ಕಾಸರಗೋಡು: ಸೋಮವಾರ 19 ಮಂದಿಗೆ ಸೋಂಕು ದೃಢ
Team Udayavani, Mar 24, 2020, 6:45 AM IST
ಕಾಸರಗೋಡು: ಕೋವಿಡ್ 19 ಸೋಂಕು ಕೇರಳಾದ್ಯಂತ ಮಿಂಚಿ ನಂತೆ ಹರಡುತ್ತಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 19 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಬಾಧಿತರ ಒಟ್ಟು ಸಂಖ್ಯೆ 38ಕ್ಕೇರಿದೆ.
ಕೇರಳ ರಾಜ್ಯದಲ್ಲಿ ಸೋಮವಾರ ಒಟ್ಟು 28 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ರೋಗ ಪೀಡಿತರ ಸಂಖ್ಯೆ 91ಕ್ಕೆ ಏರಿದೆ. ನಾಲ್ವರು ರೋಗ ಮುಕ್ತರಾಗಿದ್ದಾರೆ. 64,320 ಮಂದಿ ನಿಗಾದಲ್ಲಿದ್ದಾರೆ.
ಕೇರಳದಲ್ಲಿಯೂ ಮಾ. 31ರ ವರೆಗೆ ಲಾಕ್ಡೌನ್ ಘೋಷಿಸಲಾಗಿದ್ದು, ಸಾರಿಗೆಯನ್ನು ಸಂಪೂರ್ಣವಾಗಿ ನಿಲುಗಡೆ ಗೊಳಿಸಲಾಗಿದೆ.
ರಾಜ್ಯದ ಎಲ್ಲ ಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗುವುದು. ಲಾಕ್ಡೌನ್ ಘೋಷಿಸಿರುವುದರಿಂದಾಗಿ ಯಾರೂ ಮನೆಯಿಂದ ಹೊರಗಿಳಿಯಬಾರದು. ಆವಶ್ಯಕತ ಸೇವೆಗಳಿಗೆ ವಿನಾಯಿತಿ ಇರಲಿದೆ.
ಹೊಟೇಲ್ಗಳಲ್ಲಿ ಕುಳಿತು ಆಹಾರ ಸೇವನೆ ನಿಷೇಧಿಸಲಾಗಿದೆ. ಅಗತ್ಯವಿದ್ದಲ್ಲಿ ಹೋಮ್ ಡೆಲಿವರಿ ಕಲ್ಪಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜಧಾನಿ ತಿರುವನಂತಪುರದಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್
Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ
ಕಳ್ಳರು & ದರೋಡೆಕೋರರ ಗ್ಯಾಂಗ್ ಚುಚ್ಚಿದ್ದ ವಿಷಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಮೃತ್ಯು
Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ
Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್ ಉತ್ಸುಕವಾಗಿದೆ: ಪ್ರಧಾನಿ ಮೋದಿ