ಕೋವಿಡ್ ಕಾವಳದ ಜಗದಗಲದ ಚಿತ್ರಾವಳಿ
ಮೆಕ್ಸಿಕೋ ಸಿಟಿ: ಇಲ್ಲಿನ ಅತೀ ದೊಡ್ಡ ಶ್ಮಶಾನಕ್ಕೆ ಕೋವಿಡ್ ಹಿನ್ನೆಲೆಯಲ್ಲಿ ಪ್ರವೇಶ ನಿರಾಕರಿಸಲಾಗಿದೆ.
ಜಲಂಧರ್: ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಮರೆತು ಖರೀದಿಗೆ ಮುಗಿಬಿದ್ದ ಜನತೆ.
ಬಾರ್ಸಿಲೋನಾ: ಚರ್ಚ್ವೊಂದರಲ್ಲಿ ಸಾಮಾಜಿಕ ಅಂತರ ಪಾಲಿಸಿ, ಮಾಸ್ಕ್ ಧರಿಸಿ ಪ್ರಾರ್ಥನೆ ಸಲ್ಲಿಸಿದರು.
ಬೆಂಗಳೂರು: ವಂದೇ ಭಾರತ್ ಮಿಷನ್ ಮೂಲಕ ಬಂದವರ ತಪಾಸಣೆಗಾಗಿ ಸಿದ್ಧವಾಗಿರುವ ರಕ್ಷಣಾ ಸಿಬಂದಿ.
ಲಾಹೋರ್: ಲಾಕ್ಡೌನ್ ಸಡಿಲಿಕೆಯಾದ ಬಳಿಕ ರಮ್ಜಾನ್ ಖರೀದಿಯಲ್ಲಿ ತೊಡಗಿರುವ ಜನರು.
ಮುಂಬಯಿ: ಫಿಲಿಪೈನ್ಸ್ನ ಮನಿಲಾದಿಂದ ಸೋಮವಾರ ಆಗಮಿಸಿದ ಭಾರತೀಯರು.
ಸೋನಿತ್ ಪುರ: ಬಿಹಾರದಲ್ಲಿ ಸಿಕ್ಕಿಕೊಂಡ ವಲಸಿಗರ ಸ್ಕ್ರೀನಿಂಗ್ಗಾಗಿ ಸರದಿ ಸಾಲಿನಲ್ಲಿ ನಿಂತ ಜನರು.
ಹೊಸದಿಲ್ಲಿ: ರೈಲು ಸೇವೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರೈಲ್ವೇ ನೌಕರರು ಡ್ರಿಲ್ನಲ್ಲಿ ಭಾಗವಹಿಸಿದರು.
ಹೊಸದಿಲ್ಲಿ: ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ 19 ಸೋಂಕಿಗೆ ಒಳಗಾದ ರೋಗಿಯ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸುತ್ತಿರುವ ವೈಧ್ಯರು.
ಭುವನೇಶ್ವರ: ಸಾಮಾಜಿಕ ಅಂತರ ಕಾಪಾಡಿಕೊಂಡು ಇಲ್ಲಿನ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುತ್ತಿರುವ ಜನರು.
ಹೊಸದಿಲ್ಲಿ: ಸೈಕಲ್ ರಿಕ್ಷಾದಲ್ಲಿ ಹೊರಟ ಕಾರ್ಮಿಕ ಕುಟುಂಬವನ್ನು ತಡೆದ ಪೊಲೀಸ್ ಸಿಬಂದಿ.
ಮುಂಬಯಿ: ರಾತ್ರಿ ವೇಳೆಯಲ್ಲಿ ತಮ್ಮ ಊರಿಗೆ ತೆರಳುತ್ತಿರುವ ಕಾರ್ಮಿಕರು.
ಇಸ್ತಾಂಬುಲ್: ಶವಾಗಾರದಲ್ಲಿ ಸೋಂಕು ನಿವಾರಕ ಸಿಂಪಡಿಸುತ್ತಿರುವುದು.
ಪ್ಯಾರಿಸ್: ಇಲ್ಲಿ ಕಡ್ಡಾಯ ಮಾಸ್ಕ್ ನಿಯಮವಿದ್ದು ಸೆಂಟ್ ಲಾಜಾರೆ ರೈಲು ನಿಲ್ದಾಣದಲ್ಲಿ ಮಾಸ್ಕ್ ಧರಿಸಿದ ಜನರು.
ಉತ್ತರ ಪ್ರದೇಶದ ಗೋರಖ್ ಪುರದಿಂದ ತಮ್ಮ ಊರುಗಳಿಗೆ ಟ್ರಕ್ನಲ್ಲಿ ತೆರಳುತ್ತಿರುವ ಕಾರ್ಮಿಕರು.
ಗುಹಾವಟಿ: ವಾಹನಗಳ ಮೇಲೆ ಸೋಂಕು ನಿವಾರಕ ಸಿಂಪಡಿಸುತ್ತಿರುವ ಪೌರ ಕಾರ್ಮಿಕರು.
ಲಕ್ನೋ: ಸ್ವಯಂಸೇವಕರು ವಿತರಿಸಿದ ಆಹಾರವನ್ನು ರಸ್ತೆಯಲ್ಲೇ ಸೇವಿಸುತ್ತಿರುವ ವಲಸೆ ಕಾರ್ಮಿಕರು.
ಜಲಂಧರ್: ಉತ್ತರ ಪ್ರದೇಶಕ್ಕೆ ರೈಲಿನಲ್ಲಿ ಪ್ರಯಾಣಿಸಲು ಕಾಯುತ್ತಿರುವ ಕಾರ್ಮಿಕರು.
ಆಫ್ರಿಕದಲ್ಲಿ ಕೊರೊನಾ ಹೇರ್ಸ್ಟೈಲ್ ಟ್ರೆಂಡ್
ಜಲಂಧರ್ : ಉತ್ತರ ಪ್ರದೇಶಕ್ಕೆ ರೈಲು ಮೂಲಕ ತೆರಳಲು ಸಾಲಿನಲ್ಲಿ ನಿಂತಿರುವ ಕಾರ್ಮಿಕರು.
ಸುಲ್ತಾನ್ಪುರ: ರೈಲಿನಲ್ಲಿ ಪ್ರಯಾಣಿಸಲು ಆಗಮಿಸಿದ ಕಾರ್ಮಿಕರ ತಾಪಮಾನ ಪರೀಕ್ಷಿಸುತ್ತಿರುವುದು.
ಕೋವಿಡ್ ಮರಣ ತಾಂಡವಕ್ಕೆ ಜಗತ್ತು ತತ್ತರಿಸಿ ಹೋಗಿದೆ. ಈ ಸಂದರ್ಭದಲ್ಲಿ ಜಗತ್ತಿನಾದ್ಯಂತ ಕಂಡು ಬಂದ ಕೆಲವೊಂದು ಚಿತ್ರಗಳು ಇಲ್ಲಿದೆ.