೊಳಿಸಿ ಥಳಿತ

Crime: 56 ಕೇಸ್‌; ರೌಡಿಶೀಟರ್‌ಗೆ 2ನೇ ಬಾರಿ ಗುಂಡೇಟು

Crime: 56 ಕೇಸ್‌; ರೌಡಿಶೀಟರ್‌ಗೆ 2ನೇ ಬಾರಿ ಗುಂಡೇಟು

Crime: ಏರ್ಪೋರ್ಟ್ ನಲ್ಲಿ ಚಾಕುವಿನಿಂದ ಇರಿದು ನೌಕರನ ಬರ್ಬರ ಹತ್ಯೆ

Crime: ಏರ್ಪೋರ್ಟ್ ನಲ್ಲಿ ಚಾಕುವಿನಿಂದ ಇರಿದು ನೌಕರನ ಬರ್ಬರ ಹತ್ಯೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.