ವಿಮಾನ ನಿಲ್ಲಿಸಿದ್ದರೆ ಕಷ್ಟದ ದಿನ ಬರುತ್ತಿರಲಿಲ್ಲ


Team Udayavani, May 24, 2020, 6:06 AM IST

vimana

ಕುದೂರು: ಭಾರತದಲ್ಲಿ ಕೋವಿಡ್‌ 19 ವ್ಯಾಪಕವಾಗಿ ಹರಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪ ಕಾರಣ. ಶೀಘ್ರ ವಿಮಾನ ಹಾರಾಟ ನಿಲ್ಲಿಸಿದ್ದರೆ ದೇಶಕ್ಕೆ ಇಷ್ಟು ಕಷ್ಟದ ದಿನಗಳು ಬರುತ್ತಿರಲಿಲ್ಲ ಎಂದು  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಬಗ್ಗೆ ವಾಗ್ಧಾಳಿ ನಡೆಸಿದರು.  ಶ್ರೀರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್‌ ನಿಂದ ರಂಜಾನ್‌ ಹಬ್ಬದ ಪ್ರಯುಕ್ತ ಮುಸ್ಲಿಮ ರಿಗೆ ದಿನಸಿ ಕಿಟ್‌ ವಿತರಿಸಿ ಮಾತನಾಡಿದರು.

ರಾಜ್ಯದಲ್ಲಿ ಕೋವಿಡ್‌ 19 ನಿಯಂತ್ರಣ  ದಲ್ಲಿರಲು ಸರ್ಕಾರವನ್ನು ಸಕಾಲದಲ್ಲಿ ಎಚ್ಚರಿ ಸಿದ್ದೇ ಕಾರಣ. ಬಿಜೆಪಿ ಪಕ್ಷವನ್ನು ನಂಬಬೇಡಿ. ಜೆಡಿಎಸ್‌ ಪಕ್ಷದಿಂದ ಎಚ್ಚರದಿಂದಿರಬೇಕು. ಮಾಗಡಿ ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ  ಅವರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಹೇಳಿದರು. ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಮಾತ ನಾಡಿ, ಮಾಗಡಿ ತಾಲೂಕಾದ್ಯಂತ ರೈತರ  ಹೊಲ, ತೋಟಗಳಲ್ಲಿ ಬೆಳೆದಿದ್ದ ತರಕಾರಿ ಖರೀದಿಸಿ ತಾಲೂಕಿನ ಜನರಿಗೆ  ಹಂಚುವ  ಕೆಲಸ ಮಾಡಿದ್ದೇವೆ.

ರಾಜ್ಯದಲ್ಲೇ ಮೊಟ್ಟ ಮೊದಲು ಸರ್ಕಾರ ಜಾರಿಗೆ ಬರುವ  ಮುನ್ನವೇ ಸವಿತಾ ಸಮಾಜದವರಿಗೆ ಮಾಸಿಕ 500 ರೂ ತಲುಪುವಂತೆ ಮಾಡಲಾಗಿದೆ ಎಂದರು. ಸಂಸದ ಡಿ.ಕೆ.ಸುರೇಶ್‌ ಮಾತನಾಡಿ, ಮುಸ್ಲಿಮರು ಕೋವಿಡ್‌ 19ದಿಂದಾಸಗಿ ಅತ್ಯಂತ  ಸರಳವಾಗಿ ರಂಜಾನ್‌ ಆಚರಣೆ ಮಾಡುತ್ತಿ ದ್ದಾರೆ. ಅವರಿಗೆ ಪ್ರತಿ ವರ್ಷ ಆಹಾರದ ಕಿಟ್‌ ವಿತರಿಸುತ್ತ ಬಂದಿದ್ದು, ಈ ಬಾರಿಯೂ ಅದೇ ಸಂಪ್ರದಾಯ ಮುಂದುವರಿಸಿದ್ದೇನೆ ಎಂದರು.  ಮಾಜಿ ಸಚಿವ ಜಮೀರ್‌ ಅಹಮದ್‌, ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ಮಾತನಾಡಿದರು.

