ಪ್ರತ್ಯೇಕ ವಾಸದ ನಿಯಮ ಮೀರಿದ ಮೇರಿ ಕಾಮ್
Team Udayavani, Mar 21, 2020, 10:36 PM IST
ಹೊಸದಿಲ್ಲಿ: 14 ದಿನಗಳ ಕಾಲ ಮನೆಯಲ್ಲೇ ಪ್ರತ್ಯೇಕವಾಗಿರಬೇಕೆಂದು ಸೂಚಿಸಲಾಗಿದ್ದರೂ, ರಾಜ್ಯಸಭಾ ಸದಸ್ಯೆ, ಬಾಕ್ಸರ್ ಮೇರಿ ಕೋಮ್ ಆ ನಿಯಮ ಮುರಿದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜೋರ್ಡಾನ್ನ ಅಮ್ಮಾನ್ನಲ್ಲಿ ನಡೆದಿದ್ದ ಒಲಿಂಪಿಕ್ಸ್ ಅರ್ಹತಾ ಬಾಕ್ಸಿಂಗ್ನಲ್ಲಿ ಭಾಗವಹಿಸಿದ ಅವರು ಮಾ. 13ರಂದು ಭಾರತಕ್ಕೆ ಮರಳಿದ್ದರು. ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದಂತೆ ಅವರು ಪ್ರತ್ಯೇಕವಾಗಿದ್ದರು. ಆದರೆ ಮಾ.18ರಂದು ರಾಷ್ಟ್ರಪತಿಗಳು ಉತ್ತರಪ್ರದೇಶ ಹಾಗೂ ರಾಜಸ್ಥಾನದಿಂದ ಆಯ್ಕೆಯಾದ ಸದಸ್ಯರಿಗೆ ನೀಡಿದ್ದ ಔತಣಕೂಟಕ್ಕೆ ಹಾಜರಾಗಿದ್ದರು. ಇದು ರಾಷ್ಟ್ರಪತಿಗಳ ಟ್ವೀಟರ್ ಖಾತೆಯ ಚಿತ್ರದ ಮೂಲಕ ಬಹಿರಂಗಗೊಂಡಿದೆ!
ಅದೇ ದಿನ ಬಿಜೆಪಿ ನಾಯಕ ದುಶ್ಯಂತ್ ಸಿಂಗ್ ಕೂಡ ರಾಷ್ಟ್ರಪತಿ ಭವನದಲ್ಲಿದ್ದರು. ದುಶ್ಯಂತ್, ಸೋಂಕಿತೆ ಕನಿಕಾ ಕಪೂರ್ ಅವರನ್ನು ಸಂಪರ್ಕಿಸಿದ್ದರು ಎನ್ನುವುದನ್ನು ಗಮನಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