ಸೌರ ವಿದ್ಯುತ್‌ ಬಳಸಲು ಗ್ರಾಹಕರ ನಿರಾಸಕ್ತಿ

Team Udayavani, Mar 2, 2020, 12:20 PM IST

bg-tdy-1

ಸಾಂದರ್ಭಿಕ ಚಿತ್ರ

ಬೆಳಗಾವಿ: ನೈಸರ್ಗಿಕವಾಗಿ ಬರುವ ಸೋಲಾರ್‌ ವಿದ್ಯುತ್‌ ಅನ್ನು ಕಡ್ಡಾಯವಾಗಿ ಬಳಸುವಂತೆ ಹೆಸ್ಕಾಂ ಆದೇಶ ಹೊರಡಿಸಿದ್ದು, 500 ಚದರ ಮೀಟರ್‌ ಗಿಂತಲೂ ದೊಡ್ಡದಾದ ಮನೆಗಳಲ್ಲಿ ಸೋಲಾರ್‌ ಹೀಟರ್‌ ಅಳವಡಿಸುವುದು ಕಡ್ಡಾಯವಾಗಿದೆ. ಜತೆಗೆ ಸೌರ ವಿದ್ಯುತ್‌ ಬಳಸಿ ಹೆಚ್ಚಿನ ವಿದ್ಯುತ್‌ಅನ್ನು ಹೆಸ್ಕಾಂಗೆ ಮಾರಾಟ ಕೂಡ ಮಾಡಲು ಅವಕಾಶವಿದೆ.

ಮನೆ ಮೇಲ್ಛಾವಣಿಯಲ್ಲಿ ಸೌರ್‌ ಪ್ಯಾನಲ್‌ ಅಳವಡಿಸುವ ಮೂಲಕ ವಿದ್ಯುತ್‌ ಬಳಸಿಕೊಂಡು ಇದನ್ನು ಹೆಸ್ಕಾಂಗೆ ಮಾರಾಟ ಮಾಡಲು ಅವಕಾಶವಿದ್ದು, ನಗರ ಹಾಗೂ ಜಿಲ್ಲಾದ್ಯಂತ ಹೆಸ್ಕಾಂಗೆ ಸೋಲಾರ್‌ ವಿದ್ಯುತ್‌ ಬಳಸಿಕೊಂಡು ಮಾರಾಟ ಮಾಡುವಂತೆ ಹೆಸ್ಕಾಂ ಮನವಿ ಮಾಡಿದ್ದರೂ ಗ್ರಾಹಕರು ಅಷ್ಟೊಂದು ಆಸಕ್ತಿ ವಹಿಸುತ್ತಿಲ್ಲ. ಬೆಳಗಾವಿ ನಗರದಲ್ಲಿ 2.50 ಲಕ್ಷಕ್ಕೂ ಹೆಚ್ಚು ಜನ ವಿದ್ಯುತ್‌ ಗ್ರಾಹಕರು ಇದ್ದು, ಈ ಪೈಕಿ ಸುಮಾರು 16 ಸಾವಿರ ಜನ ಸೋಲಾರ್‌ ವಿದ್ಯುತ್‌ ಉಪಯೋಗಿಸುತ್ತಿದ್ದಾರೆ.

ಬೆಳಗಾವಿ ಹಾಗೂ ಚಿಕ್ಕೋಡಿ ಜಿಲ್ಲೆಯಲ್ಲಿ ಸೋಲಾರ್‌ ಬಳಕೆ ಮಾಡಿ ಹೆಸ್ಕಾಂಗೆ ವಿದ್ಯುತ್‌ ಮಾರಾಟ ಮಾಡುವವರ ಸಂಖ್ಯೆ ಕೇವಲ 387 ಹಾಗೂ ಬೆಳಗಾವಿ ನಗರದಲ್ಲಿ 152 ಇದೆ. ಈ ಸಂಖ್ಯೆ ಹೆಚ್ಚಿಗೆ ಮಾಡಲು ಹೆಸ್ಕಾಂಗೆ ಸಾಧ್ಯವಾಗುತ್ತಿಲ್ಲ. ಸೌರ್‌ ವಿದ್ಯುತ್‌ ಬಳಸುವಂತೆ ಮನವಿ ಮಾಡಿಕೊಂಡರೂ ಗ್ರಾಹಕರ ನಿರಾಸಕ್ತಿ ಎದ್ದು ಕಾಣುತ್ತಿದೆ.

