ಉಡುಪಿ ಜಿಲ್ಲೆ : ಸಹಜ ಸ್ಥಿತಿಯತ್ತ ಜನಜೀವನ

ಬೆಳಗ್ಗೆ 7ರಿಂದ 11ರ ವರೆಗೆ ಅನುಮತಿ ಇರುವ ಅಂಗಡಿಗಳು ಕಾರ್ಯಾಚರಣೆ

Team Udayavani, Apr 28, 2020, 5:17 AM IST

ಉಡುಪಿ ಜಿಲ್ಲೆ : ಸಹಜ ಸ್ಥಿತಿಯತ್ತ ಜನಜೀವನ

ಸಾಂದರ್ಭಿಕ ಚಿತ್ರ.

ಉಡುಪಿ: ಉಡುಪಿ ಜಿಲ್ಲೆಯು ಹಸುರು ವಲಯ ಎಂದು ಘೋಷಣೆಯಾಗುವ ಮೊದಲೇ ಸೋಮವಾರ ಬೆಳಗ್ಗೆ ಪೇಟೆಯಲ್ಲಿ ಎಂದಿನಂತೆ ಜನಸಂದಣಿ ಕಂಡುಬಂತು. ಬಸ್‌ಗಳ ಸಂಚಾರ ಮಾತ್ರ ಇರಲಿಲ್ಲ.

ಬೆಳಗ್ಗೆ 7ರಿಂದ 11ರ ವರೆಗೆ ಅನುಮತಿ
ಇರುವ ಅಂಗಡಿಗಳು ಕಾರ್ಯಾ ಚರಿಸುತ್ತಿವೆ. ಪಕ್ಕದ ದ.ಕ. ಜಿಲ್ಲೆಯಲ್ಲಿ ಕೋವಿಡ್‌-19 ಪ್ರಕರಣಗಳು ದಿನೇ ದಿನೆ ಏರುತ್ತಿದೆ. ಈ ನಡುವೆ ಉಡುಪಿ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಇಲ್ಲ ಒಮ್ಮೆಲೇ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಿದರೆ ಮತ್ತೆ ಪ್ರಕರಣಗಳು ಉದ್ಭವವಾದರೆ ಯಾರು ಹೊಣೆ ಎಂಬ ಪ್ರಶ್ನೆ ಈಗ ಜಿಲ್ಲೆಯಲ್ಲಿ ಕೇಳಿಬರುತ್ತಿದೆ.

ಬೆಳ್ಳಂಬೆಳಗ್ಗೆ
ವಾಹನಗಳ ದಟ್ಟಣೆ
ಜಿಲ್ಲೆಯಲ್ಲಿ ಕೋವಿಡ್‌-19 ಪ್ರಕರಣ ಗಳು ಇರುವ ಸಂದರ್ಭದಲ್ಲಿಯೂ ಜನರು ಅಗತ್ಯ ವಸ್ತುಗಳ ಖರೀದಿಗೆಂದು ರಸ್ತೆಗಿಳಿಯುತ್ತಿದ್ದರು. ಈಗ ಆ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದೆ. ಅಂಗಡಿಗಳೆಲ್ಲ ತೆರೆದು ವ್ಯಾಪಾರ ನಡೆಸುತ್ತಿದೆ. ಸಾಮಾಜಿಕ ಅಂತರಗಳೂ ಪಾಲನೆಯಾಗುತ್ತಿಲ್ಲ. ಈ ನಡುವೆ ಕೆಲವೆಡೆ ಆಟೋ ರಿಕ್ಷಾಗಳು ಕೂಡ ರಸ್ತೆಗಿಳಿದಿವೆ. ತುರ್ತು ವೈದ್ಯಕೀಯ ಕಾರಣಗಳಿದ್ದರೆ ರೋಗಿಗಳನ್ನು ಆಟೋಗಳಲ್ಲಿ ಸಾಗಿಸಬಹುದಾಗಿದೆ. ಆದರೆ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಹೋಗುವ ಆಟೋರಿಕ್ಷಾಗಳನ್ನು ಪೊಲೀಸರು ವಿಚಾರಿಸುತ್ತಿದ್ದಾರೆ.

ಕೆಲವು ಬಂದ್‌… ಹಲವು ಓಪನ್‌
ಚಿತ್ರಮಂದಿರಗಳು, ಮದ್ಯದಂಗಡಿಗಳು, ಕ್ಷೌರದಂಗಡಿಗಳು, ಜುವೆಲರಿ ಶಾಪ್‌ ಗಳು, ಹೊಟೇಲ್‌, ರೆಸ್ಟೋರೆಂಟ್‌ಗಳು ಸಹಿತ ಕೆಲವು ಉದ್ದಿಮೆಗಳು ನಡೆಯುತ್ತಿಲ್ಲ. ಅಗತ್ಯ ವಸ್ತುಗಳ ಅಂಗಡಿಗಳು ಬೆಳಗ್ಗೆ 7ರಿಂದ 11ರ ವರೆಗೆ ವ್ಯಾಪಾರ ನಡೆಸಬೇಕೆಂದಿದ್ದರೂ ಕೆಲವರು ಮಾತ್ರ 11ರ ಅನಂತರವೂ ವ್ಯಾಪಾರ ನಡೆಸುತ್ತಿದ್ದಾರೆ. ಇಂತಹವರಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ.

