ಕ್ಲಾಸೆನ್ ಶತಕ; ಆಸೀಸ್ಗೆ ಸೋಲುಣಿಸಿದ ಆಫ್ರಿಕಾ
Team Udayavani, Mar 2, 2020, 12:40 AM IST
ಪಾರ್ಲ್: ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಹೆನ್ರಿಚ್ ಕ್ಲಾಸೆನ್ ಅವರ ಶತಕದ ಸಾಹಸದಿಂದ ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ ಪ್ರಥಮ ಏಕದಿನ ಮುಖಾಮುಖೀಯಲ್ಲಿ ದಕ್ಷಿಣ ಆಫ್ರಿಕಾ 74 ರನ್ನುಗಳ ಭರ್ಜರಿ ಜಯ ಸಾಧಿಸಿದೆ.
ಶನಿವಾರ ರಾತ್ರಿ ಇಲ್ಲಿನ “ಬೋಲ್ಯಾಂಡ್ ಪಾರ್ಕ್’ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ 7 ವಿಕೆಟಿಗೆ 291 ರನ್ ಸೂರೆಗೈದರೆ, ಆಸ್ಟ್ರೇಲಿಯ 45.1 ಓವರ್ಗಳಲ್ಲಿ 217ಕ್ಕೆ ಕುಸಿಯಿತು.
ಟಾಪ್ ಕ್ಲಾಸ್ ಬ್ಯಾಟಿಂಗ್
10 ಓವರ್ ಒಳಗೆ 49 ರನ್ನಿಗೆ 3 ವಿಕೆಟ್ ಕಳೆದುಕೊಂಡು ಸಂಕಟದಲ್ಲಿದ್ದ ದಕ್ಷಿಣ ಆಫ್ರಿಕಾವನ್ನು ಹೆನ್ರಿಚ್ ಕ್ಲಾಸೆನ್ ತಮ್ಮ “ಟಾಪ್ ಕ್ಲಾಸ್’ ಬ್ಯಾಟಿಂಗ್ ಮೂಲಕ ಮೇಲೆತ್ತಿದರು. ಮತ್ತೋರ್ವ ಅಪಾಯಕಾರಿ ಆಟಗಾರ ಡೇವಿಡ್ ಮಿಲ್ಲರ್ (64) ಮತ್ತು ಕೈಲ್ ವೆರಿನ್ (48) ಉತ್ತಮ ಬೆಂಬಲ ನೀಡಿದರು.
5ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಹೆನ್ರಿಚ್ ಕ್ಲಾಸೆನ್ ಆಸೀಸ್ ದಾಳಿಯನ್ನು ಯಾವುದೇ ಆತಂಕವಿಲ್ಲದೆ ಎದುರಿಸಿ ಏಕದಿನದಲ್ಲಿ ಚೊಚ್ಚಲ ಶತಕ ಬಾರಿಸಿ ಮೆರೆದಾಡಿದರು. ಕ್ಲಾಸೆನ್ ಕೊಡುಗೆ ಬಹುಮೂಲ್ಯ 123 ರನ್. ಸಿಡಿಸಿದ್ದು 7 ಬೌಂಡರಿ, 3 ಸಿಕ್ಸರ್. ಮಿಲ್ಲರ್ 70 ಎಸೆತ ಎದುರಿಸಿ 64 ರನ್ ಬಾರಿಸಿದರು (4 ಬೌಂಡರಿ, 1 ಸಿಕ್ಸರ್). ಮೊದಲ ಪಂದ್ಯ ಆಡಲಿಳಿದ ಕೈಲ್ ವೆರಿನ್ ಅವರದು ಎಚ್ಚರಿಕೆಯ ಬ್ಯಾಟಿಂಗ್ ಆಗಿತ್ತು. ಅವರು 48 ರನ್ನಿಗೆ 64 ಎಸೆತ ತೆಗೆದುಕೊಂಡರು (2 ಬೌಂಡರಿ).
ಸ್ಟೀವನ್ ಸ್ಮಿತ್ (76) ಮತ್ತು ಮಾರ್ನಸ್ ಲಬುಶೇನ್ (41) ಕ್ರೀಸಿನಲ್ಲಿದ್ದಾಗ ಆಸೀಸ್ಗೆ ಗೆಲುವಿನ ಸಾಧ್ಯತೆಯೊಂದು ಗೋಚರಿಸಿತ್ತು. ಇವರು 3ನೇ ವಿಕೆಟಿಗೆ 84 ರನ್ ಪೇರಿಸಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಆತಿಥೇಯ ಬೌಲರ್ಗಳ ಕೈ ಮೇಲಾಯಿತು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ-7 ವಿಕೆಟಿಗೆ 291 (ಕ್ಲಾಸೆನ್ ಔಟಾಗದೆ 123, ಮಿಲ್ಲರ್ 64, ವೆರಿನ್ 48, ಕಮಿನ್ಸ್ 45ಕ್ಕೆ 3, ಸ್ಟಾರ್ಕ್ 59ಕ್ಕೆ 2). ಆಸ್ಟ್ರೇಲಿಯ-45.1 ಓವರ್ಗಳಲ್ಲಿ 217 (ಸ್ಮಿತ್ 76, ಲಬುಶೇನ್ 41, ವಾರ್ನರ್ 25, ಎನ್ಗಿಡಿ 30ಕ್ಕೆ 3, ನೋರ್ಜೆ 39ಕ್ಕೆ 2, ಶಂಸಿ 45ಕ್ಕೆ 2).
ಪಂದ್ಯಶ್ರೇಷ್ಠ: ಹೆನ್ರಿಚ್ ಕ್ಲಾಸೆನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Archery World Cup: ಭಾರತದ ರಿಕರ್ವ್ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ
IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್ಗಳ ಅಮೋಘ ಜಯ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್