ಆಸಕ್ತಿ ತೋರದ ಗ್ರಾಹಕರು: ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಮಾತಿನಂತೆ ಜನರು ತಮ್ಮ ಕನಸಿನ ಮನೆ ಕಟ್ಟಿಕೊಳ್ಳಲು ತಮ್ಮ ಇಡೀ ಜೀವಮಾನವನ್ನೇ ಸವೆಸಿರುತ್ತಾರೆ. ಮನೆ ನಿರ್ಮಾಣ ಮಾಡಿ ಪ್ರವೇಶ ಪಡೆಯುವವರೆಗೂ ಲಕ್ಷಾಂತರ ರೂ. ವೆಚ್ಚ ಆಗಿರುತ್ತದೆ. ಇಂಥದರಲ್ಲಿ ಸೋಲಾರ ಪ್ಯಾನಲ್‌ ಅಳವಡಿಸಲು ಲಕ್ಷಾಂತರ ರೂ. ಖರ್ಚು ಮಾಡುವುದು ಕಷ್ಟಕರ. ಹೀಗಾಗಿ ಇದ್ದಿದ್ದರಲ್ಲಿಯೇ ಹೆಸ್ಕಾಂ ವಿದ್ಯುತ್‌ ಅನ್ನೇ ಅಳವಡಿಸಲು ಆಸಕ್ತಿ ತೋರುತ್ತಿರುತ್ತಾರೆ.

ಭವಿಷ್ಯದ ದೃಷ್ಟಿಯಿಂದ ಸೋಲಾರ್‌ ಅಳವಡಿಸಬೇಕೆಂಬುದು ಪ್ರತಿಯೊಬ್ಬರಿಗೂ ಆಗದ ಮಾತು. ಈಗಾಗಲೇ ಲಕ್ಷಾಂತರ ರೂ. ಖರ್ಚು ಮಾಡಿದವರಿಗೆ ಮತ್ತೆ ಖರ್ಚು ಮಾಡಲು ಆಗುವುದಿಲ್ಲ. ಹೀಗಾಗಿ ಗ್ರಾಹಕರು ಸೋಲಾರ್‌ ಬಳಕೆಗೆ ಆಸಕ್ತಿ ತೋರದೇ ಹೆಸ್ಕಾಂ ವಿದ್ಯುತ್‌ ಸಂಪರ್ಕ ಪಡೆಯುವುದು ಸಹಜವಾಗಿದೆ. ಸೋಲಾರ್‌ ಪ್ಯಾನಲ್‌ ಅಳವಡಿಸಿಕೊಂಡ ಗ್ರಾಹಕರು ಈ ಮೊದಲು ಒಪ್ಪಂದ ಮಾಡಿಕೊಂಡಂತೆ ಪ್ರತಿ ಯೂನಿಟ್‌ಗೆ 11, 9, 8, 7 ರೂ. ಗೆ ವಿದ್ಯುತ್‌ ಮಾರಾಟ ಮಾಡುತ್ತಿದ್ದಾರೆ. ಈಗ ಸದ್ಯ ಯಾರಾದರೂ ಸೋಲಾರ್‌ ಪ್ಯಾನಲ್‌ ಅಳವಡಿಸಿಕೊಂಡು ವಿದ್ಯುತ್‌ ಮಾರಾಟ ಮಾಡುವುದಾದರೆ ಪ್ರತಿ ಯೂನಿಟ್‌ ಗೆ 3.99 ರೂ. ದರ ಇದೆ. ಇನ್ನು ಈ ಬಗ್ಗೆ ಹೆಸ್ಕಾಂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಸೌರ್‌ ವಿದ್ಯುತ್‌ ಜೋಡಿಸಿಕೊಂಡರೆ ಪ್ರತಿ ಯೂನಿಟ್‌ನಲ್ಲಿ 50 ಪೈಸೆ ವಿದ್ಯುತ್‌ ಬಿಲ್‌ ನಲ್ಲಿ ರಿಯಾಯಿತಿ ಕೂಡ ಇದೆ. ಇಷ್ಟೊಂದು ಸೌಲಭ್ಯ ನೀಡಿದರೂ ಜನ ಇತ್ತ ಮನಸ್ಸು ಮಾಡುತ್ತಿಲ್ಲ.

