ಇರಾಕ್ ನಲ್ಲಿ ಅಮೆರಿಕಾ ರಾಯಭಾರ ಕಚೇರಿ ಮೇಲೆ ಅಪ್ಪಳಿಸಿದ ರಾಕೆಟ್: ಹಸಿರುವ ವಲಯದ 19ನೇ ದಾಳಿ
Team Udayavani, Feb 16, 2020, 9:25 AM IST
ಬಾಗ್ದಾದ್: ಇಂದು ಬೆಳಗ್ಗೆ ಇರಾಕ್ ರಾಜಧಾನಿಯ ಬಳಿ ಇರುವ ಅಮೇರಿಕಾ ರಾಯಭಾರಿ ಕಚೇರಿಯ ಮೇಲೆ ಹಲವು ರಾಕೆಟ್ ಗಳು ಬಂದು ಅಪ್ಪಳಿಸಿವೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಸರಿಸುಮಾರು 5,200 ಅಮೆರಿಕಾ ಸೈನಿಕರನ್ನು ಗುರಿಯಾಗಿಸಿಕೊಂಡು 2019 ಅಕ್ಟೋಬರ್ ನಿಂದ ಅಮೆರಿಕಾ ರಾಯಭಾರ ಕಚೇರಿ ಮೇಲೆ ನಡೆದ 19 ನೇ ದಾಳಿ ಇದಾಗಿದೆ.ಆದರೆ ಯಾವುದೇ ಸಾವು ನೋವಿನ ವದಿಯಾಗಿಲ್ಲ.
ಅಮೆರಿಕಾ ರಾಯಭಾರ ಕಚೇರಿ ಸೇರಿದಂತೆ ಹಲವು ವಿದೇಶಿ ಕಚೇರಿಯನ್ನೊಳಗೊಂಡ ಅತೀ ಭದ್ರತಾ ಪ್ರದೇಶವಾದ ಹಸಿರು ವಲಯದ ಮೇಲೆ ಈ ರಾಕೆಟ್ ದಾಳಿಯಾಗಿದ್ದು , ಬಲವಾದ ಸ್ಪೋಟಗಳು ಕೇಳಿಬಂದಿವೆ ಎಂದು ವರದಿಗಳು ತಿಳಿಸಿವೆ.