ಬೇಕಿದೆ ಸ್ವಯಂ ಜಾಗೃತಿ
ಜಿಲ್ಲೆಯಲ್ಲಿ ಯಾವುದೇ ಕೋವಿಡ್‌ -19 ಪ್ರಕರಣ ಇಲ್ಲ ಎಂದು ಅನಾವಶ್ಯಕವಾಗಿ ಓಡಾಡುವ ಮುನ್ನ ನಾಗರಿಕರು ಸಾಕಷ್ಟು ಬಾರಿ ಯೋಚಿಸಿಕೊಳ್ಳಬೇಕಾಗುತ್ತದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು. ಹೊರಗೆ ಹೋಗುವ ಸಂದರ್ಭ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಹೇಳಿದರೂ ಇದನ್ನು ಪಾಲಿಸದಿರುವುದು ಕಂಡುಬರುತ್ತಿದೆ. ಅಪಾಯ ಬಂದ ಬಳಿಕ ಎಚ್ಚರಗೊಳ್ಳುವುದಕ್ಕಿಂತ ಮೊದಲೇ ಜಾಗೃತೆ ವಹಿಸುವುದು ಉತ್ತಮ.

ಹೊರಜಿಲ್ಲೆಗಳಿಂದ ಆಗಮಿಸುವವರಿಗೆ ಕ್ವಾರಂಟೈನ್‌
ಜಿಲ್ಲೆಯ ಹೊರಗೆ ತೆರಳಲು‌ ಹಾಗೂ ಜಿಲ್ಲೆಯೊಳಗೆ ವಿನಾ ಕಾರಣ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ತುರ್ತು ಕೆಲಸಕ್ಕೆ ತೆರಳುವವರು ಜಿಲ್ಲಾಡಳಿತದ ಅನುಮತಿ ಪಡೆದರೆ ಅಗತ್ಯವಿದ್ದರೆ ಮಾತ್ರ ಪಾಸ್‌ಗಳನ್ನು ಒದಗಿಸಲಾಗುವುದು. ಹೊರಜಿಲ್ಲೆಯಿಂದ ಬರುವವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ.
-ಸದಾಶಿವ ಪ್ರಭು,
ಅಪರ ಜಿಲ್ಲಾಧಿಕಾರಿಗಳು, ಉಡುಪಿ.

ಟಾಪ್ ನ್ಯೂಸ್

ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ… ಬಸ್ ಸಿಬಂದಿ, ವೈದ್ಯರ ಸ್ಪಂದನೆಗೆ ಮೆಚ್ಚುಗೆ

ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ… ಬಸ್ ಸಿಬಂದಿ, ವೈದ್ಯರ ಕಾರ್ಯಕ್ಕೆ ಮೆಚ್ಚುಗೆ

Jagannath Festival: ಪುರಿಯ ಜಗನ್ನಾಥ ಉತ್ಸವದ ವೇಳೆ ಪಟಾಕಿ ಸ್ಫೋಟಗೊಂಡು 15 ಮಂದಿಗೆ ಗಾಯ

Jagannath Festival: ಪುರಿಯ ಜಗನ್ನಾಥ ಉತ್ಸವದ ವೇಳೆ ಪಟಾಕಿ ಸ್ಫೋಟಗೊಂಡು 15 ಮಂದಿಗೆ ಗಾಯ

Code of Conduct: ಮೋದಿ ಧ್ಯಾನ ನೀತಿ ಸಂಹಿತೆ ಉಲ್ಲಂಘನೆ: ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್

Code of Conduct: ಮೋದಿ ಧ್ಯಾನ ನೀತಿ ಸಂಹಿತೆ ಉಲ್ಲಂಘನೆ: ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್

Lok Sabha Election: ಜೂನ್‌ 1ಕ್ಕೆ ಕೊನೆಯ ಹಂತ: ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ

Lok Sabha Election: ಜೂನ್‌ 1ಕ್ಕೆ ಕೊನೆಯ ಹಂತ: ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ

8ರಿಂದ 10ನೇ ತರಗತಿಗೆ ತೆರೆದ ಪುಸ್ತಕ ಪರೀಕ್ಷೆ! ರಾಜ್ಯ ಸರಕಾರದಿಂದ ವಿನೂತನ ಪ್ರಯೋಗ  

8ರಿಂದ 10ನೇ ತರಗತಿಗೆ ತೆರೆದ ಪುಸ್ತಕ ಪರೀಕ್ಷೆ! ರಾಜ್ಯ ಸರಕಾರದಿಂದ ವಿನೂತನ ಪ್ರಯೋಗ  

ದಕ್ಷಿಣ ಕೊರಿಯ ಮೇಲೆ ಗಲೀಜು ತುಂಬಿದ ಬಲೂನ್‌ ಹಾರಿಸಿದ ಉ.ಕೊರಿಯ

ದಕ್ಷಿಣ ಕೊರಿಯ ಮೇಲೆ ಗಲೀಜು ತುಂಬಿದ ಬಲೂನ್‌ ಹಾರಿಸಿದ ಉ.ಕೊರಿಯ

Arvind Kejriwal ಕಾಂಗ್ರೆಸ್‌ ಜತೆಗಿನ ಮೈತ್ರಿ ತಾತ್ಕಾಲಿಕ: ಕೇಜ್ರಿವಾಲ್‌

Arvind Kejriwal ಕಾಂಗ್ರೆಸ್‌ ಜತೆಗಿನ ಮೈತ್ರಿ ತಾತ್ಕಾಲಿಕ: ಕೇಜ್ರಿವಾಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kapu 15 ಎಕ್ರೆಯ ಕಟ್ಟಿಂಗೇರಿ ಕೆರೆಯೀಗ ಬಟಾಬಯಲು!

Kapu 15 ಎಕ್ರೆಯ ಕಟ್ಟಿಂಗೇರಿ ಕೆರೆಯೀಗ ಬಟಾಬಯಲು!

Manipal: ಕೆಎಂಸಿ ಆಸ್ಪತ್ರೆಗೆ ಮತ್ತೊಂದು ಮನ್ನಣೆ

Manipal: ಕೆಎಂಸಿ ಆಸ್ಪತ್ರೆಗೆ ಮತ್ತೊಂದು ಮನ್ನಣೆ

ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ದುಡಿಯುವೆ: ರಘುಪತಿ ಭಟ್‌

ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ದುಡಿಯುವೆ: ರಘುಪತಿ ಭಟ್‌

Missing Case ಹಲುವಳ್ಳಿ: ಮಹಿಳೆ ನಾಪತ್ತೆ

Missing Case ಹಲುವಳ್ಳಿ: ಮಹಿಳೆ ನಾಪತ್ತೆ

Malpe ಕೆಳಾರ್ಕಳಬೆಟ್ಟು: ಚಿನ್ನ ಕಳವು, ದೂರು ದಾಖಲು

Malpe ಕೆಳಾರ್ಕಳಬೆಟ್ಟು: ಚಿನ್ನ ಕಳವು, ದೂರು ದಾಖಲು

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ… ಬಸ್ ಸಿಬಂದಿ, ವೈದ್ಯರ ಸ್ಪಂದನೆಗೆ ಮೆಚ್ಚುಗೆ

ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ… ಬಸ್ ಸಿಬಂದಿ, ವೈದ್ಯರ ಕಾರ್ಯಕ್ಕೆ ಮೆಚ್ಚುಗೆ

Jagannath Festival: ಪುರಿಯ ಜಗನ್ನಾಥ ಉತ್ಸವದ ವೇಳೆ ಪಟಾಕಿ ಸ್ಫೋಟಗೊಂಡು 15 ಮಂದಿಗೆ ಗಾಯ

Jagannath Festival: ಪುರಿಯ ಜಗನ್ನಾಥ ಉತ್ಸವದ ವೇಳೆ ಪಟಾಕಿ ಸ್ಫೋಟಗೊಂಡು 15 ಮಂದಿಗೆ ಗಾಯ

Code of Conduct: ಮೋದಿ ಧ್ಯಾನ ನೀತಿ ಸಂಹಿತೆ ಉಲ್ಲಂಘನೆ: ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್

Code of Conduct: ಮೋದಿ ಧ್ಯಾನ ನೀತಿ ಸಂಹಿತೆ ಉಲ್ಲಂಘನೆ: ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್

Lok Sabha Election: ಜೂನ್‌ 1ಕ್ಕೆ ಕೊನೆಯ ಹಂತ: ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ

Lok Sabha Election: ಜೂನ್‌ 1ಕ್ಕೆ ಕೊನೆಯ ಹಂತ: ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ

8ರಿಂದ 10ನೇ ತರಗತಿಗೆ ತೆರೆದ ಪುಸ್ತಕ ಪರೀಕ್ಷೆ! ರಾಜ್ಯ ಸರಕಾರದಿಂದ ವಿನೂತನ ಪ್ರಯೋಗ  

8ರಿಂದ 10ನೇ ತರಗತಿಗೆ ತೆರೆದ ಪುಸ್ತಕ ಪರೀಕ್ಷೆ! ರಾಜ್ಯ ಸರಕಾರದಿಂದ ವಿನೂತನ ಪ್ರಯೋಗ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.