ಗಟ್ಟಿ ಗಡತ್ನಾಗಿ…


Team Udayavani, Jun 17, 2020, 4:55 AM IST

amshagalu

ಅಣ್ಣನ ಅಂದರೆ ನಮ್ಮ ತಂದೆಯ ಫೇವರಿಟ್‌ ಪದಪುಂಜವೊಂದು, ನನ್ನ ಜೀವನ ದಲ್ಲಿ “ಸೌಂದರ್ಯ’ ಎಂಬ ಪದವನ್ನೇ ಕಿತ್ತುಕೊಂಡ ಹೃದಯ ವಿದ್ರಾವಕ ಕಥೆ ಹೇಳುತ್ತೇನೆ. ಆ ಪದಪುಂಜ “ಗಟ್ಟಿ ಗಡತ್ನಾಗಿ’. ನಾವು ಚೆಂದದ ಚಪ್ಪಲಿ  ನೋಡಿ, ಇದು ಕೊಡಿಸು ಎಂದರೆ ಅಣ್ಣ, “ಥೂ! ಈ ನಾಜೂಕೆಲ್ಲಾ ತೊಗೋಬೇಡಿ. ಮೂರು ಮೂರು ದಿನಕ್ಕೆ ಕಿತ್ತು ಹೋಗ್ತಿರತ್ತೆ. ಲಕ್ಷಣವಾಗಿ ಇದನ್ನು ತಗೊಳ್ಳಿ. ಗಟ್ಟಿ ಗಡತ್ನಾ ಗಿರತ್ತೆ’ ಅಂತ ಒಂದು ಗೂಬೆ ಥರದ ಚಪ್ಪಲಿ  ಕೊಡಿಸುತ್ತಿದ್ದರು.

ಯಾವುದೇ ಚಪ್ಪಲಿಯಾ  ಗಲಿ, ಇನ್ನು ಹೊಲಿಸಿ ರಿಪೇರಿ ಮಾಡಿಸಲು ಸಾಧ್ಯವಿಲ್ಲ ಎಂದಾಗಲೇ ಹೊಸ ಚಪ್ಪಲಿ ಸಿಗುತ್ತಿ ದ್ದುದು. ನಮಗೆ ಎಂದಲ್ಲ, 30-35 ವರ್ಷಗಳ ಹಿಂದೆ ಸಿಸ್ಟಮ್‌ ಇದ್ದಿದ್ದೇ ಹಾಗೆ. ಈ “ಗಟ್ಟಿ ಗಡತ್ನಾಗೆ’  ವಿಚಾರ ನನಗೆ ಅತ್ಯಧಿಕ ಸಮಸ್ಯೆ ಮಾಡಿದ ಕಥೆಯನ್ನು ನಿಮಗೆ ಹೇಳ ಬೇಕು. ನನ್ನ ಹತ್ತಿರ BSA SLR ಸೈಕಲ್‌ ಇತ್ತು. ಒಮ್ಮೆ ಅದನ್ನು ನಿಲ್ಲಿಸಿ ಯಾವುದೋ ಡ್ಯಾನ್ಸ್‌ ಪ್ರಾಕ್ಟೀಸ್‌ಗೆ ಹೋಗಿದ್ದೆ. ಬಂದು ನೋಡ್ತೀನಿ… ನನ್ನ ಸೈಕಲ್‌  ಸೀಟನ್ನು ಯಾರೋ ಕದ್ದೊಯ್ದು  ಬಿಟ್ಟಿದ್ದಾರೆ!

