ಚಿತ್ರೀಕರಣಕ್ಕೆ ಹೊಸ ಮಾರ್ಗಸೂಚಿ: ಸಿನೆಮಾದಲ್ಲಿ ಚುಂಬನ, ಆಲಿಂಗನಕ್ಕೆ ಕೋವಿಡ್ ಸೆನ್ಸಾರ್‌!

ಚಿತ್ರೀಕರಣಕ್ಕೆ ಹೊಸ ಮಾರ್ಗಸೂಚಿ ಪ್ರಕಟಿಸಿದ ನಿರ್ಮಾಪಕರ ಸಂಘ ; ನಿತ್ಯ ಅಭ್ಯಾಸಕ್ಕೂ ಹಲವು ನಿಯಮ ಜಾರಿ

Team Udayavani, May 29, 2020, 7:10 AM IST

ಚಿತ್ರೀಕರಣಕ್ಕೆ ಹೊಸ ಮಾರ್ಗಸೂಚಿ: ಸಿನೆಮಾದಲ್ಲಿ ಚುಂಬನ, ಆಲಿಂಗನಕ್ಕೆ ಕೋವಿಡ್ ಸೆನ್ಸಾರ್‌!

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಚಲನಚಿತ್ರದ ನಾಯಕ, ನಾಯಕಿ ಪರಸ್ಪರ ಆಲಿಂಗಿಸದೆ, ಮುತ್ತಿಟ್ಟು ಮುದ್ದಾಡದೆ, ಕನಿಷ್ಠ ಮೈ ಕೈ ಕೂಡ ತಾಗಿಸದಂತೆ ನಟಿಸುವುದು, ರೊಮ್ಯಾಂಟಿಕ್‌ ಹಾಡುಗಳಿಗೆ ದೂರದಲ್ಲಿ ನಿಂತು ನರ್ತಿಸುವುದನ್ನೊಮ್ಮೆ ಊಹಿಸಿಕೊಳ್ಳಿ…

ನಿಮಗೆ 50, 60ರ ದಶಕದ ಸಿನಿಮಾಗಳು ನೆನಪಾಗಿರಲೇಬೇಕು. ಆದರೆ, ಎರಡು ತಿಂಗಳ ಬಳಿಕ ಚಿತ್ರೀಕರಣ ಮರು ಆರಂಭಿಸಲಿರುವ ಚಿತ್ರರಂಗ ಹಾಗೂ ಕಿರುತೆರೆ ಉದ್ಯಮ ಇದೇ ರೀತಿ ಚಿತ್ರೀಕರಣ ನಡೆಸುವ ಪರಿಸ್ಥಿತಿ ಎದುರಾಗಿದೆ, ಕಾರಣ, ಕೋವಿಡ್!

ಕೋವಿಡ್ ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಮನೋರಂಜನಾ ಉದ್ಯಮ ತನ್ನ ಚಟುವಟಿಕೆಗಳನ್ನು ಆರಂಭಿಸುವ ಮುನ್ನ ಚಿತ್ರೀಕರಣದ ಸ್ಥಳದಲ್ಲಿ ನಟ, ನಟಿಯರು, ಕಲಾವಿದರು, ತಂತ್ರಜ್ಞರು ಮತ್ತಿತರ‌ ವೃತ್ತಿಪರ ಸಿಬಂದಿ ಪಾಲಿಸಬೇಕಿರುವ ಸಾಮಾನ್ಯ ಅಭ್ಯಾಸಗಳ ಕುರಿತು ಭಾರತೀಯ ನಿರ್ಮಾಪಕರ ಸಂಘ 37 ಪುಟಗಳ ಹೊಸ ಕಾರ್ಯನಿರ್ವಹಣೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ. ಉದ್ಯಮದ ಪಾಲುದಾರರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಜೊತೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಚರ್ಚೆ ನಡೆಸಿದ ಎರಡು ದಿನಗಳ ಬಳಿಕ ಈ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಕಲಾವಿದರು, ಸಿಬಂದಿಗೆ ಕೆಲವು ನಿತ್ಯ ಅಭ್ಯಾಸಗಳ ಸಲಹೆ ನೀಡಲಾಗಿದೆ. ಅದರಂತೆ, 45 ನಿಮಿಷ ಮೊದಲೇ ಸೆಟ್‌ಗೆ ಬರಬೇಕು, ಸಾಮಾಜಿಕ ಅಂತರ ಪಾಲಿಸಲು ನೆಲದ ಮೇಲೆ ಮಾರ್ಕಿಂಗ್‌ ಮಾಡಬೇಕು, ಸ್ನಾನ, ಕೈತೊಳೆಯುವಿಕೆಗೆ, ಸ್ವಚ್ಛತೆಗೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ.