ಕುದೂರು ಹೋಬಳಿ ಆಶಾ ಕಾರ್ಯಕರ್ತೆಯರಿಗೆ 3000 ರೂ.ಗಳ  ಸಹಾಯ ಧನ, ನಂದಿನಿ ಸಿಹಿ ಕಿಟ್‌ ವಿತರಿಸಲಾಯಿತು.  ಮಾಜಿ ಸಚಿವ ಚಲುವರಾಯಸ್ವಾಮಿ, ಜಿಪಂ ಸದಸ್ಯ ಎಚ್‌.ಎನ್‌.ಅಶೋಕ್‌, ಅಣ್ಣೇ ಗೌಡ, ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ, ನಿರ್ದೇಶಕ ಡಾ.ರಾಜಣ್ಣ, ಕುದೂರು ಗ್ರಾಪಂ ಅಧ್ಯಕ್ಷ ಕೆ.ಟಿ. ವೆಂಕಟೇಶ್‌, ಯುವ ಮುಖಂಡ ಯತೀಶ್‌, ಚಂದ್ರುಶೇಖರ್‌, ಹನುಮಂತರಾಯಪ್ಪ, ಶ್ರೀಗಿರಿಪುರ  ಪ್ರಕಾಶ್‌,ಸಿದ್ದಲಿಂಗಪ್ಪ, ಶಿವಪ್ರಸಾದ್‌, ಹೊನ್ನಪ್ಪ, ಅಬ್ದುಲ್‌ ಜಾವಿದ್‌ ಇತರರು ಇದ್ದರು.

ಪೊಲೀಸರ ಹರಸಾಹಸ, ಸಾರ್ವಜನಿಕರ ಆಕ್ರೋಶ: ಜನರನ್ನು ನಿಯಂತ್ರಿಸಲು ಪೊಲೀಸರು ಉರಿಬಿಸಿಲಿನಲ್ಲಿ ಹರಸಾಹಸ ಪಡುವಂತಾಯಿತು. ಕೋವಿಡ್‌ 19ದಂತಹ ಸಂಕಷ್ಟದ ಸಂದರ್ಭದಲ್ಲಿ ಹೀಗೆ ಕಾರ್ಯಕ್ರಮ ಮಾಡಿ ಜನಸಂದಣಿ  ಮಾಡದೆ ಮುಸ್ಲಿಮರ ಮನೆಗಳಿಗೆ ಕಿಟ್‌ ನೀಡಿದ್ದರೆ ಸರಿಹೋಗು ತ್ತಿತ್ತು. ಚುನಾವಣೆ ಗಿಮಿಕ್‌ ರೀತಿ ದೊಂಬಿ ಕಾರ್ಯಕ್ರಮ ಮಾಡಿದ್ದು, ಸಾರ್ವಜನಿಕ ರಲ್ಲಿ ಆಕ್ರೋಶ ಮೂಡಿಸಿತು.

ಟಾಪ್ ನ್ಯೂಸ್

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ

MASIDI

Fiscal Crisis: ಅಯೋಧ್ಯೆ ಮಸೀದಿ ಟ್ರಸ್ಟ್‌ ಸಮಿತಿಗಳ ವಿಸರ್ಜನೆ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJPBJP MLA Munirathna: ನನಗೇ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದರು

BJP MLA Munirathna: ನನಗೇ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದರು

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

10

Channapatnam by-election: ಡಿಕೆಸು ಕೈ ಅಭ್ಯರ್ಥಿ ಮಾಡಲು ಕಾರ್ಯಕರ್ತರ ಒತ್ತಡ

ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Munirathna: ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Magadi: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು; ಒಂದೇ ಕುಟುಂಬ ಐವರು ಸಾವು

Magadi: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು; ಒಂದೇ ಕುಟುಂಬ ಐವರು ಸಾವು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.