ನನ್ನ ಮುದ್ದಾದ ಸೈಕಲ್‌, ಬಲಿ ಕೊಟ್ಟ ಕೋಳಿಯಂತೆ ಕಾಣುತ್ತಿತ್ತು ಪಾಪ. ಸಾಧಾರಣ ವಾಗಿ ಇಂಥ ತೇಪೆ ಹಚ್ಚುವ ಕೆಲಸಗಳಿಗೆ ಅಣ್ಣ ನಮ್ಮನ್ನೇ ಓಡಿಸುತ್ತಿದ್ದರು. ಆದರೆ ಆ ಸಲ ನನ್ನ ಅದೃಷ್ಟವೋ, ದುರದೃಷ್ಟವೋ ಗೊತ್ತಿಲ್ಲ; ಅಣ್ಣ  ತಾವೇ ಸೈಕಲ್‌ ತಳ್ಳಿಕೊಂಡು ಹೊರಟರು. ಮುಂಬರುವ ಬಿರುಗಾಳಿಯ ಅರಿವಿಲ್ಲದ ಮುಗೆಟಛಿ ನಾನು, ಸಂತೋಷ ಪಟ್ಟೆ. ಅಣ್ಣ ಸೈಕಲ್‌ ವಾಪಸು ತಂದರು. ನಾನು ಛಂಗನೆ ನೆಗೆದು  ಹೊರಗೆ ಬಂದೆ… ನೀವು ನಂಬುವುದಿಲ್ಲ, ನನ್ನ ಸೈಕಲ್‌ಗೆ ದೂರದಿಂದ ನೋಡಿದರೂ ಹೊಡೆದು ಕಾಣಿಸಬೇಕು; ಅಂಥಾನೀಲಿ ಬಣ್ಣದ ಸೀಟು ಕೂರಿಸಲಾಗಿತ್ತು.

“ಥೂ…  ಅಣ್ಣಾ… ಸೀಟು ಕೆಟ್ದಾಗಿದೇ…’ ಎಂದು ರಾಗಎಳೆದೆ… ಇನ್ನೂ ಆ  ರಾಗವೇ ಮುಗಿದಿಲ್ಲ. ಅಷ್ಟ ರಲ್ಲಿ ಅದಕ್ಕಿಂತ ಭಯಾನಕವಾ ದದ್ದು ಕಾಣಿಸಿತು! ಅಣ್ಣ, ನನ್ನ ಕೋಮಲವಾದ ಸೈಕಲ್ಲಿಗೆ ಗಂಡಸರ ಸೈಕಲ್‌ನ ಸ್ಟ್ಯಾಂಡ್‌ ಹಾಕಿಸಿಕೊಂಡು ಬಂದಿದ್ದರು! ಇದಾದ್ರೆ “ಗಟ್ಟಿ ಗಡತ್ನಾಗಿ’ ಇರತ್ತೆ. ಲೇಡೀಸ್‌ ಸೈಕಲ್‌  ಸ್ಟ್ಯಾಂಡ್‌ ಥರ ಅಲ್ಲ- ಎಂದಿದ್ದರು! ನಾನಾಗ ಪಿಯುಸಿ ಯಲ್ಲಿದ್ದೆ. ಕಾಲೇಜಿಗೆ ಹೋಗಿ ಮೊದಲು ಸೈಕಲ್‌ ನಿಂದ ಇಳಿದು ಆ ನೀಲಿ ಸೀಟು ತೋರಿಸಬೇಕು. ನಂತರ ಗಂಡಸರಂತೆ ಸೈಕಲ್‌ ಅನ್ನು ಎಳೆದು ನಿಲ್ಲಿಸಬೇಕು!! ಅಣ್ಣನೆ ದುರುದಿಸುವ  ಧೈರ್ಯ ಇಲ್ಲದೇ, ಅಮ್ಮನೆ ದುರು ಹೋಗಿ ಕೊಂಯ ಕೊಂಯ ಅಂದೆ.

ಆದರೆ ಏನೂ ಗಿಟ್ಟಲಿಲ್ಲ. ಆ ನೀಲಿ ಸೀಟನ್ನು ಯಾರೂ ಕದಿಯಲಿಲ್ಲ. ಹಾಳಾದ ಗಟ್ಟಿ ಗಡತ್ನಾದ ಗಂಡಸರ ಸ್ಟ್ಯಾಂಡ್‌, ಅಜರಾಮರವಾಗಿ ನನ್ನ ಸೈಕಲ್‌ ನನ್ನ ಬಳಿ ಇರುವವರೆಗೂ ಇತ್ತು; ನನ್ನ ಇಮೇಜನ್ನೆಲ್ಲಾ ಹಾಳು ಮಾಡುತ್ತಾ… ನಾನೀಗ ಅಣ್ಣನ ಮೇಲೆ ಸೇಡು ತೀರಿಸಿಕೊಳ್ಳುವ ವಿಧಾನವನ್ನು ನಿರ್ಧರಿಸಿದ್ದೇನೆ. ಅವರಿಗೆ ಹೇಳಿದ್ದೇನೆ- “ನಿನಗೆ ವಯಸ್ಸಾದ ಮೇಲೆ ದೊಡ್ಡ ದೊಡ್ಡ ಹೂಗಳ ಪ್ರಿಂಟ್‌ ಇರೋ ಸಿಲ್ಕ್‌ ಜುಬ್ಟಾ  ಹೊಲಿಸಿ ಕೊಡ್ತೀನಿ. ಅದನ್ನೇ ಹಾಕ್ಕೋಬೇಕು ನೀನು. ಯಾಕಂದ್ರೆ ಅದು “ಗಟ್ಟಿ ಗಡತ್ನಾಗಿ’ ಇರುತ್ತೆ’…

* ದೀಪಾ ರವಿಶಂಕರ್

ಟಾಪ್ ನ್ಯೂಸ್

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌ !

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌!

Bidar; ಪಲ್ಟಿಯಾಗಿ ನಾಲಿಗೆ ಬಿದ್ದ ಕಾರು; ಚಾಲಕ ಸ್ಥಳದಲ್ಲೇ ಸಾವು

Bidar; ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ನಾಲಿಗೆ ಬಿದ್ದ ಕಾರು; ಚಾಲಕ ಸ್ಥಳದಲ್ಲೇ ಸಾವು

Why not hold a press conference? Prime Minister Modi replied

PM Modi ಪತ್ರಿಕಾಗೋಷ್ಠಿ ಯಾಕೆ ನಡೆಸುವುದಿಲ್ಲ? ಉತ್ತರಿಸಿದ ಪ್ರಧಾನಿ ಮೋದಿ

4-Pavagada

Pavagada: ಸಿಡಿಲಿನ ಪರಿಣಾಮ ಹೊತ್ತಿ ಉರಿದ ದನದ ಕೊಟ್ಟಿಗೆ; ಸ್ಥಳದಲ್ಲಿಯೇ ಹಸು ಸಜೀವ ದಹನ

Sunil Chhetri

Sunil Chhetri ಸರಿಸಾಟಿಯಿಲ್ಲದ ಆಟಗಾರ; ಭಾರತ ಫುಟ್‌ಬಾಲ್‌ನ ತೆಂಡುಲ್ಕರ್‌ ಚೆಟ್ರಿ

ಲೈಂಗಿಕ ದೌರ್ಜನ್ಯ: ಸಾಕ್ಷ್ಯ ಸಂಗ್ರಹಕ್ಕೆ ಇನ್ಮುಂದೆ ಸುರಕ್ಷಿತ ಕಿಟ್‌ ಬಳಕೆ

ಲೈಂಗಿಕ ದೌರ್ಜನ್ಯ: ಸಾಕ್ಷ್ಯ ಸಂಗ್ರಹಕ್ಕೆ ಇನ್ಮುಂದೆ ಸುರಕ್ಷಿತ ಕಿಟ್‌ ಬಳಕೆ

7

Miyazaki mango: ಶಂಕರಪುರದಲ್ಲಿ ವಿಶ್ವದ ದುಬಾರಿ ಮಾವಿನಹಣ್ಣು! 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Vijayapura; ತ್ಯಾಜ್ಯನೀರಿನ ಸಂಸ್ಕರಣಾಘಟಕ ದುರಂತ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಭೇಟಿ

Vijayapura; ತ್ಯಾಜ್ಯನೀರಿನ ಸಂಸ್ಕರಣಾಘಟಕ ದುರಂತ; ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಭೇಟಿ

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ

Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ

Complaint: ಖಾಸಗಿ ಫೋಟೋ ತೋರಿಸಿ ಬೆದರಿಸಿದ ವೈದ್ಯನ ವಿರುದ್ಧ ದೂರು

Complaint: ಖಾಸಗಿ ಫೋಟೋ ತೋರಿಸಿ ಬೆದರಿಸಿದ ವೈದ್ಯನ ವಿರುದ್ಧ ದೂರು

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌ !

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.