ಇನ್ನೊಂದೆಡೆ ಕೇಶ ವಿನ್ಯಾಸ, ಮೇಕಪ್‌ ಸಂದರ್ಭದಲ್ಲಿ ಉತ್ಪನ್ನಗಳನ್ನು ಒಮ್ಮೆ ಮಾತ್ರ ಬಳಸಬೇಕು, ವಿಗ್‌ಗಳನ್ನು ಬಳಕೆಗೆ ಮುನ್ನ, ಬಳಸಿದ ಬಳಿಕ ಸ್ವಚ್ಛಗೊಳಿಸಬೇಕು, ಸ್ವಂತ ಮೇಕಪ್‌ ಕಿಟ್‌ ಬಳಸಬೇಕು, ಮೇಕಪ್‌ ಮಾಡುವಾಗ ಮಾಸ್ಕ್ ಬದಲು ಫೇಸ್‌ ಶೀಲ್ಡ್‌ಗಳನ್ನು ಧರಿಸಲು ಸಲಹೆ ನೀಡಲಾಗಿದೆ.

ಸುರಕ್ಷತಾ ಸಲಹೆಗಳೇನು?

– ಎಲ್ಲರೂ ಮುಖಕ್ಕೆ ಮೂರು ಪದರಗಳ ವೈದ್ಯಕೀಯ ಮಾಸ್ಕ್, ಕೈಗವಸು ಧರಿಸುವುದು ಕಡ್ಡಾಯ

– ಚುಂಬನ, ಆಲಿಂಗನ, ಕೈಕುಲುಕುವುದು ಸೇರಿ ಯಾವುದೇ ರೀತಿಯ ದೈಹಿಕ ಶುಭಾಶಯಗಳಿಗೆ ಅವಕಾಶವಿಲ್ಲ

– ಸಹೋದ್ಯೋಗಿಗಳ ನಡುವೆ ಕನಿಷ್ಠ ಎರಡು ಮೀಟರ್‌ ಅಂತರ ಕಡ್ಡಾಯ

– ಚಿತ್ರೀಕರಣದ ಸೆಟ್‌, ಕಚೇರಿ, ಸ್ಟುಡಿಯೋಗಳಲ್ಲಿ ಸಿಗರೇಟ್‌ ಶೇರ್‌ ಮಾಡುವಂತಿಲ್ಲ

– 60 ವರ್ಷ ಮೇಲ್ಪಟ್ಟ ಕಲಾವಿದರು, ಸಿಬ್ಬಂದಿಯನ್ನು ಕನಿಷ್ಠ ಮೂರು ತಿಂಗಳು ಸೆಟ್‌ಗೆ ಕರೆಸುವಂತಿಲ್ಲ

ಟಾಪ್ ನ್ಯೂಸ್

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

1-modi

Varanasi; 25000 ಮಹಿಳೆಯರ ಜತೆ ಸ್ವಕ್ಷೇತ್ರದಲ್ಲಿ ಪಿಎಂ ಸಂವಾದ

ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Mangaluru ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

MOdi (3)

Odisha ರಾಜ್ಯ ಸರಕಾರವು ಭ್ರಷ್ಟರ ಹಿಡಿತಕ್ಕೆ ಸಿಲುಕಿದೆ: ಪಿಎಂ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqeqwe

Cannes 2024 : ಐಶ್ವರ್ಯಾ ರೈ ಹೊಸ ಲುಕ್‌ಗೆ ನೆಟ್ಟಿಗರ ಪರ, ವಿರೋಧ ಕಮೆಂಟ್‌

12

Cannes‌ Film Festival: ಕೇನ್ಸ್ ನಲ್ಲಿ ಪ್ರದರ್ಶನ ಕಾಣಲಿದೆ ಭಾರತದ ಈ 7 ಸಿನಿಮಾಗಳು

11

ಹೃದಯ ಸಂಬಂಧಿ ಕಾಯಿಲೆ: ಬಿಗ್‌ ಬಾಸ್‌ ಖ್ಯಾತಿ, ನಟಿ ರಾಖಿ ಸಾವಂತ್‌ ಆಸ್ಪತ್ರೆಗೆ ದಾಖಲು

Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್‌ನ ಬಜೆಟ್ಟೇ 835 ಕೋಟಿ ರೂ.

Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್‌ನ ಬಜೆಟ್ಟೇ 835 ಕೋಟಿ ರೂ.

Bollywood: ಜೂನ್‌ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್‌ ಭರಾಟೆ

Bollywood: ಜೂನ್‌ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್‌ ಭರಾಟೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

police USA

China ಶಾಲೆಯಲ್ಲಿ ಚಾಕು ಇರಿತ: 5 ಮಂದಿಗೆ ಗಾಯ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.