ಹಣದಿಂದ ಸಂಬಂಧ ಗಟ್ಟಿ ಆಗಲ್ಲ…


Team Udayavani, Sep 2, 2020, 1:17 PM IST

ಹಣದಿಂದ ಸಂಬಂಧ ಗಟ್ಟಿ ಆಗಲ್ಲ…

ಸಾಂದರ್ಭಿಕ ಚಿತ್ರ

ಮೂವತ್ತು ವರ್ಷದ ಗೀತಾ, ಕಳೆದ ಎಂಟು ವರ್ಷಗಳಿಂದ ತನ್ನ ಕಾಲೇಜು ಗೆಳೆಯನಾದ ಶೇಖರ್‌ ಜೊತೆ ಲಿವಿಂಗ್‌ ಟುಗೆದರ್‌ ಸಂಬಂಧದಲ್ಲಿ ಇದ್ದಾಳೆ. ವೃತ್ತಿಯಲ್ಲಿ ಇಬ್ಬರೂ ಸಾಫ್ಟ್ವೇರ್‌ ಎಂಜಿನಿಯರ್‌ಗಳು. ಇತ್ತೀಚೆಗೆ ಶೇಖರ್‌, ಊರಿನಲ್ಲಿ ಮನೆ ಕಟ್ಟುತ್ತಿದ್ದು, ಅದಕ್ಕೆ ಹಣ ಸಾಲಲಿಲ್ಲವೆಂದು ಗೀತಾಳ ಬಳಿ ಸಹಾಯ ಕೇಳಿದ. ಜೊತೆಗಾರನಿಗೆ ಸಹಾಯ ಮಾಡದಿದ್ದರೆ ಹೇಗೆ ಅಂದುಕೊಂಡ ಗೀತಾ, ಬ್ಯಾಂಕ್‌ನಲ್ಲಿ ಹನ್ನೆರಡು ಲಕ್ಷ ರೂಪಾಯಿ ಗಳ ಸಾಲ ಪಡೆದು, ಅದನ್ನು ಶೇಖರ್‌ನ ಬ್ಯಾಂಕ್‌ ಖಾತೆಗೆ ಜಮಾ ಮಾಡಿದಳು. ಹಣ ಜಮಾ ಆದಮೇಲೆ, ಶೇಖರ್‌ನ ವರ್ತನೆಯಲ್ಲಿ ಬಹಳ ಬದಲಾವಣೆಗಳಾದವು. ಒಂದು ಭಾನು ವಾರ, ಗೀತಾ ಮದುವೆಯ ಬಗ್ಗೆ ಮಾತನಾಡಿದಾಗ, ಹಣ ಕೊಟ್ಟು ನೀನು ನನ್ನನ್ನು ಖರೀದಿ ಮಾಡಿಲ್ಲ ಎಂದು ಜಗಳ ಆರಂಭಿಸಿ ಹೊಡೆ ದು- ಬೈದು ಮಾಡಿದ್ದಾನೆ.

ಶೇಖರನ ಬದಲಾದ ವರ್ತನೆಯಿಂದ ಮನನೊಂದು, ಗೀತಾ ನನ್ನ ಬಳಿ ಸಲಹೆಗಾಗಿ ಬಂದಿದ್ದಳು. ಆತ್ಮಹತ್ಯೆಯ ಆಲೋಚನೆಗಳು ಅವಳನ್ನು ಕಾಡುತ್ತಿದ್ದವು. ಹತ್ತು ವರ್ಷಗಳ ಗೆಳೆತನದಲ್ಲಿ ಯಾವಾಗಲೂ ಇಷ್ಟೊಂದು ಜಗಳವಾಗಿರಲಿಲ್ಲ. ತಂದೆ- ತಾಯಿಗೆ ಪಿ.ಜಿ. ವಾಸ್ತವ್ಯದಲ್ಲಿ ಇರುವುದಾಗಿ ಸುಳ್ಳು ಹೇಳಿ, ಶೇಖರ್‌ ಜೊತೆ ಸಂಸಾರ ಹೂಡಿದ್ದಳು ಗೀತಾ. ಈ ಬಗ್ಗೆ ಅವಳಿಗೆ, ಅಪರಾಧಿ ಮನೋಭಾವ ಜೊತೆಯಾಗಿತ್ತು. ಶೇಖರ್‌ ಜೊತೆ ಇದನ್ನೆಲ್ಲಾ ಹೇಳಿಕೊಂಡು, ಮದುವೆ ಆಗೋಣವಾ ಎಂದು ಕೇಳಿದಾಗೆಲ್ಲಾ ಆತ- ಮದುವೆಯಾದವರಿಗಿಂತ ಅನ್ಯೋನ್ಯವಾಗಿದ್ದೇವಲ್ಲಾ ಎಂದು ಮಾತು ಹಾರಿಸುತ್ತಿದ್ದ.

ಗೆಳೆತನ ಹಳೆಯಾದಷ್ಟೂ ನಂಬಿಕೆ ಜಾಸ್ತಿಯಾಗಬೇಕು, ಅಲ್ಲಿ ಅನುಮಾನಕ್ಕೆ ಆಸ್ಪದವಿರಬಾರದು ಎಂದು ವೇದಾಂತ ನುಡಿಯುತ್ತಿದ್ದ. ದೊಡ್ಡ ಮೊತ್ತದ ಸಾಲ ಕೊಟ್ಟರೆ, ಮದುವೆಗೆ ಕಮಿಟ್‌ ಆಗಬಹುದು ಎಂದು ಯೋಚಿಸಿದ ಗೀತಾ, ಹನ್ನೆರಡು ಲಕ್ಷ ಸಾಲ ಮಾಡಿದಳು. ಈಗ ಶೇಖರ್‌ನ ಒರಟು ಮಾತು ಕೇಳಿ, ಪ್ರೀತಿಯಲ್ಲಿ ನಂಬಿಕೆ ಕಳೆದುಕೊಂಡಿದ್ದಾಳೆ. ಮೊದಲಿಗೆ ಗೀತಾಗೆ ಧೈರ್ಯ ಹೇಳಬೇಕಿತ್ತು. ಆತ್ಮಹತ್ಯೆಯ ಆಲೋ ಚನೆಗಳು ಆಕೆಯ ಜೊತೆಯಾಗ  ದಂತೆ ತಡೆಯಬೇಕಾ ಗಿತ್ತು. ಖನ್ನತೆಯಿಂದ ಕಳೆದುಕೊಂಡ ಜೀವ ಮತ್ತೆ ಬರುವುದಿಲ್ಲ ಎಂದು ಆಕೆಗೆ ಮನದಟ್ಟು ಮಾಡಿದೆ. ಹಣದ ಬಗ್ಗೆ ಚಿಂತಿಸಬೇಡವೆಂದು ಧೈರ್ಯ ತುಂಬಿದೆ.

ಗೀತಾಳ ತಂದೆತಾಯಿಗೆ ಈ ವಿಚಾರವನ್ನು ತಿಳಿಸಲು ನೆರವಾದೆ. ಅವರು ಸಮಸ್ಯೆಯನ್ನು ಪ್ರೌಢಿಮೆ ಯಿಂದ ಸ್ವೀಕರಿಸಿದರು. ಇದೇ ಸಮಯಕ್ಕೆ, ಗೀತಾಗೆ ದೆಹಲಿಯ ಶಾಖೆಗೆ ವರ್ಗವಾಯಿತು. ಗೀತಾ, ಇದೀಗ ದೆಹಲಿಯಲ್ಲಿ ತಂದೆ- ತಾಯಿಯ ರಕ್ಷೆಯಲ್ಲಿ ಲವಲವಿಕೆ ಹೊಂದಿದ್ದಾಳೆ. ಶೇಖರನ ಮನಸ್ಸು ಇನ್ನೂ ಗಡುಸಾಗಿದೆ. ಸಾಲಕ್ಕೆ ದಾಖಲೆ ಇರಬಹುದು, ಆದರೆ ಕೆಲವರಿಗೆ ಹಣ ವಾಪಸ್‌ ಕೊಡಲು ಸಂಕಟವಾಗುತ್ತದೆ. ಅವಳ ತಂದೆ ದುಷ್ಟ ಮನಸ್ಸಿನ ಶೇಖರನಿಗೆ ಮಗಳನ್ನು ಕೊಡಬೇಕಾ ಮೇಡಂ ಎಂದು ಕೇಳುತ್ತಾರೆ. ಸಂಬಂಧದಲ್ಲಿ ಒತ್ತಾಯ ಬೇಡ. ಅತೃಪ್ತ ಸಂಬಂಧವು ನಿದ್ದೆ, ಊಟ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೈಹಿಕ ಸಾಮೀಪ್ಯದಿಂದ ಅಥವಾ ಹಣಕಾಸಿನ ಸಹಾಯದಿಂದ ಬದ್ದತೆಯ  ನ್ನಾಗಲೀ, ನಿಷ್ಠೆಯನ್ನಾಗಲೀ, ಸಂಬಂಧದಲ್ಲಿ ಹುಟ್ಟುಹಾಕಲು ಸಾಧ್ಯವಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಸಂಬಂಧವನ್ನು ಸಾಕ್ಷಿಯ ಜೊತೆ ನೋಂದಣಿ ಮಾಡಿಸುವುದು ನಂಬಿಕೆ ಮತ್ತು ಸ್ಥಿರತೆಗಾಗಿಯೇ. ಇಲ್ಲದಿದ್ದರೆ ಚಂಚಲ ಮನಸ್ಸು ಸಂಗಾತಿಯ ಆಯ್ಕೆಯ ಬಗ್ಗೆ ಹೊಯ್ದಾಡುತ್ತದೆ. ಲಿವಿಂಗ್‌ ಟುಗೆದರ್‌ ಸಂಬಂಧದಲ್ಲಿ ಮೋಸವೆನಿ  ಸಿದರೆ, ಧೈರ್ಯಗೆಡಬೇಡಿ. ಆ ಬಾಂಧವ್ಯದಿಂದ ಎದ್ದು ಆಚೆ ಬನ್ನಿ. ಸಂತೆಯಲ್ಲಿ ಕಳೆದುಹೋದವರನ್ನು ಹುಡುಕಬಹುದು. ಬದಲಾದ ವರನ್ನು ಹುಡುಕಲು ಸಾಧ್ಯವಿಲ್ಲ.­

 

-ಡಾ. ಶುಭಾ ಮಧುಸೂದನ್‌ ಚಿಕಿತ್ಸಾ ಮನೋವಿಜ್ಞಾನಿ

ಟಾಪ್ ನ್ಯೂಸ್

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

train-track

Belagavi: ರೈಲಿನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ: ವ್ಯಕ್ತಿ ಸಾವು,ಇಬ್ಬರಿಗೆ ಗಾಯ !

Revanna 2

Holenarasipur case; ರೇವಣ್ಣ ಅವರಿಗೆ ಒಂದು ದಿನದ ರಿಲೀಫ್

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

3

ಫಾಹದ್‌ ಫಾಸಿಲ್‌ ಜೊತೆ ʼದೃಶ್ಯಂʼ ನಿರ್ದೇಶಕನ ಸಿನಿಮಾ:‌ ಸುದ್ದಿ ಕೇಳಿ ಥ್ರಿಲ್‌ ಆದ ಫ್ಯಾನ್ಸ್

Kalaburagi; Suresh Sajjan submits nomination as BJP rebel candidate

Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Supreme Court: ಕೇಜ್ರಿ ಜಾಮೀನು ರದ್ದು ಕೋರಿದ್ದ ಇ.ಡಿ. ಅರ್ಜಿ ವಜಾ

Supreme Court: ಕೇಜ್ರಿ ಜಾಮೀನು ರದ್ದು ಕೋರಿದ್ದ ಇ.ಡಿ. ಅರ್ಜಿ ವಜಾ

Chikkaballapur: ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ, ರಕ್ಷಣೆಗೆ ಹೋದವ ಸಾವು

Chikkaballapur: ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ, ರಕ್ಷಣೆಗೆ ಹೋದವ ಸಾವು

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

Priyanka Kharge: ಬಿಜೆಪಿ ನಾಯಕರು ಹಾಸನಕ್ಕೆ ಏಕೆ ಕಾಲಿಡುತ್ತಿಲ್ಲ; ಪ್ರಿಯಾಂಕ್‌ ಪ್ರಶ್ನೆ

Priyanka Kharge: ಬಿಜೆಪಿ ನಾಯಕರು ಹಾಸನಕ್ಕೆ ಏಕೆ ಕಾಲಿಡುತ್ತಿಲ್ಲ; ಪ್ರಿಯಾಂಕ್‌ ಪ್ರಶ್ನೆ

arrest-lady

Goa; ಡ್ರಗ್ಸ್ ಜಾಲ ಭೇದಿಸಿದ ಪೊಲೀಸರು: ವಿದೇಶಿ ಯುವತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.