ನಿತ್ಯ 140 ಮೆ.ವ್ಯಾ. ಅಗತ್ಯ: ಬೆಳಗಾವಿ ನಗರಕ್ಕೆ ಪ್ರತಿನಿತ್ಯ 140 ಮೆಗಾ ವ್ಯಾಟ್‌ ವಿದ್ಯುತ್‌ ಅವಶ್ಯಕತೆ ಇದೆ. ಇದರಲ್ಲಿ 60 ಮೆಗಾ ವ್ಯಾಟ್‌ ವಿದ್ಯುತ್‌ ಕೈಗಾರಿಕೆಗಳಿಗೆ ಬಳಕೆ ಆಗುತ್ತಿದೆ. ಬೇಸಿಗೆ ಕಾಲದಲ್ಲಿ ಇದರ ಪ್ರಮಾಣ 160 ಮೆಗಾ ವ್ಯಾಟ್‌ವರೆಗೆ ಹೆಚ್ಚಾಗುತ್ತ ಹೋಗುತ್ತದೆ. ದಿನದಿನಕ್ಕೂ ವಿದ್ಯುತ್‌ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಹೆಸ್ಕಾಂಗೆ ತಲೆ ನೋವಾಗಿ ಪರಿಣಮಿಸಿದ್ದು, ಹೀಗಾಗಿ ಸೋಲಾರ್‌ ವಿದ್ಯುತ್‌ ಬಳಸುವಂತೆ ಗ್ರಾಹಕರಲ್ಲಿ ಮನವಿ ಮಾಡುತ್ತಿದೆ.

140 ಮೆಗಾ ವ್ಯಾಟ್‌ ವಿದ್ಯುತ್‌ ಅಗತ್ಯ ಇರುವುದರಿಂದ ಇಷ್ಟೊಂದು ವಿದ್ಯುತ್‌ನ್ನು ಹೆಸ್ಕಾಂ ಬೇರೆ-ಬೇರೆ ಮೂಲಗಳಿಂದ ಪಡೆದುಕೊಳ್ಳುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ, ಸಕ್ಕರೆ ಕಾರ್ಖಾನೆಗಳು, ಕೈಗಾ ಅಣುಸ್ಥಾವರ, ಪವನ ಶಕ್ತಿಗಳು ಹೀಗೆ ವಿವಿಧ ಮೂಲಗಳಿಂದ ಪಡೆದುಕೊಂಡು ನಗರ ಹಾಗೂ ಜಿಲ್ಲೆಗೆ ಪೂರೈಸುತ್ತಿದೆ. ಪವನ ಶಕ್ತಿ ಕಡೆಯಿಂದ ನಿತ್ಯ 24.08 ಮೆಗಾ ವ್ಯಾಟ್‌ ವಿದ್ಯುತ್‌ ಪೂರೈಕೆ ಆಗುತ್ತಿದೆ. ರಾಯಬಾಗ, ಚಿಕ್ಕೋಡಿ, ಅಥಣಿ, ಸವದತ್ತಿ, ಬೆಳಗಾವಿ ತಾಲೂಕು ಸೇರಿದಂತೆ ವಿವಿಧ ಕಡೆಗಳಲ್ಲಿ ಪವನ ಶಕ್ತಿ ಟಾವರ್‌ಗಳನ್ನು ಅಳವಡಿಸಲಾಗಿದೆ. ವಿವಿಧ ಖಾಸಗಿ ಸಂಸ್ಥೆಯವರು ಹೆಸ್ಕಾಂಗೆ ವಿದ್ಯುತ್‌ ಪೂರೈಸುತ್ತಿವೆ. ಜತೆಗೆ ಖಾಸಗಿ ಕಂಪನಿಯವರು ವಿಶಾಲ ಪ್ರದೇಶಗಳಲ್ಲಿ ಸೋಲಾರ್‌ ಪ್ಲ್ಯಾಂಟ್‌ಗಳನ್ನು ಮಾಡಿ ವಿದ್ಯುತ್‌ ಮಾರಾಟ ಮಾಡುವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ.

ಬೆಳಗಾವಿ ನಗರ ಹಾಗೂ ಜಿಲ್ಲಾದ್ಯಂತ ಸೋಲಾರ್‌ ವಿದ್ಯುತ್‌ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯ 387 ಗ್ರಾಹಕರು ಸೌರ ವಿದ್ಯುತ್‌ ಬಳಸಿಕೊಂಡು ಹೆಸ್ಕಾಂಗೆ ಮಾರಾಟ ಮಾಡುತ್ತಿದ್ದಾರೆ. ನಗರದಲ್ಲಿಯೂ ಗ್ರಾಹಕರ ಸಂಖ್ಯೆ 152 ಇದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೋಲಾರ್‌ ವಿದ್ಯುತ್‌ ಬಳಸುವಂತೆ ಗ್ರಾಹಕರಲ್ಲಿ ಮನವಿ ಮಾಡಲಾಗುತ್ತಿದೆ. -ಗಿರಿಧರ ಕುಲಕರ್ಣಿ, ಅಧೀಕ್ಷಕ ಅಭಿಯಂತರರು, ಹೆಸ್ಕಾಂ

-ಭೈರೋಬಾ ಕಾಂಬಳೆ

ಟಾಪ್ ನ್ಯೂಸ್

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.