ಮಾಗಡಿ ಕೋವಿಡ್ 19 ಶಂಕಿತರ ರಕ್ತ ಪರೀಕ್ಷೆ : ವರದಿ ನೆಗೆಟೀವ್
Team Udayavani, Apr 9, 2020, 5:59 PM IST
ಮಾಗಡಿ: ದೆಹಲಿಯಿಂದ ಮಾಗಡಿಗೆ ಬಂದಿದ್ದ ಇಬ್ಬರನ್ನು 8 ದಿನಗಳವರೆಗೆ ಕ್ವಾರಂಟೈನ್ನಲ್ಲಿಟ್ಟು, ರಕ್ತ ಮಾದರಿ ಪರೀಕ್ಷೆ ಮಾಡಿಸಿದ್ದು, ವರದಿಯಲ್ಲಿ ನೆಗಟಿವ್ ಬಂದಿದ್ದು, ಇಬ್ಬರನ್ನು ಪ್ರಮಾಣ ಪತ್ರ ನೀಡಿ, ಬಿಡುಗಡೆಗೊಳಿಸಲಾಗಿದೆ ಎಂದು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸತೀಶ್ ತಿಳಿಸಿದರು.
ತಾಲೂಕಿನ ಹುಲಿಕಟ್ಟೆ ಕಿತ್ತೂರು ರಾಣಿ ಚೆನ್ನಮ್ಮ ಕ್ವಾರಂಟೈನ್ನಲ್ಲಿ ಕೋವಿಡ್ 19 ಸೋಂಕಿತ ಶಂಕೆ ಹಿನ್ನೆಲೆಯಲ್ಲಿ ದೆಹಲಿಯಿಂದ ಬಂದಿದ್ದ ಇಬ್ಬರು ವ್ಯಕ್ತಿಗಳನ್ನು 8 ದಿನಗಳವರೆಗೆ ಕ್ವಾರಂಟೈನ್ನಲ್ಲಿ ನಿಗಾ ಇರಿಸಲಾಗಿತ್ತು. ಅವರಿಂದ ರಕ್ತದ ಮಾದರಿಯನ್ನು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿತ್ತು. ಬುಧವಾರ ಅವರ ರಕ್ತದ ಮಾದರಿ ಪರೀಕ್ಷೆಯ ಮಾದರಿಯಲ್ಲಿ ಕೋವಿಡ್ 19 ವೈರಸ್ ಸೋಂಕು ನೆಗೆಟೀವ್ ಬಂದಿದ್ದು, ಅವರಿಗೆ ಬಗ್ಗೆ ಪ್ರಮಾಣ ಪತ್ರ ನೀಡಿ, ಅವರನ್ನು ಕುಟುಂಬದವರ ಸದಸ್ಯರೊಂದಿಗೆ ಮನೆಗೆ ವಾಪಸ್ ಕಳಿಸಿದ್ದಾಗಿ ವಿವರಿಸಿದರು.ತಾ. ಆರೋಗ್ಯ ಶಿಕ್ಷಣಾಧಿಕಾರಿ ರಂಗನಾಥ್, ತಾ. ಆರೋಗ್ಯ ಸಹಾಯಕ ತುಕಾರಾಂ, ರಾಜಣ್ಣ, ರಾಜೇಂದ್ರ, ಪದ್ಮಾ, ಪೊಲೀಸರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು